Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಹೆಂಡತಿಯನ್ನು ಪೀಸ್ ಮಾಡಿ ಕುಕ್ಕರ್‌ನಲ್ಲಿ ಬೇಯಿಸಿ, ಒಣಗಿಸಿ, ಸುಟ್ಟ ಮಾಜಿ ಸೈನಿಕ: ಮೊದಲು ಬೀದಿ ನಾಯಿಯ ಮೃಲೆ ಪ್ರಯೋಗ
ಮನುಷ್ಯ ಇಷ್ಟೊಂದು ಕ್ರೂರಿಯಾಗಲು ಸಾಧ್ಯನಾ? ಅದೂ ತನ್ನ ಕೈ ಹಿಡಿದು ಸುಖದಲ್ಲಿ-ದುಃಖದಲ್ಲಿ ನಾನು ನಿನ್ನ ಜೊತೆಗಿರುತ್ತೇನೆ ಎಂದು ಬಂದ ಧರ್ಮ ಪತ್ನಿಯನ್ನ ಎಷ್ಟೊಂದು ಕ್ರೂರವಾಗಿ ಸಾಯಿಸಿದ್ದಾನೆ. ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ.ಅದು ಆತನೊಬ್ಬ ಮಾಜಿ ಸೈನಿಕ ಬೇರೆ, ಅಷ್ಟೊಂದು ಒಳ್ಳೆಯ ಹುದ್ದೆಯಲ್ಲಿ ಇದ್ದು ಬಂದವ ನಾಗರಿಕ ಸಮಾಜ ಬೆಚ್ಚಿ ಬೀಳಿಸುವಂಥ ನೀಚ ಕೃತ್ಯ ಮಾಡಿದ್ದಾನೆ.
ಜನರನ್ನು ಬೆಚ್ಚಿ ಬೀಳಿಸದ ಘಟನೆ ನಡೆದಿರುವುದು ವೆಂಕಟೇಶ್ವರ ಕಾಲೋನಿಯಲ್ಲಿರುವ ಮೀರಾಪತ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ. ನತದೃಷ್ಟೆಯನ್ನು ಪುಟ್ಟ ವೆಂಕಟ ಮಹಾದೇವಿ ಎಂದು ಗುರುತಿಸಲಾಗಿದೆ.

ಪತ್ನಿಯ ಶೀಲ ಶಂಕಿಸಿ ಭೀಕರವಾಗಿ ಕೊಂದಿದ್ದಾನೆ
ಈತ ತನ್ನ ಪತ್ನಿಯನ್ನು ಕ್ರೂರವಾಗಿ ಕೊಂದು ಕೊಲೆ ಕೇಸ್‌ನಿಂದ ಪಾರಾಗಲು ಮತ್ತಷ್ಟು ಕ್ರೂರಿಯಾಗಿ ಯೋಚಿಸಿ, ಕೆಯ ಮೃತ ದೇಹವನ್ನು ದುಂಡು-ದುಂಡಾಗಿ ಕತ್ತರಿಸಿ ದೊಡ್ಡ ಕುಕ್ಕರ್‌ನಲ್ಲಿ ಬೇಯಿಸಿ, ನಂತರ ಮಾಂಸವನ್ನು ಒಣಗಿಸಿ ಬಳಿಕ ಸುಟ್ಟು ಹಾಕಿದ್ದಾನೆ. ಈ ಪಾಪಿಯ ಹೆಸರು ಗುರುಮೂರ್ತಿ, ಈ ದಂಪತಿಗೆ ಮಕ್ಕಳಿಬ್ಬರಿದ್ದಾರೆ.
ಗುರುಮೂರ್ತಿ 13 ವರ್ಷಗಳ ಹಿಂದೆ ಮಾಧವಿಯನ್ನು ಮದುವೆಯಾಗಿದ್ದ, ಸೇನೆಯಿಂದ ನಿವೃತನಾದ ಬಳಿಕ ಕಾಂಚನ್‌ಬಾಗ್‌ನಲ್ಲಿರುವ ಡಿಆರ್ಡಿಒದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈತನಿಗೆ ವಿಪರೀತ ಸಂಶು ಬುದ್ಧಿ, ಈ ಕಾರಣಕ್ಕೆ ಪತ್ನಿಯ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ, ಇವರಿಬ್ಬರ ನಡುವಿನ ಸಂಬಂಧ ಸರಿಯಿಲ್ಲ ಎಂಬುವುದು ಮಾಧವಿ ಮನೆಯವರಿಗೂ ಗೊತ್ತಿತ್ತು. ಇಬ್ಬರು ಮಕ್ಕಳಿದ್ದಾರೆ, ಆತ ತಮ್ಮ ಮಗಳ ಜೊತೆ ಚೆನ್ನಾಗಿ ಬಾಳಬಹುದು ಎಂಬ ನಿರೀಕ್ಷೆಯಲ್ಲಿದ್ದರು, ಆಗಾಗ ಜಗಳವಾಗಿ ಮತ್ತೆ ಸರಿಯಾಗುತ್ತಿರುವುದರಿಂದ ಮನೆಯವರು ಕೂಡ ಇತ ಇಂಥದ್ದೊಂದು ಕ್ರೂರ ಕೃತ್ಯ ಎಸಗಬಹುದು ಎಂದು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ.
