Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ರಾಜ್ಯದಲ್ಲಿ ಬಣ್ಣ ಮಿಶ್ರಿತ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ ಬ್ಯಾನ್..! ಸರ್ಕಾರದ ಆದೇಶ..!
ಗೋಬಿ ಮಂಚೂರಿಯನ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ, ಸಂಜೆಯಾದರೆ ಸಾಕು ಬೀದಿ ಬದಿಯ ಎಲ್ಲಾ ಗಾಡಿಗಳು ಫುಲ್ ರಷ್ ಆಗಿರುತ್ತವೆ. 20 ರೂಪಾಯಿ ಗೋಬಿಯಿಂದ ಸಾವಿರ ರೂಪಾಯಿ ವರೆಗಿನ ಗೋಬಿ ಸಹ ಈ ಗ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಆದ್ರೆ ಇತ್ತೀಚಿಗೆ ಆರೋಗ್ಯದ ಮೇಲೆ ಈ ಗೋಬಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬ ವರದಿಯೊಂದು ಹೊರಬಿದ್ದಿತ್ತು. ಹೀಗಾಗಿ ಗೋವಾದಲ್ಲಿ ಗೋಬಿ ಮಾರಾಟ ನಿಷೇಧ ಮಾಡಲಾಗಿತ್ತು.
ಇದೀಗ ರಾಜ್ಯದಲ್ಲೂ ಕಲರ್ ಮಿಶ್ರಿತ ಗೋಬಿ, ಕಾಟನ್ ಕ್ಯಾಂಡಿಯನ್ನು ನಿಷೇಧ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಪರಿಗಣಿಸಿದ ಆರೋಗ್ಯ ಇಲಾಖೆ ರಾಸಾಯನಿಕಯುಕ್ತ ಕಲರ್ ಬಳಸಿ ಮಾಡುವ ಗೋಬಿ, ಬಾಂಬೆ ಮಿಠಾಯಿ ಎಂದು ಕರೆಯುವ ಕಾಟನ್ ಕ್ಯಾಂಡಿ ಮಾರಾಟ ಬ್ಯಾನ್ ಮಾಡಿದೆ.
ಈ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಕಾಟನ್ ಕ್ಯಾಂಡಿ ಮಾಡಲು ಬಳಸು ರಾಸಾಯನಿಕವು ಆರೋಗ್ಯ ಸಮ್ಯಸ್ಯೆಗೆ ಕಾರಣವಾಗಿದೆ. ಹೀಗಾಗಿ ಅದನ್ನು ಬ್ಯಾನ್ ಮಾಡಲಾಗಿದೆ. ಇನ್ನು ಗೋಬಿ ತಯಾರಿಸಲು ಬಳಸು ಕಲರ್‌ನಿಂದಲೂ ಅನಾರೋಗ್ಯಕ್ಕೆ ಒಳಗಾಗುತ್ತೇವೆ, ಹೀಗಾಗಿ ರಾಸಾಯನಿಕ ಕಲರ್ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಕಾಟನ್ ಕ್ಯಾಂಡಿಯನ್ನೂ ಬಣ್ಣ ಬಳಸದೆ ತಯಾರಿಸಿ ಮಾರಾಟ ಮಾಡಬಹುದು ಎಂದಿದ್ದಾರೆ.

ರಾಜ್ಯದಲ್ಲಿ ಒಟ್ಟು 171 ರೀತಿಯ ಗೋಬಿಯ ಸ್ಯಾಂಪಲ್ ಸಂಗ್ರಹ ಮಾಡಲಾಗಿತ್ತು, ಇದನ್ನು ಪರೀಕ್ಷೆಗೊಳಪಡಿಸಿದಾಗ 107ರಲ್ಲಿ ಕೃತಕ ಬಣ್ಣ ಹಾಗೂ ಅನಾರೋಗ್ಯ ಉಂಟುಮಾಡಲು ಬೇಕಾದ ರಾಸಾಯನಿಕ ಪತ್ತೆಯಾಗಿದೆ. ಇದರಲ್ಲಿ ಟಾರ್ ಟ್ರಸೈನ್, ಸನ್ಸೆಟ್ ಎಲ್ಲೋ, ಕಾರ್ಮಿಸನ್ ರಾಸಾಯನಿಕ ಬಳಸುತ್ತಿರುವುದು ಕಂಡು ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.
