Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
IPL 2025: ಆರ್‌ಸಿಬಿ ಗೆಲುವು ನಮಗೆ ಕಲಿಸಿದ್ದೇನು? 18 ವರ್ಷದ ಪಾಠವಿದು..!!
ವಿಶ್ವದ ಶ್ರೀಮಂತ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಯ ಗಳಿಸಿ ಮೊದಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 18 ವರ್ಷದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿರುವುದು ಕೋಟ್ಯಂತರ ಅಭಿಮಾನಿಗಳ ಕನಸು ನನಸಾಗಿದೆ. ಹಾಗೆ ಆರ್‌ಸಿಬಿಯ ಹೃದಯ ಭಾಗ ಅಂತಾನೆ ಕರಿಸಿಕೊಳ್ಳುವ ವಿರಾಟ್ ಕೊಹ್ಲಿ ಮೈದಾನದಲ್ಲೇ ಭಾವುಕರಾಗಿದ್ರು.
ಒಂದೇ ಟೀಮ್‌ನಲ್ಲಿ ದಶಕ ಕಳೆದರು ಪ್ರಶಸ್ತಿ ಗೆಲ್ಲುವಲ್ಲಿ ಹಲವು ಬಾರಿ ಯಡುವಿದ್ದರು, ಆದ್ರೆ ಗುರಿ ಮಾತ್ರ ಬದಲಾಗಿರಲಿಲ್ಲ. ಒಂದೇ ಟೀಮ್‌ನಲ್ಲಿ ಅವರು 18 ವರ್ಷಗಳ ಕಾಲ ಆಡಿದ ಏಕೈಕ ಆಟಗಾರ ಎಂಬ ಕೀರ್ತಿ ಕೂಡ ಪಡೆದಿದ್ದರು. ಆದ್ರೆ ಈಗ 18 ವರ್ಷದ ಬಳಿಕ ಫೈನಲ್‌ನಲ್ಲಿ ಜಯ ಗಳಿಸಿರುವುದು ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

ಬೆಂಗಳೂರು ಮಾತ್ರವಲ್ಲ ಭಾರತದ ಮೂಲೆ ಮೂಲೆಯಲ್ಲೂ ಕೂಡ ಸಂಭ್ರಮ ಮನೆ ಮಾಡಿದೆ. ರಾತ್ರಿಯಿಂದ ಆರಂಭಗೊಂಡಿರುವ ಸಂಭ್ರಮಾಚರಣೆ ಇನ್ನೂ ನಿಂತಿಲ್ಲ. 18 ವರ್ಷಗಳಿಂದ ಅಭಿಮಾನಿಗಳ ಕೋರಿಗೆ ಹಾಗೆ ಆಟಗಾರರು ಇಟ್ಟಿದ್ದ ನಂಬಿಕೆ ಈಡೇರಿದೆ. ಹಾಗಾದ್ರೆ ಆರ್‌ಸಿಬಿ ಗೆಲುವು ಯಾವ ಪಾಠ ಹೇಳುತ್ತೆ? ಅದರಿಂದ ಕಲಿಯಬೇಕಾಗಿರೋದು ಏನು?
ಯಾವುದೇ ಅಮೂಲ್ಯ ವಸ್ತು ಆದರೂ ತಕ್ಷಣಕ್ಕೆ ಕೈಗೆ ಸಿಗೋದಿಲ್ಲ. ಅದು ಆಸ್ತಿ, ಪ್ರೀತಿ, ಗೌರವ, ಆರೋಗ್ಯ, ಯಶಸ್ಸು, ಹಣ ಹೀಗೆ ನೀವು ಯಾವುದೇ ವಿಚಾರ ತೆಗೆದುಕೊಳ್ಳಿ ಎಲ್ಲದಕ್ಕೂ ಸಮಯ ಹಿಡಿಯುತ್ತೆ. ಹಾಗೆ ಅದನ್ನು ಪಡೆಯಬೇಕು ಅಂದ್ರೆ ಕಠಿಣ ಶ್ರಮ, ನಿರಂತರ ಪ್ರಯತ್ನದಿಂದ ಮಾತ್ರವೇ ಇಂತಹ ಕನಸುಗಳನ್ನು ಈಡೇರಿಸಿಕೊಳ್ಳಬಹುದು ಎಂಬುದನ್ನು ಆರ್‌ಸಿಬಿ ದೃಢೀಕರಿಸಿದೆ.
