Latest Updates
-
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್!
ಸ್ಕ್ರೀನ್ ಅವಾರ್ಡ್ಸ್ 2014 ರಲ್ಲಿ ಅತ್ಯುತ್ತಮ ವಸ್ತ್ರಧಾರಣೆ
ವಾರ್ಷಿಕ ಲೈಫ್ ಓಕೆ ಸ್ಕ್ರೀನ್ ಅವಾರ್ಡ್ಸ್ 2014 ರೆಡ್ ಕಾರ್ಪೆಟ್ ಫ್ಯಾಶನ್ ಒಂದು ಸಮ್ಮಿಶ್ರತೆಯಾಗಿದೆ. ರೆಡ್ ಕಾರ್ಪೆಟ್‌ನ ಗೌರವಯುತ ಅವಾರ್ಡ್ಸ್‌ನ ರಾತ್ರಿ ಹೆಚ್ಚಿನ ಸೆಲೆಬ್ರಿಟಿಗಳು ವಿವಿಧ ಸ್ಟೈಲ್‌ಗಳೊಂದಿಗೆ ಸಮಾರಂಭದಲ್ಲಿಹಾಜರಿದ್ದರು.
ಸ್ಕ್ರೀನ್ ಅವಾರ್ಡ್ಸ್ 2014 ರೆಡ್ ಕಾರ್ಪೆಟ್ ಫ್ಯಾಶನ್ ಹೆಚ್ಚು ಪ್ರಸಿದ್ಧಿ ಮಾಡಿದೆ. 2014 ಸ್ಕ್ರೀನ್ ಅವಾರ್ಡ್ಸ್‌ನಲ್ಲಿ ಉತ್ತಮವಾಗಿ ದಿರಿಸು ಧರಿಸಿದ ಸೆಲೆಬ್ರಿಟಿಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಉತ್ತಮವಾಗಿ ಡ್ರೆಸ್ ಮಾಡಿದವರೆಂದರೆ ದೀಪಿಕಾ ಪಡುಕೋಣೆ, ಸೋಫಿ ಚೌಧುರಿ, ಸೋನಾಲ್ ಚೌಹಾಣ್ ಮತ್ತು ಶ್ರುತಿ ಹಾಸನ್ ಮತ್ತು ಇನ್ನಿತರರು.
ಸಾಂಪ್ರದಾಯಿಕ ಸೀರೆ ಆಧುನಿಕ ವಿನ್ಯಾಸದ ಗೌನ್ ಹೀಗೆ ಹಲವಾರು ಉಡುಗೆ ತೊಡುಗೆಗಳಲ್ಲಿ ನಟಿಯರು ಸೆಲೆಬ್ರಿಟಿಗಳು ಸ್ಕ್ರೀನ್ ಅವಾರ್ಡ್ಸ್ 2014 ರಲ್ಲಿ ತಮ್ಮ ಇರುವಿಕೆಯನ್ನು ಸಾರಿದರು. ಉದಾಹರಣೆಗೆ, ಸೋನಾಲ್ ಚೌಹಾಣ್ ಗೋಲ್ಡನ್ ಪರಿಪೂರ್ಣ ಅಮೃತ್‌ರಾಜ್ ಬೋರಾ ಗೌನ್‌ನಲ್ಲಿ ಹೊಳೆಯುತ್ತಿದ್ದರು. ಮನೀಷ್ ಮಲ್ಹೋತ್ರಾ ವಿನ್ಯಾಸದ ಪಿಂಕ್ ಮತ್ತು ಕಪ್ಪು ಬಣ್ಣದ ಸೀರೆಯನ್ನು ಸೋಫಿ ಚೌಧುರಿ ತೊಟ್ಟಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸ್ಕ್ರೀನ್ ಅವಾರ್ಡ್‌ನಲ್ಲಿ ಮಿಂಚಿದ ಅದಿತಿ ರಾವ್ ಹೈದಾರಿ
ಸೆಲೆಬ್ರಿಟಿಗಳಾದ ಕಲ್ಕಿ ಕೊಚ್ಲೀನ್, ಬಿಪಾಶಾ ಬಸು, ಜೂಹಿ ಚಾವ್ಲಾ, ಪೂನಂ ದಿಲ್ಲೋನ್ ಹಾಗೂ ಹೆಚ್ಚಿನವರು ಸಾಂಪ್ರದಾಯಿಕ ಉಡುಗೆಯನ್ನು ರೆಡ್ ಕಾರ್ಪೆಟ್‌ನಲ್ಲಿ ಪ್ರಯತ್ನಿಸಿದ್ದಾರೆ. ಕೆಲವು ಸೆಲೆಬ್ರಿಟಿಗಳು ಸೋನಲ್ ಚೌಹಾಣ್, ಅದಿತಿ ರಾವ್ ಹೈದರಿ, ದೀಪಿಕಾ ಪಡುಕೋಣೆ, ಮತ್ತು ಸೋನಾಕ್ಷಿ ಸಿನ್ಹಾ 2014 ರ ಸ್ಕ್ರೀನ್ ಅವಾರ್ಡ್ಸ್‌ನಲ್ಲಿ ಗೌನ್ ಧರಿಸಲು ನಿರ್ಧರಿಸಿದಂತಿದೆ.
ಸ್ಕ್ರೀನ್ ಅವಾರ್ಡ್ಸ್ 2014 ರಲ್ಲಿ ಉತ್ತಮ ಉಡುಗೆಯನ್ನು ತೊಟ್ಟವರ ಪಟ್ಟಿ ಇಲ್ಲಿದೆ.

