Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಐಸ್‌ಗೆ ಗ್ರೀನ್ ಚಟ್ನಿ, ಮಸಾಲೆ ಹಾಕಿ ಮಾಡುವ ರೆಸಿಪಿ: ಮಿಲಿಯನ್‌ಗಟ್ಟಲೆ ವ್ಯೂವ್ಸ್ ಪಡೆದ ವೀಡಿಯೋ
ಐಸ್ ಅನ್ನು ಈ ರೀತಿ ಸೇವಿಸಬಹುದು ಎಂದು ದೇವರಾಣೆಗೂ ನಮಗೆ ಗೊತ್ತಿರಲಿಲ್ಲ, ನಿಮಗೆ ಇದರ ರುಚಿ ಗೊತ್ತಿದೆಯೇ? ದಕ್ಷಿಣ ಭಾರತದವರಿಗೆ ಐಸ್ ಅನ್ನು ಈ ರೀತಿ ಸೇವಿಸಿ ಪರಿಚಯವಿಲ್ಲ, ಆದರೆ ಹಿಮಾಚಲದಲ್ಲಿ ವಾಸಿಸುತ್ತಿರುವವರೆ ಐಸ್ ಹೀಗೆ ತಿನ್ನಬಹುದು ಎಂದು ಗೊತ್ತಿರುತ್ತದೆ.
ಏಕೆಂದರೆ ಅಲ್ಲಿಯವರು ಐಸ್‌ನಿಂದಲೇ ಸಿಹಿ, ಖಾರ ಮಿಶ್ರಿತ ಚಾಟ್ ಮಾಡಿ ಸವಿಯುತ್ತಾರೆ... ಈ ಐಸ್ ಚಾಟ್ಸ್ ವೀಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯೂ ಮುಂದೆ ಈ ರೀತಿ ಐಸ್ ಚಾಟ್ಸ್ ಮಾಡುವ ಅಂಗಡಿಗಳು ಬಂದರೂ ಅಶ್ಚರ್ಯವಿಲ್ಲ.

ಆ ಹುಡುಗಿ ದೊಡ್ಡದೊಂದು ಐಸ್‌ಗೆಡ್ಡೆ ತರುತ್ತಾಳೆ, ಅದನ್ನು ನೋಡಿದಾಗ ನಾವು ಅದನ್ನು ಏಕೆ ತಂದಿರಬಹುದೆಂದು ಕುತೂಹಲದಿಂದ ನೋಡುತ್ತಿರುವಾಗ ಅವಳು ಅದನ್ನು ಸೌಟ್‌ನಿಂದ ಪುಡಿ ಮಾಡುತ್ತಾಳೆ, ಇಷ್ಟೆಲ್ಲಾ ಆದ ಮೇಲೆ ಮುಂದಿನ ಪಾಕ ವಿಧಾನ ನೋಡಿದಾಗ ಖಂಡಿತ ಆಶ್ಚರ್ಯವಾಗುತ್ತೆ, ಏಕೆಂದರೆ ಅವಳು ಹಸಿ ಮೆಣಸಿನಕಾಯಿ, ಹುಣಸೆ ಹಣ್ಣು, ಕೊತ್ತಂಬರಿ ಸೊಪ್ಪು ಎಲ್ಲಾ ಸೇರಿಸಿ ಮಾಡಿದ ಪೇಸ್ಟ್ ಹಾಕುತ್ತಾಳೆ, ನಂತರ ಅದಕ್ಕೆ ಮೆನಸಿನ ಪುಡಿ, ಅರಿಶಿಣ ಪುಡಿ, ಉಪ್ಪು, ಕಾಳು ಮೆಣಸಿನ ಪುಡಿ ಹೀಗೆ ನಾವು ಚಾಟ್ಸ್‌ಗೆ ಹಾಕುತ್ತೇವೆ ಅಲ್ವಾ ಆ ರೀತಿ ಹಾಕಿ ಸಕ್ಕರೆ ಹಾಕಿ ಸರ್ವ್ ಮಾಡಲಾಗುವುದು. ಇದೀಗ ಹಿಮಾಚಲದವರ ಫೇವರೆಟ್ ಐಸ್‌ಸ್ನ್ಯಾಕ್ಸ್ ಇತರ ರಾಜ್ಯದವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದನ್ನು ನೋಡಿ ಈ ಬೇಸಿಗೆಯಲ್ಲಿ ಈ ಚಾಟ್ಸ್ ಕೆಲವರು ಟ್ರೈ ಮಾಡಲೂಬಹುದು.
ಈ ವೀಡಿಯೋವನ್ನು @ruc.hhiiiiii ಎಂಬ ಹುಡುಗಿ 7 ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದೇ ತಡ ಇದೀಗ ಈ ವೀಡಿಯೋ ವೈರಲ್ ಆಗಿದೆ. ಭಾರತದ ಮಸಾಲೆ ಪದಾರ್ಥ ಸೇರಿಸಿ ಮಾಡುವ ಈ ಐಸ್‌ಗೆ ಖಾರ ಚಟ್ನಿಯನ್ನೂ ಕೂಡ ಸರ್ವ್ ಮಾಡುತ್ತಾರಂತೆ. ಕೆಲವರು ಐಸ್‌ಗೆ ಈ ರೀತಿ ಮಸಾಲೆ ಹಾಕಿ ಸವಿದರೆ ವಿಭಿನ್ನ ರುಚಿಯಲ್ಲಿ ಸೂಪರ್ ಆಗಿರುತ್ತದೆ ಎಂದು ಹೇಳುತ್ತಿದ್ದಾರೆ.
