Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೇರಳ ಗುಡ್ಡ ಕುಸಿತ ಕಥೆ ಬೆರೆದಿದ್ಲು 8ನೇ ತರಗತಿ ಬಾಲಕಿ..! ದುರಂತದಲ್ಲಿ ತಂದೆಯ ಕಳೆದುಕೊಂಡ್ಲು..!
ಕೇರಳದ ವಯನಾಡಿನ ಚೂರಮಾಲಾದಲ್ಲಿ ಉಂಟಾದ ಗುಡ್ಡ ಕುಸಿತ ಇಡೀ ಮನುಕುಲವನ್ನೇ ಬೆಚ್ಚಿಬೀಳಿಸಿದೆ. ದುರಂತದಲ್ಲಿ 300ಕ್ಕೂ ಹೆಚ್ಚು ಪ್ರಾಣ ಕಳೆದುಕೊಂಡಿದ್ದರೆ, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ. ಅಲ್ಲದೆ ಮತ್ತೊಂದಿಷ್ಟು ಮಂದಿ ಜೀವ ಉಳಿಸಿಕೊಂಡಿದ್ದರೂ ಬದುಕು ಕಟ್ಟಿಕೊಳ್ಳಲು ಇನ್ನು ಹಲವು ವರ್ಷಗಳೆ ಬೇಕಾಗುತ್ತದೆ. ಘಟನಾ ಸ್ಥಳದಲ್ಲಿದ್ದ ಮನೆ ಕೊಚ್ಚಿ ಹೋಗಿ ಅವರೆಲ್ಲ ಈಗ ಪರಿಹಾರ ಕೇಂದ್ರದಲ್ಲಿ ಉಳಿಯುವಂತಾಗಿದೆ.
ದೊಡ್ಡ ದೊಡ್ಡ ಮನೆಗಳು, ರೆಸಾರ್ಟ್‌ಗಳು, ಹೋಟೆಲ್, ಶಾಲೆ ಎಲ್ಲವೂ ಕೊಚ್ಚಿ ಹೋಗಿದೆ. ಈಗ ಉಳಿದಿರುವುದು ಬರಿ ಅವಶೇಷಗಳು ಮಾತ್ರ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ. ಭಾರತೀಯ ಸೇನೆ ಸಂತ್ರಸ್ತರ ನೆರವಿಗೆ ನಿಂತಿದ್ದು, ಹಗಲು ರಾತ್ರಿ ಎನ್ನದೆ ಗುಡ್ಡ ಕುಸಿದ ಸ್ಥಳದಲ್ಲಿ ಬೀಡು ಬಿಟ್ಟು ಕೆಲಸ ಮಾಡುತ್ತಿದ್ದಾರೆ.

ಈ ದುರಂತದ ನಡುವೆಯು ಕೆಲವೊಂದು ಮಾನವೀಯ ಕಾರ್ಯಗಳು, ಇಡೀ ಮನುಕುಲ ಅಚ್ಚರಿ ಪಡುವಂತಹ ವಿಚಾರಗಳು ಸಹ ನಡೆಯುತ್ತಿವೆ. ಕಾಡಾನೆಯೊಂದು ಇಬ್ಬರ ಜೀವ ಉಳಿಸಿದ ಘಟನೆ, ಪರಿಹಾರ ಕೇಂದ್ರದಲ್ಲಿ ಉಳಿದಿರುವ ಶಿಶುಗಳಿಗೆ ಎದೆಹಾಲು ಕುಡಿಸಲು 400 ಕಿ.ಮೀನಿಂದ ಮಹಿಳೆಯೊಬ್ಬರು ಬಂದಿರುವುದು ಸೇರಿ ಹಲವು ವಿಚಾರಗಳು ಗಮನ ಸೆಳೆಯುತ್ತಿವೆ.
ಇದರ ಜೊತೆಗೆ ಕೇರಳ ಸಿಎಂ ಪರಿಹಾರ ನಿಧಿಗೆ ಬರಪೂರ ದೇಣಿಗೆ ಹರಿದುಬರುತ್ತಿದೆ. ನಟ-ನಟಿಯರು ಸೇರಿ ಜನಸಾಮಾನ್ಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ವಯನಾಡು ಮಾಜಿ ಸಂಸದ ರಾಹುಲ್ ಗಾಂಧಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ.
ಈಗ ಈ ಗುಡ್ಡ ಕುಸಿತಕ್ಕೂ ಮುನ್ನ ಹಲವರು ರೀತಿಯಲ್ಲಿ ಘಟನೆಯ ಕುರಿತು ಸಣ್ಣ ಪುಟ್ಟ ಸೂಚನೆಗಳು ಸಿಕ್ಕಿದ್ದವು ಎಂಬ ವಾದಕ್ಕೆ ಪುಷ್ಠಿ ನೀಡುವಂತ ಶಾಲಾ ಬಾಲಕಿಯೊಬ್ಬಳು ಬರೆದಿದ್ದ ಸಣ್ಣ ಕಥೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕಳೆದ ವರ್ಷ ವೆಲ್ಲರ್ಮಲಾದಲ್ಲಿರುವ ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತಮ್ಮ ಶಾಲೆಯಲ್ಲಿ ಪ್ರಕಟವಾಗುವ ನಿಯತಕಾಲಿಕೆಗೆ ಬರೆದ ಕಥೆ ಈ ಗುಡ್ಡ ಕುಸಿತದ ಸೂಚನೆಯಂತಿದೆ.