ಹೀಗಾಗಿ ಇನ್ನು ಮುಂದೆ ಗೋಬಿ ತಯಾರಿಕೆಗೆ ಕೃತಕ ಬಣ್ಣ ಬಳಸುವಂತಿಲ್ಲ, ಇಂದು ವೇಳೆ ಬಣ್ಣ ಬಳಸಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಆಹಾರ ಸುರಕ್ಷಿತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 59ರ ಅಡಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದಲ್ಲದೆ 25 ವಿಧದ ಕಾಟನ್ ಕ್ಯಾಂಡಿ ಮಾದರಿಗಳನ್ನು ಸಂಗ್ರಹಿಸಲಾಗಿದೆ. 15 ಮಾದರಿಗಳಲ್ಲಿ ಕೃತಕ ಬಣ್ಣ ಬಳಸಿರುವುದು ಕಂಡುಬಂದಿದೆ. 10ರಲ್ಲಿ ಕೃತಕ ಬಣ್ಣ ಬಳಸಿಲ್ಲ. ಕೃತಕ ಬಣ್ಣ ಬಳಕೆ ಮಾಡಿ ಕ್ಯಾಂಡಿ ತಯಾರು ಮಾಡಬಹುದು. ಆದರೆ ರೊಡಮೈನ್ ಬಿ, ಟಾರ್ಟ್ರಾಜಿನ್ನಂತಹ ಯಾವುದೇ ಬಣ್ಣ ಬಳಸಬಾರದು. ಇದು ಆರೋಗ್ಯಕ್ಕೆ ಹಾನಿಕಾರಕ. ಈ ರೊಡಮೈನ್ ಬಿ ಬಳಸಿದ್ದು ಕಂಡು ಬಂದರೆ ಜೈಲು ಶಿಕ್ಷೆ ಜೊತೆಗೆ 10 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದಿದ್ದಾರೆ.
ಈ ರೊಡ್‌ಮೈನ್ ಬಿ ಎಂಬ ರಾಸಾಯನಿಕವು ಕ್ಯಾನ್ಸರ್ ಕಾರಕವಾಗಿದ್ದು, ಇದರ ನಿರಂತರ ಸೇವನೆಯು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ವೈದ್ಯಕೀಯ ಪರೀಕ್ಷೆಗಳು ದೃಢಪಡಿಸಿವೆ. ಹೀಗಾಗಿ ಇದನ್ನು ಬಳಸಿ ಮಾಡಲಾಗುವ ಕಾಟನ್ ಕ್ಯಾಂಡಿ ಈಗ ದೇಶದ ಹಲವು ರಾಜ್ಯಗಳಲ್ಲಿ ನಿಷೇಧ ಮಾಡಲಾಗಿದೆ. ಇಂದು ರಾಜ್ಯದಲ್ಲೂ ನಿಷೇಧಗೊಂಡಿದೆ.
ಗೋಬಿ ರುಚಿಯಾಗಬೇಕೆಂದರೆ ಸಾಸ್ ಪಾತ್ರ ಪ್ರಮುಖವಾದದ್ದು, ಚಿಲ್ಲಿ ಸಾಸ್, ಸೋಯ ಸಾಸ್, ಟೊಮೆಟೊ ಸಾಸ್ ಹಾಕಿ ಮಾಡುವ ಈ ಗೋಬಿಯನ್ನು ಬಾಯಿಗಿಟ್ಟರೆ ಅದರೆ ರುಚಿಗೆ ಕರಗಿ ಹೋಗುತ್ತೇವೆ, ಆದರೆ ಆ ರುಚಿ ನಮ್ಮ ಆರೋಗ್ಯವನ್ನೂ ಕರಗಿಸುತ್ತದೆ ಎಂಬ ಆಘಾತಕಾರಿ ಅಂಶ ತಿಳಿದು ಬಂದಿದೆ. ಗೋಬಿ ಮಾಡಲು ತುಂಬಾ ವ್ಯಾಪಾರಿಗಳು ತುಂಬಾನೇ ಕಳಪೆ ಗುಣಮಟ್ಡದ ಸಾಸ್‌ಗಳನ್ನೂ ಬಳಸುತ್ತಿದ್ದಾರೆ.



Click it and Unblock the Notifications











