Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ಜೈಲಿನಲ್ಲಿ ಪ್ರಿಂಟಿಂಗ್ ತರಬೇತಿ ಪಡೆದ..! ಹೊರಬಂದು ನಕಲಿ ನೋಟು ಮುದ್ರಿಸಿದ ವ್ಯಕ್ತಿ..!
ಒಬ್ಬ ವ್ಯಕ್ತಿ ಒಮ್ಮೆ ತಪ್ಪು ಮಾಡಿ ಜೈಲು ಸೇರಿದರೆ ಆತ ಎಂದಿಗೂ ಒಳ್ಳೆಯ ವ್ಯಕ್ತಿ ಆಗಲು ಸಾಧ್ಯವಿಲ್ಲ ಎಂಬ ಮಾತಿದೆ. ಒಮ್ಮೆ ಆತ ಜೈಲು ಸೇರಿದರೆ ಆತ ತಪ್ಪುಗಳನ್ನು ಮೇಲಿಂದ ಮೇಲೆ ಮಾಡುತ್ತಲೇ ಇರುತ್ತಾನೆ. ಈಗ ಒಮ್ಮೆ ಕಳ್ಳತನ ಮಾಡಿ ಜೈಲು ಸೇರಿ ಬಳಿಕ ಹೊರಬಂದು ಮತ್ತೆ ಅದೇ ತಪ್ಪನ್ನು ಮಾಡುವುದಿಲ್ಲವೇ.? ಹೀಗೆ ಜೈಲು ಸೇರಿದವರು ಉತ್ತಮರಂತೆ ಬದುಕಬಹುದು ಆದ್ರೆ ಉತ್ತಮರಾಗುವುದಿಲ್ಲ ಎಂಬ ಮಾತಿದೆ.
ಇಲ್ಲೊಂದು ಕಥೆಯಲ್ಲೂ ಕೂಡ ಒಬ್ಬ ಇಲ್ಲಿ ಇಂತದ್ದೆ ಕೆಲಸ ಮಾಡಿದ್ದಾನೆ. ಆತ ಜೈಲಿಂದ ಹೊರಬಂದು ಯಾರು ಊಹಿಸಿರದ ಕೆಲಸ ಮಾಡಿದ್ದಾನೆ. ಮಧ್ಯ ಪ್ರದೇಶದ ವ್ಯಕ್ತಿಯೊಬ್ಬ ಜೈಲಿನಲ್ಲಿ ಪ್ರಿಂಟಿಂಗ್ ಮಾಡುವುದು ಹೇಗೆ ಎಂಬುದನ್ನು ಕಲಿತು ಜೈಲಿನಿಂದ ಹೊರಬಂದ ಬಳಿಕ ಆತ ನಕಲಿ ನೋಟು ಮುದ್ರಿಸಿ ಚಲಾವಣೆ ಮಾಡಿ ಈಗ ಮತ್ತೆ ಜೈಲು ಪಾಲಾಗಿರುವ ವಿಚಿತ್ರ ಘಟನೆ ಇದು.

ಮಧ್ಯಪ್ರದೇಶದ ಭೂಪೇಂದ್ರ ಸಿಂಗ್ ಧಕತ್ ಎಂಬಾತ ಕ್ರಿಮಿನಲ್ ಆಗಿದ್ದು, ದರೋಡೆ, ಕೊಲೆ ಯತ್ನ ಪ್ರಕರಣದಲ್ಲಿ ಜೈಲು ವಾಸ ಅನುಭವಿಸುತ್ತಿದ್ದ. ಸುಮಾರು 11 ಕೇಸ್‌ಗಳು ಆತನ ಮೇಲಿದ್ದವು. ಅಚ್ಚರಿ ಅಂದರೆ ಪಕ್ಕದ ಮನೆಯಲ್ಲಿ ಕಳ್ಳತನ ಎಸಗಿರುವ ಆರೋಪವೂ ಆತನ ಮೇಲಿತ್ತು.
ಆದರೆ ಜೈಲಿನಲ್ಲಿ ಕೇವಲ ಊಟ ಹಾಕಿ ಕೂರಿಸುವುದಿಲ್ಲ. ಕೈದಿಗಳ ಮನ ಪರಿವರ್ತನೆಗೆ ಅಗತ್ಯವಾಗಿ ಬೇಕಾಗುವ ತಯಾರಿ ನಡೆಸುತ್ತಾರೆ. ಅದರಂತೆ ಅಲ್ಲಿ ಕೌಶಲಾಭಿವೃದ್ಧಿ ಕಾರ್ಯಕ್ರಮಗಳು ಜರುಗುತ್ತವೆ. ಅಂದರೆ ಶಿಕ್ಷಣ, ಸ್ವ ಉದ್ಯೋಗದ ಕಡೆಗೆ ಅವರಿಗೆ ತರಬೇತಿ, ಆಧ್ಯಾತ್ಮ ಹೀಗೆ ಸಮಾಜ ಮುಖಿ ಕಾರ್ಯದಲ್ಲಿ ಅವರರು ತೊಡಗಲು ತಯಾರಿ ಮಾಡಲಾಗುತ್ತದೆ.
