Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ದೀಪಾವಳಿಯಲ್ಲಿ ಬಡತನ ತೊಡೆದು ಹಾಕುವ ಲಕ್ಷ್ಮಿ ದೇವಿ ಮಂತ್ರ ಇದು.!
ದೀಪಾವಳಿ ಬೆಳಕಿನ ಹಬ್ಬ, ಕತ್ತಲೆಯ ವಿರುದ್ಧ ಬೆಳಕಿನ ಜಯ ಸಾರುವಂತಹ ಹಬ್ಬ. ದೇಶದ ಮೂಲೆ ಮೂಲೆಯಲ್ಲಿಯೂ ಈ ದೀಪಾವಳಿ ಆಚರಿಸುತ್ತಾರೆ. ದೀಪಾವಳಿ ಅಂದ್ರೆ ಸಡಗರ. ಬೆಳಕಿನ ಹಬ್ಬವು ಸಂಪತ್ತು, ಹಣ, ಧನಾತ್ಮಕ ಶಕ್ತಿಯ ಆಗಮನಕ್ಕೆ ಕಾರಣವಾಗಲಿದೆ. ಈ ಹಬ್ಬದಲ್ಲಿ ಪಂಚ ಭೂತಗಳಿಗೂ ಪೂಜೆ ಸಲ್ಲಿಕೆಯಾಗುವುದು ವಿಶೇಷ, ಅದರ ಜೊತೆಗೆ ಈ ಹಬ್ಬದಲ್ಲಿ ವಿಶೇಷವಾಗಿ ಲಕ್ಷ್ಮಿಯ ಆರಾಧನೆ ನಡೆಯಲಿದೆ.
ವಿಶೇಷವಾಗಿ ಈ ಹಬ್ಬದಲ್ಲಿ ಲಕ್ಷ್ಮಿ ಪೂಜೆಯ ಸಡಗರ ಅಂತೂ ಇದ್ದೇ ಇರುತ್ತೆ. ಈ ಹಬ್ಬ ಕತ್ತಲೆಯನ್ನು ಕಳೆದು ಬೆಳಕು ತರಲಿದೆ ಎಂಬ ಕಾರಣಕ್ಕೆ ಲಕ್ಷ್ಮಿ ಪೂಜೆ ಕೂಡ ಮಹತ್ವ ಪಡೆದುಕೊಳ್ಳುತ್ತದೆ. ಲಕ್ಷ್ಮಿ ದೇವಿ ದರಿದ್ರವನ್ನು ಕಳೆದು, ಧನಲಾಭವನ್ನು ದೀಪಾವಳಿಯಲ್ಲಿ ಹೊತ್ತು ತರುತ್ತಾಳೆ. ಬಡವರ ಮನೆ ಬೆಳಗುತ್ತಾಳೆ ಎಂಬ ನಂಬಿಕೆ ಇದೆ. ಹಿಂದೂ ಧರ್ಮದಲ್ಲಿ ಒಂದೊಂದು ಆಚರಣೆಗೂ ಅದರದ್ದೇ ಆದ ಅರ್ಥಗಳಿವೆ.

ಆದ್ರೆ ಈ ಹಬ್ಬ ಹಲವರಿಗೆ ಹೊರೆಯಾಗಬಾರದು. ಹೀಗಾಗಿ ಬಡತನದಲ್ಲೂ ಲಕ್ಷ್ಮಿ ಪೂಜೆ ನೆರವೇರಿಸಿದರೆ ಅವರಿಗೆ ಲಕ್ಷ್ಮಿ ಹರಸುತ್ತಾಳೆ. ಅವರನ್ನು ಬಡತನದಿಂದ ಮುಕ್ತಿ ನೀಡುತ್ತಾಳೆ ಎಂಬುದು ನಂಬಿಕೆಯಾಗಿದೆ. ಇದರ ಹೊರತಾಗಿಯೂ ಬಡತನ ಹೋಗಲಾಡಿಸಲು ನಾವು ಲಕ್ಷ್ಮಿ ಪೂಜೆಯನ್ನು ಯಾವ ರೀತಿ ಮಾಡಬೇಕು ಎಂಬ ನಂಬಿಕೆಯೂ ಇದೆ. ಹಾಗೆ ಯಾರು ಕೂಡ ಬಡತನದಲ್ಲೇ ಇರಲು ಇಷ್ಟ ಪಡುವುದಿಲ್ಲ. ಹೀಗಾಗಿ ಲಕ್ಷ್ಮಿ ಆರಾಧನೆ ನಿಮ್ಮ ಬಡತನ ಕೊನೆಗಾಣಿಸಲಿದೆ ಎಂಬುದು ದೀಪಾವಳಿ ಹಬ್ಬದ ಒಂದು ನಂಬಿಕೆ
ಕೆಲವರು ಬಡತನದಿಂದ ಹೊರಬರಲು ನಿರಂತರ ಪ್ರಯತ್ನ ಮಾಡಿದರೂ ಕೂಡ ಯಶಸ್ಸು ಸಾಧಿಸಲು ಸಾಧ್ಯವಾಗುವುದಿಲ್ಲ. ಆದ್ರೆ ದೀಪಾವಳಿಯಲ್ಲಿ ಈ ಬಡತನ ಕೊನೆಗಾಣಿಸಲು ಕೆಲವು ಪರಿಹಾರೋಪಾಯಗಳಿವೆ. ಹಾಗಾದ್ರೆ ಆ ಪರಿಹಾರವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮನೆಯಲ್ಲಿ ಧನಾತ್ಮಕ ಶಕ್ತಿ ಇದ್ದರೆ ಲಕ್ಷ್ಮಿ ತಾನಾಗಿಯೇ ಮನೆಗೆ ಆಗಮಿಸುತ್ತಾಳೆ ಎಂಬ ನಂಬಿಕೆ ಇದೆ. ಹೀಗಾಗಿ ಮನೆಯಲ್ಲಿ ಶಾಂತಿ ನೆಲೆಸುವಂತೆ ಮೊದಲು ಮಾಡಬೇಕು. ಹಾಗೆ ನಾವು ಮಾಡುವ ಎಲ್ಲಾ ಕೆಲಸಗಳು ಧನಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಉತ್ತಮ.
