Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕರ್ನಾಟಕ ಚುನಾವಣೆ 2023: ಮಹಿಳೆಯರಿಗೆ ಖುಷಿ ಕೊಡುವಂತಿಲ್ಲ ಗೆದ್ದ ಮಹಿಳಾ ಅಭ್ಯರ್ಥಿಗಳ ಸಂಖ್ಯೆ!
ಕರ್ನಾಟಕ ಜನತೆ ಸ್ಪಷ್ಟ ಬಹುಮತವನ್ನು ಕಾಂಗ್ರೆಸ್‌ಗೆ ನೀಡುವ ಮೂಲಕ ಇನ್ನು ಐದು ವರ್ಷ ರಾಜ್ಯ ಭರಿಸುವ ಹಕ್ಕನ್ನು ಕಾಂಗ್ರೆಸ್‌ಗೆ ನೀಡಿದೆ. ಬಿಜೆಪಿಯ ಲೆಕ್ಕಾಚಾರವನ್ನು ಉಲ್ಟಾ ಮಾಡಿ ಕಾಂಗ್ರೆಸ್ ಭರ್ಜರಿ ಜಯಭೇರಿ ಭಾರಿಸಿದೆ. ಎರಡು ಬಾರಿ ಬಹುಪಕ್ಷವಾಗಿ ಹೊರ ಹೊಮ್ಮಿದ ಬಿಜೆಪಿ ಮಂಕಾದರೆ ಕಳೆದ ಎರಡು ಬಾರಿ ಮಂಕಾಗಿದ್ದ ಕಾಂಗ್ರೆಸ್ ಹುಮ್ಮಸ್ಸಿನಿಂದ ಮರಳಿದೆ.

2023ರ ಚುನಾವಣೆಯಲ್ಲಿ ಕಾಂಗ್ರೆಸ್ 136 ಸೀಟು ಪಡೆಯುವ ಮೂಲಕ ಸ್ಪಷ್ಟಬಹುಮತದಿಂದ ಸರ್ಕಾರ ರಚಿಸಲು ಮುಂದಾದರೆ , ಬಿಜೆಪಿ ಬರೀ 65 ಸೀಟು ಪಡೆಯುವ ಮೂಲಕ ಸ್ಟ್ರಾಟಜಿ ಪ್ಲ್ಯಾನ್ ಉಲ್ಟಾ ಹೊಡೆದ ಧರ್ಮ ಸಂಕಟದಲ್ಲಿ. ಇನ್ನು 19 ಸೀಟ್ ಪಡೆದಿರುವ ಜೆಡಿಎಸ್ ಮೈತ್ರಿ ಸರ್ಕಾರ ಬಂದು ನಮ್ಮ ಆಡಳಿತ ನಡೆಸಬೇಕೆಂಬ ಕನಸು ಕಾಣ್ತಾ ಇತ್ತು, ಇದೀಗ ಅವರಿಗೂ ನಿರಾಸೆ ಉಂಟಾಗಿದೆ. ಒಟ್ಟಿನಲ್ಲಿ ತೀರ್ಪುಗಾರರು (ಜನತೆ) ಯಾವುದೇ ಗೊಂದಲ ಉಂಟು ಮಾಡದೆ ಒಂದು ಪಕ್ಷಕ್ಕೆ ಅಧಿಕಾರ ನಡೆಸಲು ಅನುವು ಮಾಡಿದೆ. ಜನರ ನಿರೀಕ್ಷೆಯನ್ನು ಹುಸಿ ಮಾಡದಿರುವ ಜವಾಬ್ದಾರಿ ಈಗ ಕಾಂಗ್ರೆಸ್ ಪಕ್ಷದ ಮೇಲಿದೆ.
ಈ ಬಾರಿ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಮಹಿಳೆಯರ ಸಂಖ್ಯೆ ನೋಡಿದರೆ ಖಂಡಿತ ಮಹಿಳೆಯರಿಗೆ ತುಂಬಾನೇ ನಿರಾಸೆಯಾಗುವುದು. ಶೇ. 30ರಷ್ಟು ಕೂಡ ಮಹಿಳಾ ಅಭ್ಯರ್ಥಿಗಳಿಲ್ಲ, ಈ ಬಾರಿ ಚುನಾವಣೆಯಲ್ಲಿ ಬರೀ 10 ಮಹಿಳಾ ಅಭ್ಯರ್ಥಿಗಳಷ್ಟೇ ವಿಜಯದ ನಗೆ ಬೀರಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ್ದ ಮಹಿಳೆಯರ ಸಂಖ್ಯೆ ತುಂಬಾನೇ ಕಡಿಮೆ ಇತ್ತು, ಅವರಲ್ಲಿಯೂ ಬರೀ 10 ಜನರಿಗಷ್ಟೇ ಗೆಲುವು ಒಲಿದಿದೆ. (ಮೊದಲು 11 ಜನರಿಗೆ ಜಯ ಎ ಒಲಿದಿತ್ತು, ಆದರೆ ಮರು ಮತ ಎಣಿಕೆಯಲ್ಲಿ ಸೌಮ್ಯಾ ರೆಡ್ಡಿ ಕೆಲವೇ ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ).
