Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಜೈಪುರದಿಂದ 6 ಕೋಟಿ ಕೊಟ್ಟು ಚಿನ್ನ ಖರೀದಿಸಿದ ಮಹಿಳೆಗೆ ನಂತರ ತಿಳಿಯಿತು ಆ ಆಭರಣ 300 ರುಪಾಯಿಗೂ ಇಲ್ಲ!
ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ, ಆದ್ದರಿಂದ ಮೋಸ ಹೋಗದಂತೆ ನಾವು ಜಾಗ್ರತೆವಹಿಸಬೇಕು, ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಅಮೆರಿಕದ ಮಹಿಳೆ ಬರೋಬರಿ 6 ಕೋಟಿ ಕೊಟ್ಟು ಚಿನ್ನ ಖರೀದಿಸಿದ್ದಾಳೆ, ಆದರೆ ಚಿನ್ನವಲ್ಲ ಅವಳು ಖರೀದಿಸಿ ಆಭರಣ ಬೆಲೆ ಬರೀ 300 ರುಪಾಯಿ ಅಷ್ಟೇ ಎಂದು ತಿಳಿದಾಗ ಶಾಕ್ ಆಗಿದ್ದಾಳೆ. ಅಷ್ಟಕ್ಕೂ ಆಕೆಗೆ ಮೋಸ ಮಾಡಿರುವುದು ಭಾರತದ ವ್ಯಾಪಾರಿ.

ಇಂಥ ವಂಚಕರಿಂದ ಸುಮ್ಮನೆ ಭಾರತಕ್ಕೆ ಕೆಟ್ಟ ಹೆಸರು
ಹೌದು ವಿದೇಶಿಗರು ಇಲ್ಲಿಗೆ ಬಂದು ಖರೀದಿ ಮಾಡಿದಾಗ ಅವರು ಆ ವ್ಯಾಪಾರಿಯಿಂದ ಖರೀದಿಸಿದೆ ಎಂದು ಹೇಳುವುದಿಲ್ಲ, ಇದರ ಬದಲಿಗೆ ಭಾರತದಿಂದ ಖರೀದಿಸಿದೆ ಎಂದು ಹೇಳುತ್ತಾರೆ. ಆದರೆ ಇಲ್ಲೊಬ್ಬ ವ್ಯಾಪಾರಿ ಆ ಅಮೆರಿಕದ ಮಹಿಳೆಗೆ ಬರೋಬರಿ 6 ಕೋಟಿ ವಂಚನೆ ಮಾಡಿದ್ದಾನೆ.
ಆಕೆಯ ಹೆಸರು ಚೆರಿಶ್, ಯುಎಸ್‌ನಲ್ಲಿ ವಾಸವಾಗಿದ್ದಾರೆ, ಇವರು ಭಾರತಕ್ಕೆ ಬಂದಿದ್ದಾಗ ಜೈಪುರದ ಜೋಹರಿ ಬಜಾರ್‌ಗೆ ಬಂದಾಗ ಅಲ್ಲಿಯ ಮನಾಕ್ ಚೌಕ್ ಪೊಲೀಸ್ ಸ್ಟೇಷನ್ ಸಮೀಪದಲ್ಲಿರುವ ಆಭರಣ ಖರೀದಿಸಿದ್ದಾಳೆ. ಆಕೆ ವ್ಯಾಪಾರಿಗೆ ಕೊಟ್ಟಿರುವುದು 6 ಕೋಟಿ ರುಪಾಯಿ.
