Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಂಪತ್ತು, ಸಂತಾನ ಭಾಗ್ಯಕ್ಕಾಗಿ ಜನ್ಮಾಷ್ಟಮಿಯಂದು ಈ ಕಾರ್ಯಗಳನ್ನು ಮಾಡಿ
ಸಮಸ್ಯೆ ಅಂತ ಬಂದಾಗ ನಾವು ದೇವರ ಮೊರೆ ಹೋಗುತ್ತೇವೆ, ದೇವರ ಕೃಪೆಯಿದ್ದರೆ ಎಲ್ಲವೂ ಸರಿಹೋಗುವುದು ಎಂಬ ನಂಬಿಕೆ. ಶ್ರೀಕೃಷ್ಣ ಭಕ್ತರು ಕೂಡ ನಮ್ಮೆಲ್ಲಾ ಸಮಸ್ಯೆಗಳಿಗೆ ಶ್ರೀಕೃಷ್ಣ ಯಾವುದೋ ಒಂದು ರೂಪದಲ್ಲಿ ಪರಿಹಾರ ನೀಡುತ್ತಾನೆ ಎಂದು ಬಲವಾಗಿ ನಂಬುತ್ತಾರೆ. ಭಕ್ತರ ನಂಬಿಕೆಯಂತೆಯೇ ಎಷ್ಟೂ ಸಮಸ್ಯೆಗಳು ಪರಿಹಾರವಾಗುವುದರಿಂದ ಈ ನಂಬಿಕೆ ಎಂಬುವುದು ಮತ್ತಷ್ಟು ಹೆಚ್ಚಾಗುವುದು.

ಶ್ರೀಕೃಷ್ಣನ ಆರಾಧನೆ ಮಾಡುವವರಿಗೆ ಕೃಷ್ಣ ಜನ್ಮಾಷ್ಟಮಿ ಇನ್ನೂ ವಿಶೇಷವಾಗಿರುತ್ತದೆ, ಈ ದಿನ ಕೃಷ್ಣ ಜನಿಸಿದ ದಿನ. ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಶ್ರೀ ಕೃಷ್ಣನ ಜನ್ಮದಿನವನ್ನು ಆಚರಿಸಲಾಗುವುದು. ಈ ದಿನ ಶ್ರೀಕೃಷ್ಣನ ಮೂರ್ತಿಯನ್ನು ಅಲಂಕರಿಸಿ ವಿಶೇಷ ಪೂಜೆಯನ್ನು ಮಾಡಲಾಗುವುದು. ಶ್ರೀ ಕೃಷ್ಣ ದೇವಾಲಯಗಳಿಗೆ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಲಾಗುವುದು. ಜನ್ಮಾಷ್ಟಮಿಯಂದು ಕೆಲವೊಂದು ಪರಿಹಾರ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ, ಅದರ ಬಗ್ಗೆ ನೋಡುವುದಾದರೆ
* ದೇವರಿಗೆ ನೈವೇದ್ಯ ಅರ್ಪಿಸುವಾಗ ಅದರಲ್ಲಿ ತುಳಸಿಯನ್ನು ಹಾಕಲು ಮರೆಯದಿರಿ. ಪಾಯಸಕ್ಕೆ ತುಳಸಿ ಹಾಕಿ ಅರ್ಪಿಸುವುದರಿಂದ ಆರ್ಥಿಕ ಸ್ಥಿತಿ ಮತ್ತಷ್ಟು ಉತ್ತಮವಾಗುವುದು.
* ಜನ್ಮಾಷ್ಟಮಿಯಂದು ಕೃಷ್ಣನಿಗೆ ಕೇಸರಿ ಮಿಶ್ರಿತ ಹಾಲಿನೊಂದಿಗೆ ಅಭಿಷೇಕ ಮಾಡಿ. ಈ ಪರಿಹಾರವನ್ನು ಮಾಡುವುದರಿಂದ ಶ್ರೀಕೃಷ್ಣನ ಜೊತೆಗೆ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ಆಶೀರ್ವಾದವೂ ಸಿಗಲಿದೆ.
