Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕರ್ನಾಟಕ ಚುನಾವಣೆ: 66 ವರ್ಷಗಳಲ್ಲಿ ವಿಧಾನಸಭೆ ಪ್ರವೇಶಿಸಿದ ಮಹಿಳಾ MLAಗಳ ಸಂಖ್ಯೆ ಬರೀ 7! ಕಾರಣವೇನಿರಬಹುದು?
ಕರ್ನಾಟಕದಲ್ಲಿ ಎಲೆಕ್ಷನ್ ಬಿಸಿ ಕಾವೇರಿದೆ, ಎಲ್ಲಾ ಪಕ್ಷದವರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಚುನಾವನೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳನ್ನು ನೋಡುವಾಗ ಅರೆ... ಈ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಬೆರಳಣಿಕೆಯಷ್ಟೇ! ಹೌದು ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪ್ರಬಲ ಪಕ್ಷಗಳು. ಇದರ ಜೊತೆಗೆ ಆಮ್ ಆದ್ಮಿ ಪಕ್ಷ, ಪಕ್ಷೇತರ ಅಭ್ಯರ್ಥಿಗಳು ಲೆಕ್ಕ ನೋಡಿದಾಗ ಅವರಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಶೇ. ರಷ್ಟು ಮಾತ್ರ.

ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದಾರೆ. ಒಂದು ಅಫೀಸ್‌ನಲ್ಲೂ ಕೂಡ ಶೇ. 30ರಷ್ಟಾದರೂ ಮಹಿಳೆಯರಿರುತ್ತಾರೆ, ಮಹಿಳಾ ಮೀಸಲಾತಿ ಕಾಯ್ದೆ ಪ್ರಕಾರ ಲೋಕ ಸಭೆ ಹಾಗೂ ವಿಧಾನ ಸಭೆಯಲ್ಲಿ ಶೇ. 33ರಷ್ಟು ಮೀಸಲಾತಿ ಮಹಿಳೆಯರಿಗಿದೆ. ಆದರೂ ಕರ್ನಾಟಕದಲ್ಲಿ ಮಹಿಳಾ ರಾಜಕಾರಣಿಗಳು ಏಕೆ ಪ್ರಭಾವಿ ಸ್ಥಾನದಲ್ಲಿ ತುಂಬಾನೇ ಕಡಿಮೆ ಇದೆ?
ಕಳೆದ 66 ವರ್ಷದಿಂದ ಬರೀ ಏಳು ಮಹಿಳೆಯರಷ್ಟೇ ವಿಧಾನ ಸಭೆ ಪ್ರವೇಶಿಸಿದ್ದಾರೆ, ಅದರಲ್ಲೂ 3 ಮಹಿಳಾ ಅಭ್ಯರ್ಥಿಗಳು ಮೈಸೂರು ವಿಧಾನ ಸಭೆ ಕ್ಷೇತ್ರದಿಂದ 1975ರಲ್ಲಿ ಆಯ್ಕೆ ಆದವರು.
ಕರ್ನಾಟಕದಲ್ಲಿ ವಿಧಾನ ಸಭೆ ಪ್ರವೇಶಿಸಿದ ಮಹಿಳಾ ಲೀಡರ್‌ಗಳೆಂದರೆ
ನಾಗರತ್ನಮ್ಮಾ ಹೀರೇಮಠ, ಲಕ್ಷ್ಮಿದೇವಿ ರಾಮಣ್ಣ, ಗ್ರೇಸ್ ಟಕ್ಕರ್, ಪ್ರಮೀಳಾ ನೇಸರ್ಗಿ, ಎಸ್ ಹೇಮಾವತಿ, ಶೋಭಾ ಕರಂದ್ಲಾಜೆ (ಅವರೀಗ ಎಂಪಿ ಆಗಿದ್ದಾರೆ), ಸೌಮ್ಯಾ ರೆಡ್ಡಿ.