ಈ ರೀತಿ ಜೈಲಿನಲ್ಲಿ ಸನ್ನಡತೆ ತೋರುವ ಕೈದಿಗಳನ್ನು ವಿಶೇಷ ದಿನಗಳಲ್ಲಿ ಬಿಡುಗಡೆಯನ್ನು ಮಾಡಲಾಗುತ್ತದೆ. ಇದೇ ರೀತಿ ಈ ಭೂಪೇಂದ್ರ ಸಿಂಗ್ ಜೈಲಿನಲ್ಲಿ ಕೌಶಲಾಭಿವೃದ್ಧಿ ಕಾರ್ಯಕ್ರಮದಲ್ಲಿ ಆಯ್ಕೆ ಮಾಡಲಾಗಿತ್ತು. ಇದಾಗಿ ಆತನಿಗೆ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡಲು ಪ್ರಿಂಟಿಂಗ್ ಮಾಡುವುದು ಹೇಗೆ ಎಂಬ ಕುರಿತು ಆತನಿಗೆ ತರಬೇತಿ ನೀಡಲಾಗಿತ್ತು.
ಆದರೆ ಇದನ್ನೇ ಬಂಡವಾಳವಾಗಿ ಮಾಡಿಕೊಂಡಿದ್ದ ಆತ, ಹೊರಗೆ ಬಂದವನೇ ತನ್ನ ಬುದ್ಧಿ ತೋರಿಸಿದ್ದಾನೆ. ತನ್ನದೇ ಸ್ವಂತ ಪ್ರಿಂಟಿಂಗ್ ಮೆಷಿನ್ ಖರೀದಿಸಿದ ಆತ ನಕಲಿ ನೋಟು ಮುದ್ರಿಸುವ ಕಾರ್ಯಕ್ಕೆ ಮುಂದಾಗಿದ್ದಾನೆ. ಜೈಲಿನಲ್ಲಿ ಹೇಳಿಕೊಟ್ಟ ಶಿಕ್ಷಣದಿಂದಲೇ ಆತ ನಕಲಿ ನೋಟು ಮುದ್ರಿಸುವುದನ್ನು ಕಲಿತುಕೊಂಡಿದ್ದ.
ನಕಲಿ ನೋಟು ಮುದ್ರಣದ ಕುರಿತು ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಭೂಪೇಂದ್ರನ ಬಂಧಿಸಿದರು, ಆತನ ಬಂಧನದ ಬಳಿಕವೇ ಈ ಎಲ್ಲಾ ವಿಷಯಗಳು ಹೊರಬಂದಿವೆ. ಆತ ಜೈಲಿನಲ್ಲೇ ಮುದ್ರಣ ಮಾಡುವುದು ಕಲಿತಿದ್ದ. ಜೈಲು ಆತನ ಮೊದಲ ಪಾಠ ಶಾಲೆಯಾಗಿತ್ತು ಎಂಬ ವಿಚಾರ ತಿಳಿದು ಪೊಲೀಸರೇ ಶಾಕ್ ಆಗಿದ್ದಾರೆ.
ಅಧಿಕಾರಿಯೊಬ್ಬರು ನೀಡಿದ ಮಾಹಿತಿಯಂತೆ ಕಾರ್ಯಾಚರಣೆ ವೇಳೆ ಅಧಿಕಾರಿಗಳು ತಲಾ 200 ರೂಪಾಯಿ ಮೌಲ್ಯದ 95 ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಅವರ ನಿವಾಸದಲ್ಲಿ ಕಲರ್ ಪ್ರಿಂಟರ್, ಆರು ಇಂಕ್ ಬಾಟಲಿಗಳು ಮತ್ತು ನಕಲಿ ನೋಟುಗಳನ್ನು ತಯಾರಿಸಲು ಅಗತ್ಯವಾದ ಕಾಗದವನ್ನು ಪತ್ತೆ ಮಾಡಲಾಗಿದೆ ಎಂದು ಸಿರೊಂಜ್ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಉಮೇಶ್ ತಿವಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಹಲವು ತಿಂಗಳುಗಳಿಂದ ನಕಲಿ ಕರೆನ್ಸಿ ತಯಾರಿಸಿ ಚಲಾವಣೆ ಮಾಡಿರುವುದನ್ನು ಢಾಕತ್ ಒಪ್ಪಿಕೊಂಡಿದ್ದಾನೆ. ಸುಮಾರು 1 ವರ್ಷದಿಂದಲೂ ನಕಲಿ ನೋಟು ಚಲಾವಣೆಯಲ್ಲಿ ಆತ ತೊಡಗಿಸಿಕೊಂಡಿದ್ದನು. ವಿಚಿತ್ರ ಎಂದರೆ ಕೈದಿಗಳು ಜೈಲಿನಿಂದ ಹೊರಬಂದ ಬಳಿಕ ಮತ್ತೆ ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ತಡೆಯಲು ಈ ಕೌಶಲಾಭಿವೃದ್ಧಿ ಕಾರ್ಯಕ್ರಮಗಳ ಹಮ್ಮಿಕೊಳ್ಳಲಾಗುತ್ತದೆ. ಆದ್ರೆ ಇದೇ ಕಾರ್ಯಕ್ರಮದ ಮೂಲಕ ಆತ ಅಪರಾಧ ಕೃತ್ಯಕ್ಕೆ ಹೊಸ ಮಾರ್ಗ ಕಂಡುಕೊಂಡಿದ್ದು ದುರಂತ.



Click it and Unblock the Notifications