ಎಕ್ಸಿಬಿಷನ್‌ನಲ್ಲಿ ಆಭರಣ ಪ್ರದರ್ಶನಕ್ಕೆ ಇಡಲು ಮುಂದಾದಗ ವಿಷಯ ಗೊತ್ತಾಗಿದ್ದು
ಯುಎಸ್‌ನಲ್ಲಿ ಒಂದು ಎಕ್ಸಿಬಿಷನ್ ನಡೆಯುತ್ತಿರುತ್ತದೆ, ಅದರಲ್ಲಿ ತಾನು ತಂದ ಎಕ್ಸಿಬಿಷನ್ ಪ್ರದರ್ಶನ ಇಡಲು ಯೋಚಿಸುತ್ತಾಳೆ, ಅದೆಲ್ಲಾ ಪ್ರೆಸ್ಟೇಜ್ ವಿಷಯವಲ್ಲ, ನನ್ನ ಬಳಿ ಇಷ್ಟೊಂದು ಆಭರಣವಿದೆ ಎಂದು ಪ್ರದರ್ಶನಕ್ಕೆ ಇಡಲು ಬಯಸುತ್ತಾಳೆ,ಆದರೆ ಅಲ್ಲಿ ಅವಳಿಗೆ ಶಾಕಿಂಗ್ ಕಾದಿರುತ್ತದೆ. ಏಕೆಂದರೆ ಆಕೆಯ ಬಳಿ ಇರುವುದು ಅಸಲಿ ಅಲ್ಲ ನಕಲಿ ಎಂಬುವುದು ತಿಳಿಯುತ್ತದೆ.
ಮೇ 18ಕ್ಕೆ ಕಂಪ್ಲೇಂಟ್ ಕೊಟ್ಟ ಮಹಿಳೆ
ತಾನು ಮೋಸ ಹೋದ ವಿಷಯ ತಿಳಿಯುತ್ತಿದ್ದಂತೆ ಮೇ 18ಕ್ಕೆ ಈ ಮಹಿಳೆ ದೂರು ನೀಡುತ್ತಾಳೆ, ಆದರೆ ಆರೋಪಿ ಆಕೆಯ ವಿರುದ್ಧ ಸುಳ್ಳು ಕೇಸ್ ಹಾಕುತ್ತಾನೆ.
ಆಕೆ ಯುಎಸ್ ರಾಯಬಾರಿ ಕಚೇರಿಗೆ ದೂರು ಸಲ್ಲಿಸುತ್ತಾಳೆ, ಅವರು ಇದರ ಕುರಿತಂತೆ ಅವರು ಜೈಪುರದ ಪೊಲೀಸರಿಗೆ ತಿಳಿಸುತ್ತಾರೆ. ಈಗ ಈ ಆಭರಣ ಮಾಡಿದ ವ್ಯಾಪಾರಿ ಹಾಗೂ ಅವರ ಮಗ ಪರಾರಿಯಾಗಿದ್ದಾರೆ. ಆ ವ್ಯಾಪಾರಿ ಹೆಸರು ರಾಜೇಂದ್ರ ಸೋನಿ ಹಾಗೂ ಮಗ ಗೌರವ್ ಈಗ ಪರಾರಿಯಾಗಿದ್ದು ಇವರನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.
ಇವರು ಇತ್ತೀಚೆಗೆ 3 ಕೋಟಿಯ ಫ್ಲ್ಯಾಟ್ ಖರೀದಿಸಿದ್ದಾರಂತೆ
ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಇವರು ಇವರು ಮಹಿಳೆಗೆ ಮೋಸ ಮಾಡಿ ಪಡೆದ ಹಣದಿಂದ 3 ಕೋಟಿಯ ಫ್ಲ್ಯಾಟ್ ಕೂಡ ಖರೀದಿಸಿದ್ದಾರೆ ಎಂಬುವುದು ತಿಳಿದು ಬಂದಿದೆ.
ವಿದೇಶಿ ಮಹಿಳೆ ಎಂದು ಮೋಸ ಮಾಡಿದ್ರಾ?
ಈ ಮಹಿಳೆ ವಿದೇಶದವಳು, ಮತ್ತೆ ಹುಡುಕಿಕೊಂಡು ಬರಲ್ಲ, ಅಲ್ಲದೆ ಆ ಚಿನ್ನ ಅಸಲಿಯೋ ನಕಲಿಯೋ ನೋಡುವುದು ಇಲ್ಲ ಎಂದು ಇವರಿಗೆ ಅನಿಸಿರಬಹುದು, ಹಾಗಾಗಿ ಅವಳನ್ನು ಸುಲಭವಾಗಿ ಯಾಮಾರಿಸಿದ್ದಾರೆ.



Click it and Unblock the Notifications