Latest Updates
-
ಪುಣೆ ರೈಲು ಪ್ರಯಾಣಿಕರೇ ಎಚ್ಚರ! 9 ಗಂಟೆಗಳ ಮೆಗಾ ಬ್ಲಾಕ್: ನಿಮ್ಮ ಪ್ರಯಾಣಕ್ಕೆ ಪರ್ಯಾಯ ಮಾರ್ಗಗಳಿವು -
ಕರಾವಳಿ ಮಳೆಯಲ್ಲಿ ಸಂಗಾತಿಯೊಂದಿಗೆ ಡೇಟ್ ನೈಟ್: ಕೇವಲ 500 ರೂಪಾಯಿಯಲ್ಲಿ ಮಳೆಗಾಲದ ಸಂಜೆಯನ್ನು ರೊಮ್ಯಾಂಟಿಕ್ ಆಗಿ ಕಳೆಯಿರಿ! -
ಮಳೆಗಾಲದ ತೇವಾಂಶಕ್ಕೆ ಬೇಸತ್ತಿದ್ದೀರಾ? ಅಮೆಜಾನ್ ಪ್ರೈಮ್ ಡೇ 2026ರಲ್ಲಿ ಸಿಗಲಿದೆ ಸ್ಮಾರ್ಟ್ ಪರಿಹಾರ! -
ಟೊಮೆಟೊ ಬೆಲೆ ಏರಿಕೆ: ಅಡುಗೆಯಲ್ಲಿ ರುಚಿ ಕೆಡದಂತೆ ಬಜೆಟ್ನಲ್ಲಿ ಅಡುಗೆ ಮಾಡುವುದು ಹೇಗೆ? -
ಮುಂಬೈನಲ್ಲಿ ರೆಡ್ ಅಲರ್ಟ್: ಶಾಲೆಗಳಿಗೆ ರಜೆ ಘೋಷಣೆ, ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆಗಾಗಿ ಪೋಷಕರು ಮಾಡಬೇಕಾದ್ದೇನು? -
ದೆಹಲಿಯ ಮಳೆಗಾಲದ ಸೆಖೆ: ಮನೆಯಲ್ಲೇ 10 ನಿಮಿಷದ ಈ ವ್ಯಾಯಾಮ ಮಾಡಿದರೆ ಕಾಲು ನೋವು ಮಾಯ! -
ವಾಟ್ಸಾಪ್ ಹೊಸ ಫೀಚರ್ಗೆ ಬ್ರೇಕ್: ನಿಮ್ಮ ಪ್ರೈವೆಸಿ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಫ್ಲಿಪ್ಕಾರ್ಟ್ GOAT ಸೇಲ್: ಮಳೆಗಾಲಕ್ಕೆ ಬೇಕಾದ ಹೋಮ್ ಸ್ಟೋರೇಜ್ ಐಟಂಗಳು ಈಗ ₹1,499 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! ನಿಮ್ಮ ಆರೋಗ್ಯಕ್ಕೆ ಕಂಟಕವಾಗುತ್ತಿದೆಯೇ ಈ ಪಾನೀಯಗಳು? -
'ಆಲ್ಫಾ' ಸಿನಿಮಾದ ಸ್ಪೈ-ಕೋರ್ ಫ್ಯಾಷನ್ ಟ್ರೆಂಡ್: 1,499 ರೂ. ಒಳಗೇ ನೀವು ಹೀಗೆ ಸ್ಟೈಲಿಶ್ ಆಗಿ ಕಾಣಬಹುದು!
Kalaratri Devi Mantra In Kannada: ಕಾಳರಾತ್ರಿ ದೇವಿ ಮಂತ್ರ, ಪೂಜೆ ಏಕೆ ಮಾಡಬೇಕು?
ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದೆ. ದೇಶದ ಬಹುತೇಕ ಕಡೆಗಳಲ್ಲಿ ಶಕ್ತಿ ದೇವತೆಯ ಆರಾಧನೆ ನೋಡಬಹುದು. ಇನ್ನು ನವರಾತ್ರಿಯ 7ನೇ ದಿನದಂದು ಕಾಳರಾತ್ರಿ ದೇವಿಯ ಆರಾಧನೆ ಮಾಡುವುದು ನೋಡಬಹುದು. ದೇವಿಯ 9 ಅವತಾರಗಳ ಪೈಕಿ ಈ ಕಾಳರಾತ್ರಿ ಅವತಾರವೂ ಕೂಡ ಒಂದಾಗಿದೆ. ಕಾಳಿ ದೇವಿಯನ್ನು ಪೂಜಿಸುವ ಭಕ್ತರು ಕೆಂಪು ಹೂವು, ಕೆಂಪು ವಸ್ತ್ರ, ಬಳೆ ನೀಡುವುದು ನೋಡಬಹುದು.
