Latest Updates
-
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ!
ಸ್ಕ್ರೀನ್ ಅವಾರ್ಡ್‌ನಲ್ಲಿ ಮಿಂಚಿದ ಅದಿತಿ ರಾವ್ ಹೈದಾರಿ
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ಸ್ 2014 ನಲ್ಲಿ ತನ್ನ ಸ್ನಿಗ್ಧ ಸೌಂದರ್ಯದಿಂದ ಮೋಡಿ ಮಾಡುತ್ತಿರುವ ಚೆಲುವೆ ಅದಿತಿ ರಾವ್ ಹೈದಾರಿ ಕಂಡುಬಂದರು. ಆ ಕಾರ್ಯಕ್ರಮದಲ್ಲಿ ಅವರಷ್ಟು ಸುಂದರಿ ಯಾರೂ ಇಲ್ಲ ಎಂದೇ ಹೇಳಬಹುದು. ಈ ಬಾಲಿವುಡ್ ನಟಿ ತನ್ನ ಸ್ಟೈಲ್ ಹಾಗೂ ಸೌಂದರ್ಯದಿಂದ ಸಿನಿಮಾ ರಂಗದಲ್ಲಿ ತನ್ನ ಛಾಪನ್ನು ಮೂಡಿಸಿದ್ದಾರೆ. ಆದರೆ ಅವರ ಇಂದಿನ ಹೊಸ ನೋಟವು ಖಂಡಿತ ನಮ್ಮನ್ನು ಮಂತ್ರಮುಗ್ಧಗೊಳಿಸಿದೆ.
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ಸ್ 2014 ನಲ್ಲಿ ಸ್ಟೈಲಿಶ್ ಅದಿತಿ ಲುಕ್ ಹರ್ಷ್ ಹರ್ಷ್ ಕೌಚುರ್ ಧಿರಿಸಿನಲ್ಲಿ ಮನಮೋಹಕವಾಗಿತ್ತು. ಆಕೆ ಧರಿಸಿದ ದಿರಿಸನ್ನು ನಿಜವಾಗಿಯೂ ನಾವು ಆನಂದಿಸಿದೆವು. ಸ್ಕ್ರೀನ್ ಅವಾರ್ಡ್ ಕಾರ್ಯಕ್ರಮದಲ್ಲಿ ಕೇವಲ ಅದಿತಿ ರಾವ್ ಮಾತ್ರ ಕಣ್ಮನ ಸೆಳೆಯಲಿಲ್ಲ.

ಅದ್ಭುತವಾಗಿ ಕಂಡುಬರುತ್ತಿರುವ ನಮ್ಮ ಉಸಿರನ್ನೇ ಮರೆತು ಆಕೆಯನ್ನೇ ನೋಡುವಂತೆ ಮಾಡುವ ಚೆಲುವೆ ಸೋನಾಕ್ಷಿ ಸಿನ್ಹಾರ ಸುಂದರ ಚೆಲುವನ್ನು ಕೂಡ ನಾವು ಸೆರೆಹಿಡಿದೆದ್ದೇವೆ. ಆವರು ಡ್ರೆಸ್ ಮಾಡಿಕೊಂಡ ರೀತಿ ಮನಮೋಹಕವಾಗಿತ್ತು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಪ್ಪು ಧಿರಿಸಿನಲ್ಲಿ ಕಣ್ಮನ ಸೆಳೆದ ಸುಂದರಿ ಐಶ್ವರ್ಯ
ಸ್ಕ್ರೀನ್ ಅವಾರ್ಡ್ಸ್ 2014 ನಲ್ಲಿ ಭಾಗವಹಿಸಿದ್ದ ಅದಿತಿ ರಾವ್ ವಿಷಯಕ್ಕೆ ಬಂದಾಗ, ಬಾಲಿವುಡ್ ಚೆಲುವೆಯ ದಿಟ್ಟ ಹಾಗೂ ಸುಂದರವಾದ ವಿಂಟೇಜ್ ಲುಕ್‌ಗೆ ಅವರು ಮನಸೋತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಆಕೆಯ ಸೌಂದರ್ಯದ ಬಗೆಗಿನ ಒಲವು ಹಾಗೂ ಆರಿಸಿಕೊಂಡ ಬಣ್ಣ ನಿಜವಾಗಿಯೂ ಮನಸೆಳೆಯುವಂಥದ್ದು ಮತ್ತು ಅವರ ಬುದ್ಧಿವಂತಿಕೆಗೆ ಸಾಕ್ಷಿಯಾಗಿದೆ.
