Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
₹480 ಕೋಟಿ ವೆಚ್ಚದ 'ನಾಟಿ ಬಾಯ್' ಉಡಾವಣೆ ಮಾಡಲಿದೆ ಇಸ್ರೋ..! ಏನಿದರ ವಿಶೇಷ ಗೊತ್ತಾ?
ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಒಂದಲ್ಲಾ ಒಂದು ಉಪಗ್ರಹಗಳ ಉಡಾವಣೆ ಮಾಡುತ್ತಲೇ ಇರುತ್ತದೆ. ಇತ್ತೀಚಿಗೆ ಚಂದ್ರನ ಅಂಗಳಕ್ಕೆ ರೋವರ್ ಇಳಿಸಿ ಇಡೀ ಜಗತ್ತು ತನ್ನತ್ತ ತಿರುಗುವಂತೆ ಮಾಡಿತ್ತು. ಬಳಿಕ ಸೂರ್ಯನ ಅಧ್ಯಯನಕ್ಕೂ ಉಪಗ್ರಹ ಉಡಾವಣೆ ಮಾಡಿ ಯಶಸ್ವಿಯಾಗಿತ್ತು. ಇದೀಗ ಹವಾಮಾನ ಅಧ್ಯಯನಕ್ಕಾಗಿ ಮತ್ತೊಂದು ಉಪಗ್ರಹ ಉಡಾವಣೆಗೆ ತಯಾರಿ ನಡೆಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನಾಳೆ ( ಶನಿವಾರ) ಸಂಜೆ 5.35ಕ್ಕೆ ಇನ್ಸಾಟ್-3DS ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ಉಪಗ್ರಹವನ್ನು ಇಸ್ರೋ 'ನಾಟಿ ಬಾಯ್' ಎಂದು ಕರೆದಿದೆ. ಮೇ 29 2023ರಲ್ಲಿ GSLV ವಾಹನದ ಮೂಲಕ ಮಾಡಲಾದ ಉಡಾವಣೆಯು ಯಶಸ್ವಿಯಾಗಿತ್ತು. ಇದಕ್ಕೂ ಮೊದಲು ಆಗಸ್ಟ್ 12, 2021 ರಂದು ನೆರವೇರಿದ್ದ ಉಡಾವಣೆ ವಿಫಲವಾಗಿತ್ತು.

GSLV ಇಸ್ರೋ ಬಳಿ ಇರುವ ಬಾಹುಬಲಿ ರಾಕೆಟ್ ಅಂತಲೇ ಹೆಸರಾಗಿದೆ. ಈವರೆಗೆ 7 ಯಶಸ್ವಿ ಉಡಾವಣೆ ಮಾಡಿದೆ. ಇದರ ಜೊತೆ ಇಸ್ರೋದ ವರ್ಕ್‌ಹಾರ್ಸ್ ರಾಕೆಟ್, ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ), 60 ಉಡಾವಣೆಗಳಲ್ಲಿ ಕೇವಲ ಮೂರು ವೈಫಲ್ಯಗಳೊಂದಿಗೆ 95ರಷ್ಟು ಯಶಸ್ಸಿನ ಪ್ರಮಾಣ ಹೊಂದಿದೆ.
GSLV ಮೂರು-ಹಂತದ ರಾಕೆಟ್ ಆಗಿದ್ದು ಅದು 51.7 ಮೀಟರ್ ಉದ್ದವಿದೆ - 182 ಮೀಟರ್ ಎತ್ತರವಿರುವ ಏಕತೆಯ ಪ್ರತಿಮೆಯ ಸುಮಾರು ಕಾಲು ಭಾಗದಷ್ಟು ಉದ್ದ - ಮತ್ತು 420 ಟನ್ಗಳಷ್ಟು ತೂಕವನ್ನು ಹೊತ್ತೊಯ್ಯಬಲ್ಲದು. ಆದರೆ ಇನ್ನು ಕೆಲ ವರ್ಷದಲ್ಲಿ ಇದರ ಬಳಕೆ ನಿಲ್ಲಿಸಲು ಇಸ್ರೋ ಮುಂದಾಗಿದೆ ಎಂದು ತಿಳಿದುಬಂದಿದೆ.
ಶನಿವಾರ ಉಡಾವಣೆಯಾಗುತ್ತಿರುವ ಉಪಗ್ರಹವು ಅತ್ಯಂತ ವಿಶೇಷವಾಗಿದೆ ಮತ್ತು ಇದು ಭಾರತದ ಹವಾಮಾನ ಮತ್ತು ಹವಾಮಾನ ಮೇಲ್ವಿಚಾರಣಾ ಸೇವೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. INSAT-3DS ಎಂದು ಕರೆಯಲ್ಪಡುವ ಇದು ಮೂರನೇ ತಲೆಮಾರಿನ ನವೀಕರಿಸಿದ, ಮೀಸಲಾದ ಹವಾಮಾನ ಉಪಗ್ರಹವಾಗಿದೆ.