ಮಹಿಳೆಯರಿಗೆ ರಾಜಕೀಯದಲ್ಲಿ ಬೆಳೆಯಲು ಇರುವ ಸವಾಲುಗಳೇನು?
ಇದರ ಬಗ್ಗೆ ಹೇಳುವ ಮುನ್ನ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿರುವ ಮಾತನ್ನು ಕೋಟ್ ಮಾಡಬೇಕಾಗಿದೆ " ಮಹಿಳೆಯರು ಮೀಸಲಾತಿಗಾಗಿ ಕಾಯಬಾರದು ಅಥವಾ ತಂದೆ ಅಥವಾ ಗಂಡ ರಾಜಕಾರಣಿ ಎಂಬ ಕಾರಣಕ್ಕೆ ಸಿಗುವಂತಾಗಬಾರದು. ಎಲ್ಲಾ ಹೆಣ್ಮಕ್ಕಳು ಅವರ ರಾಜಕೀಯ ಕುಟುಂಬವನ್ನೇ ಅವಲಂಬಿಸಿದ್ದಾರೆ ಎಂದು ಹೇಳುತ್ತಿಲ್ಲ, ಆದರೆ ಮಹಿಳೆಯರು ಕೂಡ ಮುಂದೆ ಬರಲು ಜನರ ಬೆಂಬಲ ಬೇಕಾಗಿದೆ" ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ರಾಜಕೀಯದಲ್ಲಿ ತಂದೆ , ಗಂಡ ರಾಜಕೀಯದಲ್ಲಿಲ್ಲದೆ ಮುಂದೆ ಬಂದಿರುವ ಮಹಿಳಾ ರಾಜಕಾರಣಿಗಳು ತುಂಬಾನೇ ವಿರಳ. ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ತೋರಿಸಿ, ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಮುಂದೆ ಬರುತ್ತಿದ್ದರು ಅವರಿಗೆ ಸೂಕ್ತ ಬೆಂಬಲವಾಗಲಿ, ಅವಕಾಶವಾಗಲಿ ಇನ್ನೂ ಸಿಕ್ಕಿಲ್ಲ ಎಂದೇ ಹೇಳಬಹುದು, ಅದಕ್ಕೆ ಹೀಗಿರುವ ಮಹಿಳಾ ರಾಜಕೀಯ ನಾಯಕಿಯರು ಸಂಖ್ಯೆಯೇ ಉದಾಹರಣೆ.
ಮಹಿಳೆಯರು ರಾಜಕೀಯದಲ್ಲಿ ಸಾಧನೆ ಮಾಡುವುದು ಸುಲಭವಲ್ಲ
ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ, ಆದರೆ ರಾಜಕೀಯ ಕ್ಷೇತ್ರ ಇನ್ನು ತುಸು ಭಿನ್ನ. ಇಲ್ಲಿ ವೈಯಕ್ತಿಕ ಬದುಕಿನ ಕಡೆಗೆ ಸಮಯ ಕೊಡಲು ಕಷ್ಟವಾಗುವುದು, ದಿನ 24 / 7 ಸಾರ್ವಜನಿಕ ಸೇವೆಯಲ್ಲಿರುವವರು. ಇದೊಂದು ಫುಲ್ ಟೈಮ್ ಕೆಲಸ. ಕುಟುಂಬದವರ ಸಂಪೂರ್ಣ ಸಹಕಾರವಿದ್ದರೆ ಸಾಧ್ಯವಾಗುವುದು, ಇಲ್ಲಾಂದ್ರೆ ಮಹಿಳೆ ರಾಜಕೀಯದಲ್ಲಿ ತನ್ನನ್ನು ಗುರುತಿಸಿಕೊಳ್ಳಲು ಕಷ್ಟವಾಗುವುದು.
