Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೆ. 4ಕ್ಕೆ ಗುರು ವಕ್ರೀಯ ಚಲನೆ: 118 ದಿನ ಈ 4 ರಾಶಿಯವರು ತುಂಬಾನೇ ಜಾಗ್ರತೆ
ಜ್ಯೋತಿಷ್ಯದ ಪ್ರಕಾರ ಗುರು ಸಂಚಾರಕ್ಕೆ ತುಂಬಾನೇ ಮಹತ್ವವಿದೆ. ಗುರು ಮೇಷ ರಾಶಿಯಲ್ಲಿದೆ. ಈ ಸೆಪ್ಟೆಂಬರ್ 4ಕ್ಕೆ ಗುರು ವಕ್ರೀಯ ಚಲನೆ ಮಾಡಲಿದೆ. ಗುರು ದುರ್ಬಲ ಸ್ಥಾನದಲ್ಲಿದ್ದಾಗ ಅದು ರಾಶಿಗಳ ಮೇಲೆ ಕೆಟ್ಟ ಪ್ರಭಾವ ಬೀರಲಿದೆ. ಗುರು ವಕ್ರೀಯ ಚಲನೆ ಮಾಡಿದಾಗ ಈ ರಾಶಿಗಳಲ್ಲಿ ದುರ್ಬಲ ಸ್ಥಾನದಲ್ಲಿ ಇರಲಿದೆ. 118 ದಿನಗಳವರೆಗೆ ಗುರು ವಕ್ರೀಯ ಚಲನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಯಾವೆಲ್ಲಾ ರಾಶಿಯವರು ಜಾಗ್ರತೆವಹಿಸಬೇಕು ನೋಡೋಣ ಬನ್ನಿ:

ಮೇಷ ರಾಶಿ
ಗುರು ಹಿಮ್ಮುಖ ಚಲನೆ ಮಾಡಲಾರಂಭಿಸಿದಾಗ ಈ ಅವಧಿಯಲ್ಲಿ ಗೊಂದಲವಿರಲಿದೆ, ನೀವು ಈ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುವುದು. ಈ ಅವಧಿಯಲ್ಲಿ ನಿಮ್ಮ ತಂದೆಯ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಖರ್ಚು ಹೆಚ್ಚಾಗಲಿದೆ, ಆದರೆ ಮಿತಿಯಲ್ಲಿ ಖರ್ಚು ಮಾಡಿದರೆ ಆರ್ಥಿಕ ಸಂಕಷ್ಟ ಉಂಟಾಗುವುದನ್ನು ತಡೆಗಟ್ಟಬಹುದು.
ವೃಷಭ ರಾಶಿ
ಈ ಅವಧಿಯಲ್ಲಿ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗಬಹುದು. ಲಿವರ್‌ಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು, ಆರೋಗ್ಯದ ಕಡೆ ಗಮನಹರಿಸಿ. ವೃತ್ತಿ ಜೀವನದಲ್ಲಿ ಸವಾಲುಗಳು ಎದುರಾಗುವುದು, ಕುಟುಂಬದ ವಿಷಯದಲ್ಲೂ ಕೆಲ ಸಮಸ್ಯೆಗಳಿರಬಹುದು.
ಕರ್ಕ ರಾಶಿ
ಈ ಅವಧಿಯಲ್ಲಿ ಕೆಲಸದಲ್ಲಿ ತುಂಬಾನೇ ಒತ್ತಡ ಇರಲಿದೆ. ಕೆಲಸದಲ್ಲಿ ನಿರ್ಲಕ್ಷ್ಯ ನಿಮ್ಮ ಸಮಸ್ಯೆ ಮತ್ತಷ್ಟು ಹೆಚ್ಚಿಸುವುದು. ನೀವು ಕೆಲಸದ ಬದಲಾವಣೆ ಬಗ್ಗೆ ಯೋಚಿಸುತ್ತಿದ್ದರೆ ಸ್ವಲ್ಪ ಕಾಯುವುದು ಒಳ್ಳೆಯದು. ತಂದೆಯೊಂದಿಗಿನ ಸಂಬಂಧದಲ್ಲಿ ಏರಳಿತಗಳಿರಬಹುದು.ಅನೇಕ ಆರೋಗ್ಯ ಸಮಸ್ಯೆ ಕೂಡ ಉಂಟಾಗುವುದು.
