Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಡ್ಲಿ-ರಾಜ್ಮಾ ಮಸಾಲಾದಿಂದ ಜೀವ ವೈವಿಧ್ಯಕ್ಕೆ ಹಾನಿ..! ಹೊಸ ಅಧ್ಯಯನ ವರದಿ
ಇಡ್ಲಿ ದಕ್ಷಿಣ ಭಾರತದ ನಿತ್ಯದ ಖಾದ್ಯ ಎಂದರೂ ತಪ್ಪಾಗಲಾರದು. ಇಡ್ಲಿ ಸೇವಿಸದವರು ಸಿಗಲು ಸಾಧ್ಯವಿಲ್ಲ. ಇದರ ಜೊತೆ ರಾಜ್ಮಾ ಮಸಾಲ ಸಹ ಅಷ್ಟೇ ಫೇಮಸ್ ಖಾದ್ಯ ಆಗಿದೆ. ಹೆಸರೆ ಸೂಚಿಸುವಂತೆ ಇದರಲ್ಲಿ ಎಲ್ಲಾ ಮಸಾಲೆಗಳು ಬೆರೆತು ಒಂದೊಳ್ಳೆ ಖಾದ್ಯವಾಗಿರಲಿದೆ.
ಇಡ್ಲಿ ಜೊತೆ ರಾಜ್ಮಾ ಮಸಲಾ ಇದ್ದರೆ ಇನ್ನೆರಡು ಇಡ್ಲಿ ಹೆಚ್ಚಾಗಿ ಸೇವಿಸಬಹುದು. ಈ ಎರಡೂ ಆಹಾರಗಳು ಆರೋಗ್ಯಕ್ಕೂ ಉತ್ತಮವಾಗಿವೆ. ಇಡ್ಲಿ ಕಡಿಮೆ ಎಣ್ಣೆ ಬಳಸಿ ಮಾಡುವುದರಿಂದ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಇರಲಿದೆ. ಇದರ ಜೊತೆ ರಾಜ್ಮಾ ಮಸಾಲಾದಲ್ಲಿ ಮಸಾಲೆ ಹೊರತುಪಡಿಸಿ ಕಾಳುಗಳು ಆರೊಗ್ಯಕ್ಕೆ ಉತ್ತಮವಾಗಿದೆ.

ಈ ರಾಜ್ಮಾ ಮಸಾಲೆಯು ಎಲ್ಲಾ ವಿಧದ ಖಾದ್ಯಗಳ ಜೊತೆಯೂ ಸೇವಿಸಬಹುದು. ಆದರೆ ಈ ಎರಡು ಖಾದ್ಯಗಳಿಂದ ಜೀವ ವೈವಿಧ್ಯತೆಗೆ ಹಾನಿ ಮಾಡುತ್ತವೆ ಎಂದರೆ ನೀವು ನಂಬುತ್ತೀರಾ? ಹೌದು ಈ ಎರಡು ಖಾದ್ಯಗಳು ಜಗತ್ತಿನ ಜೀವ ವೈವಿಧ್ಯತೆಯ ಮೇಲೆ ಹಾನಿ ಮಾಡುವ ಆಹಾರಗಳ ಪೈಕಿ 6ನೇ ಸ್ಥಾನ ಪಡೆದಿರುವುದು ನಿಜಕ್ಕೂ ಅಚ್ಚರಿ ತರಿಸಿದೆ.
ಹಾಗಾದರೆ ನಾವು ಇಡ್ಲಿ, ರಾಜ್ಮಾ ಮಸಾಲಾ ಸೇವಿಸುವುದರಿಂದ ಜೀವ ವೈವಿಧ್ಯೆತೆಗೆ ಹಾನಿ ಹೇಗಾಗುತ್ತದೆ? ಇದರ ಹಿಂದಿರುವ ವೈಜ್ಞಾನಿಕ ಕಾರಣವೇನು? ಯಾವ ಜೀವ ವೈವಿಧ್ಯತೆ ಇದರಿಂದ ಹಾನಿಗೊಳಗಾಗಿದೆ ಎಂಬೆಲ್ಲಾ ಕುರಿತು ನಾವಿಲ್ಲಿ ಹೇಳಿದ್ದೇವೆ ನೋಡಿ.
