Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕಾಮಾಕ್ಯ ದೇವಿ: ಮುಟ್ಟಾಗುವ ದೇವಿ, ಆಗ ಝರಿ ನೀರು ಕೆಂಪಾಗುವುದು, ಆಕೆಯ ಮುಟ್ಟಿನ ಬಟ್ಟೆಯೇ ಇಲ್ಲಿ ಪ್ರಸಾದ
ಋತುಸ್ರಾವದ ದೇವಿ ಬಗ್ಗೆ ಗೊತ್ತಿದೆದೆಯೇ? ಗುವಾಹಡಿಯ ಮಧ್ಯದ ನೀಲಾಚಲ ಎಂಬ ಬೆಟ್ಟದಲ್ಲಿ ಕಾಮಾಕ್ಯ ದೇವಿಯ ದೇವಾಲಯವಿದೆ. ಈ ದೇವಿಯ ಯೋನಿಯಿಂದ ರಕ್ತಸ್ರಾವವಾಗುತ್ತದೆ. ಈ ದೇವಿ ಕ್ಷೇತ್ರಕ್ಕೆ ಸಾಧು ಸಂತರು ಸೇರಿದಂತೆ ಹಲವಾರು ಭಕ್ತರು ಬಂದು ದೇವಿಗೆ ಕೈ ಮುಗಿದು ಅವಳ ಆಶೀರ್ವಾದ ಬೇಡುತ್ತಾರೆ. ಕಾಮಾಕ್ಯ ದೇವಾಲಯದ ವಿಶೇಷತೆಯೆಂದರೆ ಇಲ್ಲಿ ದೇವಿಯ ವಿಗ್ರಹವಿಲ್ಲ, ದೇವಿಯ ಯೋನಿಗೆ ಪೂಜೆ ಮಾಡಲಾಗುವುದು.
ಗುಹೆಯೊಂದರಲ್ಲಿ ಇರುವ ಯೋನಿಯಾಕಾರದ ಪ್ರತಿಮೆಗೆ ಭಕ್ತರು ಕೈ ಮುಗಿದು ಪ್ರಾರ್ಥಿಸುತ್ತಾರೆ. ಋತುಸ್ರಾವಕ್ಕೂ-ಸಂತಾನ ಶಕ್ತಿಗೂ ಇರುವ ಸೃಷ್ಟಿಯ ಮಹಿಮೆಯನ್ನು ಸಾರುವಂತಿದೆ ಈ ದೇವಾಲಯ. ಸಾಮಾನ್ಯವಾಗಿ ಮುಟ್ಟು ಅಪವಿತ್ರ ಎಂಬ ಭಾವನೆಯಿದೆ. ಮುಟ್ಟಿನ ಹಿಂದಿರುವ ಸಂತಾನೋತ್ಪತ್ತಿಯ ಪ್ರಕೃತಿಯ ನಿಯಮವನ್ನು ತಿಳಿಸುವಂತಿದೆ ಈ ದೇವಾಲಯ. ಋತುಸ್ರಾವವನ್ನು ಪವಿತ್ರವಾಗಿಸಿರುವ ಕಾಮಾಕ್ಯ ದೇವಿಯ ಮತ್ತಷ್ಟು ಪವಾಡಗಳ ಬಗ್ಗೆ ನೋಡುವುದಾದರೆ:

ಆಷಾಢಕ್ಕೆ ಕೆಂಪು ಬಣ್ಣಕ್ಕೆ ತಿರುಗುವ ಝರಿಯ ನೀರು
ಈ ದೇವಾಲಯದ ಸಮೀಪ ಒಂದು ಝರಿ ಇದೆ. ಆ ನೀರು ಆಷಾಢದಲ್ಲಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದು ದೇವಿಯ ಋತುಸ್ರಾವವೆಂದು ನಂಬಲಾಗಿದೆ.