ಲಕ್ಷ್ಮಿ ದೇವಿಯು ಅಶುದ್ಧ ಸ್ಥಳದಲ್ಲಿ ನೆಲೆಸುವುದಿಲ್ಲ. ಹೀಗಾಗಿ ಮನೆಯಲ್ಲಿ ಯಾವಾಗಲು ಶುಚಿತ್ವ ಕಾಪಾಡಿಕೊಳ್ಳಬೇಕು. ಅಂದರೆ ನಿತ್ಯ ಮನೆಯನ್ನು ನೀಟಾಗಿ ಇಟ್ಟುಕೊಳ್ಳುವುದು ಸ್ನಾನ ಮಾಡುವುದು, ಬಟ್ಟೆಗಳ ಮಡಚಿ ಇಡುವುದು ಹಾಗೆ ಸುಚಿತ್ವ ಎಂದು ಕರೆಯುವ ಎಲ್ಲಾ ವಿಚಾರಗಳನ್ನು ಚಾಚು ತಪ್ಪದೆ ಮಾಡುವುದಾಗಿದೆ.
ಮನೆಯ ದೇವರ ಕೋಣೆಯಲ್ಲಿರುವ ಎಲ್ಲಾ ದೇವರ ಪೋಟೋಗಳು, ಮೂರ್ತಿಗಳು ಸ್ವಚ್ಛ ಆಗಿರುವಂತೆ ನೋಡಿಕೊಳ್ಳು. ಹಬ್ಬದಲ್ಲಿ, ವಾರದಲ್ಲಿ ಒಮ್ಮೆಯಾದರು ಅದನ್ನು ತೊಳೆದು ಸ್ವಚ್ಛ ಮಾಡಬೇಕು.
ನಿಮ್ಮ ಮನೆಯಲ್ಲಿರುವ ಬಾಳೆ ಗಿಡಕ್ಕೆ ಹಬ್ಬದ ದಿನ ಇಲ್ಲವೆ ಶುಕ್ರವಾರ ನೀರು ಹಾಕಬೇಕು. ಈ ನೀರಿಗೆ ತುಳಸಿ ದಳ, ಕಪ್ಪು ಎಳ್ಳು ಸೇರಿಸಬೇಕಂತೆ. ಸೂರ್ಯಾಸ್ತವಾದ ನಂತರ ಮನಯನ್ನು ಗುಡಿಸಬಾರದು ಎಂಬ ನಿಯಮವಿದೆ, ಇದನ್ನು ಪಾಲಿಸುವುದು ಉತ್ತಮ. ಹಾಗೆ ಲಕ್ಷ್ಮಿ ದೇವಿಯ ಮೂರ್ತಿಯನ್ನು ಗಣೇಶನ ಮೂರ್ತಿಯೊಂದಿಗೆ ಪೂಜಿಸುವುದು ಉತ್ತಮ ಅಭ್ಯಾಸವಾಗಿದೆ.
ಹಾಗೆ ಬಡತನ ತೊಡೆದು ಹಾಕಲು ಲಕ್ಷ್ಮಿ ದೇವಿಯ ಈ ಮಂತ್ರ ಪಠಿಸಬೇಕಂತೆ
"ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್ ಪ್ರಸೀದ್ ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮಿ ನಮಃ."
"ಐಂಗ್ ಹ್ರೀಂ ಶ್ರೀಂ ಅಷ್ಟಲಕ್ಷ್ಮ್ಯೈ ಹ್ರೀಂ ಸಿದ್ಧಯೇ ಮಮ ಗೃಹೇ ಆಗಚ್ಛಗಚ್ಛ ನಮಃ ಸ್ವಾಹಾ"
"ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀ ಸಿದ್ಧ ಲಕ್ಷ್ಮ್ಯೈ ನಮಃ."



Click it and Unblock the Notifications