ಪ್ರಪಂಚದಾದ್ಯಂತ 151 ಜನಪ್ರಿಯ ಭಕ್ಷ್ಯಗಳ ಜೀವವೈವಿಧ್ಯತೆಯ ಹೆಜ್ಜೆಗುರುತುಗಳನ್ನು ನಿರ್ಣಯಿಸಲು ನಡೆಸಿದ ಅಧ್ಯಯನವು ಈ ಕುರಿತ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದೆ. ಜೀವವೈವಿಧ್ಯಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡುವ ಆಹಾರ ಪದಾರ್ಥವೆಂದರೆ ಲೆಚಾಜೊ, ಸ್ಪೇನ್‌ನ ಕುರಿಮರಿಯಿಂದ ಮಾಡುವ ಆಹಾರವಾಗಿದೆ.
ಬ್ರೆಜಿಲ್‌ನಲ್ಲಿ ಸೇವಿಸುವ ನಾಲ್ಕು ಗೋಮಾಂಸ ಮಾದರಿ ಆಹಾರಗಳು ಸಹ ಜೀವವೈವಿಧ್ಯತೆಗೆ ಹಾನಿ ಮಾಡುತ್ತಿದೆ ಎನ್ನಲಾಗಿದೆ. ಇದೇ ಪಟ್ಟಿಯಲ್ಲಿ ಸಸ್ಯಹಾರಿ ಆಹಾರಗಳಾದ ಇಡ್ಲಿ ಮತ್ತು ರಾಜ್ಮಾ ಮಸಲಾವೂ ಸೇರಿವೆ. ಇಡ್ಲಿ 6ನೇ ಸ್ಥಾನದಲ್ಲಿದ್ದರೆ ರಾಜ್ಮಾ ಏಳನೇ ಸ್ಥಾನದಲ್ಲಿದೆ. ನಿರೀಕ್ಷಿಸಿದಂತೆ ಮಾಂಸವನ್ನು ಹೊಂದಿರುವ ಭಕ್ಷ್ಯಗಳು ಸಸ್ಯಾಹಾರಿ ಆಹಾರಗಳಿಗಿಂತಲೂ ಹೆಚ್ಚು ಜೀವವೈವಿಧ್ಯ ಹಾನಿಯ ಹೆಜ್ಜೆಗುರುತು ಹೊಂದಿವೆ. ಆದರೆ ಈ ಪಟ್ಟಿಯಲ್ಲಿ ಅಕ್ಕಿ ಹಿಟ್ಟಿನೊಂದಿಗೆ ಮಾಡಿದ ಇಡ್ಲಿ ಮತ್ತು ರಾಜ್ಮಾ ಆಹಾರ ಸೇರಿವುದು ಅಚ್ಚರಿ ಹುಟ್ಟಿಸಿದೆ.
ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯ ಜೈವಿಕ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಲೂಯಿಸ್ ರೋಮನ್ ಕರಾಸ್ಕೊ ಅವರು ಅಧ್ಯಯನದ ನೇತೃತ್ವ ವಹಿಸಿದ್ದರು ಮತ್ತು "ಭಾರತದಲ್ಲಿ ದ್ವಿದಳ ಧಾನ್ಯಗಳು ಮತ್ತು ಅಕ್ಕಿಯ ದೊಡ್ಡ ಪರಿಣಾಮವು ಆಶ್ಚರ್ಯಕರವಾಗಿದೆ. ನಮ್ಮ ವಿಶ್ಲೇಷಣೆಯಲ್ಲಿ, ಜೀವವೈವಿಧ್ಯದ ಹೆಜ್ಜೆಗುರುತು ಆ ಖಾದ್ಯವನ್ನು ಉತ್ಪಾದಿಸಲು ಕನಿಷ್ಠ ಭಾಗಶಃ ಪರಿಣಾಮ ಬೀರಿದ ಜಾತಿಗಳ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಜೀವವೈವಿಧ್ಯದ ಹೆಜ್ಜೆಗುರುತು ಆ ಆಹಾರ ತಿನ್ನುವ ಮೂಲಕ ನಾವು ಎಷ್ಟು ಜಾತಿಗಳನ್ನು ಅಳಿವಿನ ಹತ್ತಿರಕ್ಕೆ ತಳ್ಳುತ್ತಿದ್ದೇವೆ ಎಂಬ ಕಲ್ಪನೆಯನ್ನು ನೀಡುತ್ತದೆ'' ಎಂದಿದ್ದಾರೆ.