ಅಂಬುಬಾಚಿ ಮೇಳ
ಸಂತಾನೋತ್ಪತ್ತಿಯ ಸಂಭ್ರಮವಾಗಿ ಅಂಬುಬಾಚಿ ಮೇಳ ನಡೆಯುತ್ತದೆ. ಈ ದೊಡ್ಡ ಜಾತ್ರೆಯನ್ನು ತುಂಬಾನೇ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ಸಮಯದಲ್ಲಿ 3 ದಿನಗಳವರೆಗೆ ದೇವಾಲಯದ ಬಾಗಿಲು ಮುಚ್ಚಲಾಗುವುದು. ಈ ಮೂರು ದಿನ ದೇವಿಯ ಋತುಸ್ರಾವದ ದಿನವೆಂದು ಹೇಳಲಾಗುವುದು. ಈ ಸಮಯದಲ್ಲಿ ಭಕ್ತರು ದೇವಾಲಯದ ಹೊರಗಡೆ ಕೂತು, ಭಜನೆಗಳನ್ನು ಹಾಡುತ್ತಾ, ಮಂತ್ರಗಳನ್ನು ಹೇಳುತ್ತಾ ದೇವಿಯನ್ನು ಆರಾಧಿಸುತ್ತಾರೆ. ಈ ಸಮಯದಲ್ಲಿಯೇ ಅಲ್ಲಿಯ ಝರಿಯ ನೀರು ಕೂಡ ಕೆಂಪು ಬಣ್ಣದಲ್ಲಿ ಹರಿಯುವುದು ಪವಾಡವೇ ಸರಿ. ನಾಲ್ಕನೇ ದಿನ ದೇವಾಲಯದ ಬಾಗಿಲು ತೆರೆದಾಗ ತಾಯಿಯ ದರ್ಶನದಿಂದ ಜನರು ಪುನೀತಾರಾಗುತ್ತಾರೆ.
ಅಂಬುವಾಚಿ ಪ್ರಸಾದ ವಿಶೇಷತೆ
ದೇವಿ ಮೂರು ದಿನಗಳು ಮುಟ್ಟಾದಾಗ ದೇವಾಲಯದಲ್ಲಿ ಬಿಳಿ ಬಟ್ಟೆಗಳನ್ನು ಹರಡಿ ಮೂರು ದಿನಗಳವರೆಗೆ ಬಾಗಿಲು ಮುಚ್ಚಲಾಗುವುದು. ಆಶ್ಚರ್ಯವೆಂದರೆ ಬಾಗಿಲು ತೆರೆದು ಮೋಡಿದರೆ ಬಿಳಿ ಬಟ್ಟೆ ರಕ್ತದಿಂದ ಕೆಂಪಾಗಿರುತ್ತದೆ. ಇದನ್ನು ಅಂಬುವಾಚಿ ಬಟ್ಟೆ ಎಂದು ಕರೆಯಲಾಗುವುದು. ಈ ಬಟ್ಟೆಯನ್ನೇ ಪ್ರಸಾದವನ್ನಾಗಿ ಹಂಚಲಾಗುವುದು
ಪ್ರಸಾದ
ಝರಿಯ ನೀರನ್ನು ದೇವಿಯ ದೇಹದ್ರವೆಂದು ಪರಿಗಣಿಸಲಾಗಿದೆ. ಆದ್ದರಿಂದ ಆ ನೀರನ್ನು ಅದರ ಜೊತೆಗೆ ದೇವಿಯ ಪೂಜ್ಯ ಯೋನಿಯನ್ನು ಮುಟ್ಟಲಾದ ಕೆಂಪು ಬಟ್ಟೆಯ ತುಂಡುಗಳನ್ನು ಪ್ರಸಾದವನ್ನಾಗಿ ನೀಡಲಾಗುವುದು.
ಕಾಮದ ಭಾವನೆ ಒಂದಿಷ್ಟೂ ಮೂಡಲ್ಲ
ಈ ದೇವಿಯ ಪವಾಡ ಎಷ್ಟಿದೆಯೆಂದರೆ ಈ ದೇವಿಯ ದರ್ಶನ ಮಾಡಿದಾಗ, ಯೋನಿಗೆ ಕೈ ಮುಗಿದಾಗ, ಪೂಜೆ ಮಾಡಿ ಹಣೆಯನ್ನು ತಾಗಿಸಿದಾಗ ಅಲ್ಲ ಕಾಮದ ಲವಲೇಶವೂ ಇರಲ್ಲ. ಬದಲಿಗೆ ಪ್ರತಿಯೊಬ್ಬರ ಮನದಲ್ಲಿ ಮಾತೃತ್ವದ ಭಾವನೆ ಮೂಡುವುದು.
