Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ದೆಹಲಿ ಮೆಟ್ರೋದಲ್ಲಿ ಕಾವಾಡಿಯ ಯಾತ್ರಿಕರ ನೃತ್ಯ ವೈರಲ್: ಈ ಯಾತ್ರೆಯ ಧಾರ್ಮಿಕ ಮಹತ್ವವೇನು?
ದೆಹಲಿ ಮೆಟ್ರೋ ವೀಡಿಯೋ ಅನೇಕ ಕಾರಣಗಳಿಂದ ಆಗಾಗ ವೈರಲ್ ಆಗುತ್ತಿರುತ್ತದೆ, ಇದೀಗ ಕಾವಾಡಿಯಾ ಯಾತ್ರಿಕರು ಶಿವನ ಕುರಿತ ಭಜನೆಗಳನ್ನು ಹಾಡುತ್ತಾ ನೃತ್ಯ ಮಾಡುತ್ತಿರುವ ವೀಡಿಯೋ ತುಂಬಾನೇ ವೈರಲ್ ಆಗಿದೆ. ಈ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ಸದ್ದು ಮಾಡುತ್ತಿದೆ.
'Now it's Kanwariya's dance in Delhi Metro 😃' ಎಂದು ಕ್ಯಾಪ್ಷನ್ ನೀಡಿ ಪಂಕಜ್ ಉಪಾಧ್ಯಾಯ ಎಂಬುವರು ಈ ವೀಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು ಹಳದಿ ವಸ್ತ್ರ, ಕಪ್ಪು ಸಾಲು ಧರಿಸಿ ಬರಿಗಾಲಿನಲ್ಲಿ ನೃತ್ಯ ಮಾಡುತ್ತಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ಸದ್ದು ಮಾಡುತ್ತಿದೆ.

ಕಾನ್ವಾರ್ ಯಾತ್ರೆ
ವಾರ್ಷಿಕ ಕಾವಾಡಿಯಾ / ಕಾನ್ವಾರ್ ಯಾತ್ರೆ ಪ್ರಾರಂಭವಾಗಿದೆ. ಉತ್ತರ ಭಾರತದ ಕಡೆ ಶ್ರಾವಣ ಪ್ರಾರಂಭವಾಗಿದೆ, ನಮ್ಮಲ್ಲಿ ಇನ್ನೂ ಆಷಾಢ ಮುಗಿದಿಲ್ಲ. ಈ ಶ್ರಾವಣ ಮಾಸದಲ್ಲಿ ಕಾವಾಡಿಯ ಯಾತ್ರೆ ಅಂತ ಮಾಡಲಾಗುವುದು. ಪಂಜಾಬ್, ಹರಿಯಾಣ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ದೆಹಲಿಗೆ ಬರುತ್ತಾರೆ. ಈ ಸಮಯದಲ್ಲಿ ದೆಹಲಿಯಲ್ಲಿ ಎಲ್ಲಿ ನೋಡಿದರೂ ಕೇಸರಿ ಬಟ್ಟೆ ಧರಿಸಿದ ಕಾವಾಡಿಯಾ ಯಾತ್ರಿಕರೇ ಕಾಣ ಸಿಗುತ್ತಾರೆ.
ಕಾವಾಡಿಯಾ ಯಾತ್ರೆಯ ಧಾರ್ಮಿಕ ಮಹತ್ವ
ಕಾವಾಡಿಯ ಯಾತ್ರೆಯಲ್ಲಿ ಭಕ್ತರು ಹರಿಧ್ವಾರ, ಗಂಗೋತ್ರಿ, ರಿಷಿಕೇಷದಿಮದ ಗಂಗಾ ನದಿಯ ನೀರಿನ್ನು ಒಂದು ಮಡಿಕೆಯಲ್ಲಿ ತುಂಬುತ್ತಾರೆ. ಆ ಮಡಿಕೆಯನ್ನು ಮುಚ್ಚಳ ಹಾಕಿ ಭದ್ರಪಡಿಸಿರುತ್ತಾರೆ, ಆ ಮಡಿಕೆ ಅಲಂಕಾರ ಮಾಡಿರುತ್ತಾರೆ, ಅದನ್ನು ತೋಳಿನಲ್ಲಿ ಎತ್ತಿಕೊಂಡು ಸಾಗುತ್ತಾರೆ. ಹರಿಧ್ವಾರದಿಂದ ಅವರ ಪ್ರಯಾಣ ಪ್ರಾರಂಭವಾಗಿ ಮನೆಗೆ ತಲುಪುವವರೆಗೆ ಆ ಮಡಿಕೆಯನ್ನು ಕೆಳಗೆ ಇಡುವಂತೆ ಇಲ್ಲ, ಮಡಿಕೆ ಎತ್ತಿಕೊಂಡಿರುವವರಿಗೆ ಸುಸ್ತಾದಾಗ ಆ ಗುಂಪಿನಲ್ಲಿರುವ ಇತರರು ಹೊತ್ತುಕೊಳ್ಳುತ್ತಾರೆ, ಹೀಗೆ ಆ ಪವಿತ್ರ ನೀರನ್ನು ತಂದು ಊರಿನಲ್ಲಿರುವ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುವುದು. ಈ ಸಮಯದಲ್ಲಿ ಭಕ್ತರು ಹರ ಹರ ಮಹಾದೇವ ಎಂದು ದೇವರ ಸ್ಮರಣೆ ಮಾಡುತ್ತಾರೆ.
ಪೌರಾಣಿಕ ಹಿನ್ನಲೆ
ದಾನವರು ಹಾಗೂ ದೇವತೆಗಳ ನಡುವೆ ಅಮೃತಕ್ಕಾಗಿ ಸಮುದ್ರಮಂಥನ ಮಾಡುವಾಗ ಮೊದಲು ಹಾಲಾಹಲ ಅಂದರೆ ವಿಷ ಉಕ್ಕುತ್ತೆ, ಅದನ್ನು ಶಿವ ಕುಡಿದು ಮೂರು ಲೋಕದ ರಕ್ಷಣೆ ಮಾಡುತ್ತಾನೆ. ಆದರೆ ವಿಷ ಕುಡಿದಾಗ ಶಿವನಿಗೆ ಗಂಟಲಿನಲ್ಲಿ ತುಂಬಾ ಉರಿ ಉಂಟಾಗುತ್ತದೆ. ಆವಾಗ ಗಂಗೆಯ ನೀರನ್ನು ಶಿವನ ಮೇಲೆ ಸುರಿದಾಗ ಶಿವನಿಗೆ ಉರಿ ಕಡಿಮೆಯಾಯಿತು, ಅಲ್ಲಿಂದ ಶಿವಲಿಂಗಕ್ಕೆ ಗಂಗಾ ನೀರನ್ನು ಸುರಿಯುವ ಆಚರಣೆ ಜಾರಿಗೆ ಬಂತು ಎಂದು ಹೇಳಲಾಗುತ್ತಿದೆ.



Click it and Unblock the Notifications
