Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜನ್ಮಾಷ್ಟಮಿಯಂದು ಏನು ಮಾಡಬೇಕು, ಏನು ಮಾಡಲೇಬಾರದು?
ಹಿಂದೂಗಳಿಗೆ ಜನ್ಮಾಷ್ಟಮಿ ತುಂಬಾನೇ ವಿಶೇಷವಾದ ಆಚರಣೆಯಾಗಿದೆ. ಈ ದಿನ ಶ್ರೀಕೃಷ್ಣನ ಜನ್ಮ ದಿನ. ಶ್ರಾವಣ ಮಾಸದ ಅಷ್ಟಮ ತಿಥಿಯಂದು ಜನ್ಮಾಷ್ಟಮಿಯನ್ನು ಆಚರಿಸಲಾಗುವುದು(ಉತ್ತರ ಭಾರತದ ಕಡೆ ಭಾದ್ರಪದ ಮಾಸ ಶುರುವಾಗಿದೆ). ಈ ವರ್ಷ ಅಷ್ಟಮಿ ತಿಥಿ ಸೆಪ್ಟೆಂಬರ್ 6 ಹಾಗೂ 7ಕ್ಕೆ ಬಂದಿದ್ದು ಸೆಪ್ಟೆಂಬರ್ 6 ಮಧ್ಯರಾತ್ರಿಯಂದ ಜನ್ಮಾಷ್ಟಮಿ ಆಚರಿಸಲಾಗುವುದು.
ಜನ್ಮಾಷ್ಟಮಿಯಂದು ಭಕ್ತರು ಉಪವಾಸವಿದ್ದು ಶ್ರೀಕೃಷ್ಣ ಆರಾಧನೆ ಮಾಡಲಾಗುವುದು. ಶ್ರೀ ಕೃಷ್ಣನನ್ನು ಭಕ್ತಿಯಿಂದ ಆರಾಧಿಸಿದರೆ ನಮ್ಮೆಲ್ಲಾ ಕಷ್ಟಗಳಿಗೆ ಶ್ರೀಕೃಷ್ಣ ಯಾವುದೋ ಒಂದು ರೂಪದಲ್ಲಿ ಪರಿಹಾರ ಸೂಚಿಸುತ್ತಾನೆ ಎಂಬುವುದು ಭಕ್ತರ ಅಚಲ ನಂಬಿಕೆ. ಜನ್ಮಾಷ್ಟಮಿಯಂದು ಉಪವಾಸವಿರುವವರು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಈ ದಿನ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಜನ್ಮಾಷ್ಟಮಿಗೆ ಮುನ್ನವೇ ಮನೆಯನ್ನು ಸ್ವಚ್ಛ ಮಾಡಬೇಕು
ಮನೆಯನ್ನು ಸ್ವಚ್ಛಮಾಡಬೇಕು, ಪೂಜೆಯ ಕೋಣೆಯನ್ನು ಸ್ವಚ್ಛ ಮಾಡಿ ಅಲಂಕರಿಸಿ. ಮನೆಯನ್ನೂ ಅಲಂಕರಿಸಿ
* ಶ್ರೀಕೃಷ್ಣನನ್ನು ಉಯ್ಯಾಲೆಯಲ್ಲಿ ಕೂರಿಸಿ
ಮನೆಯನ್ನು ಅಲಂಕರಿಸಿ ಶ್ರೀಕೃಷ್ಣನನ್ನು ತೂಗು ಉಯ್ಯಾಲೆಯಲ್ಲಿ ಕೂರಿಸಿ, ವಸ್ತುಗಳು ಹಾಗೂ ಆಭರಣಗಳಿಂದ ಅಲಂಕರಿಸಿ.
* ಪೂಜೆಗೆ ಮುನ್ನ ಸಂಕಲ್ಪ ತೆಗೆದುಕೊಳ್ಳಿ
ನೀವು ಪೂಜೆಗೆ ಮುನ್ನ ಸಂಕಲ್ಪ ಮಾಡಬೇಕು. ದೇಹ ಹಾಗೂ ಮನಸ್ಸು ಶುದ್ಧವಾಗಿರಬೇಕು. ಶ್ರೀಹರಿಯ ನಾಮವೊಂದೇ ಮನಸ್ಸಿನಲ್ಲಿರಬೇಕು.
* ಶ್ರೀಕೃಷ್ಣನಿಗೆ ವಿವಿಧ ಬಗೆಯ ನೈವೇದ್ಯ ಅರ್ಪಿಸಿ
ಶ್ರೀ ಕೃಷ್ಣನಿಗೆ ಪೂಜೆ ಸಲ್ಲಿಸಿದ ಬಳಿಕ ವಿವಿಧ ಬಗೆಯ ನೈವೇದ್ಯ ಅರ್ಪಿಸಿ. ಶ್ರೀ ಕೃಷ್ಣನಿಗೆ ಬಗೆ-ಬಗೆಯ ನೈವೇದ್ಯ ಅರ್ಪಿಸಿ. ಹಣ್ಣುಗಳು, ಸಿಹಿ ತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ.
ಮಂತ್ರಗಳನ್ನು ಪಠಿಸಿ, ಕೀರ್ತನೆಗಳನ್ನು ಹೇಳಿ
ಕೃಷ್ಣ ಮೂಲ ಮಂತ್ರ
ಓಂ ಕೃಷ್ಣಾಯ ಮಂತ್ರ
ಹರೇ ಕೃಷ್ಣ ಮಹಾ ಮಂತ್ರ
ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ
ಗಾಯತ್ರಿ ಮಂತ್ರ
|| ಓಂ ದೇವಕಿ ನಂದನಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ಕೃಷ್ಣಃ ಪ್ರಚೋದಯಾತ್ || || ಓಂ ದೇವಕಿನಂದನಾಯ ವಿದ್ಮಿಹೇ ವಾಸುದೇವಾಯ ಧೀಮಹಿ | ತನ್ನೋ: ಕೃಷ್ಣಃ ಪ್ರಚೋದಯಾತ್ ||
ಏನು ಮಾಡಬಾರದು?
ಈ ದಿನ ಯಾವ ಕ್ರೂರ ಕೆಲಸ ಮಾಡಬಾರದು:
ಕೃಷ್ಣ ಜನ್ಮಾಷ್ಟಮಿಯಂದು ಯಾರಿಗೂ ನೋವುಂಟು ಮಾಡಬೇಡಿ, ಹಿರಿಯರನ್ನು ಗೌರವಿಸಿ, ಕೆಟ್ಟ ಹಾಗೂ ಕ್ರೂರ ಕೆಲಸವನ್ನು ಮಾಡಬೇಡಿ.
ತಾಮಸಿಕ ಕಾರ್ಯಗಳಿಂದ ದೂರವಿರಿ
ಈ ದಿನ ಜೂಜಾಡುವುದು, ಮದ್ಯಪಾನ, ಮಾಂಸಾಹಾರ ಸೇವನೆ, ಈರುಳ್ಳಿ, ಬೆಳ್ಳುಳ್ಳಿ ಸೇವನೆ ಮಾಡುವುದು ಮಾಡಬಾರದು.



Click it and Unblock the Notifications