ನೈಸರ್ಗಿಕವಾದ ಮಂಜುಗೆಡ್ಡೆಯಿಂದ ಮಾಡುವುದು ಇರಬಹುದು
ಏಕೆಂದರೆ ಅವರು ಮಂಜುಗೆಡ್ಡೆಯಿಂದ ಒಂದು ಬ್ಯಾಗ್‌ನಲ್ಲಿ ತರುತ್ತಾರೆ, ಯಾವುದೋ ಐಸ್ ಆಗಿದ್ದರೆ ಫ್ರಿಡ್ಜ್‌ನಲ್ಲಿ ಐಸ್‌ಗೆಡ್ಡೆ ಮಾಡಿ ಬಳಸುತ್ತಿದ್ದರು, ಆದರೆ ಅವರು ಹೊರಗಿನಿಂದ ತಂದರು. ಹಿಮಾಚಲ ಪ್ರದೇಶದಲ್ಲಿ ತುಂಬಾನೇ ಹಿಮ ಬೀಳುತ್ತದೆ, ಹಾಗಾಗಿ ಇದು ನೈಸರ್ಗಿಕವಾದ ಮಂಜುಗೆಡ್ಡೆ ಎಂದು ಹೇಳಬಹುದು, ಈ ಮಂಜುಗೆಡ್ಡೆಗೆ ಅದರದ್ದೇ ಆದ ರುಚಿಯೂ ಇರಬಹುದು ಅಲ್ವಾ? ನಮಗೆ ಈ ರೀತಿ ನೈಸರ್ಗಿಕ ಮಂಜುಗೆಡ್ಡೆ ಸಿಗಲ್ಲ, ಫ್ರಿಡ್ಜ್‌ನಲ್ಲಿ ಪಾತ್ರೆಯಲ್ಲಿ ನೀರು ಇಟ್ಟು ಮಂಜುಗೆಡ್ಡೆ ಮಾಡಿ ಬಳಸಿದರೆ ಅದರ ರುಚಿ ಸೇಮ್ ಆಗಿರುತ್ತಾ? ಇದನ್ನು ಟೇಸ್ಟ್ ಮಾಡಿದವರೇ ಹೇಳಬೇಕು.
ಇದೊಂದು ಹಿಮಾಚಲ ಪ್ರದೇಶದ ಸಾಂಪ್ರದಾಯಕ ಚಾಟ್ಸ್ ಆಗಿದೆ, ಇದೀಗ ಈ ಚಾಟ್ಸ್ ಯಾರುಗಾದರೂ ಸರಿ ಒಮ್ಮೆ ಟ್ರೈ ಮಾಡುವ ಎಂದನಿಸದೆ ಇರಲ್ಲ. ಈ ರೀತಿಯ ವಿಶೇಷ ರೆಸಿಪಿಗಳು ಇನ್ನೂ ಹಲವು ಇವೆ, ಹಿಂದೆಯೆಲ್ಲಾ ಆ ಪ್ರದೇಶಕ್ಕೆ ಅಷ್ಟೇ ಸೀಮಿತವಾಗಿತ್ತು, ಆದರೆ ಈಗ ಸಾಮಾಜಿಕ ತಾಣಗಳ ಮೂಲಕ ಇತರರು ಈ ಬಗ್ಗೆ ತಿಳಿಯುವಂತಾಗಿದೆ. ಇತ್ತೀಚೆಗೆ ಚೀನಾದಲ್ಲಿ ಗ್ರಿಲ್ಡ್ ಐಸ್ ಮಾಡಲಾಗಿತ್ತು, ಅದು ಕೂಡ ಆನ್‌ಲೈನ್‌ನಲ್ಲಿ ತುಂಬಾನೇ ಗಮನ ಸೆಳೆದಿತ್ತು.
ಕೆಲವು ದಿನಗಳ ಹಿಂದೆ ಸ್ನೋ ಐಸ್‌ಕ್ರೀಮ್ ಕೂಡ ತುಂಬಾನೇ ಗಮನ ಸೆಳೆದಿತ್ತು. ಅದರಲ್ಲಿ ಮಂಜುಗೆಡ್ಡೆಯನ್ನು ಸಕ್ಕರೆ ಹಾಗೂ ಹಾಲು, ವೆನಿಲ್ಲಾ ಎಸೆನ್ಸ್ ಜೊತೆ ಮಿಕ್ಸ್ ಮಾಡಿ ಸವಿಯುವ ವೀಡಿಯೋ ಆಗಿತ್ತು, ಅದನ್ನು ನೋಡಿ ಜನರು ತುಂಬಾ ಮೆಚ್ಚಿಕೊಂಡಿದ್ದರು, ಹಾಲಿವುಡ್ ಸ್ಟಾರ್ ರೀಸೆ ವಿಥರ್‌ಸ್ಪೂನ್ ಕೂಡ ಮಂಜುಗೆಡ್ಡೆಯಿಂದ ಕ್ಯಾರಮಲ್ ಸಿರಪ್, ಚಾಕೋಲೆಟ್ ಸಿರಲ್, ಕೋಲ್ಡ್ ಬ್ರ್ಯುವ್ ಅಂತೆಲ್ಲಾ ಮಾಡಿದ್ದರು.



Click it and Unblock the Notifications