ಗುಡ್ಡ ಕುಸಿತದ ಕಥೆ ಬರೆದಿದ್ದ ಬಾಲಕಿ
8ನೇ ತರಗತಿಯ ಈ ಬಾಲಕಿ ಗುಡ್ಡ ಕುಸಿತಕ್ಕೆ ಸಂಬಂಧಿಸಿದ ಈ ದುರಂತವನ್ನು ತನ್ನ ಕಥೆಯಲ್ಲಿ ಬರೆದಿದ್ದಳು. ಮಳೆ ಬಂದರೆ, ಭೂಕುಸಿತ, ಜಲಪಾತ ಅಪ್ಪಳಿಸುತ್ತವೆ, ಮಾನವ ಜೀವನ ಸೇರಿದಂತೆ ಅವರ ಹಾದಿಯಲ್ಲಿರುವ ಎಲ್ಲವನ್ನೂ ಮುಳುಗಿಸುತ್ತದೆ ಎಂದು ಆಕೆ ಬರೆದ ಕಥೆಯ ಭಾಗವಾಗಿತ್ತು. ಈ ಕಥೆ ಬರೆದ ಒಂದು ವರ್ಷದ ಬಳಿಕ ಸರಿಯಾಗಿ ಇದೇ ರೀತಿಯ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಬಾಲಕಿ ತನ್ನ ತಂದೆಯನ್ನೂ ಕಳೆದುಕೊಂಡಿದ್ದಾಳೆ ಎಂದು ವರದಿಯಾಗಿದೆ.
ಆ ಕಥೆಯಲ್ಲಿ ಏನಿದೆ?
ಇಬ್ಬರು ಸ್ನೇಹಿತರು ಪ್ರವಾಸಕ್ಕೆಂದು ಹೊರಟರು. ಅವರು ಗುಡ್ಡ ಬೆಟ್ಟ ಹತ್ತಿ ಜಲಪಾತ ವೀಕ್ಷಣೆಗೆ ತೆರಳಿದರು. ಆದರೆ ಅವರನ್ನು ಹಿಂಬಾಲಿಸಿದ ಹಕ್ಕಿಯೊಂದು ಅವರಿಗೆ ಅಪಾಯದ ಮುನ್ಸೂಚನೆ ನೀಡಿತು. ಆ ಇಬ್ಬರು ಮನೆಯಲ್ಲಿ ಪೋಷಕರಿಗೆ ಹೇಳದೆ ಜಲಪಾತ ನೋಡಲು ಬಂದಿದ್ದರು. ಆದ್ರೆ ಹಕ್ಕಿ ಅವರ ಬಳಿ ಬಂದು ನೀವು ಇಲ್ಲಿಂದ ಈಗಲೇ ಹೊರಟು ಹೋಗಿ, ಮುಂದೆ ದೊಡ್ಡ ಅಪಾಯವಾಗಲಿದೆ ಎಂದು ಹೇಳಿತು. ಈ ಮಾತು ಕೇಳಿ ಇಬ್ಬರು ಜಲಪಾತ ನೋಡುವುದನ್ನು ಬಿಟ್ಟು ಓಡಿ ಹೋದರು. ಇದಾದ ಬಳಿಕ ಗುಡ್ಡ ಕುಸಿಯುತ್ತದೆ, ಶಾಲೆ ಮುಳುಗುತ್ತದೆ, ತನ್ನ ದಾರಿಯಲ್ಲಿ ಸಿಕ್ಕ ಎಲ್ಲವು ಕೊಚ್ಚಿಹೋಗುತ್ತದೆ ಎಂದು ಆಕೆ ತನ್ನ ಕಥೆಯಲ್ಲಿ ಬರೆದಿದ್ದಳು.
ಹುಡುಗಿ ತನ್ನ ಶಾಲೆಯ ಡಿಜಿಟಲ್ ಮ್ಯಾಗಜಿನ್ ಆಗಿದ್ದ 'ವೆಲ್ಲಾರಂ ಕಲ್ಲುಕಲ್' ಗಾಗಿ 'ಆಗ್ರಹತಿಂತೆ ದುರಾನುಭವಂ', ಆಸೆಯೇ ದುಃಖಕ್ಕೆ ಮೂಲ ಎಂಬ ನೀತಿಯೊಂದಿಗೆ ಈ ಕಥೆ ಬರೆದಿದ್ದಳಂತೆ. ಈ ಕಥೆಯಲ್ಲಿ ಬೇರೆ ಬೇರೆ ಸನ್ನಿವೇಶಗಳಿದ್ದರೂ ಈ ಒಂದು ಭಾಗ ಮಾತ್ರ ವಯನಾಡಿನಲ್ಲಿ ಸಂಭವಿಸಿದ ಘಟನೆಯನ್ನೇ ಹೋಲುತ್ತಿದೆ.



Click it and Unblock the Notifications
