Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ವಿಮಲ್ ಪಾನ್ ಮಸಾಲ ಪ್ರಿಯರಿಗೆ ಇಲ್ಲಿದೆ ಹೊಸ ಐಸ್ ಕ್ರೀಮ್..! ವಿಚಿತ್ರ ಫುಡ್ ಇದು..!
ಸಾಮಾಜಿಕ ಜಾಲತಾಣದಲ್ಲಿ ನಾವು ಚಿತ್ರ ವಿಚಿತ್ರ ಅಡುಗೆ, ರೆಸಿಪಿ ನೋಡುತ್ತಿದ್ದೇವೆ. ಕೆಲವರು ವಿಚಿತ್ರ ಅಡುಗೆಯ ವಿಡಿಯೋ ಮೂಲಕ ಸುದ್ದಿಯಾಗುತ್ತಾರೆ. ಇನ್ನು ಕೆಲವರು ವಿಚಿತ್ರ ಫುಡ್ ಸೇವಿಸುವ ಮೂಲಕವೂ ಸುದ್ದಿಯಾಗಿತ್ತಾರೆ. ಅಂದರೆ ವಿಚಿತ್ರ ಆಹಾರ ಮಾಡುವ ಭರದಲ್ಲಿ ಜನ ಎಂತಹ ಫುಡ್ ಸೇವಿಸುತ್ತಾರೆ ಎನ್ನುವ ಹಲವು ಉದಾಹರಣೆ ನಾವು ನೋಡಿದ್ದೇವೆ.
ಅದರಲ್ಲೂ ಚಾಕೊಲೆಟ್ ದೋಸೆ, ಟೀ ಕಾಫಿ ಹಾಕಿ ಇಡ್ಲಿ ಸೇವಿಸುವುದು, ಅನ್ನದ ಜೊತೆ ಟೀ ಬೆರೆಸಿ ಸೇವಿಸುವುದು, ಸಿಹಿ ಗೆಣಸಿಗೆ ಮೊಸರು ಮಿಕ್ಸ್ ಮಾಡಿ ಸವಿಯುವುದು, ಚಿಕ್ಕ ಹೂವಿನಲ್ಲಿ ಚಿಕನ್ ಫ್ರೈ ರೀತಿ ರೆಸಿಪಿ ರೆಡಿ ಮಾಡುವುದು, ಹೀಗೆ ಹೇಳುತ್ತಾ ಹೋದರ ಈ ಪಟ್ಟಿ ಬೆಳಯುತ್ತಲೇ ಹೋಗುತ್ತದೆ.

ಈ ರೀತಿಯ ಚಿತ್ರ ವಿಚಿತ್ರ ಆಹಾರ ಸೇವನೆ ವಿಡಿಯೋಗಳು ನಮಗೆ ಸಿಗುತ್ತಲೇ ಇರುತ್ತವೆ. ಹಾಗೆ ಇಲ್ಲೊಂದು ವಿಚಿತ್ರ ಆಹಾರದ ವಿಡಿಯೋ ಈಗ ವೈರಲ್ ಆಗಿದ್ದು, ಇದನ್ನು ಕಂಡ ಜನತೆ ಶಾಕ್‌ಗೆ ಒಳಗಾಗಿದ್ದಾರೆ. ಅದೇನೆಂದರೆ ತಂಪು ತಂಪುನ ಐಸ್ ಕ್ರೀಮ್‌ಗೆ ವಿಮಲ್ ಪಾನ್ ಮಸಾಲ ಬೆರೆಸಿ ಸೇವಿಸುತ್ತಿರುವುದು.
ಗುಟ್ಕಾ ಪ್ರಿಯರಿಗೆ ಹೇಳಿ ಮಾಡಿಸಿದ ಐಸ್ ಕ್ರೀಮ್ ಎಂದು ಈ ವಿಡಿಯೋ ವೈರಲ್ ಆಗುತ್ತಿದ್ದು, ಐಸ್ ಕ್ರೀಮ್ ಮೇಲೆ ಚಾಕೊಲೆಟ್ ಹಾಕುವಂತೆ ವಿಮಲ್ ಪಾನ್ ಮಸಾಲವನ್ನು ಹಾಕಲಾಗುತ್ತಿದೆ. ಪಿಯುಶ್ ಸಿಂಗ್ (@who_piyush98) ಎಂಬುವವರು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ರೀತಿಯ ವಿಚಿತ್ರ ಕಾಂಬಿನೇಷನ್ ಐಸ್ ಕ್ರೀಮ್ ಕಂಡ ಜನ ಆಘಾತಕ್ಕೊಳಗಾಗಿದ್ದಾರೆ.
ವೈರಲ್ ವಿಡಿಯೋದಲ್ಲಿ ಐಸ್ ಕ್ರೀಮ್ ವ್ಯಾಪಾರಿಯೊಬ್ಬರು ವಿಮಲ್ ಪಾನ್ ಮಸಾಲ ಬಳಸಿ ಐಸ್ ಕ್ರೀಮ್ ರೋಲ್ ತಯಾರಿಸುತ್ತಿದ್ದಾರೆ. ಐಸ್ ಕ್ರೀಮ್ ಹಾಕಿದ ಬಳಿಕ ಅದಕ್ಕೆ ವಿಮಲ್ ಪಾನ್ ಮಸಾಲ ಹಾಕಿ ಬಳಿಕ ಅದಕ್ಕೆ ರೋಲ್ ಮಾಡಲಾಗುತ್ತಿದೆ. ಬಳಿಕ ಈ ಐಸ್ ಕ್ರೀಮ್ ಅನ್ನು ಸೇವಿಸಲು ನೀಡಲಾಗುತ್ತಿದೆ.