ಪುರುಷ ಹಾಗೂ ಮಹಿಳೆಗೆ ಹೋಲಿಸಿದರೆ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ದೊಡ್ಡದು
ಮನೆಯ ಗಂಡಸು ದುಡಿದು ಮನೆ ನಿರ್ವಹಣೆಗೆ ಖರ್ಚಿಗೆ ನೀಡಿದರೆ ಪತ್ನಿ ಆ ಮನೆಯನ್ನು ಸಂಪೂರ್ಣವಾಗಿ ನಿಭಾಯಿಸಿಕೊಂಡು ಹೋಗುತ್ತಾಳೆ, ಆದರೆ ಮಹಿಳೆಯ ಪಾತ್ರವಲ್ಲ, ಕೆಲವೊಂದು ಪಾತ್ರಗಳನ್ನು ಅವಳೇ ನಿಭಾಯಿಸಬೇಕಾಗುತ್ತದೆ. ಉದಾಹರಣೆಗೆ ತನ್ನ ಮಗುವಿನ ಪೋಷಣೆ. ತಾನು ಜನ್ಮ ನೀಡಿದ ಮಗುವಿಗೆ ಎದೆ ಹಾಲುಣಿಸಿ ಪೋಷಿಸುವುದು ತಾಯಿಯ ಕರ್ತವ್ಯವಾಗಿರುತ್ತದೆ. ಒಬ್ಬ ಹೆಣ್ಣಾಗಿ ಅವಳು ಹಲವು ಪಾತ್ರಗಳನ್ನು ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ಆದರೆ ರಾಜಕೀಯ ಬಂದಾಗ ಸಾರ್ವಜನಿಕ ಜೀವನ ಹಾಗೂ ವೈಯಕ್ತಿಕ ಬದುಕನ್ನು ಸರಿದೂಗಿಸಿಕೊಂಡು ಹೋಗಲು ಬಹುತೇಕರಿಗೆ ಕಷ್ಟವಾಗುವುದು, ಈ ಕಾರಣಕ್ಕೆ ಬೆರಳಣಿಕೆಯಷ್ಟು ಮಹಿಳೆಯರು ರಾಜ್ಯ ರಾಜಕಾರಣದಲ್ಲಿ ಪ್ರಭಾವಿಯಾಗಿ ಗುರುತಿಸಿಕೊಂಡಿದ್ದಾರೆ.
ಬದಲಾಗಿದೆ ಆಲೋಚನೆ
ಹಿಂದೆಯೆಲ್ಲಾ ತನ್ನ ಸೊಸೆ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ತುಂಬಾ ಮನೆಗಳಲ್ಲಿ ಅನುಮತಿ ನೀಡುತ್ತಿರಲಿಲ್ಲ, ಮನೆ-ಮಕ್ಕಳು ನೋಡಿಕೊಂಡಿರು ಅಂತಿದ್ದರು, ಆದರೆ ಇದೀಗ ಜನರ ಆಲೋಚನೆ ಬದಲಾಗಿದೆ ತಮ್ಮ ಹೆಣ್ಮಕ್ಕಳು ರಾಜಕೀಯದಲ್ಲಿ ಗುರುತಿಸಿಕೊಂಡರೆ ಮನೆಯವರ ಪ್ರೋತ್ಸಾಹ ಸಿಗುತ್ತಿದೆ, ಇದರ ಜೊತೆಗೆ ಜನರು ಕೂಡ ಅವರ ಮೇಲೆ ನಂಬಿಕೆ ಇಟ್ಟರೆ ಕೆಲವೇ ವರ್ಷಗಳಲ್ಲಿ ಮಹಿಳಾ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ವಿದ್ಯಾವಂತ ಹೆಣ್ಮಕ್ಕಳು ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಕ್ಷೇತ್ರದ ಕಡೆ ಆಸಕ್ತಿ ತೋರಿಸುತ್ತಿರುವುದು ಧನಾತ್ಮಕ ಸೂಚನೆಯಾಗಿದೆ.



Click it and Unblock the Notifications