ಅಧ್ಯಯನವು ಪ್ರತಿಯೊಂದು 151 ಭಕ್ಷ್ಯಗಳನ್ನು ಮತ್ತು ಭಕ್ಷ್ಯಗಳ ಪದಾರ್ಥಗಳು ಜಾತಿಯ ಶ್ರೀಮಂತಿಕೆ ಮತ್ತು ಬೆಳೆ ಭೂಮಿಯಲ್ಲಿ ಕಾಡು ಸಸ್ತನಿಗಳು, ಪಕ್ಷಿಗಳು ಮತ್ತು ಉಭಯಚರಗಳ ವ್ಯಾಪ್ತಿಯ ಮೇಲೆ ಹೇಗೆ ಪ್ರಭಾವ ಬೀರಿದೆ ಎಂಬುದನ್ನು ಮೌಲ್ಯಮಾಪನ ಮಾಡಿದೆ. ಆಹಾರದ ಆಯ್ಕೆಯು ರುಚಿ, ಬೆಲೆ ಮತ್ತು ಆರೋಗ್ಯದಿಂದ ಪ್ರಭಾವಿತವಾಗಿರುತ್ತದೆ ಮತ್ತು ಜನರು ತಮ್ಮ ಆಹಾರ ಪದ್ಧತಿಗೆ ತಕ್ಕಂತೆ ಪರಿಸರ ಪ್ರಜ್ಞೆಯನ್ನು ಹೊಂದಲು ಸಹಾಯ ಮಾಡುವ ಗುರಿಯನ್ನು ಅಧ್ಯಯನವು ಹೊಂದಿದೆ.
ಇದರಲ್ಲಿ ಇಡ್ಲಿಯ ಮೂಲವಾದ ಅಕ್ಕಿ ಇಲ್ಲವೆ ಭತ್ತ ಎಷ್ಟು ರೀತಿಯಲ್ಲಿ ಪರಿಸರಕ್ಕೆ ಹಾನಿ ಮಾಡುತ್ತಿದೆ ಎಂಬುದನ್ನು ಅಧ್ಯಯನ ಮಾಡಲಾಗಿದೆ. ಭತ್ತ ಬೆಳೆಯಲು ಕಾಡು ನಾಶ ಹಾಗೂ ಆ ಪ್ರದೇಶಗಲ್ಲಿ ಅಳಿದ ಪ್ರಾಣಿ ಸಂಕುಲಗಳ ಸಂಖ್ಯೆಯನ್ನು ತಾಳೆ ಮಾಡಿ ಈ ವರದಿ ಸಿದ್ಧಪಡಿಸಲಾಗಿದೆ.
ಕೃಷಿಯನ್ನು ವಿಸ್ತರಿಸುವುದರಿಂದ, ಆವಾಸಸ್ಥಾನದ ನಷ್ಟದಿಂದಾಗಿ ಜೀವವೈವಿಧ್ಯಕ್ಕೆ ತೀವ್ರ ಹಾನಿಯಾಗಿದೆ. ಮಾಂಸಾಹಾರಿ ಆಹಾರ ಭಕ್ಷ್ಯಗಳು ಜಾನುವಾರು ಸಾಕಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಭಾರತವು ದ್ವಿದಳ ಧಾನ್ಯಗಳ ಅಗ್ರ ಉತ್ಪಾದಕರಲ್ಲಿ ಒಂದಾಗಿದೆ. ಜೈವಿಕ ವೈವಿಧ್ಯತೆಗೆ ಸಾಂಪ್ರದಾಯಿಕವಾಗಿ ಹಾಟ್‌ಸ್ಪಾಟ್‌ಗಳಾಗಿದ್ದ ಭೂಮಿಯಲ್ಲಿ ಅಕ್ಕಿ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಸಲಾಗುತ್ತದೆ, ಇದು ಜೀವವೈವಿಧ್ಯ ಹಾನಿಗೆ ಕಾರಣವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.



Click it and Unblock the Notifications