Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಭಾರತದ ಈ ಸ್ಥಳದಲ್ಲಿದೆ ಅತ್ಯಾಕರ್ಷಕ ನೀಲಿ ಬಣ್ಣದ ಕೆರೆ, ಪ್ರೀವೆಡ್ಡಿಂಗ್ ಫೋಟೋ ಶೂಟ್‌ಗೆ ರಮನೀಯ ತಾಣವಿದು
ಭಾರತದಲ್ಲಿರುವ ನೀಲಿ ಕೆರೆಯ ಬಗ್ಗೆ ಕೇಳಿದ್ದೀರಾ? ಮೆಘಾಲಯದಲ್ಲಿರುವ ಈ ನೀಲಿ ಕೆರೆ ಸೌಂದರ್ಯ ನೋಡಲು ಬೇಸಿಗೆಯಲ್ಲಿ ತುಂಬಾನೇ ಆಕರ್ಷಕವಾಗಿರುತ್ತದೆ, ಹಾಗಾಗಿ ಬೇಸಿಗೆಯ ಸಮಯದಲ್ಲಿ ಬಹುತೇಕ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಈ ನೀಲಿ ಕೆರೆಯ ಬಗ್ಗೆ ಹೆಚ್ಚಿನ ಮಾಹಿತಿ ನೋಡೋಣ ಬನ್ನಿ:

ಪ್ರಕೃತಿ ಸೌಂದರ್ಯದ ಬೀಡು ಮೆಘಾಲಯ
ಮೆಘಾಲಯ ಹಚ್ಚ ಹಸಿರು ಹೊದ್ದುಕೊಂಡಿರುವ ಸುಂದರವಾದ ಸ್ಥಳ. ಶಿಲಾಂಗ್‌ನಿಂದ ಗುಹವಾಟಿಗೆ ನಿಮಗೆ ಈ ನೀಲಿ ಕೆರೆ ಸಿಗುತ್ತದೆ, ಇದನ್ನು ಉಮೈಮ್ ಲೇಕ್(ಕೆರೆ) ಎಂದು ಕರೆಯಲಾಗುವುದು. ಈ ಕರೆ ಶಿಲಾಂಗ್‌ನಿಂದ 30 ಕಿ.ಮೀ ದೂರದಲ್ಲಿದ್ದು ಇಲ್ಲಿ ಪ್ರವಾಸಿಗರನ್ನು ಸೆಳೆಯಲು ಅನೇಕ ಅಡ್ವೆಂಚರ್ ಗೇಮ್‌ಗಳಿವೆ, ಇನ್ನೂ ಫೋಟೋ ಕ್ಲಿಕ್ಕಿಸಲು ಹೇಳಿ ಮಾಡಿಸಿರುವ ತಾಣ ಹೀಗಾಗಿ ಇಲ್ಲಿಗೆ ಹೆಚ್ಚಿನ ಜನರು ಭೇಟಿಕೊಡುತ್ತಾರೆ.
ಮನೆಸೂರೆಗೊಳ್ಳುವ ಕೆರೆಯ ಬಣ್ಣ
ಪ್ರಕೃತಿಯೇ ಹಾಗೆ ಅದರ ಸೌಂದರ್ಯ ನೋಡುತ್ತಿದ್ದರೆ ಆ ಕ್ಷಣ ಕಳೆದುಹೋಗುತ್ತೇವೆ, ಮನಸ್ಸಿನಲ್ಲಿದ್ದ ನೂರೆಂಟು ಚಿಂತೆಗಳು ದೂರಾಗಿ ಪ್ರಕೃತಿಯಲ್ಲಿನ ಆ ಸೌಂದರ್ಯ ಸವಿಯುವುದರಲ್ಲಿ ತಲ್ಲೀನರಾಗುತ್ತೇವೆ. ಇಲ್ಲಿಗೆ ಬಂದರೂ ಈ ಕೆರೆಯ ಸೌಂದರ್ಯಕ್ಕೆ ಮನಸೋಲದರವರೇ ಇರಲ್ಲ.
