Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಪತಿ ತನಗಿಂತ ಸಾಕಿದ ಬೆಕ್ಕನ್ನೇ ಕಾಳಜಿಯಿಂದ ನೋಡ್ತಾನೆ: ಕೋರ್ಟ್ ಮೆಟ್ಟಿಲೇರಿದ ಮಹಿಳೆ..!
ಕೌಟುಂಬಿಕ ಕಲಹ ಹಾಗೂ ವೈಮನಸ್ಸು ಯಾವ ಕಾರಣಕ್ಕೆ ಉಂಟಾಗುತ್ತದೆ ಅನ್ನೋದನ್ನ ಊಹಿಸಲು ಸಹ ಸಾಧ್ಯವಾಗೋದಿಲ್ಲ. ಏಕೆಂದರೆ ಕೆಲವೊಮ್ಮೆ ನಾವುಂದುಕೊಂಡ ಕಾರಣಕ್ಕಿಂತಲೂ ವಿಚಿತ್ರವಾದ ಹಾಗೆ ಅತ್ಯಂತ ತಮಾಷೆಯಾದ ಕಾರಣಗಳಿಗೆ ಉಂಟಾಗುವುದನ್ನು ನಾವು ನೋಡಬಹುದು. ಅದರಲ್ಲೂ ಇತ್ತೀಚಿಗೆ ಚಿಕ್ಕ ಪುಟ್ಟ ವಿಚಾರಕ್ಕೂ ವಿಚ್ಛೇದನ ಕೋರ್ಟ್ ಕೇಸ್‌ನಂತಹ ಸುದ್ದಿಗಳು, ಘಟನೆಗಳು ನಡೆಯುವುದು ಸಾಮಾನ್ಯ ಎನ್ನುವಂತಾಗಿದೆ.
ಆದ್ರೆ ಇಲ್ಲೊಂದು ಪ್ರಕರಣ ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಪತಿ ಪತ್ನಿ ನಡುವಿನ ಈ ಕೋರ್ಟ್ ಪ್ರಕರಣ ಎಲ್ಲರ ಗಮನ ಸೆಳೆದಿರುವುದು ಮಾತ್ರವಲ್ಲ ಈ ವಿಚಾರ ಕೋರ್ಟ್ ಮೆಟ್ಟಿಲೇರಿರುವುದು ಅಚ್ಚರಿಗೂ ಕಾರಣವಾಗಿದೆ. ಪತಿ ತನಗಿಂತ ಹೆಚ್ಚಾಗಿ ಸಾಕಿದ ಬೆಕ್ಕನ್ನೇ ಹೆಚ್ಚು ಮುದ್ದಿಸುತ್ತಾನೆ. ಅದನ್ನೇ ಪ್ರೀತಿಸುತ್ತಾನೆ ಎಂದು ಪತ್ನಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಬೆಂಗಳೂರಿನ ವ್ಯಕ್ತಿಯ ವಿರುದ್ಧದ ಈ ಪ್ರಕರಣ ಸಂಬಂಧ ಹೈಕೋರ್ಟ್ ವಿಚಾರಣೆ ನಡೆಸಿದ್ದು, ಮುಂದಿನ ವಿಚಾರಣೆಗೆ ದಿನಾಂಕ ನಿಗದಿ ಮಾಡಿದೆ. ಆರಂಭದಲ್ಲಿ ಕ್ರೌರ್ಯ ಮತ್ತು ವರದಕ್ಷಿಣೆ ಬೇಡಿಕೆಗಳಿಗಾಗಿ ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಆರೋಪಗಳನ್ನು ಒಳಗೊಂಡಿದ್ದ ಪ್ರಕರಣವು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಇದರಲ್ಲಿ ಪ್ರಮುಖ ಆರೋಪವಾಗಿ ಈದ ಬೆಕ್ಕನ್ನು ಹೆಚ್ಚು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ವಿಚಾರಕ್ಕೆ ಆಕೆ ತಗಾದೆ ತೆಗೆದಿದ್ದಾಳೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪ್ರಕಾರ ಬೆಕ್ಕಿನೊಂದಿಗೆ ಆತ ಅತ್ಯಂತ ಗಮನವಿಡುವುದು ಆಗಾಗ ಇಬ್ಬರ ನಡುವೆ ಗಲಾಟೆಗಳಿಗೆ ಕಾರಣವಾಗುತ್ತಿತ್ತು. ಹಾಗೆ ಬೆಕ್ಕು ಪತ್ನಿಯ ಮೇಲೆ ದಾಳಿ ಮಾಡುವುದು ಪರಚುವುದು ಕೂಡ ನಡೆಯುತ್ತಿತ್ತು. ಈ ಸಂಬಂಧ ಆಕೆ ಕೋರ್ಟ್ ಮೆಟ್ಟಿಲೇರಿದ್ದಾಳೆ ಎಂದು ತಿಳಿಸಿದ್ದಾರೆ.
