Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ನಗರದಲ್ಲಿ ಇನ್ಮುಂದೆ ಕಾಯಿಲೆ ಬೀಳುವುದು ನಿಷೇಧ.! ಇಂತಹ ವಿಚಿತ್ರ ಆದೇಶ ಎಲ್ಲಿ ಗೊತ್ತಾ?
ಕೆಲವು ದೇಶಗಳಲ್ಲಿ ಕೆಲವೊಂದು ವಸ್ತುಗಳು ನಿಷೇಧ ಹೇರಿರುವ ಕುರಿತು ನಾವು ಕೇಳಿರುತ್ತೇವೆ. ನಮ್ಮ ದೇಶದಲ್ಲಿ ಹೇಗೆ ಹಲವು ವಿಚಾರಗಳನ್ನು ನಿಷೇಧಿಸಲಾಗಿದ್ಯೋ ಹಾಗೆ ಹಲವು ದೇಶಗಳಲ್ಲಿಯೂ ಕೂಡ ಒಂದಿಷ್ಟು ವಿಚಾರಗಳು ನಿಷೇಧವಾಗಿವೆ. ಆದ್ರೆ ನಾವಿಂದು ವಿಚಿತ್ರ ದೇಶದ ವಿಚಿತ್ರವಾದ ನಿಷೇಧ ಕುರಿತ ನಿರ್ಧಾರ ಕುರಿತು ನಾವಿಂದು ತಿಳಿದುಕೊಳ್ಳೋಣ.
ಅದರಲ್ಲೂ ಯಾವುದಾದರು ದೇಶದಲ್ಲಿ ಅಥವಾ ರಾಜ್ಯದಲ್ಲಿ ನೀವು ಕಾಯಿಲೆ ಬೀಳುವುದನ್ನೇ ನಿಷೇಧ ಮಾಡಿದ್ದರೆ ಹೇಗೆ? ಯಾವೊಬ್ಬ ವ್ಯಕ್ತಿ ಹೇಗೆ, ಏಕೆ ಕಾಯಿಲೆ ಬೀಳುತ್ತಾನೆ ಎಂಬುದನ್ನು ಪತ್ತೆ ಮಾಡಲು ಆಗುವುದಿಲ್ಲ. ಅವರು ಕಾಯಿಲೆಗೆ ಬೀಳುವುದು ಯಾರಿಗೂ ತಿಳಿಯೋದಿಲ್ಲ. ಹಾಗೆ ಕಾಯಿಲೆ ಉಂಟಾದಾಗ ಆಸ್ಪತ್ರೆಗೆ ಹೋಗವುದು ಸಾಮಾನ್ಯ ವಿಚಾರ. ಆದ್ರೆ ಈ ದೇಶದಲ್ಲಿ ಎಲ್ಲವೂ ವಿರುದ್ಧ.

ಇಲ್ಲಿ ಯಾರು ಕಾಯಿಲೆ ಬೀಳಬಾರದು ಎಂದು ಅಲ್ಲಿನ ಮೇಯರ್ ಆದೇಶ ಹೊರಡಿಸಿದ್ದಾರೆ. ಇನ್ಮುಂದೆ ಕಾಯಿಲೆ ಬೀಳುವುದು ನಿಷೇಧ ಎಂದು ಮೇಯರ್ ಘೋಷಿಸಿರುವುದು ಅಚ್ಚರಿಯ ಜೊತೆಗೆ ಶಾಕ್ ಕೂಡ ನೀಡಿದೆ. ಹಾಗಾದ್ರೆ ಈ ರೀತಿಯ ನಿರ್ಧಾರಕ್ಕೆ ಕಾರಣವಾಗಿದ್ದೇನು? ಯಾವ ದೇಶದಲ್ಲಿ ಈ ರೀತಿಯ ನಿರ್ಧಾರ ಮಾಡಲಾಗಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಇಟಲಿಯ ಕ್ಯಾಲಬ್ರಿಯಾದಲ್ಲಿ ಇಂತಹದೊಂದು ವಿಚಿತ್ರ ನಿಷೇಧ ಹೇರಲಾಗಿದೆ. ಅಲ್ಲಿನ ಜನರು ಅನಾರೋಗ್ಯಕ್ಕೆ ಒಳಗಾಗುವುದನ್ನೇ ನಿಷೇಧಿಸಲಾಗಿದೆ. ಅಲ್ಲಿನ ಮೇಯರ್ ಮೇಯರ್ ಆಂಟೋನಿಯೊ ಟೋರ್ಚಿಯಾ ಹೊರಡಿಸಿದ ಈ ಪ್ರಕಟಣೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹಾಗೆ ಟೀಕೆಯ ಜೊತೆಗೆ ಚರ್ಚೆ ಹುಟ್ಟುಹಾಕುವಂತೆ ಮಾಡಿದೆ.