ಆದ್ರೆ ಈ ಐಸ್ ಕ್ರೀಮ್ ಎಲ್ಲರಿಗೂ ಸೇವಿಸಲು ಸಾಧ್ಯವಾಗುವುದಿಲ್ಲ. ಕೇವಲ ವಿಮಲ್ ಪಾನ್ ಮಸಾಲ ಪ್ರಿಯರಿಗೆ ಮಾತ್ರ ಇದರ ರುಚಿ ಹಿಡಿಸಲಿದೆ. ಗುಟ್ಕಾ ಸೇವನೆ ತಿಳಿಯದವರು ಈ ಐಸ್ ಕ್ರೀಮ್ ರುಚಿ ಸವಿಯಲು ಸಾಧ್ಯವಿಲ್ಲ. ಈ ವಿಡಿಯೋ ವೈರಲ್ ಆದ ಬಳಿಕ ಹಲವರು ತಮಾಷೆಯ ಕಮೆಂಟ್‌ಗಳ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿರುವಂತೆ ಪಾನ್ ಮಸಾಲ ಪ್ರಿಯರು ಐಸ್‌ಕ್ರೀಮ್ ಸೇವಿಸಬಹುದು.
ಆದ್ರೆ ಹಲವರು ಇದರ ವಿರುದ್ಧ ಟೀಕೆಯನ್ನೂ ಮಾಡಿದ್ದಾರೆ, ಈ ಐಸ್ ಕ್ರೀಮ್ ನುಂಗಬೇಕಾ ಅಥವಾ ಉಗುಳಬೇಕಾ ಎಂಬ ಪ್ರಶ್ನೆ ಮಾಡಿದ್ದಾರೆ. ಏಕೆಂದರೆ ಪಾನ್ ಮಸಾಲ ಹೊಟ್ಟೆಯ ಒಳಗೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಹೀಗಾಗಿ ಈ ಐಸ್ ಕ್ರೀಮ್ ತಿನ್ನುವ ಬದಲು ಉಗಿಯಬೇಕಾಗುತ್ತದೆ. ನಾವು ಇಷ್ಟು ಹಣ ನೀಡಿ ಐಸ್ ಕ್ರೀಮ್ ಉಗಿಯಲು ಸಿದ್ಧರಿಲ್ಲ ಎಂದು ಕೆಲವರು ಹೇಳಿದ್ದಾರೆ.
ಮತ್ತೆ ಕೆಲವರು ಇದು ನಮ್ಮ ಗುಟ್ಕಾ ಸೇವಿಸುವ ಸ್ನೇಹಿತನಿಗೆ ಅರ್ಪಣೆ, ಇದೇನಾದರು ನಮ್ಮ ಏರಿಯಾದಲ್ಲಿ ಬಂದು ಬಿಟ್ಟರೆ ಆತ ಈ ಅಂಗಡಿಗೆ ಖಾಯಂ ಗ್ರಾಹಕನಾಗುತ್ತಾನೆ ಎಂದು ತಮಾಷೆಯ ಕಮೆಂಟ್‌ಗಳ ಮಾಡಿದ್ದಾರೆ. ಜೊತೆಗೆ ಈ ರೀತಿ ಬ್ಯುಸಿನೆಸ್ ಐಡಿಯಾ ಮಾಡಿದ ವ್ಯಾಪಾರಿಗೆ ಸಲಾಂ ಎನ್ನುತ್ತಿದ್ದಾರೆ.
ಇದಕ್ಕೂ ಮುನ್ನ ನಾವು ದೋಸೆಗೆ ಚಾಕೊಲೆಟ್ ಹಾಗೂ ಬಾಳೆಹಣ್ಣು ಮಿಕ್ಸ್ ಮಾಡಿ ಗ್ರಾಹಕರಿಗೆ ನೀಡುತ್ತಿದ್ದ ವಿಚಿತ್ರವಾದ ವಿಡಿಯೋ ನೋಡಿದ್ದೆವು. ಇದನ್ನು ಸವಿಯಲು ಗ್ರಾಹಕರು ಸಹ ದುಂಬಾಲು ಬಿದ್ದಿದ್ದರು. ಇತ್ತಿಚಿಗೆ ಈ ರೀತಿ ಚಿತ್ರ ವಿಚಿತ್ರ ರೆಸಿಪಿಯ ಊಟ, ತಿಂಡಿ ಸವಿಯುವುದು ಹಾಗೂ ರೆಡಿ ಮಾಡುವುದೇ ಒಂದು ಟ್ರೆಂಡ್ ಆಗಿಬಿಟ್ಟಿದೆ.



Click it and Unblock the Notifications
