Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕಾರ್ತಿಕ ಸೋಮವಾರ: ಈ ದಿನ ಎಷ್ಟು ದೀಪ ಹಚ್ಚಿಡಬೇಕು?
ನವೆಂಬರ್ 20, ಕಾರ್ತಿಕ ಮೊದಲ ಸೋಮವಾರ. ಶ್ರಾವಣ ಸೋಮವಾರದಂತೆಯೇ ಕಾರ್ತಿಕ ಸೋಮವಾರದಂದು ಶಿವನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ಶಿವನು ಜ್ಞಾನದ ಪ್ರತೀಕ, ಓಂಕಾರದ ಸ್ವರೂಪಿ, ಭಕ್ತರಿಗೆ ಬೇಡಿದ್ದನ್ನು ನೀಡುವ ಕರುಣಾಮಯಿ. ಈ ದಿನ ಶಿವನ ಆರಾಧನೆ ಮಾಡಿದರೆ ಶಿವನ ವಿಶೇಷ ಕೃಪೆಗೆ ಪಾತ್ರರಾಗಬಹುದು.
ಕಾರ್ತಿಕ ಸೋಮವಾರದ ಮಹತ್ವ'
ಕಾರ್ತಿಕ ಸೋಮವಾರದಂದುನ ಶಿವನ ಆರಾಧನೆ ಮಾಡಿದರೆ ಹೆಚ್ಚಿನ ಫಲ ದೊರೆಯುವುದು ಎಂದು ಹೇಳಲಾಗುವುದು. ಈ ದಿನ ಉಪವಾಸವಿದ್ದು ಶಿವನ ಆರಾಧನೆ ಮಾಡಲಾಗುವುದು.

ಕಾರ್ತಿಕ ಸೋಮವಾರದಂದು ಉಪವಾಸ
* ಈ ದಿನ ಒಂದು ಹಣಿ ನೀರು ಕೂಡ ಸೇವಿಸದೆ ಉಪವಾಸ ಮಾಡಿದರೆ ಒಳ್ಳೆಯದು, ಆದರೆ ಅದು ಸಾಧ್ಯವಿಲ್ಲ ಎನ್ನುವವರು ಹಣ್ಣುಗಳನ್ನು ಸೇವಿಸಬಹುದು.
* ಈ ದಿನ ಮಜ್ಜಿಗೆ, ಟೀ, ಕಾಫಿ ಏನೂ ಸೇವಿಸಬಾರದು.
* ಸಂಜೆ ಸ್ನಾನ ಮಾಡಿ ಶಿವನಿಗೆ ಪೂಜೆ ಸಲ್ಲಿಸಿ ನಂತರ ನಕ್ಷತ್ರಗಳನ್ನು ನೋಡಿದ ಬಳಿಕ ಆಹಾರವನ್ನು ಸೇವಿಸಬೇಕು.
ಕಾರ್ತಿಕ ಸೋಮವಾರದಂದು ಎಷ್ಟು ದೀಪ ಹಚ್ಚಬೇಕು?
ಈ ದಿನ ಎರಡು ಅಥವಾ 27 ದೀಪಗಳನ್ನು ತುಳಸಿ ಕಟ್ಟೆ ಹಾಗೂ ಮನೆ ಮುಂದೆ ಹಚ್ಚಿಡಿ.
ಕಾರ್ತಿಕ ಸೋಮವಾರದಲ್ಲಿ ಈ ಬಗೆಯ ಉಪವಾಸ ಮಾಡಲಾಗುವುದು
ಸೋಮವಾರದ ಉಪವಾಸ: ಕಾರ್ತಿಕ ಮಾಸದ ಸೋಮವಾರದಂದು ಮಾಡುವ ಉಪವಾಸ
ಸೋಮವಾರ ಪ್ರದೋಷ ಉಪವಾಸ: ಸೋಮವಾರದಂದು ಪ್ರದೋಷ ಬಂದರೆ ಕಾರ್ತಿಕ ಸೋಮವಾರ ಪ್ರದೋಷ ಉಪವಾಸ ಎಂದು ಮಾಡಲಾಗುವುದು
16 ಸೋಮವಾರದ ಉಪವಾಸ: ಕಾರ್ತಿಕ ಮಾಸ ಒಂದು ತಿಂಗಳು ಆದರೆ ಕೆಲವರು ಕಾರ್ತಿಕ ಸೋಮವಾರದಿಂದ 16 ಸೋಮವಾರ ಶಿವನ ಕೃಪೆಗಾಗಿ ಉಪವಾಸ ಮಾಡುತ್ತಾರೆ.