ಕಾಳಿಯ ಅವತಾರದಲ್ಲಿ ದುರ್ಗೆಯು ದುಷ್ಟರ ಸಂಹಾರ ಮಾಡುವಳು ಎಂದು ಹೇಳಲಾಗಿದೆ. ಕಾಳಿ ನೋಡಲು ಭಯಾನಕ ರೂಪದಲ್ಲಿರುತ್ತಾಳೆ. ಕಾಳರಾತ್ರಿಯ ದೇಹವು ಸಂಪೂರ್ಣವಾಗಿ ಕಪ್ಪಾಗಿರುತ್ತದೆ. ಈಕೆಯ ಕೂದಲು ಸಂಪೂರ್ಣವಾಗಿ ಹರಡಿಕೊಂಡು ಮೂರು ಕಣ್ಣುಗಳು ಇರುತ್ತವೆ. ಕೊರಳಿನಲ್ಲಿ ಮುಂಡಗಳ ಜಪಮಾಲೆಯನ್ನು ಕಾಳರಾತ್ರಿ ದೇವಿ ಧರಿಸಿರುತ್ತಾಳೆ.

ಆಕೆಯ ಉಸಿರಿನಿಂದ ಬೆಂಕಿಯ ಜ್ವಾಲೆ ಹೊರಬರುತ್ತಿರುತ್ತದೆ. ಆಕೆ ದುಷ್ಟರ ನೋಡಿದರೂ ಅವರು ಸರ್ವ ನಾಶವಾಗುತ್ತಾರೆ, ಅಷ್ಟೊಂದು ಕೋಪೋದ್ರಿಕ್ತ ರೂಪ ಆಕೆಯದ್ದಾಗಿದೆ. ಕಾಳಿಯನ್ನು ಪೂಜಿಸುವುದು ದುಷ್ಟರ ಸಂಹಾರ, ಶತ್ರುನಾಶದಂತಹ ವಿಚಾರದಲ್ಲಿ ಒಳಿತು ತರಲಿದೆಯಂತೆ. ಹಾಗೆ ಆಕೆಯನ್ನು
ಶುಭಂಕರಿ, ಕಾಳಿ, ಚಂಡಿ, ಧೂಮ್ರವರ್ಣ, ಚಾಮುಂಡಿ ಎಂದು ಕೂಡ ಕರೆಯಲಾಗುತ್ತದೆ.
ಕಾಳರಾತ್ರಿ ಯಾರು?
ದೇವಿಯ ಅವತಾರದಲ್ಲೇ ಬಹಳ ಭಯ ಹುಟ್ಟಿಸುವಂತಹ ರೂಪವಿದು. ಏಕೆಂದರೆ ಆಕೆ ರಾಕ್ಷಸರ ಸಂಹಾರಕ್ಕಾಗಿ ತಾಳಿದ್ದ ಈ ರೂಪ ಹಾಗೆಯೇ ಉಳಿದಿದೆ ಎಂದು ಹೇಳಲಾಗುತ್ತದೆ. ಒಮ್ಮೆ ಶುಂಭ-ನಿಶುಂಭ ಎಂಬ ಇಬ್ಬರು ರಾಕ್ಷಸರು ದೇವರ ಲೋಕದಲ್ಲಿ ಭಯ ಹುಟ್ಟಿಸಿದ್ದರು. ಇಂದ್ರನ ಸ್ವರ್ಗಲೋಕದಲ್ಲಿ ಎಲ್ಲಾ ದೇವರನ್ನು ಸೆರೆ ಹಿಡಿದರಂತೆ.
ಈ ವೇಳೆ ಈ ರಾಕ್ಷಸರನ್ನು ಸಂಹರಿಸಲು ದೇವರೆಲ್ಲ ಸೇರಿ ಶಿವನ ಭೇಟಿಗೆ ತೆರಳಿದರು. ಶಿವನು ಇಬ್ಬರು ರಾಕ್ಷಸರ ಸಂಹಾರಕ್ಕಾಗಿ ಪಾರ್ವತಿ ಬಳಿ ಪ್ರಾರ್ಥಿಸಿದನು. ಶಿವನಿಂದ ಆಶೀರ್ವಾದ ಪಡೆದ ಪಾರ್ವತಿಯು ಇಬ್ಬರನ್ನು ಸಂಹಾರ ಮಾಡಿದಳು. ಆದ್ರೆ ಈ ಇಬ್ಬರ ರಕ್ತದಿಂದ ನೂರಾರು ರ್ತ ಬಿಜಾಸುರರು ಜನಿಸಿದರು. ಅವರೆಲ್ಲರನ್ನು ಸಂಹರಿಸಲು ಸಾಧ್ಯವಾಗದೇ ಇದ್ದಾಗ ಪಾರ್ವತಿಯು ತನ್ನ ತೇಜಸ್ಸಿನ ಶಕ್ತಿಯಿಂದ ಭಯಂಕರವಾದ ಕಾಳಿಯನ್ನು ಸೃಷ್ಟಿಸಿದಳು. ರಕ್ತಬಿಜಾಸುರರನ್ನು ಕೊಂದ ಕಾಳಿಯು ಅವರ ರಕ್ತ ನೆಲದ ಮೇಲೆ ಬಿಳದಂತೆ ಎಲ್ಲಾ ರಕ್ತವನ್ನು ಕುಡಿದಳು ಎಂದು ಹೇಳಲಾಗಿದೆ.