* ಕೃಷ್ಣ ಜನ್ಮಾಷ್ಟಮಿಯ ದಿನದಂದು ಕೃಷ್ಣನಿಗೆ ಬೆಳ್ಳಿಯ ಕೊಳಲು ಅರ್ಪಿಸಿ. ಹೀಗೆ ಮಾಡುವುದರಿಂದ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ, ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮುಂದುವರಿದರೆ, ಅದು ಸಹ ಕೊನೆಯಾಗುವುದು.
* ನಿಮ್ಮ ಸಮಸ್ಯೆಗಳಿಗೆ ಯಾವುದೇ ಶತ್ರು ಪ್ರಮುಖ ಕಾರಣವಾಗುತ್ತಿದ್ದರೆ, ಅವನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ಜನ್ಮಾಷ್ಟಮಿಯ ದಿನದಂದು "ಕ್ಲೀಂ ಕೃಷ್ಣಾಯ ವಾಸುದೇವಾಯ ಹರಿ: ಪರಮಾತ್ಮನೇ ಪ್ರಣಾತ್: ಕ್ಲೇಶಶಾಯ ಗೋವಿಂದಾಯ ನಮೋ ನಮಃ" ಎಂಬ ಮಂತ್ರ ಪಠಿಸಿ ಇದರಿಂದ ಶತ್ರು ಕಾಟ ಕಡಿಮೆಯಾಗುವುದು.
* ಶ್ರೀ ಕೃಷ್ಣನನ್ನು ಪೀತಾಂಬರಧಾರಿ ಎಂದೂ ಕರೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಪೂಜೆಯ ಪೂರ್ಣ ಫಲವನ್ನು ಪಡೆಯಲು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ ಹಳದಿ ಹಣ್ಣು, ಹಳದಿ ಹೂ, ಹಳದಿ ಸಿಹಿಯನ್ನು ಶ್ರೀ ಕೃಷ್ಣನಿಗೆ ಅರ್ಪಿಸಿ.
* ಕೃಷ್ಣ ಜನ್ಮಾಷ್ಟಮಿಯ ದಿನದಂದು 'ಓಂ ಕ್ಲೀಂ ಕೃಷ್ಣಾಯ ವಾಸುದೇವಾಯ ಹರಿ: ಪರಮಾತ್ಮನೇ ಪ್ರಣತ್: ಕ್ಲೇಷ್ಣಾಶಾಯ ಗೋವಿಂದಾಯ ನಮೋ ನಮಃ: ಕ್ಲೀನ ಕೃಷ್ಣಾಯ ಗೋವಿಂದಾಯ ಗೋಪಿಜನವಲ್ಲಭಾಯ ಸ್ವಾಹಾ' ಎಂಬ ಮಂತ್ರವನ್ನು ಜಪಿಸಿದರೆ ವೈವಾಹಿಕ ಸಂಬಂಧ ಚೆನ್ನಾಗಿರಲಿದೆ.
* ಜನ್ಮಾಷ್ಟಮಿ ದಿನದಿಂದ 27 ದಿನದವರೆಗೆ ಪ್ರತಿದಿನ ಶ್ರೀಕೃಷ್ಣ ನ ದೇವಾಲಯಕ್ಕೆ ತೆಂಗಿನಕಾಯಿಯನ್ನು ಅರ್ಪಿಸಿ.
* ಸಂತಾನಭಾಗ್ಯಕ್ಕಾಗಿ ನೀವು ಸಂತಾನ ಗೋಪಾಲ ಸ್ತೋತ್ರ ಪಠಿಸುವುದು ಒಳ್ಳೆಯದು.
* ಶ್ರೀಕೃಷ್ಣನ ಕೃಪೆಯಿಂದ ಶನಿದೋಷಕ್ಕೆ ಕೂಡ ಪರಿಹಾರ ಸಿಗುವುದು. ಶನಿಯ ಸಂಖ್ಯೆ ಕೂಡ 8, ಆದ್ದರಿಂದ ಅಷ್ಟಮಿಯಂದು ಶ್ರೀಕೃಷ್ಣನ ಆರಾಧನೆ ಮಾಡುವುದರಿಂದ ಶನಿ ಕಾಟ ಕಡಿಮೆಯಗುವುದು.



Click it and Unblock the Notifications