ಕಾರ್ತಿಕ ಸೋಮವಾರ ಆಚರಣೆ ಮಾಡುವುದರಿಂದ ದೊರೆಯುವ ಪ್ರಯೋಜನಗಳು
* ಕಾರ್ತಿಕ ಸೋಮವಾರ ಆಚರಣೆ ಮಾಡುವುದರಿಂದ ಕಷ್ಟಗಳು ದೂರಾಗುವುದು. ಮನೆಯಲ್ಲಿ ಏನಾದರೂ ಕೌಟುಂಬಿಕ ಸಮಸ್ಯೆಯಿದ್ದರೆ, ಹಣಕಾಸಿನ ತೊಂದರೆ ಇದ್ದರೆ ಅದೆಲ್ಲವೂ ದೂರಾಗುವುದು.
* ಮದುವೆ ವಿಳಂಬವಾಗಿದ್ದರೆ: ಮದುವೆಗೆ ಕೆಲವು ಕಾರಣಗಳಿಂದ ಅಡೆತಡೆಗಳು ಉಂಟಾಗುತ್ತಿದ್ದರೆ ಕಾರ್ತಿಕ ಸೋಮವಾರದಂದು ಉಪವಾಸ ಮಾಡಿದರೆ ಅಂಥ ಅಡೆತಡೆಗಳು ದೂರಾಗುವುದು. ಹುಡುಗಿಯರು ತಮಗೆ ಒಳ್ಳೆಯ ಗುಣದ ಹುಡುಗ ಸಿಗಲಿ ಎಂದು ಈ ದಿನ ಉಪವಾಸವಿದ್ದು ಶಿವನ ಆರಾಧನೆ ಮಾಡಲಾಗುವುದು.
* ಕಾರ್ತಿಕ ಸೋಮವಾರದಂದು ಪೂಜೆ ಮಾಡುವುದರಿಂದ ಕೋಟಿ ಸೋಮವಾರದ ಪುಣ್ಯ ಸುಗುವುದು ಎಂದು ಹೇಳಲಾಗುವುದು.
ಪ್ರದೋಷಕಾಲದಲ್ಲಿ ಶಿವ ಆರಾಧನೆ
* ಚಂದ್ರೋದಯ ನಂತರ ಶಿವನ ದೇವಾಲಯದಲ್ಲಿ ದೀಪಗಳನ್ನು ಹಚ್ಚಬೇಕು
* ಶಿವ ಪಂಚಾಕ್ಷರಿ ಮಂತ್ರ ಪಠಿಸಬೇಕು
* ಉಪವಾಸ ಮಾಡದೆ ಇರುವವರು ಸಾತ್ವಿಕ ಆಹಾರವನ್ನಷ್ಟೇ ಸೇವಿಸಿ.
ತಪಸ್ಸು, ಸಾಧನೆಗೆ ಮೀಸಲಾದ
ಕಾರ್ತಿಕ ಮಾಸವನ್ನು ತಪಸ್ಸು ಸಾಧನೆಗೆ ಮೀಸಲಾದ ತಿಂಗಳು ಎಂದು ಪರಿಗಣಿಸಲಾಗಿದೆ. ಈ ತಿಂಗಳಿನಲ್ಲಿ ನದಿ ಸ್ನಾನ ಮಾಡಿದರೆ ಪುಣ್ಯ ಸಿಗುವುದು, ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುವುದು.
ಪಂಚಾಕ್ಷರಿ ಮಂತ್ರ
ಓಂ ನಮಃ ಶಿವಾಯಃ
ಶಿವ ನಾಮ ಮಂತ್ರ
ಶ್ರೀ ಶಿವಾಯ ನಮಃ ಶ್ರೀ ಶಂಕರಾಯ ನಮಃ
ಶ್ರೀ ಮಹೇಶ್ವರಾಯ ನಮಃ
ಶ್ರೀ ರುದ್ರಾಯ ನಮಃ ಓಂ ಪಾರ್ವತೀಪತ್ಯೇ ನಮಃ
ಓಂ ನಮೋ ನೀಲಕಂಠಾಯ ನಮಃ
ಮಹಾ ಮೃತ್ಯುಂಜಯ ಮಂತ್ರ
ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ ಉರ್ವಾರುಕಮಿವ ಬಂಧನಾನ್ ಮೃತ್ಯೋರ್ ಮುಕ್ಷೀಯ ಮಾಮೃತಾತ್
ಶಿವ ಗಾಯತ್ರಿ ಮಂತ್ರ
ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಯೇ ಧೀಮಹಿ ತನ್ನಃ ಶಿವಃ ಪ್ರಚೋದಯಾತ್ ।
ಶಿವ ಮಂತ್ರ
ಶಿವಾಯ ವಿಷ್ಣು ರೂಪಾಯ
ಶಿವರೂಪಾಯ ವಿಷ್ಣವೆ
ಶಿವಸ್ಯ ಹೃದಯಂ ವಿಷ್ಣು
ವಿಷ್ಣೋಶ್ಚ ಹೃದಯಗುಂ ಶಿವಃ
ಯಥಾ ಶಿವಮಯೋ ವಿಷ್ಣುಃ
ಏವಂ ವಿಷ್ಣು ಮಯಃ ಶಿವಃ



Click it and Unblock the Notifications
