Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿ 2023 : ದಿನಾಂಕ, ಸಮಯ ಮತ್ತು ಆಚರಣಾ ವಿಧಾನವೇನು?
ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿಯನ್ನು ಇದೇ ಜೂನ್ 7, ಬುಧವಾರದಂದು ಆಚರಣೆ ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಈ ದಿನ ಭಕ್ತಾಧಿಗಳು ಗಣೇಶನಿಗಾಗಿ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಸಾಮಾನ್ಯವಾಗಿ ಪ್ರತಿ ವರ್ಷ 12 ಸಂಕಷ್ಟ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತದೆ.
ದೃಕ್ ಪಂಚಾಗದ ಪ್ರಕಾರ ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿಯನ್ನು ಆಷಾಢ ಮಾಸದ ಕೃಷ್ಟ ಪಕ್ಷದ ಚತುರ್ಥಿ ತಿಥಿಯಲ್ಲಿ ಆಚರಣೆ ಮಾಡಲಾಗುತ್ತದೆ. ಅಷ್ಟಕ್ಕು ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿಯ ಆಚರಣೆಯ ಸಮಯ, ಮಹತ್ವ, ಆಚರಣಾ ವಿಧಿ ವಿಧಾನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿಯ ಸಮಯ ಮತ್ತು ಮುಹೂರ್ತ :
ಚತುರ್ಥಿ ತಿಥಿ ಆರಂಭ - ಜೂನ್ 7, 2023, 12:50ರ ಮಧ್ಯರಾತ್ರಿ
ಚತುರ್ಥಿ ತಿಥಿ ಮುಕ್ತಾಯ - ಜೂನ್ 7, 2023,ರಾತ್ರಿ 9:50ರವರೆಗೆ
ಸಂಕಷ್ಟಿ ದಿನ ಚಂದ್ರ ಉದಯಿಸುವ ಸಮಯ - ಜೂನ್ 7, 2023, ರಾತ್ರಿ 10:50 ಕ್ಕೆ
ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿಯ ಮಹತ್ವವೇನು?
ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿಯ ದಿನ ಯಾರು ಗಣೇಶನನ್ನು ಭಕ್ತಿ, ಭಾವದಿಂದ ನೆನೆಯುತ್ತಾರೋ ಅವರು ಗಣಪತಿಯ ಕೃಪೆಗೆ ಪಾತ್ರರಾಗುತ್ತಾರೆ. ಈ ದಿನ ಗಣೇಶನಿಗೆ ಪೂಜೆಯನ್ನು ಸಮರ್ಪಣೆ ಮಾಡಿದರೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ-ಕರ್ಮಗಳಿಗೂ ಮುಕ್ತಿ ಪಡೆಯಬಹುದಂತೆ. ಸಾಮಾನ್ಯವಾಗಿ ಪ್ರತಿ ತಿಂಗಳು ಸಂಕಷ್ಟಿಯನ್ನು ಆಚರಣೆ ಮಾಡಲಾಗುತ್ತದೆ. ಪ್ರತಿ ತಿಂಗಳು ಬೇರೆ ಬೇರೆ ಹೆಸರಿನಿಂದ ಪೂಜಿಸುತ್ತೇವೆ.
ಪ್ರತಿ ತಿಂಗಳ ಸಂಕಷ್ಟಿಯೂ ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಅದೇ ರೀತಿ ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿಯ ದಿನದಂದು ಶಿವನು ಗಣೇಶನನ್ನು ಪರಮಾತ್ಮನೆಂದು ಘೋಷಿಸಿದ ದಿನ ಅಂತ ಹೇಳಲಾಗುತ್ತದೆ. ಹೀಗಾಗಿ ಈ ದಿನವನನ್ನು ತುಂಬಾನೇ ವಿಶೇಷ ದಿನ ಅಂತ ಕರೆಯಲಾಗುತ್ತದೆ. ಈ ದಿನ ಭಕ್ತರು ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿಯ ದಿನದಂದು ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕಲು ಉಪವಾಸವನ್ನು ಆಚರಿಸುತ್ತಾರೆ.
ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿಯ ಪೂಜಾ ವಿಧಾನ
- ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ
- ನಿಮ್ಮ ಸಮಸ್ಯೆಗಳೆಲ್ಲಾ ಪರಿಹಾರವಾಗಬೇಕೆಂದರೆ ಈ ದಿನ ಉಪವಾಸ ಮಾಡಬೇಕು
- ಈ ದಿನ ನೀವು ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಿದರೆ ಉತ್ತಮ
- ಬ್ರಾಹ್ಮಣರಿಗೆ ಅಥವಾ ನಿರ್ಗತಿಕರಿಗೆ ಆಹಾರವನ್ನು ನೀಡಬೇಕು. ನಿಮ್ಮಿಂದ ಸಾಧ್ಯವಾದರೆ ಬಟ್ಟೆಯನ್ನೂ ದಾನ ಮಾಡಿ
- ಈ ದಿನ ಉಪವಾಸ ಮಾಡುತ್ತಿದ್ದರೆ ಅಕ್ಕಿ, ಗೋಧಿಯಿಂದ ಮಾಡಿದ ಯಾವುದೇ ಆಹಾರ ತಿನ್ನಬಾರದು. ಹಣ್ಣು ಮತ್ತು ಹಾಲನ್ನು ಮಾತ್ರ ಸೇವನೆ ಮಾಡಿ
- ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡಿ ಗರಿಕೆ ಮತ್ತು ಹೂವನ್ನು ಅರ್ಪಿಸಿ
- ಈ ದಿನ ಪೂರ್ತಿ ಗಣೇಶನ ಮಂತ್ರಗಳನ್ನೇ ಪಠಿಸಿ
- ಸಂಜೆ ಧ್ಯಾನ ಮಾಡಿ ಗಣೇಶನನ್ನು ಸ್ಮರಿಸಿಕೊಳ್ಳಿ
- ಗಣೇಶನಿಗೆ ಮೋದಕ ಅರ್ಪಿಸಿ
- ರಾತ್ರಿ ಗಣೇಶನಿಗೆ ಆರತಿ ಬೆಳಗಿಸಿ ಪೂಜೆ ಮುಕ್ತಾಯಗೊಳಿಸಿ
- ನಂತರ ಮೋದಕವನ್ನು ಪ್ರಸಾದದ ರೂಪದಲ್ಲಿ ವಿತರಿಸಿ
ಚತುರ್ಥಿಯ ದಿನ ಉಪವಾಸ ಮಾಡೋದ್ರಿಂದ ಆಗೋ ಲಾಭಗಳೇನು?
- ಈ ದಿನ ಉಪವಾಸ ಆಚರಿಸೋದ್ರಿಂದ ಭಕ್ತರು ಅನಾರೋಗ್ಯದಿಂದ ಚೇತರಿಸಿಕೊಳ್ಳಬಹುದು
- ಸಂಪತ್ತು ಮತ್ತು ಸಮೃದ್ಧಿ ವೃದ್ಧಿಯಾಗುತ್ತೆ
- ವಿಘ್ನ ನಿವಾರಕನಾದ ಗಣೇಶನು ನಿಮ್ಮ ಜೀವನದ ಅಡೆತಡೆಗಳನ್ನು ತೆಗೆದುಹಾಕಿ. ಚಿಂತೆ ದೂರ ಮಾಡುತ್ತಾನೆ
- ಹಿಂದಿನ ಜನ್ಮದ ಪಾಪಾ ಕಾರ್ಯಗಳಿಗೆ ಪರಿಹಾರ ಕಂಡುಕೊಳ್ಳಬಹುದು
- ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀರ್ಘಾಯುಷ್ಯವನ್ನು ಕರುಣಿಸುತ್ತಾನೆ
ಈ ದಿನ ಗಣೇಶನಿಗೆ ಏನೆಲ್ಲಾ ಅರ್ಪಿಸಬೇಕು?
- ಹಣ್ಣು
- ಹಾಲು
- ಹಾಲಿನ ಉತ್ಪನ್ನಗಳು
- ಮೋದಕ, ಸಿಹಿ ತಿಂಡಿಗಳು
- ಗರಿಕೆ ಹುಲ್ಲು
- ಹೂವುಗಳು
- ಮೊಸರು
- ಪ್ರಸಾದ
- ದೀಪ ಬೆಳಗಬೇಕು
- ಧೂಪ
ಮಂತ್ರಗಳು :
- ಓಂ ಗಣ್ ಗಣಪತಾಯೇ ನಮಃ
- ಓಂ ಶ್ರೀ ಗಣೇಶಯೇ ನಮಃ
- ಓಂ ವಕ್ರತುಂಡ ಮಹಾಕಾಯೇ ಸೂರ್ಯಕೋಟಿ ಸಮಪ್ರಭಾ ನಿರ್ವಿಘ್ನಮ್ ಕುರುಮಯೆದೇವ್ ಸರ್ವ ಕಾರ್ಯೇಶು ಸರ್ವದಾ
ಒಟ್ಟಿನಲ್ಲಿ ಈ ದಿನ ಗಣೇಶನನ್ನು ಭಕ್ತಿಯಿಂದ ಪೂಜಿಸಿದರೆ ನಿಮ್ಮೆಲ್ಲಾ ಸಂಕಷ್ಟಗಳು ಪರಿಹಾರವಾಗುವುದ್ರಲ್ಲಿ ಅನುಮಾನವಿಲ್ಲ.



Click it and Unblock the Notifications