ಸಿಂಹ ರಾಶಿ
ಈ ಅವಧಿಯಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಾಗುವುದು, ಇದರಿಂದ ನಿಮಗೆ ಒತ್ತಡ ಹೆಚ್ಚಾಗಲಿದೆ. ದೂರ ಪ್ರಯಾಣ ಖುಷಿ ನೀಡುವುದಕ್ಕಿಂತ ಆಯಾಸ ಹೆಚ್ಚಾಗುವುದು. ಸಂಬಂಧದಲ್ಲೂ ಏರಳಿತ ಉಂಟಾಗುವುದು. ಅನಗ್ಯತ ಚರ್ಚೆಗೆ ಹೋಗಬೇಡಿ, ನೀವು ನಿಮ್ಮ ಕೆಲಸ ಕಾರ್ಯದತ್ತ ಗಮನಹರಿಸಿ.
ಗುರು ದುರ್ಬಲ ಸ್ಥಾನದಲ್ಲಿದ್ದಾಗ ಏನಾಗುತ್ತದೆ?
* ಈ ಅವಧಿಯಲ್ಲಿ ಆಲೋಚನೆಗಳು ದುರ್ಬಲವಾಗುವುದು
* ಈ ಅವಧಿಯಲ್ಲಿ ನಿಮ್ಮ ಇಮೇಜ್‌ಗೆ ಧಕ್ಕೆಯಾಗಬಹುದು, ಆದ್ದರಿಂದ ಜಾಗ್ರತೆವಹಿಸಿ.
* ವಿದ್ಯಾರ್ಥಿಗಳಿಗೆ ಶಿಕ್ಷಣದ ಕಡೆ ಗಮನ ಹರಿಸಲು ಸಾಧ್ಯವಾಗಲ್ಲ
* ಗುರು ದುರ್ಬಲ ಸ್ಥಾನದಲ್ಲಿದ್ದರೆ ಆತ್ಮವಿಶ್ವಾಸ ಕಡಿಮೆಯಾಗುವುದು.
* ಗುರು ದುರ್ಬಲವಾಗಿದ್ದಾಗ ಆರೋಗ್ಯ ಸಮಸ್ಯೆಗಳು ಉಂಟಾಗುವುದು.
ಪರಿಹಾರವೇನು?
* ಹಳದಿ ಆಭರಣ ಧರಿಸಿ, ಚಿನ್ನ ಧರಿಸುವುದು ಕೂಡ ಉತ್ತಮ ಪರಿಹಾರವಾಗಿದೆ
* ಏನಾದರೂ ಪ್ರಮುಖ ಕಾರ್ಯಕ್ಕೆ ಹೋಗುವಾಗ ಹಳದಿ ಬಟ್ಟೆ ಧರಿಸಿ, ಒಂದು ಹಳದಿ ಕರ್ಚೀಫ್ ಆದರೂ ನಿಮ್ಮ ಬಳಿಯಿರಲಿ
* ಗುರುವಾರ ಉಪವಾಸ ಮಾಡಿ
* ಗುರು ಬೀಜ ಮಂತ್ರ ಪಠಿಸಿ
* ಜನರಿಗೆ ಗುರುವಾಗ ಬೆಲ್ಲದಿಂದ ಮಾಡಿದ ಸಿಹಿ ಅಥವಾ ಬೆಲ್ಲವನ್ನು ಅರ್ಪಿಸಿ.
* ನಿರ್ಗತಿಕರಿಗೆ ದಾನ ಮಾಡಿ
* ಕಾಗೆಗಳಿಗೆ ಆಹಾರ ಹಾಕಿ.



Click it and Unblock the Notifications