ಕೆಲ ದಿನಗಳ ಹಿಂದೆ ಕೂಡ ಈತ ಹೆಂಡತಿಯ ಜೊತೆ ಜಗಳವಾಡುತ್ತಾನೆ, ಅಲ್ಲದೆ ಈತ ಆಕಸ್ಮಿತವಾಗಿ ಹೊಡೆದಾಗ ಹೆಂಡತಿ ಸತ್ತಿಲ್ಲ, ಈತ ಪ್ರೀಪ್ಲ್ಯಾನ್ ಮಾಡಿ ಹೆಂಡತಿಯನ್ನು ಸಾಯಿಸಿದ್ದಾನೆ, ಏಕೆಂದರೆ ಈತ ಹೆಂಡತಿಯನ್ನು ಸಾಯಿಸುವ ಮುನ್ನ ಬೀದಿ ನಾಯಿಯನ್ನು ಕೊಂದು ಅದನ್ನು ಕಟ್ ಮಾಡಿ ಬೇಯಿಸಿ, ಸುಟ್ಟು ಹಾಕಿದ್ದ, ಅದರಂತೆಯೇ ಮಾಧವಿಯನ್ನು ಕ್ರೂರವಾಗಿ ಕೊಂದು ಕತ್ತರಿಸಿ ದೊಡ್ಡ ಕುಕ್ಕರ್‌ನಲ್ಲಿ ಬೇಯಿಸಿದ್ದಾನೆ, ನಂತರ ನರಮಾಂಸವನ್ನು ಒಣಸಿಗಿಸಿ ಸುಟ್ಟು ಹಾಕಿ, ಹೆಂಡತಿ ನನ್ನ ಮೇಲೆ ಕೋಪಗೊಂಡು ಮನೆ ಬಿಟ್ಟು ಹೋದಳು ಎಂದು ಕತೆ ಕಟ್ಟುತ್ತಾನೆ.
ಮಾಧವಿ ತಾಯಿ ಮಗಳು ಕಾಣುತ್ತಿಲ್ಲ ಎಂದು ಪೊಲೀಸರಿಗೆ ಜನವರಿ 18ಕ್ಕೆ ಕೊಡುತ್ತಾರೆ. ಪೊಲೀಸರು ಗುರುಮೂರ್ತಿಯ ಚಲನವಲನ ಗಮನಿಸಿದಾಗ ಈತನೇ ಏನೋ ಮಾಡಿದ್ದಾನೆ ಎಂಬ ಸಂಶಯ ಬಂದು ಪೊಲೀಸ್ ಸ್ಟೇಷನ್‌ಗೆ ಕರೆದುಕೊಂಡು ಬಂದು ಅವರದ್ದೇ ಆದ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ತಾನು ಮಾಡಿದ ಕೃತ್ಯ ಬಾಯಿ ಬಿಟ್ಟಿದ್ದಾನೆ.
ಈತ ಆಕೆಯನ್ನು ಕೊಂದು ಸಾಕ್ಷಿ ಸಿಗದಂತೆ ಏನು ಮಾಡಬೇಕು ಎಂಬುವುದಕ್ಕೆ ಯೂಟ್ಯೂಬ್ ಸರ್ಚ್ ಮಾಡಿದ್ದ, ನಂತರ ಬೀದಿ ನಾಯಿಯನ್ನು ಕೊಂದು ಪ್ರಯೋಗ ಮಾಡಿ ಬಳಿಕ ಅದೇ ರೀತಿ ಮಾಧವಿಯನ್ನು ಕೊಂದಿದ್ದಾನೆ, ಈ ಪ್ರಕರಣ ಇದೀಗ ದೇಶದ ಗಮನ ಸೆಳೆದಿದೆ.
ಹೊಂದಾಣಿಕೆಯಾಗುತ್ತಿಲ್ಲ ಎಂದರೆ ಬೇರೆಯಾಗಬಹುದಿತ್ತು, ಬದಲಿಗೆ ಎಷ್ಟೊಂದು ಕ್ರೂರವಾಗಿ ಸಾಯಿಸಿದ್ದಾನೆ
ಕೊಂದು ಫ್ರಿಡ್ಜ್‌ನಲ್ಲಿಡುವುದು, ಪತಿಯನ್ನು ಕೊಂದು ಹೋಮ ಕುಂಡದಲ್ಲಿ ಸುಟ್ಟು ಹಾಕಿದ್ದು, ಹೀಗೆ ಹಲವಾರು ಕ್ರೂರ ಕೃತ್ಯಗಳು ಬೆಳಕಿಗೆ ಬಂದಿದೆ, ಕೊಲೆ ಮಾಡಿದವ ಎಷ್ಟೇ ಬುದ್ಧಿವಂತಿಕೆ ತೋರಿದರೂ ಸಿಕ್ಕಾಕಿಕೊಂಡೇಕೊಳ್ಳುತ್ತಾನೆ. ಇಬ್ಬರ ನಡುವೆ ಹೊಂದಾಣಿಕೆಯಾಗುತ್ತಿಲ್ಲ ಎಂದಾದರೆ ಬೇರೆಯಾಗಿ ಬದುಕಬೇಕು, ಈ ರೀತಿ ಪ್ರಾಣ ತೆಗೆಯುವ ದುಷ್ಟ ಆಲೋಚನೆ ಮಾಡಬಾರದು ಅಲ್ವಾ?



Click it and Unblock the Notifications
