Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದ ಮೊದಲ 'ಜನರೇಷನ್ ಬೀಟಾ' ಮಗು ಜನಿಸಿರೋದೆಲ್ಲಿ.? ಎನಿದು ಹೊಸ ತಲೆಮಾರಿನ ಮಗು.?
ನೀವು ಯಾವ ಜನರೇಷನ್ ಕಿಡ್ ಎಂದು ಯಾರಾದ್ರು ಕೇಳಿದ್ರೆ 80ನೇ ದಶಕ, 90ನೇ ದಶಕ ಅಥವಾ 20ನೇ ದಶಕ ಎನ್ನಬಹುದು. ಆದ್ರೆ ಈಗ ಜನಿಸುತ್ತಿರುವ ಮಕ್ಕಳ ಜನರೇಷನ್ ಕೂಡ ಬದಲಾಗಿದೆ. ಬಹಳ ಅಡ್ವಾನ್ಸ್ ಜನರೇಷನ್ ಎಂದು ಈ ಮಕ್ಕಳ ಕರೆಯಲಾಗಿದೆ. ಇವರನ್ನು ಜನರೇಷನ್ ಬೀಟಾ ಎಂಬ ಹೆಸರಿನಿಂದ ಕರೆಲಾಗುತ್ತಿದೆ.
ನೀವು ಹುಟ್ಟಿದಾಗ ಈ ಜಗತ್ತು ಅಷ್ಟೊಂದು ಆಧುನಿಕತೆಗೆ ಅಥವಾ ಟೆಕ್ನಾಲಜಿಕಲಿ ಮುಂದುವರೆದಿರಲಿಲ್ಲ. 90ರ ದಶಕದಲ್ಲಿ ಜನಿಸಿದವರು ಮೊಬೈಲ್, ಟಿವಿಯನ್ನು ಅಪರೂಪಕ್ಕೆ ನೋಡಿದವರು, ಹಾಗೆ ಬರು ಬರುತ್ತ ಕಾಲ ಬದಲಾಗಿ ಈಗ ಎಲ್ಲರ ಕೈಲು ಮೊಬೈಲ್ ಬಂದಿದೆ. ಇಂಟರ್‌ನೆಟ್, 5ಜಿ, 6ಜಿ ಸ್ಪೀಡ್‌ಗೆ ತಲುಪಿದೆ. ಇದರ ಅರ್ಥ ನಾವು ವೇಗವಾಗಿ ಮುಂದುವರೆದಿದ್ದೇವೆ.

ಆದ್ರೆ 2025ರಿಂದ 2039ರ ನಡುವೆ ನಡುವೆ ಜನಿಸುವ ಮಕ್ಕಳನ್ನು ಜನರೇಷನ್ ಬೀಟಾ ಎಂದು ವರ್ಗೀಕರಿಸಲಾಗಿದೆ. ಏಕೆಂದರೆ ಈ ಮಕ್ಕಳು ಹುಟ್ಟುವಾಗಲೇ ಮೊಬೈಲ್, ಇಂಟರ್ ನೆಟ್ ಸೇರಿ ಜಗತ್ತು ಆಧುನುಕವಾಗಿ ಮುಂದುವರೆದಿದೆ, ಎಲ್ಲಾ ಕೆಲಸವೂ ಯಂತ್ರಗಳಿಂದ ಮಾಡುವ ಕಾಲವಾಗಿ ಬದಲಾಗಿದೆ. 2025ರಲ್ಲಿ ಜನಿಸಿದ ಮಗು 6ರಿಂದ 7 ವರ್ಷವಾದಾಗ ಈ ಜಗತ್ತು ಮತ್ತಷ್ಟು ಬದಲಾಗಿರುತ್ತದೆ. ಅವರಿಗೆ ದೂರವಾಣಿ, ರೇಡಿಯೋ ಅಷ್ಟೇ ಅಲ್ಲ ಹಲವು ಕಲ್ಪನೆಗಳು ದೂರಾಗಿರುತ್ತವೆ ಎಂಬ ವಾದವಿದೆ.
