Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇಂದು ವರ್ಷದ ಕೊನೆಯ ಅಮಾವಾಸ್ಯೆ: ಸೋಮಾವತಿ ಅಮಾವಾಸ್ಯೆ ಏಕೆ ಆಚರಿಸುತ್ತಾರೆ ಗೊತ್ತಾ?
ಈ ವರ್ಷ ಮುಗಿಯುವ ಹಂತ ತಲುಪಿದೆ. 2024ನೇ ವರ್ಷ ಮುಗಿದು 2025ನೇ ವರ್ಷ ಸ್ವಾಗತಿಸಲು ನಾವು ತುದಿಗಾಲಿನಲ್ಲಿ ನಿಂತಿದ್ದೇವೆ. ಹಾಗೆ ಈ ವರ್ಷದ ಕೊನೆಯ ಅಮಾವಾಸ್ಯೆ ಕೂಡ ಇಂದು ಸಂಭವಿಸುತ್ತಿದೆ. ವರ್ಷದ ಕೊನೆಯ ಅಮಾವಾಸ್ಯೆಯೂ ಸೋಮಾವತಿ ಅಮಾವಾಸ್ಯೆ ಆಗಿದೆ. ಸೋಮಾವತಿ ಅಮಾವಾಸ್ಯೆ, ಇತರ ಅಮಾವಾಸ್ಯೆಗಿಂತ ಈ ಅಮವಾಸ್ಯೆ ತುಂಬಾ ವಿಶೇಷವಾಗಿದೆ.
ಸಾಮಾನ್ಯವಾಗಿ ಸೋಮವಾರದಂದು ಬರುವಂತಹ ಅಮಾವಾಸ್ಯೆಯನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನದಂದು ಪಿತೃಗಳಿಗೆ ಪಿಂಡ ಪ್ರಧಾನ, ಆಹಾರ ನೀಡುವುದು ಮಾಡುವುದು, ವಿಶೇಷ ಪೂಜೆಯಂತಹ ಕಾರ್ಯ ಮಾಡುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಸಂಪತ್ತು ವೃದ್ಧಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.

ಈ ದಿನದ ಪೂಜೆಯು ವ್ಯಕ್ತಿಯನ್ನು ಪಾಪಗಳಿಂದ ಮುಕ್ತನನ್ನಾಗಿ ಮಾಡುತ್ತದೆ. ಸುಖಮಯ ಜೀವನವನ್ನು ನೀಡುತ್ತದೆ ಎಂಬುದು ಈ ಅಮಾವಾಸ್ಯೆಯ ನಂಬಿಕೆಗಳಲ್ಲಿ ಒಂದಾಗಿದೆ. ಈ ದಿನದಂದು ವಿಷ್ಣುವಿನ ಜೊತೆಗೆ ಶಿವನನ್ನು ಕೂಡ ಪೂಜಿಸಲಾಗುತ್ತದೆ. ಹೀಗಾಗಿ ಈ ಸೋಮಾವತಿ ಅಮಾವಾಸ್ಯೆ ವಿಶೇಷವಾಗಿದೆ. ಈ ದಿನ ಪೀತೃ ಪೂಜೆಯು ಆತ್ಮಾವಲೋಕನ ಹಾಗೂ ಶಾಂತಿ ನೀಡಲಿದೆ. ಮುಖ್ಯವಾಗಿ ಪಿತೃ ದೋಷದಂತಹ ಸಮಸ್ಯೆಗಳಿಂದ ನೀವು ದೂರಾಗಬಹುದು.
ಇಂದು ಈ ವರ್ಷದ ಕೊನೆಯ ಅಮಾವಾಸ್ಯೆ. 2024 ರ ಡಿಸೆಂಬರ್ 30 ರಂದು ಸೋಮವಾರ ಮುಂಜಾನೆ 4:01 ರಿಂದ ಆರಂಭಗೊಳ್ಳುವ ಈ ಸಮಯ ಡಿಸೆಂಬರ್ 31 ರ ಮಂಗಳವಾರ ಮುಂಜಾನೆ 3:56 ರವರೆಗೆ ಅಮಾವಾಸ್ಯೆ ತಿಥಿ ಇರಲಿದೆ. ಈ ಸಮಯದಲ್ಲಿ ನೀವು ಪಿತೃ ಪೂಜಾ ಕಾರ್ಯ ಹಾಗೂ ವಿಶೇಷ ಅಮಾವಾಸ್ಯೆ ಪೂಜೆ ಮಾಡಬಹುದು.
ಸೋಮಾವತಿ ಅಮಾವಾಸ್ಯೆ ದಿನ ಹೇಗೆ ಪೂಜೆ ಮಾಡಬೇಕು?
ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಅದರಲ್ಲೂ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ತುಂಬಾನೇ ಪುಣ್ಯ ಸಿಗುತ್ತದೆ. ಇಲ್ಲದಿದ್ದರೆ ಸ್ನಾನ ಮಾಡುವ ನೀರಿಗೆ ಸ್ವಲ್ಪ ಗಂಗಾಜಲ ಹಾಕಿ ಸ್ನಾನ ಮಾಡಬೇಕು. ನಂತರ ಪೂರ್ವಜರಿಗೆ ಅನ್ನ ಇಡುವುದು, ವಸ್ತ್ರದಾನ ಮಾಡುವುದು, ಪ್ರಾಣಿಗಳಿಗೆ ಆಹಾರ ನೀಡುವ ಕಾರ್ಯ ಮಾಡಬೇಕು. ಇದರಿಂದ ಪುಣ್ಯ ಲಭಿಸಲಿದೆ. ಸೋಮಾವತಿ ಅಮಾವಾಸ್ಯೆಯಂದು ಪೂರ್ವಜರಿಗೆ ತರ್ಪಣವನ್ನು ಅರ್ಪಿಸಬೇಕು. ಈ ಅಮಾವಾಸ್ಯೆಯ ದಿನದಂದು ತುಳಸಿ ಗಿಡಕ್ಕೆ ಪೂಜೆ ಮಾಡುವುದರಿಂದ ನಿಮ್ಮ ಜಾತಕ ದೋಷ ಹಾಗೂ ಪಿತೃ ದೋಷಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಬಹುದು. ಹಾಗೆ ಪೂರ್ವಿಕರ ಆಶೀರ್ವಾದ ಪಡೆಯಲು ಈ ದಿನ ಅತ್ಯಂತ ಶುಭ ದಿನ ಎಂಬ ನಂಬಿಕೆ ಕೂಡ ಇದೆ.
ಸೋಮಾವತಿ ಅಮಾವಾಸ್ಯೆಯ ಮಂತ್ರವೇನು?
ಓಂ ನಾರಾಯಣಾಯ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ವಿಷ್ಣು ಪ್ರಚೋದಯಾತ್
ಓಂ ಹ್ರೀಂ ಕಾರ್ತವೀರ್ಯಾರ್ಜುನೋ ನಾಮ ರಾಜ ಬಾಹು ಸಹಸ್ತ್ರವಾನ
ಓಂ ನಮಃ ಶಿವಾಯ
ಓಂ ಆಪಾದಂಪಹರ್ತಾರಂ ದಾತಾರಂ ಸರ್ವಸಂಪದಂ
ಲೋಕಾಭಿರಾಮಂ ಶ್ರೀರಾಮ ಭೂಯೋ-ಭೂಯೋ ನಮಾಮ್ಯಹಂ
ಓಂ ಕುಲ ದೇವತಾಭ್ಯೋ ನಮಃ



Click it and Unblock the Notifications