ಕಾಳರಾತ್ರಿ ದೇವಿಯ ಮಂತ್ರ
ಓಂ ದೇವಿ ಕಾಲರಾತ್ರೈ ನಮಃ
ಓಂ ದೇವಿ ಕಾಲರಾತ್ರೈ ನಮಃ ಏಕವೇನಿ ಜಪಕಾರ್ಣಪೂರ ನಗ್ನಾ ಖರಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ್ಶಶರೀರಿನಿ
ವಾಮ್ ಪಾದೋಲ್ಲಸಲ್ಲೋಲತಾ ಕಂಠಕ್ಬುಷಾನಾ
ವರ್ಧನ್ ಮೂರ್ಧಮ್ ಧ್ವಜಾ ಕೃಷ್ಣ ಕಾಳರಾತ್ರಿಭಯಂಕರಿ
ಕಾಳಿ ದೇವಿಯ ಸ್ಥೋತ್ರ
ಯಾ ದೇವಿ ಸರ್ವಭುತೇಶ್ ಮಾ ಕಾಲರಾತ್ರಿ ರೂಪೇನಾ ಸಂಹಿತಾ
ನಮಸ್ತಾಸ್ಯೈ ನಮಸ್ತಾಸ್ಯೈ ನಮಸ್ತಾಸ್ಯೈ ನಮೋ ನಮಃ
ಏಕವೇನಿ ಜಪಕಾರ್ಣಪೂರ ನಗ್ನಾ ಖರಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ್ಶಶರೀರಿನಿ
ವಾಮ್ ಪಾದೋಲ್ಲಸಲ್ಲೋಲತಾ ಕಂಠಕ್ಬುಷಾನಾ
ವರ್ಧನ್ ಮೂರ್ಧಮ್ ಧ್ವಜಾ ಕೃಷ್ಣ ಕಾಲರಾತ್ರಿಭಯಂಕರಿ
ಹಿಮ್ ಕಲಾರತ್ರಿ ಶಿಮ್ ಕರಾಳಿ ಚಾ ಕ್ಲೈಮ್ ಕಲ್ಯಾಣಿ ಕಲಾವತಿ
ಕಲಾಮತಾ ಕಾಳಿದರ್ಪದ್ನಿ ಕಾಮದಿಶಾ ಕುಪನ್ವಿತಾ
ಕಾಮಬಿಜಪಂದ ಕಮಬಿಜಸ್ವರ್ಪಿನಿ
ಕುಮತಿಘಿನಿ ಕುಲಿನಾರ್ನಾನಿಶಿ ಕುಲಾ ಕಾಮಿನಿ
ಕೃಪಮಾಯಿ ಕೃಪಾಧಾರ ಕೃಪಾಪಾರಾ ಕೃಪಾಗಾಮಾ
ಈ ಕಾಳರಾತ್ರಿ ದೇವಿಯನ್ನು ಶನಿ ಹಾಗೂ ರಾತ್ರಿಯನ್ನು ನಿಯಂತ್ರಿಸುವ ದೇವತೆ ಎಂದು ಕರೆಯಲಾಗುತ್ತದೆ. ತಾಯಿ ಪೂಜೆಯಿಂದ ದುಷ್ಟ ಶಕ್ತಿ ನಿವಾರಣೆಯಾಗಿ ಮನೆಯಲ್ಲಿ ಅಭಯ ನೆಲೆಸಲಿದೆ. ಕಾಳರಾತ್ರಿ ದೇವಿಯನ್ನು ಪ್ರತಿಷ್ಠಾಪಿಸಿ, ಹೂವು, ಹಣ್ಣು, ಕರ್ಪೂರ, ಧೂಪ, ಅಲಂಕಾರಿಕ ವಸ್ತುಗಳು, ತೆಂಗಿನಕಾಯಿ, ಎಲೆ, ಅಡಿಕೆ, ಸಿಹಿ ನೈವೇದ್ಯ ಇತ್ಯಾದಿಗಳನ್ನು ಇಟ್ಟು ಪೂಜೆ ಮಾಡಬೇಕು. ಕಾಳರಾತ್ರಿ ತಾಯಿಯನ್ನು ಏಳನೇ ದಿನದಂದು ಪೂಜಿಸುವುದರಿಂದ ಭಕ್ತರಲ್ಲಿರುವಂತಹ ಎಲ್ಲಾ ರೀತಿಯ ಭಯವು ನಿವಾರಣೆಯಾಗುವುದು. ಅವರ ಅಭಿವೃದ್ಧಿಗೆ ಇರುವಂತಹ ಎಲ್ಲಾ ಅಡೆತಡೆಗಳು ನಿವಾರಣೆಯಾಗುವುದು.



Click it and Unblock the Notifications