Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಿಟ್ಟಿರಲಾರೆವು ಎಂದು ಮದುವೆಯಾದ ಗೇ ಕಪಲ್: ಆದರೆ ಇವರ ಬದುಕಿನಲ್ಲಿ ವಿಧಿ ಕ್ರೂರ ಆಟ ಆಡಿತು
ಕೇರಳದಲ್ಲಿ ಮದುವೆಯಾಗಿರುವ ಗೇ ಕಪಲ್‌ಗಳಲ್ಲಿ ಮೂರನೇಯ ಜೋಡಿಯೆಂದರೆ ಅದು ಮನು-ಜಬಿನ್ ಜೊಡಿ. ಒಂದು ಜೋಡಿ ಬಂದು ನಾವು ಗೇ, ನಾವು ಲೆಸಿಬಿಯನ್ ಎಂದರೆ ಈ ಸಮಾಜ ಒಪ್ಪಿಕೊಳ್ಳಲ್ಲ. ನಮ್ಮ ಸಮಾಜದಲ್ಲಿ ಮದುವೆಯೆಂಬುವುದು ಹೆಣ್ಣು-ಗಂಡಿನ ನಡುವೆ ಮಾತ್ರ ನಡೆಯಬೇಕು.
ಅಲ್ಲದೆ ಒಂದೇ ಲಿಂಗದವರು ಮದುವೆಯಾಗಲು ಕಾನೂನಿನಲ್ಲಿಯೂ ಅವಕಾಶವಿಲ್ಲ, ಆದರೂ ಕೆಲ ಜೋಡಿ ಬಹಿರಂಗವಾಗಿ ಮದುವೆಯಾಗುವ ಮೂಲಕ ಗಮನ ಸೆಳೆದಿದ್ದಾರೆ, ಅಂಥ ಒಂದು ಜೋಡಿ ಮನು-ಜಬಿನ್. ಆದರೆ ಅವರ ಬದುಕು ನೋಡಿದಾಗ ಗೇ ಕಪಲ್ ಈ ಸಮಾಜದಲ್ಲಿ ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸುತ್ತಾರಲ್ಲಾ ಎಂದನಿಸದೆ ಇರಲ್ಲ.

ಇವರಿಬ್ಬರು ಎಂಜಿನಿಯರಿಂಗ್ ಓದುತ್ತಿದ್ದಾಗ ಭೇಟಿಯಾಗಿದ್ದು, ನಂತರ ಬೆಂಗಳೂರಿನಲ್ಲಿ ಕೆಲ ವರ್ಷಗಳ ಜೊತೆಯಾಗಿ ವಾಸವಾಗಿದ್ದರು. ನಂತರ ಕುಟುಂಬದವರ ಹಾಗೂ ಸಮಾಜ ವಿರೋಧದ ನಡುವೆ ಈ ಜೋಡಿ ಮದುವೆಯಾದರು. ಇವರು ಮದುವೆಯಾದಾಗ ಸೋಷಿಯಲ್ ಬುಲ್ಲಿಂಗ್ ತುಂಬಾನೇ ಅನುಭವಿಸಿದರು. ಇವರಿಗೆ ಇನ್‌ಸ್ಟಾಗ್ರಾಮ್ ದೊಡ್ಡ ಫಾಲೋವರ್ ಕೂಡ ಇದ್ದಾರೆ, ಮದುವೆಯಾಗಿ ಒಂದು ವರ್ಷ ಚೆನ್ನಾಗಿದ್ದ ಜೋಡಿ. ಆದರೆ ಒಂದು ವರ್ಷದಲ್ಲಿಯೇ ಜಬಿನ್ ಮನುವನ್ನು ವಿಧಿ ದೂರ ಮಾಡಿದೆ, ಜಬಿನ್ ಬದುಕಿನಿಂದ ಮನು ದೂರಾಗಿದ್ದಾರೆ.
ಜಬಿನ್ ಹಾಗೂ ಮನು ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ಫೆಬ್ರವರಿ 3ಕ್ಕೆ ಮನು ಫ್ಲ್ಯಾಟ್‌ನಿಂದ 3ನೇ ಮಹಡಿಯಿಂದ ಬಿದ್ದು ತುಂಬಾ ಗಂಭಿರ ಗಾಯವಾಗುತ್ತದೆ. ಕೂಡಲೇ ಆಸ್ಪತ್ರೆಗೆ ಸೇರಿಸಿದರೂ ಸಾವು ಬದುಕಿನ ನಡುವೆ ಹೋರಾಟ ನಡೆಸಿ ನಂತರ ಈ ಲೋಕಕ್ಕೆ ವಿದಾಯ ಹೇಳುತ್ತಾರೆ, ನಂತರ ಜಬಿನ್ ಎದುರಿಸಿದ ಕಷ್ಟ ಇದೆಯೆಲ್ಲಾ ಗೇ ಕಪಲ್‌ಗೆ ಎಷ್ಟೆಲ್ಲಾ ಸಮಸ್ಯೆಗಳಿವೆ ಎಂಬುವುದನ್ನು ಹೇಳುತ್ತದೆ.
