Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಮನ ನೋಡಬೇಕು ಎಂಬ ಸೆಕ್ಯೂರಿಟಿ ಆಸೆ ಈಡೇರಿಸಿದ ವ್ಯಕ್ತಿ..! ಮೆಚ್ಚುಗೆಯ ಸುರಿಮಳೆ
ಎಲ್ಲರಿಗೂ ತೀರ್ಥ ಕ್ಷೇತ್ರ, ಪುಣ್ಯ ಕ್ಷೇತ್ರಗಳ ಭೇಟಿ ನೀಡಬೇಕು ದೇವರ ದರ್ಶಣ ಪಡೆದು ಪುನೀತರಾಗಬೇಕು ಎಂಬ ಆಸೆಯಂತು ಇದ್ದೇ ಇರುತ್ತೆ. ಆದ್ರೆ ಬಡವರ ಪಾಲಿಗೆ ಅವರ ಹಣಕಾಸಿನ ಸಮಸ್ಯೆ ಎದುರಾಗಿರುತ್ತದೆ. ಹೀಗಿದ್ದರೂ ಹತ್ತಿರದ ತೀರ್ಥಕ್ಷೇತ್ರಗಳಿಗೆ ಅವರೂ ಸಹ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ.
ಭಾರತದಲ್ಲಿ ಹತ್ತಾರು ಪುಣ್ಯ ಕ್ಷೇತ್ರಗಳಿವೆ. ಅದರಲ್ಲಿ ಅಯೋಧ್ಯೆಯ ರಾಮ ಮಂದಿರ ಸಹ ಹೊಸದಾಗಿ ಸೇರ್ಪಡೆಯಾಗಿದೆ. ರಾಮ ಮಂದಿರಕ್ಕೆ ಭೇಟಿ ನೀಡಿ ಬಾಲ ರಾಮನ ದರ್ಶನ ಪಡೆಯಲು ಸಹಸ್ರಾರು ಮಂದಿ ನಿತ್ಯ ಆಗಮಿಸುತ್ತಾರೆ. ಮತ್ತೆ ಕೆಲವರು ಇನ್ನೂ ಅಯೋಧ್ಯೆಗೆ ಭೇಟಿ ನೀಡಬೇಕು ಎಂದು ಹಪಹಪಿಸುತ್ತಿದ್ದಾರೆ. ಆದರೆ ಅದಕ್ಕೆಲ್ಲ ಕಾಲ ಕೂಡಿ ಬರಬೇಕು ಎಂದು ಹಿರಿಯರು ಹೇಳುತ್ತಾರೆ.

ಅದೇ ರೀತಿ ಇಲ್ಲೊಬ್ಬ ಸೆಕ್ಯೂರಿಟಿ ಕೆಲಸ ಮಾಡುವ ವ್ಯಕ್ತಿ ಸಹ ಅಯೋಧ್ಯೆ ರಾಮನ ನೋಡಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದ, ಆದರೆ ಆತನ ಬಡತನ ಇದಕ್ಕೆ ಅಡ್ಡಿಯಾಗಿ ನಿಂತಿತ್ತು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ಆತನ ಅಯೋಧ್ಯೆ ರಾಮನ ನೋಡುವ ಕನಸನ್ನು ನನಸಾಗಿಸಿದ್ದಾನೆ.
ಸಮಾಜಿಕ ಮಾಧ್ಯಮಗಳಲ್ಲಿ ತನ್ನ ವಿಡಿಯೋಗಳ ಮೂಲಕ ಹೆಸರಾಗಿರುವ ಅನೀಶ್ ಭಗತ್ ಎಂಬಾತ ಈ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ರಾಮ ಮಂದಿರ ದರ್ಶನ ಮಾಡಿಸಿದ್ದಾರೆ.
ಈ ಹಿಂದೆ ಬಯಾಸ್ ಜಿ ಎಂದು ಪರಿಚಯ ಮಾಡಿಕೊಂಡ ಸೆಕ್ಯೂರಿಟಿ ಕೆಲಸದಾತನ ಜೊತೆ ಅನೀಶ್ ಮಾತನಾಡಿಸಿದ್ದರು. ಈ 65ನೇ ವಯಸ್ಸಿನಲ್ಲಿ ಏಕೆ ಕೆಲಸ ಮಾಡುತ್ತೀರಿ ಎಂದು ಕೇಳಿದಾಗ 'ನನಗೆ ಒಬ್ಬ ಮಗನಿದ್ದಾನೆ ಮತ್ತು ಆತ ನನ್ನಿಂದ ದೂರಾಗಿದ್ದಾನೆ' ಎಂದು ವಿವರಿಸಿದ್ದರು. ಈ ವೇಳೆ ಅನೀಶ್ ಒಂದು ದಿನದ ಮಟ್ಟಿಗೆ ನನ್ನನ್ನೇ ಮಗನೆಂದು ತಿಳಿದುಕೊಳ್ಳಿ ಎಂದಿದ್ದ.
