Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಮೊದಲ ಶ್ರಾವಣ ಸೋಮವಾರ: ಶ್ರಾವಣದಲ್ಲಿ ಯಾವೆಲ್ಲಾ ದಿನಗಳಲ್ಲಿ ಉಪವಾಸ ಮಾಡಬೇಕು?
ಶ್ರಾವಣ ಬಂತೆಂದರೆ ಸಡಗರ ಶುರು, ಏಕೆಂದರೆ ಈ ಶ್ರಾವಣ ಸಾಲು-ಸಾಲು ಹಬ್ಬಗಳನ್ನು ಹೊತ್ತು ತರುವುದರಿಂದ ಸಡಗರ ಮಾಸ.ಶ್ರಾವಣ ಮಾಸ ಶಿವನ ಆರಾಧನೆಗೆ ಮೀಸಲಿರುವ ಮಾಸ, ಅದರಲ್ಲಿಯೂ ಶ್ರಾವಣ ಸೋಮವಾರ ಎಂದರೆ ಇನ್ನೂ ವಿಶೇಷ, ಶಿವನ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ.

ಶ್ರಾವಣ ಮಾಸದಲ್ಲಿ ರುದ್ರಾಭಿಷೇಕಕ್ಕೆ ತುಂಬಾನೇ ಮಹತ್ವವಿದೆ
ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ ಮಾಡಿಸಿದರೆ ಒಳ್ಳೆಯದು, ಶಿವನಿಗೆ, ಜಲ, ಹಾಲು, ತುಪ್ಪ, ಮೊಸರು, ಜೇನು ಇವುಗಳಿಂದಲೂ ಅಭಿಷೇಕ ಮಾಡಿಸಬಹುದು, ಶಿವನಿಗೆ ಬಿಲ್ವೆಪತ್ರೆ ಎಲೆಯನ್ನು ಅರ್ಪಿಸಿ, ಶಿವ ಮಂತ್ರಗಳನ್ನು ಹೇಳುತ್ತಾ ವಿಶೇಷ ಪೂಜೆ ಸಲ್ಲಿಸಲಾಗುವುದು. ಹೀಗೆ ಪೂಜೆ ಸಲ್ಲಿಸುವುದರಿಂದ ಎಲ್ಲಾ ಕಷ್ಟಗಳು ದೂರಾಗುವುದು ಎಂಬ ನಂಬಿಕೆ.
ಶ್ರಾವಣ ಮಾಸದಲ್ಲಿ ಈ ದಿನಗಳಲ್ಲಿ ಉಪವಾಸವಿದ್ದರೆ ಒಳ್ಳೆಯದು
ಶ್ರಾವಣ ಸೋಮವಾರ: ಉಪವಾಸವಿದ್ದು ಶಿವನಿಗೆ ಪೂಜೆ ಸಲ್ಲಿಸುತ್ತಾರೆ.
16 ಸೊಮವಾರ ವ್ರತ: ಈ ವ್ರತವನ್ನು ಒಂದು ಸೊಮವಾರ ಕೈಗೊಂಡರೆ 16 ಸೊಮವಾರದವರೆಗೆ ಮಾಡಬೇಕು.
ಪ್ರದೋಷ ವ್ರತ: ಕರಷ್ಣ ಪಕ್ಷ ಹಾಗೂ ಶುಕ್ಲ ಪಕ್ಷದ ತ್ರಯೋದಶಿಯಂದು ಪ್ರದೋಷವನ್ನು ಆಚರಿಸಲಾಗುವುದು, ಈ ದಿನದಲ್ಲಿ ಕೂಡ ಉಪವಾಸವಿದ್ದು ಶಿವನ ಆರಾಧನೆ ಮಾಡುತ್ತಾರೆ.
ಮಂಗಳ ಗೌರಿ ವ್ರತ: ಶ್ರಾವಣ ಮಾಸದ ಮಂಗಳವಾರ ಮುತ್ತೈದೆಯರು ಮಂಗಳಗೌರಿ ವ್ರತ ಅಚರಿಸುತ್ತಾರೆ.
ಶನಿ ವ್ರತ: ಶ್ರಾವನ ಮಾಸದ ಶನಿವಾರದಲ್ಲಿ ಶ್ರನಿ ವ್ರತ ಕೈಗೊಳ್ಳಲಾಗುವುದು.
ಈ ವ್ರತಗಳನ್ನು ಮಾಡುವುದು ಕಷ್ಟಗಳು ದುರಾಗುವುದು, ಇಷ್ಟಾರ್ಥಗಳು ನೆರವೇರುವುದು ಎಂಬ ಧಾರ್ಮಿಕ ನಂಬಿಕೆ.
ಶ್ರಾವಣ ಮಾಸದ ವಿಶೇಷತೆಯೇನು?
ಶ್ರಾವಣ ಮಾಸದಲ್ಲಿ ಸಾತ್ವಿಕ ಅಹಾರವನ್ನು ಮಾತ್ರ ಸೇವಿಸಬೇಕು.
ಶ್ರಾವಣ ಮಾಸದಲ್ಲಿ ವ್ರತ ನಿಯಮವನ್ನು ಅನುಸರಿಸುವುದರಿಂದ ಧಾರ್ಮಿಕ ಜ್ಞಾನ ಹೆಚ್ಚುವುದು, ಮನಸ್ಸಿಗೆ ನೆಮ್ಮದಿ ದೊರೆಯುವುದು.
ನಕಾರಾತ್ಮಕ ಶಕ್ತಿಗಳನ್ನು ದೂರವಿಡುತ್ತದೆ: ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡುವುದರಿಂದ ಶಿವನ ಕೃಪೆಯಿಂದ ಎಲ್ಲಾ ಕಷ್ಟಗಳು ದೂರಾಗುವುದು ಅಲ್ಲದೆ ಯಾವುದೇ ನಕಾರಾತ್ಮಕ ಶಕ್ತಿಗಳು ನಮ್ಮನ್ನು ಬಾಧಿಸುವುದಿಲ್ಲ.
ಕುಟಂಬದಲ್ಲಿ ಸಂತೋಷ ಇರಲಿದೆ: ಮನೆಯ ಸದಸ್ಯರ ಆರೋಗ್ಯ ಚೆನ್ನಾಗಿರಲಿದೆ, ಕುಟುಂಬದಲ್ಲಿ ಸಂತೋಷ ನೆಲೆಸಲಿದೆ.



Click it and Unblock the Notifications