ಅದಿತಿ ರಾವ್ ಹೈದರಿ
ಅದಿತಿ ತೋಳಿಲ್ಲದ ಕಪ್ಪು ಬಣ್ಣದ ಹರ್ಷ್ ಹರ್ಷ್ ಕೌಚರ್ ಗೌನ್ ಅನ್ನು ಧರಿಸಿದ್ದಾರೆ. ಆಡ್ರೆ ಹೇಪ್‌ಬರ್ನ್ ಸ್ಟೈಲ್ ಅನ್ನು ಅವರು ಅದಿತಿ ಅನುಕರಿಸಿದ್ದು 60 ರ ದಶಕಕ್ಕೆ ನಮ್ಮನ್ನು ಕರೆದೊಯ್ದಿದೆ.

ಬಿಪಾಶಾ ಬಸು
ಬಿಪಾಶಾ ಸ್ಕ್ರೀನ್ ಅವಾರ್ಡ್ಸ್ 2014 ರಲ್ಲಿ ಸಾಂಪ್ರದಾಯಿಕವಾಗಿ ಕಂಡುಬಂದಿದ್ದಾರೆ. ಮನೀಷ್ ಮಲ್ಹೋತ್ರಾ ವಿನ್ಯಾಸದ ನೀಲಿ ಬಣ್ಣದ ಪರಿಪೂರ್ಣ ಅನಾರ್ಕಲಿ ದಿರಿಸನ್ನು ಧರಿಸಿದ್ದಾರೆ.

ಕಾಜಲ್ ಅಗರ್‌ವಾಲ್
ಕಪ್ಪು ಬಣ್ಣದ ಗೌನ್ ಅನ್ನು ಧರಿಸಿರುವ ಕಾಜಲ್ ಅಗರ್‌ವಾಲ್ ಸುಂದರಿಯಾಗಿದ್ದಾರೆ. ಗೌನ್ ಗೋಲ್ಡನ್ ಬಣ್ಣದ ಅಲಂಕೃತಗೊಂಡಿರುವ ಹಿಂಭಾಗದಲ್ಲಿ ಪಟ್ಟಿ ಇರುವ ನೆಕ್‌ಲೈನ್ ಅನ್ನು ಹೊಂದಿದೆ.

