Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಅಂಬಾನಿ ಮದುವೆ ಹೊಗಳಲು ₹3.6 ಲಕ್ಷ..! ಹಣ ತಿರಸ್ಕರಿಸಿದ ಕಂಟೆಂಟ್ ಕ್ರಿಯೇಟರ್!!
ಇದೇ ತಿಂಗಳ ಕೆಲ ದಿನಗಳ ಹಿಂದೆ ನಡೆದ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹವೂ ಅದ್ದೂರಿಯಾಗಿ ನೆರವೇರಿರುವುದು ವಿಶ್ವದೆಲ್ಲೆಡೆ ಸುದ್ದಿಯಾಗಿತ್ತು. ಅನೇಕ ದಿಗ್ಗಜರು, ಬಾಲಿವುಡ್ ನಟ-ನಟಿಯರು, ಖ್ಯಾತ ನಾಮರು ಈ ಮದುವೆಗೆ ಸಾಕ್ಷಿಯಾಗಿದ್ದರು.
ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಈ ಮದುವೆಯಲ್ಲಿ ಭಾಗಿಯಾಗಿದ್ದರು. ಹಾಲಿವುಡ್ ಸೆಲೆಬ್ರಿಟಿಗಳಿಗೆ ಕೋಟಿ ಕೋಟಿ ರೂಪಾಯಿ ನೀಡಿ ಕರೆಸಲಾಗಿತ್ತು. ಆದ್ರೆ ಅವರ ಮದುವೆಗೆ ಬಂದವರಿಗಿಂತ ಯಾರೆಲ್ಲಾ ಬಂದಿಲ್ಲಾ ಎಂಬುದು ಮತ್ತೊಂದು ರೀತಿಯ ಚರ್ಚೆ ಹುಟ್ಟುಹಾಕಿತ್ತು.

ಅಚ್ಚರಿ ಎಂದರೆ ಈ ಮದುವೆಗೆ ಆಹ್ವಾನ ನೀಡಿದ್ದ ಹಲವರಲ್ಲಿ ಬಹುಪಾಲು ಮಂದಿ ಆಗಮಿಸಿದ್ದರು. ಆದರೆ ಬೆರಳೆಣಿಕೆ ಮಂದಿ ಈ ಮದುವೆಯಲ್ಲಿ ಭಾಗಿಯಾಗಿರಲಿಲ್ಲ. ಅದ್ರಲ್ಲಿ ಪ್ರಮುಖವಾಗಿ ವಿರಾಟ್ ಕೊಹ್ಲಿ-ಅನುಷ್ಕಾ ಸೇರಿ ಒಂದಿಷ್ಟು ಮಂದಿ ಈ ಮದುವೆಯಲ್ಲಿ ಭಾಗಿಯಾಗಿರಲಿಲ್ಲ.
ಇನ್ನೂ ಅಚ್ಚರಿಯ ವಿಚಾರ ಏನಂದ್ರೆ ಅಂಬಾನಿ ಅವರ ಮದುವೆ ಹೇಗೆ ಭಾರತದ ಆರ್ಥಿಕತೆಗೆ ನೆರವಾಗಲಿದೆ ಎಂಬ ಕುರಿತು ವಿಡಿಯೋಗಳು ಹರಿದಾಡುತ್ತಿದ್ದವು. ಆದರೆ ಈ ವಿಡಿಯೋಗಳು ಭಾರೀ ಚರ್ಚೆಗೆ ಕಾರಣವಾಗಿತ್ತು. ಆದ್ರೆ ಈಗೊಬ್ಬರು ಯುವ ಇನ್‌ಫ್ಲೂಯನ್ಸರ್ ಅಂಬಾನಿ ಮದುವೆ ಹೊಗಳಲು ಲಕ್ಷ ಲಕ್ಷ ಹಣದ ಆಮಿಷ ನೀಡಿದ್ದರು ಎಂದು ಹೇಳಿದ್ದಾರೆ.
ಹೌದು ಕಾವ್ಯಾ ಎಂಬಾಕೆ ತನಗೆ ಅಂಬಾನಿ ಮದುವೆ ಹೊಗಳಲು 3.6 ಲಕ್ಷ ರೂಪಾಯಿ ನೀಡಲು ಮುಂದಾಗಿದ್ದರು ಆದರೆ ನಾನು ತಿರಸ್ಕರಿಸಿದ್ದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಕಾವ್ಯಾ ಕರ್ನಾಟಕ್ ಎಂಬಾಕೆ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಅಂಬಾನಿ ಮದುವೆ ಭಾರತದ ಆರ್ಥಿಕತೆಗೆ ಹೇಗೆ ಸಹಾಯ ಮಾಡಿತು ಎಂದು ಹೇಳಲು ಈ ಹಣ ನೀಡಿದ್ದರಂತೆ.