2023ರ ಚುನಾವಣೆಯಲ್ಲಿ ಜಯಗಳಿಸಿದ ಮಹಿಳಾ ಅಭ್ಯರ್ಥಿಗಳೆಂದರೆ
* ಬೆಳಗಾವಿ ಗ್ರಾಮಾಂತರದಿಂದ ಲಕ್ಷ್ಮಿ ಹೆಬ್ಬಾಳ್ಕರ್
* ದೇವದುರ್ಗದಿಂದ ಕರೇಮ್ಮ
* ಗುಲ್ಬರ್ಗ ಉತ್ತರದಿಂದ ಕಣೀಜ್ ಫಾತಿಮಾ
*ಹರಪ್ಪನ ಹಳ್ಳಿಯಿಂದ ಲತಾ ಮಲ್ಲಿಕಾರ್ಜುನ
* ಚಿನ್ನದ ಗಣಿ ಕೋಲಾರದಿಂದ ರೂಪಾ ಕಲಾ ಎಂ
* ಮಹಾದೇವಪುರದಿಂದ ಮಂಜುಳ ಎಸ್
* ಮೂಡಿಗೆರೆಯಿಂದ ನಯನಾ ಮೋಟಮ್ಮ
* ನಿಪ್ಪಣಿಯಿಂದ ಶಶಿಕಲಾ ಜೊಲ್ಲೆ
* ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಶಾರದ ಪೂರ್ಯಾನಾಯ್ಕ
* ಸುಳ್ಯಾದಿಂದ ಭಗೀರಥಿ ಮುರುಳ್ಯ
ಇಲ್ಲಿಯೂ ಕಾಂಗ್ರೆಸ್‌ನದ್ದೇ ಸಿಂಹಪಾಲು
ಬೆಳಗಾವಿ ಗ್ರಾಮಾಂತರದಿಂದ ಲಕ್ಷ್ಮಿ ಹೆಬ್ಬಾಳ್ಕರ್
ಗುಲ್ಬರ್ಗ ಉತ್ತರದಿಂದ ಕನೀಜ್ ಫಾತಿಮಾ
ಮೂಡಿಗೆರೆ ನಯನ ಮೋಟಮ್ಮಾ (ಕಾಂಗ್ರೆಸ್)
ಕೋಲಾರ ಚಿನ್ನದ ಗಣಿ, ರೂಪ ಕಲಾ ಎಂ (ಕಾಂಗ್ರೆಸ್)
ಗೆದ್ದ ಬಿಜೆಪಿ ಮಹಿಳಾ ಅಭ್ಯರ್ಥಿಗಳು
ಮಹಾದೇವಪುರು ಮಂಜುಳ ಎಸ್
ನಿಪ್ಪಣಿಯಿಂದ ಶಶಿಕಲಾ ಜೊಲ್ಲೆ
ಸುಳ್ಯಾದಿಂದ ಭಗೀರಥಿ ಮುರುಳ್ಯ
ಗೆದ್ದ ಜೆಡಿಎಸ್ ಅಭ್ಯರ್ಥಿಗಳು
ದೇವದುರ್ಗ ಕರೇಮ್ಮ (ಜೆಡಿಎಸ್)
ಶಾರದ ಪೂರ್ಯಾನಾಯ್ಕ (ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ) ಜೆಡಿಎಸ್
ಪಕ್ಷೇತರ ಅಭ್ಯರ್ಥಿ
ಹರಪ್ಪನಹಳ್ಳಿ ಲತ ಮಲ್ಲಿಕಾರ್ಜುನ್
ಮುಂದಿನ ಚುನಾವಣೆಗಾದರೂ ಮಹಿಳೆಯರ ಸಂಖ್ಯೆ ಹೆಚ್ಚಾದರೆ ಮಹಿಳೆಯರಿಗೆ ಅದು ಸಂತೋಷದ ವಿಷಯ. ಮಹಿಳೆಯರು ರಾಜಕೀಯದ ಕಡೆಗೆ ಹೆಚ್ಚು ಆಸಕ್ತಿ ತೋರಿಸದೇ ಇರುವುದು, ಈ ಕ್ಷೇತ್ರದಲ್ಲಿ ಮಹಿಳೆಯರಿಗೆ ಬೆಳೆಯಲು ಇರುವ ಸವಾಲುಗಳು (ಸಂಸಾರ ಹಾಗೂ ಸಮಾಜ ಜವಾಬ್ದಾರಿ ಜೊತೆ ಜೊತೆಯಲ್ಲಿ ನಿಭಾಯಿಸಿಕೊಂಡು ಹೋಗಲು ಕಷ್ಟವಾಗುವುದು) ಈ ಎಲ್ಲಾ ಕಾರಣಗಳಿಂದಾಗಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಗೆದ್ದಿರುವ ಮಹಿಳೆಯರಿಗೆ ಒಳ್ಳೆಯ ಸ್ಥಾನ ನೀಡಿದರೆ ಮತ್ತೊಂದಿಷ್ಟು ಮಹಿಳೆಯರಿಗೆ ಸ್ಪೂರ್ತಿಯಾಗಿ ರಾಜಕೀಯಕ್ಕೆ ಬರಬಹುದು.



Click it and Unblock the Notifications
