Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ಮೇ 10ರಿಂದ ಕೇದರನಾಥ ಯಾತ್ರೆ ಶುರು: ಇಲ್ಲಿರುವ 4 ದೇವಾಲಯಗಳ ಬಾಗಿಲು ಯಾವಾಗ ಓಪನ್?
ಭಾರತದಲ್ಲಿರುವ ಪವಿತ್ರ ದೇವಾಲಯಗಳಲ್ಲೊಂದು ಕೇದರನಾಥ ದೇವಾಲಯ. ಉತ್ತರಕಾಂಡದ ಕೇದರನಾಥದಲ್ಲಿ ಶಿವನು ನೆಲೆಸಿದ್ದಾನೆ ಎಂದು ಹೇಳಲಾಗುವುದು, ಅದರಲ್ಲೂ ಕೇದರನಾಥ ಯಾತ್ರೆ ವರ್ಷದಲ್ಲಿ ಕೆಲವು ತಿಂಗಳುಗಳು ಮಾತ್ರ ಇರುತ್ತದೆ.
ಇದೇ ಮೇ 10ರಿಂದ ಕೇದರನಾಥ ಯಾತ್ರೆ ಪ್ರಾರಂಭವಾಗುವುದು, ನವೆಂಬರ್‌ವರೆಗೆ ಭಕ್ತರು ಕೇದರನಾಥ ಯಾತ್ರೆ ಮಾಡುತ್ತಾರೆ. ಉಳಿದ ಸಮಯದಲ್ಲಿ ಹೆಚ್ಚು ಹಿಮವಿರುವುದರಿಂದ ಕೇದರನಾಥ ದೇವಾಲಯಕ್ಕೆ ಭಕ್ತರಿಗೆ ಪ್ರವೇಶವಿರಲ್ಲ.

ಕೇದರನಾಥ ಯಾತ್ರೆಯಲ್ಲಿ ದೊರೆಯುವ ದೇವಾಲಯಗಳು
ಯಮನೋತ್ರಿ ದೇವಾಲಯ: ಮೇ 10ಕ್ಕೆ ಓಪನ್ ಆಗುತ್ತೆ
ಗಂಗೋತ್ರಿ ದೇವಾಲಯ: ಮೇ 10ಕ್ಕೆ ಓಪನ್ ಆಗುತ್ತೆ
ಕೇದರನಾಥ ದೇವಾಲು: ಮೇ 11ಕ್ಕೆ ಓಪನ್ ಆಗುತ್ತೆ
ಬದ್ರಿನಾಥ ದೇವಾಲಯ: ಮೇ 11ಕ್ಕ ಓಪನ್ ಆಗುತ್ತೆ
ಕೇದರನಾಥ ದೇವಾಲಯ ಸಮುದ್ರಮಟ್ಟದಿಂದ 3584 ಮೀ ಎತ್ತರದಲ್ಲಿದೆ, ಇನ್ನು ಇದರ ಸಮಿಪವೇ ಮಂದಾಕಿನಿ ನದಿ ಹರೆಯುತ್ತಿದೆ.
ಯಾತ್ರಿಕರು ಅನೇಕ ಸವಾಲುಗಳನ್ನು ಬೇಧಿಸಿ ದೇವರ ದರ್ಶನ ಪಡೆಯುತ್ತಾರೆ
ಇಲ್ಲಿಗೆ ಅಷ್ಟು ಸುಲಭವಾಗಿ ತಲುಪಲು ಸಾಧ್ಯವಿಲ್ಲ, ಶಿಖರಗಳನ್ನು ಹತ್ತುತ್ತಾ, ಕಾಡುಗಳ ಮೂಲಕ ಸಾಗಬೇಕು. ಅನೇಕ ಸಲ ನೈಸರ್ಗಿಕ ವಿಕೋಪಗಳೂ ನಡೆದಿದೆ. ಇಲ್ಲಿಯ ಯಾತ್ರೆ ತುಂಬಾನೇ ದೈವಿಕವಾದ ಅನುಭವವೇ ಸರಿ.
ಇಲ್ಲಿಯ ದೇವಾಲಯಗಳನ್ನು ಕಾರ್ತಿಕ ಮಾಸದಂದು 1ರಂದು ಮುಚ್ಚಲಾಗುವುದು, ಈ ಅವಧಿಯಲ್ಲಿ ಅಲ್ಲಿರುವ ಶಿವನ ಮೂರ್ತಿಯನ್ನು ರುದ್ರಪ್ರಯಾಗ್ ಜಿಲ್ಲೆಗೆ ತಂದು ಪೂಜಿಸಿ, ನಂತರ ಮತ್ತೆ ತಂದು ಪ್ರತಿಷ್ಠಾಪಿಸಿ ಪೂಜಿಸಲಾಗುವುದು.
ಯಮುನಾದ್ರಿ ದೇವಾಲಯ ಬೆಳಗ್ಗೆ 06:15 ಗುಡಿ ಬಾಗಿಲು ತೆರೆಯುತ್ತದೆ, ಮಧ್ಯಾಹ್ನ 2 ಗಂಟೆಯರವರೆಗೆ ದರ್ಶನವಿದೆ
ನಂತರ ಮಧ್ಯಾಹ್ನ 3 ಗಂಟೆ ರಾತ್ರಿ 9.30ರವರೆಗೆ ದರ್ಶನ ಪಡೆಯಬಹುದು
ಆರತಿ ಸಮಯ ಬೆಳಗ್ಗೆ 7 ಗಂಟೆ ಸಂಜೆ 7:45ರವರೆಗೆ
ಗಂಗೋತ್ರಿ ಪೂಜಾ ಹಾಗೂ ದರ್ಶನ ಸಮಯ
ಬೆಳಗ್ಗೆ 6 ಗಂಟೆ ದೇವಾಲಯದ ಬಾಗಿಲು ಓಪನ್ ಆಗುತ್ತೆ ಮಧ್ಯಾಹ್ನ 1ರವರೆಗೆ ದರ್ಶನವಿದೆ
ನಂತರ ಸಂಜೆ 4ರಿಂದ 8 ಗಂಟೆಯವರೆಗೆ ದರ್ಶನವಿದೆ
ಆರತಿ ಸಮಯ: ಬೆಳಗ್ಗೆ 6:30ರಿಂದ ಸಂಜೆ 07:30ರವರೆಗೆ
ಕೇದರನಾಥ ದೇವಾಲಯ
ಆರತಿ ಸಮಯ: ಬೆಳಗ್ಗೆ 6ರಿಂದ ರಾತ್ರಿ 08:30ರವರೆಗೆ
ಬದ್ರಿನಾಥ ದೇವಾಲಯ
ಬೆಳಗ್ಗೆ 4:30ರಿಂದ ಮಧ್ಯಾಹ್ನ 1ರವರೆಗೆ ದರ್ಶನವಿರುತ್ತದೆ, ನಂತರ ಮಧ್ಯಾಹ್ನ 1ರಿಂದ ರಾತ್ರಿ 9ರವರೆಗೆ ಇರಲಿದೆ
ಆರತಿ ಸಮಯ ಬೆಳಗ್ಗೆ 4:30ರಿಂದ ರಾತ್ರಿ 8:30ರವರೆಗೆ



Click it and Unblock the Notifications
