Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದಲ್ಲಿ ಅತೀ ಹೆಚ್ಚು ಬುದ್ದಿವಂತರ ಹೊಂದಿರುವ ಟಾಪ್ ರಾಜ್ಯಗಳಿವು..! ಕರ್ನಾಟಕಕ್ಕೆ ಎಷ್ಟನೇ ಸ್ಥಾನ ಗೊತ್ತಾ?
India's Smartest States: ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತವು ಶಕ್ತಿ ದೇಶಗಳ ಪಟ್ಟಿಯಲ್ಲೂ ಸ್ಥಾನ ಪಡೆಯಲಿದೆ. ಹಾಗೆ ಇತ್ತೀಚಿಗೆ ಜಿಡಿಪಿ ದರದಲ್ಲಿ ಜಪಾನ್ ಹಿಂದಿಕ್ಕಿ 4ನೇ ಸ್ಥಾನಕ್ಕೇರಿರುವುದು ಕೂಡ ನೆನೆಯಬಹುದು. ಭಾರತವನ್ನು ವೈವಿಧ್ಯತೆ ಮೂಲಕ ಗುರುತಿಸಲಾಗುತ್ತದೆ. ಒಂದೊಂದು ಪ್ರದೇಶ ಒಂದೊಂದು ಭಾಷೆ, ಸಂಸ್ಕೃತಿಗಳ ತವರೂರಾಗಿದೆ. ಹಾಗೆ ಭಾಷೆಯ ಆಧಾರದ ಮೇಲೆಯೇ ರಾಜ್ಯಗಳಾಗಿ ವಿಂಗಡಿಸಲಾಗಿದ್ದು, ಈ ಒಕ್ಕೂಟ ವ್ಯವಸ್ಥೆಯ ದೇಶ ಎಂದು ಪರಿಗಣಿಸಲಾಗುತ್ತದೆ.
ಇನ್ನು ಒಂದೊಂದು ಸಂಸ್ಕೃತಿ, ಒಂದೊಂದು ರೀತಿಯ ಆಚರಣೆಯಿಂದ ಭಾರತ ವಿಶೇಷ ಎನಿಸಿದೆ. ಅದರಲ್ಲೂ ಭಾರತೀಯರು ಈಗ ಇಡೀ ವಿಶ್ವದ ಯಾವುದೇ ಮೂಲೆಗೆ ಹೋದಲು ನೋಡಲು ಸಿಗುತ್ತಾರೆ. ಹಾಗೆ ಜಾಗತಿಕ ಕಂಪನಿಗಳಿಂದ ಹಿಡಿದು ಇಡೀ ದೇಶವನ್ನೇ ಮುನ್ನಡೆಸುತ್ತಿದ್ದಾರೆ. ಭಾರತ ಇಡೀ ವಿಶ್ವಕ್ಕೆ ಅತೀ ಹೆಚ್ಚು ಇಂಜಿನಿಯರ್‌ಗಳನ್ನು ನೀಡುವ ದೇಶವಾಗಿದೆ.

ಇನ್ನು ಕಾಲೇಜುಗಳ ಸಂಖ್ಯೆ ಕೂಡ ಅಧಿಕವಾಗಿದೆ. ಇನ್ನು ಭಾರತೀಯರ ಬುದ್ದಿವಂತಿಕೆ ವಿಚಾರದಲ್ಲೂ ಕೂಡ ವಿಶ್ವದ ಗಮನ ಸೆಳೆಯುವುದು ನೋಡಬಹುದು. ಭಾರತೀಯರು ಐಕ್ಯೂ ಮಟ್ಟ ಬೇರೆ ದೇಶಗಳಿಗೆ ಹೋಲಿಸಿದರೆ ಮಧ್ಯಮ ಸ್ಥಿತಿಯಲ್ಲಿದೆ. ಹಾಗೆ ಭಾರತದಲ್ಲಿ ಕೆಲವು ರಾಜ್ಯದ ಮಂದಿ ಐಕ್ಯೂ ಅಥವಾ ಬುದ್ದಿವಂತಿಕೆಯಲ್ಲಿ ಮುಂದಿದ್ದಾರೆ. ಮತ್ತೆ ಕೆಲ ರಾಜ್ಯಗಳು ಹಿಂದೆ ಉಳಿದಿವೆ.
ನಾವಿಂದು ಭಾರತದ ಯಾವ ರಾಜ್ಯಗಳು ಹೆಚ್ಚು ಬುದ್ದಿವಂತಿಕೆ ಜನರನ್ನು ಹೊಂದಿವೆ. ಯಾವ ರಾಜ್ಯದವರು ಹೆಚ್ಚು ಬುದ್ದಿವಂತರು ಎಂಬುದನ್ನು ಇಂದು ತಿಳಿದುಕೊಳ್ಳೋಣ.
ಕೇರಳ
ಭಾರತದಲ್ಲಿ ಅತೀ ಹೆಚ್ಚು ಐಕ್ಯೂ ಹೊಂದಿರುವ ರಾಜ್ಯ ಎಂದರೆ ಅದು ಕೇರಳ. ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳವು ಸರಾಸರಿ 110-112ರ ಆಸುಪಾಸಿನ ಐಕ್ಯೂ ಹೊಂದಿರಲಿದೆ. ಹಾಗೆ ಅಲ್ಲಿನ ಸಾಕ್ಷರತೆ ಮಟ್ಟ ಕೂಡ ಭಾರತದ ಉಳಿದೆಲ್ಲಾ ರಾಜ್ಯಗಳಿಗಿಂತಲೂ ಹೆಚ್ಚಾಗಿದೆ. ಹೀಗಾಗಿ ದೇವರ ನಾಡು ಎಂಬ ಹೆಗ್ಗಳಿಕೆಯ ಜೊತೆಗೆ ಇನ್ನು ಬುದ್ದಿವಂತರ ನಾಡು ಎಂದು ಕೂಡ ಕರೆಯಬಹುದು.
