Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಭಾರತದ ಟಾಪ್ 10 ಶ್ರೀಮಂತ ರಾಜ್ಯಗಳಿವು: ಕರ್ನಾಟ ಯಾವ ಸ್ಥಾನದಲ್ಲಿದೆ?
ಭಾರತವು ಈಗ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾ ಜಾಗತಿಕ ಮಟ್ಟದಲ್ಲಿ ಪ್ರಬಾವ ಬೀರುವ ಹಂತದಲ್ಲಿ ಬೆಳೆಯುತ್ತಿರುವ ರಾಷ್ಟ್ರ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರು ಇದ್ದಾರೆ, ಆದರೆ ಭಾರತದಲ್ಲಿ ಇಂದಿಗೂ ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿರುವವರ ಸಂಖ್ಯೆಗೇನೂ ಕಡಿಮೆಯಿಲ್ಲ.
ಭಾರತದ 28 ರಾಜ್ಯಗಳು 8 ಕೇಂದ್ರಾಡಳಿತ ಪ್ರದೇಶವನ್ನು ತೆಗೆದುಕೊಂಡರೆ ಕೆಲ ರಾಜ್ಯಗಳು ಆರ್ಥಿಕವಾಗಿ ಸುಭದ್ರವಾಗಿದೆ, ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿ ಬಿಡುಗಡೆಯಾಗಿದ್ದು ಕರ್ನಾಟಕ 3ನೇ ಸ್ಥಾನದಲ್ಲಿದೆ. ಭಾರತದ ಟಾಪ್ 10 ಶ್ರೀಮಂತ ರಾಜ್ಯಗಳಾವುವು ಎಂದು ನೋಡೋಣ:

ಮಹಾರಾಷ್ಟ್ರ:
ಭಾರತದ ಶ್ರೀಮಂತ ರಾಜ್ಯವಾಗಿ ಮಹಾರಾಷ್ಟ್ರ ಗುರುತಿಸಿಕೊಂಡಿದೆ. ಈ ರಾಜ್ಯ 2022-2023 ಸಾಲಿನಲ್ಲಿ ಮಹಾರಾಷ್ಟ್ರದ GSDP ಸರಿಸುಮಾರು ₹2.89 ಲಕ್ಷ ಕೋಟಿ. ಭಾರತದ ಆರ್ಥಿಕತೆ ಮಹಾರಾಷ್ಟ್ರದ ಕೊಡುಗೆ ದೊಡ್ಡದಿದೆ. ದೊಡ್ಡ-ದೊಡ್ಡ ಆರ್ಥಿಕ ವ್ಯವಹಾರಗಳು ಮಹಾರಾಷ್ಟ್ರದಲ್ಲಿ ನಡೆಯುತ್ತದೆ, ಅಲ್ಲದೆ ಪ್ರಸಿದ್ಧ ಉದ್ಯಮಿಗಳು ಕೂಡ ನೆಲೆಸಿರುವುದು ಮಹಾರಾಷ್ಟ್ರದಲ್ಲಿಯೇ.
ತಮಿಳುನಾಡು
ಭಾರತದ 2ನೇ ಅತಿ ಶ್ರೀಮಂತ ರಾಜ್ಯವೆಂದರೆ ಅದು ತಮಿಳುನಾಡು. ತಮಿಳಿನಾಡಿನ ಆರ್ಥಿಕತೆ ಬೆಳೆಯುತ್ತಲೇ ಇದೆ. ಇದು 2025ರಷ್ಟರಲ್ಲಿ ₹31.55 ಲಕ್ಷ ಕೋಟಿ GSDP ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕ
ಭಾರತದ ಟೆಕ್‌ಕ್ಷೇತ್ರಗಳು ನೆಲೆಗೊಂಡಿರುವುದು ಕರ್ನಾಟಕದಲ್ಲಿ. ಕರ್ನಾಟಕ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ, ಕರ್ನಾಟಕದ GDP ಶೇರ್ 8.2% ತಲುಪಿದೆ.
ಗುಜರಾತ್
ವಜ್ರ ವ್ಯಾಪಾರಿಗಳ ನಾಡು ಗುಜರಾತ್. ಅಲ್ಲಿಯ ಬಹುತೇಕರು ವ್ಯವಹಾರ, ಉದ್ಯಮಗಳಲ್ಲಿ ತೊಡಗಿಸಿಕೊಂಡವರು. ಇದು 2025ರಷ್ಟರಲ್ಲಿ GSDP ರುಪಾಯಿ 27.9 ಲಕ್ಷ ಕೋಟಿ ತಲುಪಲಿದೆ.