ಜಬಿನ್‌ಗೆ ಮನು ಮರಣದ ಬಳಿಕ ಸಮಸ್ಯೆ ಹೆಚ್ಚಾಯ್ತು. ಮನು ತೀರಿ ಹೋದ ಸುದ್ದಿಯನ್ನು ಅವನ ಮನೆಯವರಿಗೆ ತಿಳಿಸಿದರೂ ಆಸ್ಪತ್ರೆ ಬಿಲ್ 1 ಲಕ್ಷ ಕೊಟ್ಟು ಶವ ತೆಗೆದುಕೊಂಡು ಹೋಗಲು ಯಾರೂ ಸಿದ್ಧವಿರಲಿಲ್ಲ, ಜಬಿನ್ ತನ್ನ ಸಂಗಾತಿಯ ಶವವನ್ನು ಕೊಂಡೊಯ್ಯಲು ಸಿದ್ಧರಿದ್ದರು, ಆದರೆ ಆಸ್ಪತ್ರೆಯವರು ಶವವನ್ನು ಕೊಟ್ಟಿಲ್ಲ. ಗೇ ಕಪಲ್ ಆದರೆ ಅವರು ಕಾನೂನು ರೀತಿಯಲ್ಲಿ ಜೀವನ ಸಂಗಾತಿ ಆಗುವುದಿಲ್ಲ, ಆದ್ದರಿಂದ ಯಾವುದೇ ಸಂಬಂಧವಿಲ್ಲದ ನಿಮಗೆ ಶವ ಕೊಡಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯವರು ಹೇಳಿದಾಗ ಜಬಿನ್‌ಗೆ ಏನು ಮಾಡಬೇಕೆಂಬುವುದೇ ಗೊತ್ತೇ ಆಗುವುದಿಲ್ಲ...
ಅವರಿಬ್ಬರಿಗೆ ಅವರು ಎಷ್ಟು ಪ್ರೀತಿಸುತ್ತಿದ್ದರು ಎಂದು ಗೊತ್ತಿತ್ತು, ಆದರೆ ಸಮಾಜ ಒಪ್ಪಲು ಸಿದ್ಧವಿರಲಿಲ್ಲ
ಅವರಿಬ್ಬರು ತುಂಬಾನೇ ಪ್ರೀತಿಸಿ ಮದುವೆಯಾಗುತ್ತಾರೆ, ಆದರೆ ಸಮಾಜ ಇದನ್ನು ಒಪ್ಪಿಕೊಂಡಿರಲಿಲ್ಲ. ಮನೆಯವರು ಮನುವಿನ ಶವ ಸ್ವೀಕರಿಸಲು ಒಪ್ಪಿರಲಿಲ್ಲ, ಇತ್ತ ಆಸ್ಪತ್ರೆಯವರು ಜಬಿನ್‌ಗೆ ಶವ ಕೊಡುತ್ತಿಲ್ಲ, ಒಂದು ಕಡೆ ಸಂಗಾತಿಯನ್ನು ಕಳೆದುಕೊಂಡ ದುಃಖ, ಮತ್ತೊಂದೆಡೆ ಈ ರೀತಿಯ ಸಂಕಟ...
ನ್ಯಾಯಕ್ಕಾಗಿ ಹೈಕೋರ್ಟ್ ಮೆಟ್ಟಲೇರಿದರು
ಜಬಿನ್ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಲೇರುತ್ತಾರೆ, ಕೊನೆಗೆ ಹೈಕೋರ್ಟ್ ಮನೆಯವರಿಗೆ ಶವ ಕೊಂಡೊಯ್ಯಲು ಆದೇಶ ನೀಡುತ್ತದೆ, ಜಬಿನ್‌ಗೆ ಆಸ್ಪತ್ರೆಯಲ್ಲಿಯೇ ತನ್ನ ಪಾರ್ಟನರ್‌ನ ಅಂತಿಮ ದರ್ಶನ ನೋಡಲು ಅವಕಾಶ ನೀಡುತ್ತೆ...
ಗೇ ಎಂಬುವುದು ಪುರುಷನಿಗೆ ಪುರುಷನ ಮೇಲಾಗುವ ಆಕರ್ಷಣೆ, ಅವರಿಗೆ ಸ್ತ್ರೀ ಮೇಲೆ ಆಕರ್ಷಣೆಯಾಗುವುದಿಲ್ಲ, ಸಾಕಷ್ಟು ಜನರಲ್ಲಿ ಈ ರೀತಿ ಇರುತ್ತದೆ, ಕೆಲವರು ತಮ್ಮ ಬಗ್ಗೆ ಸಮಾಜಕ್ಕೆ ಎದುರಿ ಮುಚ್ಚಿಡುತ್ತಾರೆ, ಆದರೆ ಇನ್ನು ಗೆಲವರು ಈ ರೀತಿ ಧೈರ್ಯದಿಂದ ಮದುವೆಯಾಗುತ್ತಾರೆ, ಆದರೆ ಅವರ ಸಮಸ್ಯೆಗಳು ಅಲ್ಲಿಗೆ ನಿಲ್ಲುವುದಿಲ್ಲ... ಸಾಯುವವರೆಗೆ ಒಂದಲ್ಲಾ ಒಮದು ನೋವು, ಕಾನೂನು ಹೋರಾಟ ಎದುರಿಸಬೇಕಾಗುತ್ತದೆ.



Click it and Unblock the Notifications









