Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
1000 ಬಾರಿ ರಕ್ತದಾನ, 2 ಮಿಲಿಯನ್ ಮಕ್ಕಳ ಪ್ರಾಣ ಉಳಿಸಿರುವ ಜೇಮ್ಸ್ ಹ್ಯಾರಿಸನ್ ಕುರಿತ ಆಸಕ್ತಿಕರ ಸಂಗತಿಗಳು
ರಕ್ತ ದಾನ ತುಂಬಾ ಶ್ರೇಷ್ಠವಾದ ದಾನ, ನಾವು ಕೊಡುವ ರಕ್ತದಿಂದ ಒಬ್ಬ ವ್ಯಕ್ತಿಯ ಪ್ರಾಣ ಉಳಿಯುತ್ತೆ ಎಂದ ಮೇಲೆ ಅದಕ್ಕಿಂತ ದೊಡ್ಡ ಪುಣ್ಯ ಯಾವುದಿದೆ, ಕೆಲವರು ತಮ್ಮ ಜೀವಿತಾವಧಿಯಲ್ಲಿ ತುಂಬಾ ಬಾರಿ ರಕ್ತದಾನ ಮಾಡಿದವರಿದ್ದಾರೆ, ಇಲ್ಲೊಬ್ಬರು ರಕ್ತದಾನ ಮೂಲಕ 2 ಬಿಲಿಯನ್ ಮಕ್ಕಳ ಪ್ರಾಣ ಉಳಿಯಲು ಕಾರಣವಾಗಿದ್ದಾರೆ ಎಂದು ಮೇಲೆ ಅವರು ಮಾಡಿರುವುದು ಎಂಥ ದೊಡ್ಡ ಕಾರ್ಯ ಅಲ್ವಾ?

ಅವರು ಹೆಸರು ಹೇಮ್ಸ್ ಹ್ಯಾರಿಸನ್, ಇವರನ್ನು "Man with the Golden Arm," ಎಂದು ಕರೆಯುತ್ತಾರೆ, ಅವರನ್ನು ಹೀಗೆ ಕರೆಯಲು ಕಾರಣ ಅವರು ಈ ಸಮಾಜಕ್ಕೆ ನೀಡಿರುವ ಕೊಡುಗೆ. ಇವರು ವಿಶ್ವದ ಅತಿ ದೊಡ್ಡ ರಕ್ತದಾನಿಯಾಗಿಯಾಗಿದ್ದಾರೆ ಎಂದು ರೆಡ್‌ಕ್ರಾಸ್ ಸಂಸ್ಥೆ ಹೇಳಿದೆ. ಇವರು ತಮ್ಮ ರಕ್ತದಾನ ಮಾಡುವ ಮೂಲಕ, ಪ್ಲಾಸ್ಮಾ ದಾನದ ಮೂಲಕ 2 ಮಿಲಿಯನ್ ಮಕ್ಕಳ ಪ್ರಾಣ ಉಳಿಸಿದ್ದಾರೆ, (10 ಲಕ್ಷ 1 ಮಿಲಿಯನ್) ಹಾಗಾದರೆ ಇವರು ಪ್ರಾಣ ಉಳಿಸಿರುವ ಮಕ್ಕಳ ಸಂಖ್ಯೆ ಎಷ್ಟಿದೆ ಎಂದು ಲೆಕ್ಕ ಹಾಕಿ, ನಂಬಲು ಅಸಾಧ್ಯವಾದರು ಇದು ಸತ್ಯ.