ಆದರೆ ಈ ಕುರಿತು ವಿಡಿಯೋ ಮಾಡಲು ನಾನು ಏಕೆ ಒಪ್ಪಿಕೊಳ್ಳಲಿಲ್ಲ ಎಂಬುದಕ್ಕೆ ಕಾರಣಗಳನ್ನು ಸಹ ಕಾವ್ಯಾ ಹಂಚಿಕೊಂಡಿದ್ದಾರೆ. ಜಿಯೋ ಇಂಟರ್ನೆಟ್ ಶುಲ್ಕಗಳನ್ನು ಹೆಚ್ಚಿಸಿರುವ ಸಮಯದಲ್ಲಿ, ಅಂಬಾನಿಯಂತಹ ಕಾರ್ಪೊರೇಟ್ ದೈತ್ಯರನ್ನು ಉತ್ತೇಜಿಸುವ ಸಮಯದಲ್ಲಿ ಪ್ರಾಮಾಣಿಕತೆ ತೋರಲಿಲ್ಲ. ನಂಬಿಕೆ ದುರ್ಬಲವಾಗಿದೆ ಮತ್ತು ಸ್ಥಿರವಾದ ಪ್ರಾಮಾಣಿಕತೆಯ ಮೂಲಕ ಕಾಲಾನಂತರದಲ್ಲಿ ನಿರ್ಮಿಸಲಾಗಿದೆ. ನನ್ನ ಪ್ರೇಕ್ಷಕರು ವಿವೇಚನಾಶೀಲರಾಗಿದ್ದಾರೆ; ಅವರು ಪಾವತಿಸಿದ ಪ್ರಚಾರಗಳು ಮತ್ತು ನಿಜವಾದ ವಿಷಯದ ನಡುವೆ ವ್ಯತ್ಯಾಸವನ್ನು ತೋರಿಸಬಹುದು. ಹೀಗಾಗಿ, ಅವರ ನಂಬಿಕೆಯನ್ನು ಕಾಪಾಡುವುದು ಬಹಳ ಮುಖ್ಯ ಎಂದಿದ್ದಾರೆ.
ಭಾರತದಲ್ಲಿ ಜಾತಿ, ವರ್ಗ, ಲಿಂಗ ಮತ್ತು ಧರ್ಮದ ಕಾರಣದಿಂದ ಆಗಾಗ್ಗೆ ಮದುವೆಗಳು ರದ್ದಾಗುತ್ತವೆ. ಇವು ತನ್ನ ಮೌಲ್ಯಗಳು ಹೊಂದಿಕೆಯಾಗುವುದಿಲ್ಲ, ಇದಲ್ಲದೆ ನಾನೊಬ್ಬ ಶಿಕ್ಷಣ ಪಡೆದ ವ್ಯಕ್ತಿಯಾಗಿ ಈ ರೀತಿ ದಾರಿ ತಪ್ಪಿಸುವ ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ.
3.6 ಲಕ್ಷ ಹಣ ನನ್ನ ಕಣ್ಣು ಕುಕ್ಕಿತ್ತು. ಆದರೆ ಇದು ನನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಇದು ತೊಡಕಾಗಲಿದೆ. ನನ್ನ ನಿಷ್ಠಾವಂತ ಫಾಲೋವರ್ಸ್‌ಗಳ ಕಟ್ಟಿ ಬೆಳೆಸಿರುತ್ತೇವೆ. ಇದು ಅಮೂಲ್ಯವಾಗಿದೆ ಎಂದು ಕಾವ್ಯಾ ವಿವರಿಸಿದ್ದಾಳೆ.
ಆಕೆಯ ಈ ಪೋಸ್ಟ್ ಹಲವರ ಗಮನ ಸೆಳೆದಿದೆ. ಅಲ್ಲದೆ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ, ಹಣ ತೆಗೆದುಕೊಂಡು ಹಲವರು ಯಾವು ವಿಚಾರವನ್ನಾದರೂ ಪ್ರಮೋಟ್ ಮಾಡುವ ಈ ಕಾಲದಲ್ಲಿ ಈಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾಗಾದ್ರೆ ಈಗ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಕೇಳಿಬರುತ್ತಿರುವ ಅಂಬಾನಿ ಮದುವೆಯ ಕುರಿತ ಎಲ್ಲಾ ವಿಡಿಯೋಗಳಿಗೂ ಹಣ ನೀಡಲಾಗಿದ್ಯಾ? ಎಂಬ ಅನುಮಾನ ಸಹ ಮೂಡುತ್ತಿವೆ. ಅಂಬಾನಿ ಮದುವೆಯನ್ನು ಹೊಗಳಿ ನೂರಾರು ಮಂದಿ ವಿಡಿಯೋ ಮಾಡಿದ್ದಾರೆ. ಇವರಲ್ಲಿ ಹಲವರಿಗೆ ಹಣ ಸಿಕ್ಕಿರಬಹುದು ಎಂಬ ಶಂಕೆ ಸಹ ವ್ಯಕ್ತವಾಗಿದೆ.
ಇನ್ಸ್‌ಸ್ಟಾಗ್ರಾಮ್‌ನಲ್ಲಿ ಕಾವ್ಯಾ ಬಹಳ ಕಡಿಮೆ ಅವಧಿಯಲ್ಲಿ ಬರೋಬ್ಬರಿ 1.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರ ವಿಡಿಯೋಗಳು ಲಕ್ಷ ಲಕ್ಷ ವೀಕ್ಷಣೆ ಪಡೆಯುತ್ತವೆ.



Click it and Unblock the Notifications