ಉಪಗ್ರಹವು 2,274 ಕೆಜಿ ತೂಕವಿದ್ದು, ಸುಮಾರು ₹480 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಭೂ ವಿಜ್ಞಾನ ಸಚಿವಾಲಯವು ಈ ಉಪಗ್ರಹ ತಯಾರಿಯ ಸಂಪೂರ್ಣ ಹಣವನ್ನು ಭರಿಸಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಈ ಉಪಗ್ರಹದ ಉಡಾವಣೆಯ ಉದ್ದೇಶವೇನು?
ಈ ಉಪಗ್ರಹವು ನಮ್ಮ ದೈನಂದಿನ ಜೀವನಕ್ಕೆ ಸಹಕಾರಿಯಾಗಬಲ್ಲ ಹಮಾಮಾನ ಮಾಹಿತಿ ಸೇರಿದಂತೆ ವಿಪತ್ತಿನ ಸಮಯದಲ್ಲಿ ಪ್ರಾಣ ಉಳಿಸುವ ಸಾಧನವಾಗಲಿದೆ. ಭಾರತದ ಮೇಲ್ಮೈ ಹವಾಮಾನ, ಅಪಾಯಗಳ ಮನ್ಸೂಚನೆ ಕುರಿತು ಈ ಉಪಗ್ರಹ ಮಾಹಿತಿ ನೀಡಲಿದೆ.
ಭಾರತದ ಹವಾಮಾನ ಉಪಗ್ರಹಗಳು ಬದಲಾವಣೆಗೆ ಕಾರಣವಾಗಿವೆ. ಉಪಗ್ರಹಗಳು ನಿಜವಾಗಿಯೂ ಆಕಾಶದಲ್ಲಿನ ಕಣ್ಣುಗಳಾಗಿವೆ, ಅದು ಭಾರತಕ್ಕೆ ಚಂಡಮಾರುತಗಳನ್ನು ಬಹಳ ನಿಖರವಾಗಿ ಮುನ್ಸೂಚಿಸಲು ಸಹಾಯ ಮಾಡಿದೆ" ಎಂದು ಸಚಿವಾಲಯದ ಕಾರ್ಯದರ್ಶಿಯಾಗಿರುವ ತಜ್ಞ ಡಾ.ಎಂ ರವಿಚಂದ್ರನ್ ಹೇಳಿದ್ದಾರೆ.
"1970 ರ ದಶಕದಲ್ಲಿ ಬಂಗಾಳ ಕೊಲ್ಲಿಯಲ್ಲಿ ಹುಟ್ಟಿಕೊಂಡ ಚಂಡಮಾರುತಗಳು 300,000 ಜನರ ಸಾವಿಗೆ ಕಾರಣವಾಯಿತು. ಆದರೆ ಇದು ಭಾರತೀಯ ಹವಾಮಾನ ಉಪಗ್ರಹಗಳು ಅಸ್ತಿತ್ವಕ್ಕೆ ಬರುವ ಮೊದಲು. ಈಗ, ಭಾರತವು ತನ್ನದೇ ಆದ ಉಪಗ್ರಹಗಳ ಸಮೂಹವನ್ನು ಬಳಸುತ್ತಿರುವುದರಿಂದ, ಸೈಕ್ಲೋನ್ ಮುನ್ಸೂಚನೆಯು ಎಷ್ಟು ನಿಖರವಾಗಿದೆ ಎಂದರೆ ಸಾವಿನ ಸಂಖ್ಯೆ ಎರಡಂಕಿಗಳಿಗೆ ಇಳಿದಿದೆ ಅಥವಾ ಕೆಲವೊಮ್ಮೆ ಯಾವ ಹಾನಿಯೂ ಸಂಭವಿಸುವುದೇ ಇಲ್ಲ'' ಎಂದಿದ್ದಾರೆ.
ಇದರ ಜೊತೆ ಈ ಉಪಗ್ರಹವು ರಕ್ಷಣಾ ಮತ್ತು ಸರ್ಜ್ ಟ್ರಾನ್ಸ್‌ಪಾಂಡರ್ ಅನ್ನು ಸಹ ಹೊಂದಿದೆ, ಇದು ಹಡಗುಗಳು ಮತ್ತು ಶಿಪ್‌ಗಳು ಸಮುದ್ರದಲ್ಲಿ ಕಾಣೆಯಾದರೆ ಅವುಗಳ ಪತ್ತೆಗೆ ಸಹಾಯ ಮಾಡಲಿದೆ. ಇದರಿಂದ ಮೀನುಗಾರಿಗೆ ಸೇರಿ ಸರಕು ಸಾಗಣೆ ಹಡಗುಗಳ ಕಾರ್ಯಚರಣೆಗೆ ಸಹಾಯಕವಾಗಲಿದೆ.



Click it and Unblock the Notifications