ಉತ್ತರ ಪ್ರದೇಶ
ಭಾರತದ ಜಿಡಿಪಿಗೆ ಉತ್ತರ ಪ್ರದೇಶದ ಕೊಡುಗೆ ಶೇ. 8ರಷ್ಟಿದೆ. ದೇಶದ ಆರ್ಥಿಕತೆಗೆ ಉತ್ತರ ಪ್ರದೇಶದ ಕೊಡುಗೆ ಕೂಡ ಮಹತ್ವದ್ದಾಗಿದ್ದು
2025ರಷ್ಟರಲ್ಲಿ GSDP ರು. 24.99 ಲಕ್ಷ ಕೋಟಿ ತಲುಪಲಿದೆ.
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ ಈ ಹಿಂದೆ ದೇಶದ ಆರ್ಥಿಕತೆಗೆ ಶೇ. 10.5ರಷ್ಟು ಕೊಡುಗೆ ನೀಡಿತ್ತು, ಇದೀಗ ಶೇ. 5.6ಕ್ಕೆ ಕುಸಿದಿದೆ. ದೇಶದ ಆರ್ಥಿಕತೆಗೆ ಪಶ್ಚಿಮ ಬಂಗಾಳ 6ನೇ ಸ್ಥಾನದಲ್ಲಿದೆ.
ರಾಜಾಸ್ಥಾನ
ದೇಶದ ಆರ್ಥಿಕತೆಗೆ ಇದರ ಕೊಡುಗೆ ಶೇ. 5ರಷ್ಟಿದೆ. ರಾಜಾಸ್ಥಾನ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದ್ದು ವರ್ಷದಿಂದ ವರ್ಷಕ್ಕೆ ಆರ್ಥಿಕವಾಗಿ ಸಬಲವಾಗುತ್ತಾ ಹೋಗುತ್ತಿದೆ.
ತೆಲಂಗಾಣ
ಹೊಸ ರಾಜ್ಯವಾಗಿ ಕೆಲವೇ ವರ್ಷಗಳಲ್ಲಿ ಟಾಪ್ 8ರ ಸ್ಥಾನಗಳಿಸಿದೆ. ಇದು ದೇಶದ ಆರ್ಥಿಕತೆಗೆ ಶೇ. 4.90ರಷ್ಟು ಕೊಡುಗೆ ನೀಡಿದೆ. 2024-25ರಲ್ಲಿ ಇದರ ಆರ್ಥಿಕತೆ ರುಪಾಯಿ 16.5 ಲಕ್ಷ ಕೋಟಿ ಇರಲಿದೆ ಎಂದು ಅಂದಾಜು ಮಾಡಲಾಗಿದೆ.
ಆಂಧ್ರಪ್ರದೇಶ
ಆಂಧ್ರಪ್ರದೇಶ ದೇಶದ ಶ್ರೀಮಂತ ರಾಜ್ಯಗಳಲ್ಲಿ 9ನೇ ಸ್ಥಾನದಲ್ಲಿದೆ. ಇದು ಭಾರತದ ಆರ್ಥಿಕತೆಗೆ ಶೇ. 4.70 ಕೊಡುಗೆ ನೀಡಿದೆ, 2025ರಷ್ಟಿಗೆ ಆಂಧ್ರಪ್ರದೇಶದ GSDP ₹15.89 ಲಕ್ಷ ಕೋಟಿ ಇರಲಿದೆ.
ಮಧ್ಯ ಪ್ರದೇಶ
ಭಾರತದ ಶ್ರೀಮಂತ ರಾಜ್ಯಗಳಲ್ಲಿ ಮಧ್ಯಪ್ರದೇಶ 10ನೇ ಸ್ಥಾನದಲ್ಲಿದೆ. ಇದು 2025ರಷ್ಟಿಗೆ ₹15.22 ಲಕ್ಷ ಕೋಟಿ ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ. ಆರ್ಥಿಕ ಪ್ರಗತಿಯಲ್ಲಿ 0.6% ಹೆಚ್ಚಾಗಿದೆ.



Click it and Unblock the Notifications