ಕಪ್ಪು ಬಣ್ಣದ ಹರ್ಷ್ ಹರ್ಷ್ ಕೌಚುರ್ ಮೈಗಂಟಿಕೊಂಡಂತಿರುವ ಗೌನ್ ಆಕೆಯ ನೋಟವನ್ನು ಇನ್ನಷ್ಟು ಮಿಂಚುವಂತೆ ಮಾಡಿದೆ. ಗೌನ್‌ನಲ್ಲಿರುವ ಕಟ್ ಆಫ್ ಅದಿತಿಯವರ ಕಡೆದಿಟ್ಟ ದೇಹಸಿರಿಯನ್ನು ಬಳ್ಳಿಯಂತೆ ಮಾಡಿದೆ. ಅದಿತಿ ರಾವ್ ಹೈದ್ರೀಸ್ ಲುಕ್: ಲೈಫ್ ಓಕೆ ಸ್ಕ್ರೀನ್ ಅವಾರ್ಡ್ಸ್ 2014 ನಲ್ಲಿ ಕಂಡುಬಂದ ಅದಿತಿಯವರ ಕೇಶ ವಿನ್ಯಾಸ ಕೂಡ ಅವರ ಸೌಂದರ್ಯದಂತೆ ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯಿತು.
ಮೈಗಂಟಿಕೊಂಡಿರುವ ಸುಂದರ ಗೌನ್‌ನೊಂದಿಗೆ ಆಡ್ರೇ ಹೇಪ್‌ಬರ್ನ್ ಸ್ಟೈಲ್ ಕೇಶವಿನ್ಯಾಸ 60 ರ ದಶಕದ ನೆನಪನ್ನು ಕಣ್ಣಮುಂದೆ ತಂದಿತು. ಈ ರೀತಿಯ ಕೇಶವಿನ್ಯಾಸದಲ್ಲಿ ಸುಂದರಿ ಯುವತಿ ಅದಿತಿ ಇಷ್ಟು ಚೆನ್ನಾಗಿ ಕಂಡುಬರುವರೆಂದು ಯಾರೂ ಯೋಚಿಸಿರಲಿಲ್ಲ ಯಾವ ರೀತಿಯ ಸ್ಟೈಲ್‌ನ್ನು ಹೇಗೆ ಮಾಡಬೇಕು ಹೇಗೆ ಕಾಣಿಸಿಕೊಳ್ಳಬೇಕು ಎಂಬುದು ಆಕೆಗೆ ಕರತಲಾಮಲಕವಾದ್ದರಿಂದ ಅದಿತಿ 60 ರ ದಶಕದ ಸುಂದರತೆಯನ್ನು ಇಂದಿನ ಯುವ ಜನಾಂಗದಲ್ಲೂ ಕಾಪಿಟ್ಟಿದ್ದಾರೆ.
ಆಕೆಯ ಸೌಂದರ್ಯದ ಬಗೆಗೆನ ಸಮಯ ಪ್ರಜ್ಞೆ ಬಾಲಿವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ, ಮೆಚ್ಚುಗೆಯನ್ನು ಪಡೆದಿದೆ. 'ಒಂದು ಸುಂದರ ಬೊಂಬೆ ಜೀವ ತಳೆದಂತೆ' ಎಂಬುದು ಅದಿತಿಯವರನ್ನು ಬಣ್ಣಿಸಿರುವ ಬಾಲಿವುಡ್ ಪಂಡಿತರ ಉವಾಚವಾಗಿದೆ.
ಆಕೆ ಆರಿಸಿಕೊಂಡಿರುವ ಧಿರಿಸು ಗಾಢ ಕಪ್ಪು ವರ್ಣದ್ದಾಗಿರುವುದರಿಂದ ಅದಕ್ಕೆ ಹೋಲಿಕೆಯಾಗುವಂತಹ ನೈಸರ್ಗಿಕ ಮೇಕಪ್ ಅನ್ನು ಅದಿತಿ ಮಾಡಿಕೊಂಡಿದ್ದಾರೆ. ಮುತ್ತನ್ನು ಕೂರಿಸಿರುವ ಉಂಗುರವನ್ನು ಹೊರತುಪಡಿಸಿ ಸ್ಕ್ರೀನ್ ಅವಾರ್ಡ್ಸ್ 2014 ನಲ್ಲಿ ಅದಿತಿ ಹೆಚ್ಚಿನ ಆಭರಣಗಳನ್ನು ಧರಿಸಿಕೊಂಡಿಲ್ಲ ಹಾಗೂ ಆಕೆ ಧರಿಸಿರುವ ಕಪ್ಪು ಬಣ್ಣದ ಹೈ ಹೀಲ್ಡ್ ಅದಿತಿಯ ಸುಂದರತೆಯ ಪ್ರತೀಕವಾಗಿದೆ. ಒಟ್ಟಾರೆ, ಸ್ಕ್ರೀನ್ ಅವಾರ್ಡ್ಸ್ 2014 ರಲ್ಲಿ ಕಂಡುಬಂದ ಅದಿತಿ ರಾವ್ ಹೈದಾರಿಯವರ ಸೌಂದರ್ಯ ಪ್ರಜ್ಞೆ, ಸುಂದರತೆಗೆ ಬೋಲ್ಡ್‌ಸ್ಕೈ ತಲೆಬಾಗಿದೆ. ನಿಮಗೂ ಹೀಗೆ ಅನ್ನಿಸಿದೆಯೇ?



Click it and Unblock the Notifications