ಕಲ್ಕಿ ಕೊಚ್ಲಿನ್
ನಿಕಿಲ್ ತಾಂಪಿ ವಿನ್ಯಾಸದ ಹಳದಿ ಕಪ್ಪು ಬಣ್ಣದ ಸಿಲ್ಕ್ ನೆಟ್ ಸೀರೆಯಲ್ಲಿ ಕಲ್ಕಿ ಇನ್ನಷ್ಟು ಸುಂದರಿಯಾಗಿದ್ದಾರೆ. ತೆಳುವಾದ ಲೇಸ್ ಮತ್ತು ಕೆಳಭಾಗದಲಲ್ಲಿರುವ ನೆಟ್ ಮಿನುಗು ಬೊಟ್ಟುಗಳು ಕಲ್ಕಿಯ ಕಾಲಿನ ಚೆಲುವನ್ನು ಕಾಣಿಸಿದೆ.

ದೀಪಿಕಾ ಪಡುಕೋಣೆ
ಸ್ಕ್ರೀನ್ ಅವಾರ್ಡ್ಸ್ 2014 ರಲ್ಲಿ ಅತ್ಯುತ್ತಮವಾಗಿ ಡ್ರೆಸ್ ಮಾಡಿದವರಲ್ಲಿ ದೀಪಿಕಾ ಕೂಡ ಒಬ್ಬರು. ಕುತ್ತಿಗೆಯಲ್ಲಿ ಗೋಲ್ಡನ್ ಅಲಂಕಾರವಿರುವ ಕಪ್ಪು ಬಣ್ಣದ ಅಲೆಕ್ಸಾಂಡರ್ ಮಕ್ವೀನ್ ಗೌನ್ ಅನ್ನು ದೀಪಿಕಾ ತಮ್ಮ ಉಡುಗೆಯಾಗಿಸಿಕೊಂಡಿದ್ದಾರೆ. ಸ್ಟೇಜ್ ಪರ್‌ಫೋರ್‌ಮೆನ್ಸ್‌ಗಾಗಿ ದೀಪಿಕಾ ಮಯೂರ್ ಆರ್ ಗಿರೋತ್ರಾ ವಿನ್ಯಾಸದ ಪಿಂಕ್ ಬಣ್ಣದ ಮಿನುಗು ಬೊಟ್ಟಿನ ಲಂಗವನ್ನು ಧರಿಸಿದ್ದರು.

ಪ್ರೀತಿ ದೇಸಾಯಿ
ತನ್ನ ಬಳ್ಳಿಯಂತಿರುವ ದೇಹ ಸಿರಿಯನ್ನು ಕಪ್ಪು ಬಣ್ಣದ ನೀಳ ಗೌನ್‌ನಲ್ಲಿ ಪ್ರೀತಿ ತೋರಿಸಿದ್ದಾರೆ. ಮಿನುಗು ಬೊಟ್ಟುಳ್ಳ ಕೀಹೋಲ್ ನೆಕ್‌ಲೈನ್‌ನೊಂದಿಗೆ ಗೌನ್ ಅಲಂಕೃತಗೊಂಡಿದೆ.

ಸೋನಲ್ ಚೌಹಾಣ್
ಅಮೃತ್‌ರಾಜ್ ಬೋರಾ ವಿನ್ಯಾಸದ ಮಿನುಗುತ್ತಿರುವ ಗೋಲ್ಡನ್ ಅಲಂಕೃತಗೊಂಡಿರುವ ಗೌನ್‌ನಲ್ಲಿ ಸೋನಲ್ ಸುಂದರಿಯಾಗಿದ್ದಾರೆ. ಗೌನ್ ಡೀಪ್ ಕಟ್ ಅನ್ನು ಹಿಂಭಾಗದಲ್ಲಿ ಹೊಂದಿದ್ದು ಸುಂದರ ದೇಹಸಿರಿಯನ್ನು ಪ್ರದರ್ಶಿಸಿದೆ.