ಬಳಿಕ ನೀವು ಮಗನಿಂದ ಏನು ಬಯಸುತ್ತೀರಿ ಎಂದು ಪ್ರಶ್ನೆ ಮಾಡಿದಾಗ ಬಯಾಸ್ ಜಿ ಅಂಜಿಕೆಯಲ್ಲೇ ಅಯೋಧ್ಯೆಯ ರಾಮ ಮಂದಿರ ನೋಡಬೇಕು ಎಂದುಕೊಂಡಿರುವುದಾಗಿ ತಮ್ಮ ಆಸೆ ವ್ಯಕ್ತಪಡಿಸಿದ್ದರು. ಈ ವಿಡಿಯೋ ಸಹ ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಭಗತ್ ಅದೇ ರಾತ್ರಿ ಅಯೋಧ್ಯೆಗೆ ತೆರಳಲು ಟಿಕೆಟ್‌ಗಳನ್ನು ಕಾಯ್ದಿರಿಸಿದರು ಮತ್ತು ಬಯಾಸ್ ಜಿ ಅವರಿಗೆ ಅಚ್ಚರಿ ಮೂಡಿಸಿದರು. ಜೊತೆಗೆ ನಾವು ಅಯೋಧ್ಯೆಗೆ ಹೋಗುತ್ತಿದ್ದೇವೆ ಎಂದಾಗ ಬಯಾಸ್ ಜಿ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಈ ವೇಳೆ ನಾನು ಸಹ ಬೇಗ ಬಟ್ಟೆಗಳ ತೆಗೆದುಕೊಂಡು ಹೊರಡುತ್ತೇನೆ ಎಂದು ಬಯಾಸ್ ಜಿ ಹೇಳುವುದು ವಿಡಿಯೋದಲ್ಲಿ ಕಾಣಬಹುದಿತ್ತು.
ಬಳಿಕ ಹೊಸದಾಗಿ ನಿರ್ಮಿಸಲಾದ ರಾಮಮಂದಿರಕ್ಕೆ ಭೇಟಿ ನೀಡಿ ಅವರ ಪ್ರಾರ್ಥನೆಗಳನ್ನು ಸಲ್ಲಿಸುವುದು. ಕಣ್ಣಲ್ಲಿ ನೀರು ತುಂಬಿಕೊಂಡು ಭಗತ್ ನನ್ನು ಅಪ್ಪಿಕೊಂಡು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತಿರುವುದು ವಿಡಿಯೋದಲ್ಲಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಅನ್ನು ಹಂಚಿಕೊಂಡ ಭಗತ್, 'ಮಕ್ಕಳು ತಮ್ಮ ವೃದ್ಧ ಪೋಷಕರನ್ನು ಹೇಗೆ ತ್ಯಜಿಸುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ಅವರನ್ನು ನೋಡಿಕೊಳ್ಳುವುದು ಬೇರೆ ಯಾವುದಾದರೂ ಅವರ ಜವಾಬ್ದಾರಿಯಾಗಿದೆ. ಬಯಾಸ್ ಜಿ ಇನ್ನೂ ತನ್ನ ಮಗ ಮರಳಿ ಬರುವ ಭರವಸೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಹೇಗಾದರೂ, ನಾವು ಇದನ್ನು ಒಟ್ಟಿಗೆ ಮಾಡಿದ್ದೇವೆ ಎಂದು ನನಗೆ ಖುಷಿಯಾಗಿದೆ. ನಾನು ಅವನ ಬಗ್ಗೆ ಮತ್ತು ರಾಮನ ಬಗ್ಗೆ ತುಂಬಾ ತಿಳಿದುಕೊಂಡೆ. ಅವನು ಅವನ ದೊಡ್ಡ ಭಕ್ತ. ನಮ್ಮ ದೇಶದ ಜನಸಾಮಾನ್ಯರಿಗೆ ರಾಮಮಂದಿರ ಎಂದರೆ ಏನು ಎಂದು ನನಗೆ ಈಗ ಅರ್ಥವಾಗಿದೆ. ಜೈ ಶ್ರೀ ರಾಮ್' ಎಂದು ಬರೆದುಕೊಂಡಿದ್ದಾರೆ.
ಅವರ ಈ ಕಾರ್ಯ ನೋಡಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರ ಈ ರೀತಿಯ ಕಾರ್ಯಗಳು ಮತ್ತಷ್ಟು ಮುಂದುವರೆಯಲಿ ಎಂದಿದ್ದಾರೆ. ಈ ಹಿಂದೆ ಉತ್ತರ ಪ್ರದೇಶದ 10 ನೇ ತರಗತಿಯ ಟಾಪರ್ ಪ್ರಾಚಿ ನಿಗಮ್ ಅವರೊಂದಿಗೆ ಹೃದಯಸ್ಪರ್ಶಿ ವೀಡಿಯೊವನ್ನು ಹಂಚಿಕೊಂಡಿದ್ದರು. ಆಕೆಯ ಮುಖದ ಕುರಿತು ಟೀಕೆ ಕೇಳಿಬಂದ ಬಳಿಕ ಅವರು ಈ ವಿಡಿಯೋ ಮಾಡಿದ್ದರು.



Click it and Unblock the Notifications