ದೆಹಲಿ
ರಾಷ್ಟ್ರ ರಾಜಧಾನಿ ಈ ಬುದ್ದಿವಂತರಲ್ಲಿ ಎರಡನೇ ಸ್ಥಾನ ಪಡೆದಿದೆ. ಅಂದಾಜು 106ರಿಂದ 109ರ ಐಕ್ಯೂ ಮಟ್ಟ ಹೊಂದಿದ್ದಾರೆ. ಅಲ್ಲಿ ಅತ್ಯುತ್ತಮ ಮಟ್ಟದ ಶಿಕ್ಷಣ ಸಂಸ್ಥೆಗಳು, ಕಾಲೇಜುಗಳು, ನಗರೀಕರಣ, ಅವಕಾಶಗಳ ಕಾರಣದಿಂದಾಗಿ ಹೆಚ್ಚು ಬುದ್ದಿವಂತರ ನೋಡಬಹುದು.
ತಮಿಳುನಾಡು
ಇನ್ನು ದಕ್ಷಿಣ ಭಾರತದ ಮತ್ತೊಂದು ರಾಜ್ಯ ತಮಿಳುನಾಡಿನಲ್ಲೂ ಕೂಡ ಬುದ್ದಿವಂತರ ನೋಡಬಹುದು. ಇಲ್ಲಿ ಸರಾಸರಿ 103ರಿಂದ 106 ಐಕ್ಯೂ ಮಟ್ಟ ಹೊಂದಿರುವ ಜನರಿದ್ದಾರೆ. ಹೀಗಾಗಿ ತಮಿಳುನಾಡಿನ ಮಂದಿ ಸ್ಪರ್ಧಾತ್ಮಕ ಪರೀಕ್ಷೆಗಳು, ಕಂಪನಿ ಇಸಿಓ ಗಳಾಗಿರುವುದು ನೋಡಬಹುದು. ಅಲ್ಲಿ ಗಣಿತ ವಿಚಾರವಾಗಿ ಹೆಚ್ಚು ಮಂದಿ ಬುದ್ದಿವಂತರು ಸಿಗುತ್ತಾರೆ.
ಮಹಾರಾಷ್ಟ್ರ
ಭಾರತದ ಮತ್ತೊಂದು ದೊಡ್ಡ ನಗರವಾದ ಮುಂಬೈ ಮಹಾರಾಷ್ಟ್ರದಲ್ಲೂ ಕೂಡ 102ರಿಂದ 104ರ ಮಟ್ಟದ ಐಕ್ಯೂ ಹೊಂದಿರುವುದು ನೋಡಬಹುದು. ಮುಂಬೈನ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು, ಅಲ್ಲಿನ ಪರಿಸರವು ಹೆಚ್ಚು ಸಾಕ್ಷರತೆ ಕಡೆಗೆ ಅವರನ್ನು ಕೊಂಡೊಯ್ಯುವುದು ಇದಕ್ಕೆ ಕಾರಣ ಎನ್ನಬಹುದು.
ಕರ್ನಾಟಕ
ದೇಶದಲ್ಲಿ ಬುದ್ದಿವಂತರ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು 5ನೇ ಸ್ಥಾನದಲ್ಲಿದೆ. ಭಾರತದಲ್ಲಿ ಅತಿ ಹೆಚ್ಚು ತಂತ್ರಜ್ಞಾನ ಆಧಾರಿತ ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನಾ ಕೇಂದ್ರಗಳನ್ನು ಹೊಂದಿರುವ ಖ್ಯಾತಿ ನಮ್ಮ ರಾಜ್ಯದ್ದು. ಸಾಕ್ಷರತಾ ಪ್ರಮಾಣದಲ್ಲೂ ನಾವು ಹೆಚ್ಚು ಸಾಧನೆ ಮಾಡುತ್ತಿದ್ದೇವೆ. ಹೀಗಾಗಿ ನಮ್ಮ ರಾಜ್ಯದ ಐಕ್ಯೂ ಮಟ್ಟ ಸರಾಸರಿ ಅಂದಾಜು 102-103 ಎಂದು ಹೇಳಲಾಗಿದೆ.
ಉತ್ತರ ಪ್ರದೇಶ
ಅತೀ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಮಂದಿಯ ಐಕ್ಯೂ ಮಟ್ಟ ಹೆಚ್ಚಾಗಿದೆ ಎಂಬುದನ್ನು ನೀವು ಅಚ್ಚರಿ ಪಟ್ಟರೂ ಒಪ್ಪಬೇಕಿದೆ. ಅಲ್ಲಿನ ಜನರ ಬುದ್ದಿವಂತಿಕೆ ಮಟ್ಟ 99 ಆಗಿದೆ.
ಇನ್ನು ನಾವು ಸಾಮಾನ್ಯ ಜನರ ಐಕ್ಯೂ ಮಟ್ಟ ಎಷ್ಟಿರಬೇಕು ಎಂದು ನೋಡುವುದಾದರೆ ಅದು 85ರಿಂದ 115 ಎಂದು ವರ್ಗೀಕರಿಸಲಾಗಿದೆ. ಇನ್ನು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಐಕ್ಯೂ 160ರ ಆಸುಪಾಸಿನಲ್ಲಿತ್ತು ಎಂದು ಹೇಳಲಾಗಿದೆ.



Click it and Unblock the Notifications