ಈ ಆದೇಶದ ಹಿಂದೆ ಮೇಯರ್ ಉತ್ತಮ ಕಾಳಜಿ ಹೊಂದಿರುವುದು ಎಲ್ಲರ ಗಮನ ಸೆಳೆದಿದೆ. ಏಕೆಂದರೆ ಈ ಕ್ಯಾಲಬ್ರಿಯಾದಲ್ಲಿ ವೈದ್ಯಕೀಯ ಸೌಲಭ್ಯ ಪಡೆಯಲು ಜನರು ಹರಸಾಹಸ ಪಡಬೇಕಿದೆ. ಇದೇ ಕಾರಣಕ್ಕೆ ಜನರು ಅನಾರೋಗ್ಯಕ್ಕೆ ಒಳಗಾಗುವುದನ್ನೇ ನಿಷೇಧಿಸಿ ಈ ಸಮಸ್ಯೆಗೆ ಒಂದಿಷ್ಟು ಪರಿಹಾರ ಕಂಡುಕೊಳ್ಳುವ ಉದ್ದೇಶ ಈ ಆದೇಶದಲ್ಲಿದೆ ವರದಿಯಾಗವಿದೆ.
ಈ ನಿರ್ಧಾರದ ಹಿಂದಿದೆ ಅಚ್ಚರಿ ಕಾರಣ
ಮೇಯರ್ ಒಬ್ಬರು ಈ ರೀತಿ ನಿರ್ಧಾರ ಪ್ರಕಟಿಸುವ ಹಿಂದೆ ಅತೀ ದೊಡ್ಡ ಕಾರಣವೊಂದಿದೆ. ಈ ನಗರದಲ್ಲಿ ಅನಾರೋಗ್ಯಕ್ಕೆ ಒಳಗಾದವರು ವೈದ್ಯಕೀಯ ಸೇವೆ ಪಡೆಯಬೇಕು ಅಂದರೆ 45 ಕಿ.ಮೀಟರ್ ದೂರ ಪ್ರಯಾಣಿಸಬೇಕು. ಏಕೆಂದರೆ ನಗರದಲ್ಲಿ ವೈದ್ಯಕೀಯ ಸೇವೆ ಪಡೆಯಲು ಆರೋಗ್ಯ ಕೇಂದ್ರಗಳೇ ಇಲ್ಲ. ಸುಮಾರು 1,300 ನಿವಾಸಿಗಳಿಗೆ ನೆಲೆಯಾಗಿರುವ ಬೆಲ್ಕಾಸ್ಟ್ರೋ ಪಟ್ಟಣದ ಏಕೈಕ ಆರೋಗ್ಯ ಕೇಂದ್ರವು ಬಹುತೇಕ ದಿನ ಮುಚ್ಚಿರುತ್ತದೆ.
ರಜಾದಿನಗಳು, ತುರ್ತು ಪರಿಸ್ಥಿತಿಗಳು ಅಥವಾ ರಾತ್ರಿಯ ಸಮಯದಲ್ಲಿ ವೈದ್ಯಕೀಯ ಸೇವೆ ಪಡೆಯುವುದು ಅಸಾಧ್ಯ. ಹೀಗಾಗಿ ಈ ಸೇವೆ ಪಡೆಯಬೇಕು ಎಂದರೆ ದೊಡ್ಡ ಸಾಹಸ ಮಾಡಬೇಕಿದೆ. ಇದರಿಂದ ನಗರದಲ್ಲಿ ಯಾರು ಕೂಡ ಅನಾರೋಗ್ಯಕ್ಕೆ ಒಳಗಾಗದೇ ಇರಲು ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಮೇಯರ್ ಹೇಳಿದ್ದಾರೆ.
ಅಂದರೆ ನಗರವಾಸಿಗಳು, ದೂರ ಪ್ರಯಾಣದಲ್ಲಿ ಎಚ್ಚರಿಕೆ ವಹಿಸಬೇಕು, ಕ್ರೀಡೆಯಲ್ಲಿ ಗಾಯಗಳಾಗದಂತೆ ತೊಡಗುವುದು, ಹಾಗೆ ಕಾಯಿಲೆ ಬೀಳುವಂತಹ ಅಭ್ಯಾಸಗಳನ್ನು ತ್ಯಜಿಸಬೇಕು ಎಂದು ಹೇಳಿದ್ದಾರೆ. ಈ ಆದೇಶ ಸ್ಥಳೀಯವಾಗಿ ಆರೋಗ್ಯ ಕೇಂದ್ರ ಕಾರ್ಯಾರಂಭ ಮಾಡುವವರೆಗೂ ಜಾರಿಯಲ್ಲಿರಲಿದೆ ಎಂದು ಹೇಳಲಾಗಿದೆ.



Click it and Unblock the Notifications