ವೈಫಲ್ಯಗಳೇ ಯಶಸ್ಸಿಗೆ ದಾರಿ
ಬರೋಬ್ಬರಿ 18 ವರ್ಷಗಳ ವೈಫಲ್ಯದಿಂದ ಗುರಿ ಕೈಚಲ್ಲದೆ ಪ್ರತಿ ವರ್ಷವೂ ಅದೇ ಹುಮ್ಮಸ್ಸಿನಲ್ಲಿ ಅದೇ ಉತ್ಸಾಹದಲ್ಲಿ ಮತ್ತೆ ಪ್ರಶಸ್ತಿ ಪಡೆಯಲು ಹೋರಾಡುವುದು ಎಂತವರಲ್ಲೂ ಹೊಸ ಜೀವನಕ್ಕೆ ದಾರಿಯಾಗಬಹುದು. ಒಂದೇ ಒಂದು ವೈಫಲ್ಯದಿಂದ ಮನನೊಂದು ಆ ದಾರಿಯನ್ನೇ ಬಿಡುವುದು ನೋಡಬಹುದು. ಹಾಗೆ ವೈಫಲ್ಯದಿಂದ ಕಂಗೆಡದೆ ನಿಮ್ಮ ಗುರಿಯ ಕಡೆ ಮತ್ತಷ್ಟು ಸ್ಪಷ್ಟತೆ, ಆತ್ಮವಿಶ್ವಾಸ ಹೊಂದುವುದು ಗುರಿಯಡೆಗಿನ ಪಯಣವನ್ನ ಸುಲಭವಾಗಿಸಲಿದೆ ಅನ್ನೋದನ್ನು ಆರ್‌ಸಿಬಿ ಗೆಲವುದು ಮತ್ತೆ ನಿರೂಪಿಸಿದೆ. ಗುರಿ ಕಡೆಗೆ ಛಲ, ದೃಢ ನಿಶ್ಚಯ, ಪಡೆಯಲೇಬೇಕು ಎಂಬ ಹಠ ಇದ್ದರೆ ಎಷ್ಟೇ ಕಠಿಣ ಕೆಲಸವಾದರು ಅದನ್ನು ಪಡೆಯುವ ದಾರಿಯಲ್ಲಿ ಎಷ್ಟೇ ಸವಾಲುಗಳು ಎದುರಾದರು ಅದನ್ನು ದಾಟಬಹುದು ಎಂಬುದನ್ನು ಆರ್‌ಸಿಬಿ ನಿರೂಪಿಸಿದೆ. 18 ವರ್ಷಗಳಿಂದ ಆರ್‌ಸಿಬಿ ಸಾಗಿ ಬಂದ ಈ ದಾರಿ ಹಲವರಿಗೆ ಸ್ಪೂರ್ತಿದಾಯಕ ಆಗಬಹುದು. ಯಾವುದೇ ಯಶಸ್ಸು ತಕ್ಷಣಕ್ಕೆ ಸಿಗೋದಲ್ಲ ಅದಕ್ಕೆ ತಪ್ಪಸ್ಸು ಮಾಡಬೇಕು ಅನ್ನೋದನ್ನ ನೆನಪಿಡಬೇಕಿದೆ.
ಬೆಂಗಳೂರಲ್ಲಿ ಸಂಭ್ರಮಾಚರಣೆ
ಆರ್‌ಸಿಬಿ ಫೈನಲ್‌ನಲ್ಲಿ ಗೆಲುವು ಪಡೆಯುತ್ತಿದ್ದಂತೆ ಬೆಂಗಳೂರಿನಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಇಡೀ ರಾತ್ರಿ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಹಾಗೆ ಇಂದು ಆರ್‌ಸಿಬಿಯ ಇಡೀ ತಂಡ ಬೆಂಗಳೂರಿಗೆ ಆಗಮಿಸುತ್ತಿದೆ. ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರು ಇಂದು ಬೆಂಗಳೂರು ತಲುಪಲಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಇಂದು ಹಬ್ಬದ ವಾತಾವರಣೆ ಇರುವು ಖಚಿತ. ಹಾಗೆ ಟ್ರೋಫಿಯೊಂದಿಗೆ ಭರ್ಜರಿ ಮೆರವಣಿಗೆ ಸಾಗಲಿದೆ. ಇಂದು ಮಧ್ಯಾಹ್ನ ಬೆಂಗಳೂರಿನ ವಿಧಾನಸೌಧದ ಬಳಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣದ ವರೆಗೂ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ. ಈ ಸಮಯದಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಸೇರುವ ಸಂಭವವಿದೆ. ಹಾಗೆ ಇಡೀ ನಗರ ಇಂದು ಕೆಂಪು ಸಮುದ್ರವಾಗಿ ಪರಿವರ್ತನೆಯಾಗಲಿದೆ.



Click it and Unblock the Notifications