ಸುಂದರವಾದ ನೀಲಿ ಬಣ್ಣದ ಕೆರೆ ನೈಸರ್ಗಿಕವಾಗಿ ಆಗಿದ್ದಲ್ಲ
ಇಲ್ಲಿ ಉಮೈಮ್ ಎಂಬ ನದಿಗೆ ಕಟ್ಟಿರುವ ಡ್ಯಾಮ್‌ನಿಂದಾಗಿ ಈ ಕೆರೆ ಉಂಟಾಗಿದೆ. ಆದರೆ ಈ ಕರೆಯ ನೀರು ಏಕೆ ನೀಲಿ ಬಣ್ಣದಲ್ಲಿ ಇದೆ ಎಂಬುವುದು ಮಾತ್ರ ಯಾರಿಗೂ ಗೊತ್ತಿಲ್ಲ. ಜಲಾಶಯ ನಿರ್ಮಾಣವಾದ ಬಳಿಕ ಉಂಟಾದ ಕೆರೆ ಬೇಸಿಗೆಯಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತದೆ, ಅದರಲ್ಲೂ ಒಳ್ಳೆಯ ಬಿಸಿಲಿದ್ದರೆ ಕೆರೆ ನೋಡಲು ತುಂಬಾನೇ ನೀಲಿ ಬಣ್ಣದಲ್ಲಿರುತ್ತದೆ. ನೀರನ್ನು ಕೈಯಲ್ಲಿ ತೆಗೆದರೆ ಅಷ್ಟೊಂದು ಶುದ್ಧವಾಗಿ ಕಾಣಿಸುತ್ತದೆ.
ಮಳೆಗಾಲದಲ್ಲಿ ಈ ಕೆರೆಯ ನೀರಿನ ಬಣ್ಣ ಸ್ವಲ್ಪ ಬದಲಾಗುವುದು, ಆದರೆ ಈ ಕೆರೆ ವರ್ಷದ ಬಹುತೇಕ ದಿನಗಳಲ್ಲಿ ನೀಲಿಬಣ್ಣದಲ್ಲಿ ಇರುತ್ತದೆ. ಇಲ್ಲಿ ಸ್ಪೀಡ್ ಬೋಟಿಂಗ್ ಮಾಡಲು ತುಂಬಾನೇ ಇಷ್ಟವಾಗಿತ್ತದೆ ಎಂದು ಇಲ್ಲಿಗೆ ಭೇಟಿ ನೀಡಿದವರು ಹೇಳುತ್ತಾರೆ.
ಪ್ರೀವೆಡ್ಡಿಂಗ್ ಫೋಟೋಶೂಟ್‌ಗೆ ಸೂಪರ್ ಪ್ಲೇಸ್
ಈಗೆಲ್ಲಾ ಪ್ರೀವೆಡ್ಡಿಂಗ್ ಫೋಟೋಶೂಟ್ ಟ್ರೆಂಡ್ ಇದೆ. ಪ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡಿಸಲು ದೂರದ ಸ್ಥಳಗಳಲ್ಲಿ ಹೋಗುತ್ತಾರೆ, ಆದರೆ ಈ ಕೆರೆ ಫೋಟೋಶೂಟ್‌ಗೆ ಹೇಳಿ ಮಾಡಿಸಿದ ಸ್ಥಳವಾಗಿದೆ.
ನಮ್ಮ ದೇಶದಲ್ಲಿ ಅನೇಕ ಅಚ್ಚರಿಯ, ಅದ್ಭುತವಾದ ಸ್ಥಳಗಳಿವೆ
ನಮ್ಮ ದೇಶದಲ್ಲಿ ಅನೇಕ ಅದ್ಭುತ ಹಾಗೂ ಅಚ್ಚರಿಯ ಸ್ಥಳಗಳಿವೆ, ಆದರೆ ಅವುಗಳ ಬಗ್ಗೆ ತಿಳಿಯದೆ ವಿದೇಶದಲ್ಲಿ ಮಾತ್ರ ಸುಂದರ ತಾಣಗಳಿವೆ ಎಂದು ಹೋಗುತ್ತೇವೆ, ಮಾಲ್ಡೀವ್ಸ್, ಬಾಲಿಗಿಂತಲೂ ಸುಂದರ ತಾಣಗಳು ನಮ್ಮಲ್ಲಿ ಇವೆ....



Click it and Unblock the Notifications