ಆದ್ರೆ 2025ರ ಜನರೇಷನ್ ಬೀಟಾದ ಮೊದಲ ಮಗು ಯಾರು ಎಂಬ ಅಚ್ಚರಿ ವಿಚಾರ ನಿಮಗೆ ಗೊತ್ತಾ? ಹೊಸ ವರ್ಷದಂದು ಜನಿಸಿದ ಮೊದಲ ಮಗು ಯಾರು ಎಂಬ ಚರ್ಚೆಗೆ ಕೊನೆಗೂ ಅಂತ್ಯ ಬಿದ್ದಿದೆ. ಮಿಜೋರಾಂನ ಐಜ್ವಾಲ್‌ನಲ್ಲಿ ಸರಿಯಾಗಿ 12 ಗಂಟೆ 3 ನಿಮಿಷಕ್ಕೆ ಫ್ರಾಂಕಿ ಎಂಬ ಮಗು ಜನಿಸಿದೆ. ಈ ಮಗು ಜನರೇಷನ್ ಬೀಟಾದ ಮೊದಲ ಭಾರತೀಯ ಮಗು ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಈ ಜನರೇಷನ್ ಹೆಸರುಗಳ ಸಾಮಾನ್ಯವಾಗಿ 20 ವರ್ಷಕ್ಕೊಮ್ಮೆ ಬದಲಾಗುತ್ತದೆ. ಆದ್ರೆ ಈ ಬೀಟಾ ಜನರೇಷನ್ ಕೇವಲ 11 ವರ್ಷಕ್ಕೆ ಆಗಮಿಸಿದೆ. 2013 ಮತ್ತು 2024 ರ ನಡುವೆ ಜನಿಸಿದ ಮಕ್ಕಳನ್ನು 'ಜನರೇಶನ್ ಆಲ್ಫಾ' ಎಂದು ಕರೆಯಲಾಗುತ್ತದೆ, ಆದರೆ 1995 ಮತ್ತು 2012 ರ ನಡುವೆ ಜನಿಸಿದವರನ್ನು ಜನರೇಷನ್ Z ಎಂದು ಕರೆಯಲಾಗುತ್ತದೆ. Gen Z ಬಹುತೇಕ ಎಲ್ಲಾ ವಿದ್ಯಮಾನವನ್ನು ಎದುರಿಸುವವರು. ಈ ಜನರೇಷನ್ ಆಲ್ಫಾದವರು ಹುಟ್ಟಿನಿಂದಲೇ ವೇಘದ ಇಂಟರ್‌ನೆಟ್ ಸೇವೆಗೆ ತೆರೆದುಕೊಂಡಿರುವವರು.
ಈ 2025ರಿಂದ 2039ರ ನಡುವೆ ಜನಿಸುವ ಮಕ್ಕಳು ಹುಟ್ಟುವಾಗಲೇ ಅತ್ಯಾಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಾರೆ. ಸುಲಭದ ಮೊಬೈಲ್, ಅತ್ಯಾಧುನಿಕ ಯಂತ್ರಗಳು, ವೇಗದ ಇಂಟರ್‌ನೆಟ್, ಎಐ, ರೊಬೊಟ್‌ನಂತಹ ಹಲವು ರೀತಿಯ ತಂತ್ರಜ್ಞಾನ ಅವರ ಕಾಲ ಕೆಲಗೆ ಸಿಗುವಂತಾಗುತ್ತದೆ. ಎಲ್ಲಾ ಸುಧಾರಿತ ತಂತ್ರಜ್ಞಾನಗಳು ಈ ಅವರ ಯುಗದಲ್ಲಿ ಬೆಳವಣಿಗೆಯಾಗುತ್ತದೆ. ಹೀಗಾಗಿ ಜನರೇಷನ್ ಬೀಟಾ ಎಂಬ ಪದವನ್ನು ಸಮಾಜಶಾಸ್ತ್ರಜ್ಞ ಮಾರ್ಕ್ ಮೆಕ್‌ಕ್ರಿಂಡಲ್ ಅವರು ನೀಡಿದ್ದಾರೆ.
ಜನರೇಷನ್ ಬೀಟಾ ಅತ್ಯಾಧುನಿಕ ಜೀವನ ಶೈಲಿ ರೂಪಿಸಿಕೊಂಡರೂ ಕೂಡ ಅವರಲ್ಲಿ ಹೆಚ್ಚುತ್ತಿರುವ ಜಾಗತಿಕ ತಾಪಮಾನ, ನಗರೀಕರಣ, ಜನಸಂಖ್ಯೆ, ಮಾಲಿನ್ಯದಂತಹ ಸವಾಲುಗಳನ್ನು ಬೇರೆಲ್ಲಾ ಜನರೇಷನ್‌ಗಿಂತ ಹೆಚ್ಚು ಎದುರಿಸಬೇಕಾಗುತ್ತದೆ. ಹಾಗೆ ದುಬಾರಿ ಜೀವನ ಶೈಲಿ ಕೂಡ ಇದೇ ಜನರೇಷನ್ ಅನ್ನು ಕಾಡಲಿದೆ.



Click it and Unblock the Notifications