ಇವರು ತುಂಬಾನೇ ಅಪರೂಪದ ಪ್ಲಾಸ್ಮಾ ಹೊಂದಿದ್ದರು
ಬಿಬಿಸಿ ಪ್ರಕಾರ ಹ್ಯಾರಿಸನ್ ತುಂಬಾನೇ ವಿಶೇಷವಾದ ಪ್ಲಾಸ್ಮಾ ಹೊಂದಿದ ವ್ಯಕ್ತಿಯಾಗಿದ್ದರು, ಇವರ ಪ್ಲಾಸ್ಮಾದಲ್ಲಿ antibody, Anti-D ತುಂಬಾನೇ ಇತ್ತು, ಈ ರೋಗ ನಿರೋಧಕವನ್ನು ಗರ್ಭಿಣಿಯರಿಗೆ ತಯಾರಿಸುವ ಔಷಧಿಯಲ್ಲಿ ಬಳಕೆ ಮಾಡಲಾಗುವುದು, ಇದು ಗರ್ಭದಲ್ಲಿರುವ ಮಗುವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಹ್ಯಾರಿಸನ್ ತನ್ನ 14ನೇ ವಯಸ್ಸಿನಲ್ಲಿ ರಕ್ತದಾನ ಪಡೆದಿದ್ದರು
ಹ್ಯಾರಿಸನ್‌ಗೆ 14 ವರ್ಷವಿದ್ದಾಗ ಗಂಟಲಿನ ಸರ್ಜರಿ ಮಾಡಲಾಗಿತ್ತು, ಈ ಸಂದರ್ಭದಲ್ಲಿ ರಕ್ತದಾನ ಪಡೆದಿದ್ದರು, ಆವಾಗ ತಾನೂ ಈ ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕು ಎಂದು ನಿರ್ಧರಿಸಿ ರಕ್ತದಾನ ಪ್ರಾರಂಭಿಸಿದರು.
ತನ್ನ 18ನೇ ವಯಸ್ಸಿನಿಂದ ರಕ್ತದಾನ ಮಾಡಲಾರಂಭಿಸಿದರು, ತನ್ನ 81ನ ವಯ್ಸಿನವರಿಗೆ ರಕ್ತದಾನವನ್ನು 1000 ಬಾರಿ ಮಾಡಿದ್ದಾರೆ.
ರಕ್ತದಾನ ಮಾಡಲು ಭಯ ಪಡುವವರಿಗೆ ಇವರು ದೊಡ್ಡ ಉದಾಹರಣೆ
ಈಗಲೂ ರಕ್ತದಾ ನ ಮಾಡಲು ಕೆಲವರು ಹಿಂದೇಟು ಹಾಕುತ್ತಾರೆ, ಆದರೆ 1000 ಬಾರಿ ರಕ್ತದಾನ ಮಾಡಿದ ಹ್ಯಾರಿಸನ್ ತನ್ನ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಆತನ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ಬದುಕಿನ ಅದ್ಭುತ ಅರ್ಥ ಕಂಡು ಕೊಂಡ ಹ್ಯಾರಿಸನ್
ನನ್ನಿಂದಾಗುವ ಸಹಾಯ ಬೇರೆ ವ್ಯಕ್ತಿಗಳಾದರೆ ಅದುವೇ ನನಗೆ ಖುಷಿ ಎಂದು ಬದುಕಿದ ವ್ಯಕ್ತಿ ಹ್ಯಾರಿಸನ್, ರಕ್ತದಾನದ ಅವಶ್ಯಕವಿದ್ದಾಗ ಇವರನ್ನು ಸಂಪರ್ಕಿಸಿದರೆ ರಕ್ತದಾನ, ಪ್ಲಾಸ್ಮಾದಾನಕ್ಕೆ ರೆಡಿಯಾಗಿದ್ದರು, ಇವರು ನೀಡಿರುವ ರಕ್ತದಾನ ಹಾಗೂ ಪ್ಲಾಸ್ಮಾ ದಾನದಿಂದಾಗಿ ಲಕ್ಷಗಟ್ಟಲೆ ಮಕ್ಕಳ ಪ್ರಾಣ ಉಳಿದಿದೆ. ಒಂದು ಜೀವ ಉಳಿಸುವ ವ್ಯಕ್ತಿ ದೊಡ್ಡ ವ್ಯಕ್ತಿ, ಅಂಥದ್ದರಲ್ಲಿ ಲಕ್ಷಾಂತರ ಮಕ್ಕಳ ಪ್ರಾಣ ಉಳಿಸಿರುವ ಇವರು ಅಷ್ಟೊಂದು ಮಕ್ಕಳ ಪಾಲಿನ ದೇವರೇ ಆಗಿದ್ದರು.
ಇಂಥ ಆದರ್ಶದ ವ್ಯಕ್ತಿಗಳು ಮತ್ತಷ್ಟು ಜನರಿಗೆ ಸ್ಪೂರ್ತಿಯಾಗಲಿದೆ, ನಿಮ್ಮಂಥವರು ಈ ಸಮಾಜಕ್ಕೆ ತುಂಬಾನೇ ಅವಶ್ಯಕತೆಯಿದೆ, ಮತ್ತೆ ಹುಟ್ಟಿಬನ್ನಿ ಹ್ಯಾರಿಸನ್....



Click it and Unblock the Notifications