ಬ್ರಹ್ಮಪುತ್ರನದಿಯ ನೀರೂ ಕೆಂಪಾಗುವುದು
ದೇವಿಯ ಋತುಸ್ರಾವದ ಸಮಯದಲ್ಲಿ ಬ್ರಹ್ಮಪುತ್ರ ನದಿಯೂ ಕೆಂಪಾಗುವುದು ಎಂಬ ನಂಬಿಕೆ ಇದೆ.
ಪೌರಾಣಿಕ ಹಿನ್ನೆಲೆ
ಕಾಮಾಕ್ಯ ದೇವಾಲಯವು ಭಾರತದಲ್ಲಿರುವ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಕಾಮಕ್ಯ ದೇವಾಲಯದಲ್ಲಿ ಸತಿ ದೇವಿಯ ಯೋನಿ ಭಾಗ ಬಿದ್ದಿದೆ ಎಂದು ಹೇಳಲಾಗುವುದು. ದೇವಿಯ ಯೋನಿ ಭಾಗ ಇಲ್ಲಿರುವುದರಿಂದ ಈ ದೇವಿ ಮುಟ್ಟಾಗುತ್ತಾಳೆ ಎಂಬ ನಂಬಿಕೆ ಇದೆ.
ಮುಟ್ಟು ಹಾಗೂ ಮಡಿ
ನಮ್ಮ ಸಮಾಜದಲ್ಲಿ ಮುಟ್ಟು-ಮಡಿ ಕಲ್ಪನೆ ಇದೆ. ಮುಟ್ಟಿನ ಸಮಯದಲ್ಲೂ ತುಂಬಾ ಕಡೆ ಹೆಣ್ಮಕ್ಕಳು ಸಾಕಷ್ಟು ಕಷ್ಟವನ್ನು ಅನುಭವಿಸುತ್ತಾರೆ. ಆ ಸಮಯದಲ್ಲಿ ಅವಳನ್ನು ಮೈಲಿಗೆ ಎಂದು ನೋಡಲಾಗುತ್ತದೆ. ಮನೆಯಿಂದ ಹೊರಗಡೆ ಚಿಕ್ಕ ಗುಡಿಸಲು ಅಥವಾ ಕೋಣೆಯಲ್ಲಿ ಕಳೆಯಬೇಕಾದ ಅನಿಷ್ಠ ಪದ್ಧತಿ ಈಗಲೂ ಭಾರತದಲ್ಲಿ ಹಲವು ಕಡೆ ಇದೆ. ಆದರೆ ಪ್ರಕೃತಿಯೇ ಹೆಣ್ಣು ಮುಟ್ಟಾಗುವುದು ಮೈಲಿಗೆಯಲ್ಲ, ಅವಳು ಮುಟ್ಟಾದರೆ ಮಾತ್ರ ಸಂತಾನೋತ್ಪತ್ತಿ ಸಾಧ್ಯ. ಈ ಲೋಕ ಸೃಷ್ಟಿಯಾಗಲೂ ಅವಳ ಮುಟ್ಟು ಕೂಡ ಪ್ರಮುಖ ಅಂಶವಾಗಿದೆ ಎಂದು ಸಾರಿ ಸಾರಿ ಹೇಳಿದರೂ ಜನರು ಇನ್ನೂ ಮೂಢ ನಂಬಿಕೆಗಳನ್ನು ಪಾಲಿಸುತ್ತಾರೆ. ಅಂಥ ಮೂಢನಂಬಿಕೆ ಸರಿಯಲ್ಲ ಎನ್ನುವುದಕ್ಕೆ ಉದಾಹರಣೆ ಈ ದೇವಾಲಯ. ದೇವಿಯೇ ಮುಟ್ಟಾಗುವ ಮೂಲಕ ಹೆಣ್ಣು ಮುಟ್ಟಾಗುವುದು ಪ್ರಕೃತಿಯ ಸಹಜ ನಿಯಮ, ಆಕೆ ಪವಿತ್ರಳಲ್ಲ ಎಂಬುವುದನ್ನು ಸಾರಿ-ಸಾರಿ ಹೇಳಿದರೂ ಜನರು ಬದಲಾಗದಿರುವುದು ವಿಚಿತ್ರವೇ ಸರಿ.



Click it and Unblock the Notifications