ಸೋಫಿ ಚೌಧುರಿ
ಪಿಂಕ್ ಮತ್ತು ಕಪ್ಪು ಬಣ್ಣದ ಮನೀಷ್ ಮಲ್ಹೋತ್ರಾ ಸೀರೆಯಲ್ಲಿ ಸೋಫಿ ಸುಂದರಿಯಾಗಿದ್ದಾರೆ. ದಪ್ಪನೆಯ ಗೋಲ್ಡನ್ ಅಂಚನ್ನು ಸೀರೆ ಹೊಂದಿದ್ದು ರೆಡ್ ಕಾರ್ಪೆಟ್‌ಗೆ ಸರಿಹೊಂದುವ ಉಡುಗೆಯಾಗಿದೆ.

.ಶ್ರುತಿ ಹಾಸನ್
ಸ್ಕ್ರೀನ್ ಅವಾರ್ಡ್ಸ್ 2014 ರ ರೆಡ್ ಕಾರ್ಪೆಟ್‌ನಲ್ಲಿ ಶ್ರುತಿ ಸೆಕ್ಸಿಯಾಗಿ ಕಂಡುಬರುತ್ತಿದ್ದಾರೆ. ಗೌರವ್ ಗುಪ್ತಾ ವಿನ್ಯಾಸದ ಕೌಟರ್ ಧಿರಿಸಿನಲ್ಲಿ ತನ್ನ ನೀಳ ಹಾಗೂ ಬಳ್ಳಿಯಂತಿರುವ ದೇಹಸಿರಿಯನ್ನು ಶ್ರುತಿ ಹಾಸನ್ ತೋರಿಸಿದ್ದಾರೆ.

ಸೋನಾಕ್ಷಿ ಸಿನ್ಹಾ
ಅದ್ಭುತ ನೇತ್ರಗಳನ್ನು ಹೊಂದಿರುವ ಭಾರತೀಯ ಸುಂದರಿ ಸೋನಾಕ್ಷಿ ಅಮಿತ್ ಜಿಟಿ ಗೌನ್‌ನಲ್ಲಿ ಸುರ ಸುಂದರಿಯಾಗಿದ್ದಾರೆ. ಮಿನುಗು ಬೊಟ್ಟುಳ್ಳ ಮನಮೋಹಕ ಗೌನ್ ಆಕೆಯ ದೇಹಸಿರಿಗೆ ಸೂಕ್ತವಾಗಿ ಹೊಂದಿಕೆಯಾಗಿದೆ.

ವಾಣಿ ಕಪೂರ್
ಸ್ಕ್ರೀನ್ ಅವಾರ್ಡ್ಸ್ 2014 ರೆಡ್ ಕಾರ್ಪೆಟ್‌ನಲ್ಲಿ ವಾಣಿ ತಮ್ಮ ಕಂಗೊಳಿಸುವ ಗೌನ್‌ನೊಂದಿಗೆ ತಾವೂ ಮಿಂಚಿದರು. ಪಟ್ಟಿಯಿಲ್ಲದ ಸಿಲ್ವರ್ ಮಿನುಗು ಬೊಟ್ಟುಳ್ಳ ಗೌನ್ ಆಕೆಗೆ ಹೇಳಿ ಮಾಡಿಸಿದಂತಿದೆ.

ಚಿತ್ರಾಂಗದಾ ಸಿಂಗ್
ಸ್ಕ್ರೀನ್ ಅವಾರ್ಡ್ಸ್ 2014 ರಲ್ಲಿ ಉತ್ತಮವಾಗಿ ಡ್ರೆಸ್ ಮಾಡಿಕೊಂಡವರಲ್ಲಿ ಚಿತ್ರಾಂಗದಾ ಕೂಡ ಒಬ್ಬರು. ಸಿಲ್ಕ್ ಬೆಲ್ಟ್ ಹೊಂದಿರುವ ಬಿಳಿ ಬಣ್ಣದ ಡಿಯೋರ್ ಗೌನ್ ಚಿತ್ರಾಂಗದಾರನ್ನು ಇನ್ನಷ್ಟು ಸುಂದರಿಯಾಗಿಸಿದೆ.



Click it and Unblock the Notifications











