Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ವೈವಾಹಿಕ ಜೀವನಕ್ಕೆ ಕಾಲಿರಿಸಿದ ರೂಪಾ ಅಯ್ಯರ್
ರೂಪಾ ಅಯ್ಯರ್ ಹೆಚ್ಚು ಪ್ರಸಿದ್ಧಿಯಲ್ಲಿರುವ ಚಿತ್ರ ನಿರ್ದೇಶಕಿ, ನಟಿ, ಕೊರಿಯೋಗ್ರಾಫರ್, ನೃತ್ಯ ಕಲಾವಿದೆ ಹೀಗೆ ಬಹು ಮುಖ ಪ್ರತಿಭೆಗಳನ್ನು ತನ್ನೊಳಗೆ ಚಿರಂತನವಾಗಿಸಿರುವ ಕಲಾವಿದೆ.
ತಮ್ಮ ಚಿತ್ರದಲ್ಲಿ ಅವರು ಮಾಡುತ್ತಿರುವ ಹೊಸ ಹೊಸ ಪ್ರಯೋಗಗಳು ಮತ್ತು ಕೊಡುಗೆಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಅಸಾಮಾನ್ಯ ಕಲಾವಿದೆ ರೂಪಾ ಅಯ್ಯರ್. ಸಮಾಜ ಸೇವಕಿಯಾಗಿ ಕೂಡ ತನ್ನನ್ನು ತೊಡಗಿಸಿಕೊಂಡಿರುವ ಈ ಪ್ರತಿಭಾವಂತೆ ತಮ್ಮ ಐಸಿಎ ಕಂಪೆನಿಯ ಮೂಲಕ ಏಡ್ಸ್ ಮತ್ತು ಎಚ್‌ಐವಿ ಬಗ್ಗೆ ಜನಜಾಗೃತಿಯನ್ನು ಮೂಡಿಸುತ್ತಿರುವವರು.

ಕರ್ನಾಟಕದ ಸಣ್ಣ ಹಳ್ಳಿಯಾದ ಬೆಳಕವಾಡಿಯ ಮಧ್ಯಮ ವರ್ಗದ ಸಂಪ್ರದಾಯಸ್ಥ ಕುಟುಂಬದಲ್ಲಿ ರೂಪಾ ಅಯ್ಯರ್ ಜನನವಾಯಿತು. ತಂದೆ ರೈತರಾದರೆ, ತಾಯಿ ಶಾಲೆಯೊಂದರಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಹುಟ್ಟಿನಿಂದಲೂ ಪ್ರತಿಭಾವಂತೆಯಾಗಿದ್ದ ರೂಪಾ ಅಯ್ಯರ್ ತಮ್ಮ ಹತ್ತನೇ ವಯಸ್ಸಿನಲ್ಲಿ ಬೇಲೂರಿನಲ್ಲಿ ತಮ್ಮದೇ ವಯಸ್ಸಿನ ಹುಡುಗಿಯರಿಗಾಗಿ ನೃತ್ಯ ಶಾಲೆಯನ್ನು ತೆರೆದರು. ಆ ವಯಸ್ಸಿನಲ್ಲೇ ನೃತ್ಯದಂತಹ ಪ್ರತಿಭಾವಂತ ಕಲೆಯನ್ನು ಕಲಿತು ಅದನ್ನು ಉಳಿದವರಿಗೆ ಕಲಿಸಿ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಂತಹ ಸಾಹಸಿ.
ಬರಿಯ ನೃತ್ಯದಲ್ಲಷ್ಟೇ ತಮ್ಮನ್ನು ತೊಡಗಿಸಿಕೊಳ್ಳದೇ ಕಥೆ, ಕವನ, ಕಾದಂಬರಿಗಳನ್ನು ಬರೆದು ಸಾಮಾಜಿಕವಾಗಿ ಹೆಸರು ಗಳಿಸಿದವರು. ರಾಜ್ಯ ಪ್ರಶಸ್ತಿಯನ್ನು ಗಳಿಸಿರುವ ಈ ನಟಿ ಕಲಾವಿದೆ ಇಂದು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಬೆಂಗಳೂರಿನಲ್ಲಿ ನಡೆಯಲಿರುವ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುತ್ತಿರುವ ರೂಪಾ ಅಯ್ಯರ್ ಕೈ ಹಿಡಿಯುತ್ತಿರುವವರು ಗೌತಮ್ ಶ್ರೀವತ್ಸವ್. ತಮ್ಮ ಮುಖ ಪುಟ ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿರುವ ರೂಪಾ 'ಚಂದ್ರ' ಎಂಬ ಸುಂದರ ಚಲನಚಿತ್ರವನ್ನು ಕನ್ನಡ ಅಭಿಮಾನಿಗಳಿಗೆ ನೀಡಿದವರು.
ರೂಪಾ ಮತ್ತು ಗೌತಮ್ ಚಂದ್ರ ಚಿತ್ರದ ತಯಾರಿಯಲ್ಲಿ ಜೊತೆಯಾಗಿ ತೊಡಗಿಸಿಕೊಂಡವರು. ಇದೊಂದು ಲವ್ ಕಮ್ ಅರೇಂಜ್ ಮಾರೇಜ್ ಆಗಿದ್ದು ಎರಡೂ ಮನೆಯವರ ಸಂಪೂರ್ಣ ಸಮ್ಮತಿಯೊಂದಿಗೆ ಜೋಡಿಗಳು ಹಸೆಮಣೆ ಏರುತ್ತಿದ್ದಾರೆ. ಜೋಡಿ ಜೂನ್ 19 ರಂದು ನಡೆದ ಸರಳ ಸಮಾರಂಭವೊಂದರಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು.



Click it and Unblock the Notifications