ಆದ್ರೆ ಇಂತಹ ಆರೋಪಗಳಲ್ಲಿ ಸಾಕ್ಷಿ ಒದಗಿಸುವುದು ಹಾಗೆ ಪುರಾವೆಗಳ ಮುಂದಿಡುವುದು ಕಷ್ಟಸಾಧ್ಯ. ಪತ್ನಿಯ ಆರೋಪಗಳು IPC 498A ಯ ಕಾನೂನು ಮಿತಿಯನ್ನು ಪೂರೈಸಿಲ್ಲ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಸ್ಪಷ್ಟಪಡಿಸಿದರು, ವಿವಾದವು ಯಾವುದೇ ಕ್ರಿಮಿನಲ್ ದುರ್ನಡತೆಗಿಂತ ಸಣ್ಣ ಕೌಟುಂಬಿಕ ಸಮಸ್ಯೆಗಳಿಂದ ಉದ್ಭವಿಸಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಹಾಗೆ ಬೆಕ್ಕನ್ನು ಆತನಿಂದ ದೂರ ಮಾಡಲು ಯತ್ನಿಸಿದಾಗಲೆಲ್ಲ ಅದು ದಾಳಿ ಮಾಡುತ್ತಿತ್ತು, ಇದಕ್ಕೆ ಪತಿಯ ಕುಮ್ಮಕ್ಕು ಎನ್ನುವಂತೆ ಪತ್ನಿ ದೂರಿನಲ್ಲಿ ವಿವರಿಸಿದ್ದಾಳೆ.
ಸದ್ಯ ಈ ಘಟನೆ ಹೈಕೋರ್ಟ್‌ನಲ್ಲಿಯೂ ಅಚ್ಚರಿಗೆ ಕಾರಣವಾಗಿತ್ತು, ಎಲ್ಲರು ಈ ರೀತಿ ಕೌಟುಂಬಿಕ ವಿಚಾರಗಳಲ್ಲಿ ಹೆಚ್ಚು ಗಂಭೀರತೆ ಇಲ್ಲದಿರುವುದರಿಂದ ಮುಂದಿನ ವಿಚಾರಣೆ ಕಾಯ್ದಿರಿಸಿದ್ದು ಎಲ್ಲರ ಗಮನ ಈ ವಿಚಾರಣೆ ದಿನಾಂಕದತ್ತ ನೆಟ್ಟಿದೆ. ಸದ್ಯ ಪತಿ ಪತ್ನಿಯ ನಡುವೆ ಸಾವಿರಾರು ಸಮಸ್ಯೆಗಳಿದ್ದರೂ ಇಂತಹ ಸಮಸ್ಯೆಗಳಿಗೆ ಕೋರ್ಟ್ ಮೆಟ್ಟಿಲೇರಿವುದಕ್ಕೆ ಎಲ್ಲರು ಅಚ್ಚರಿ ಹೊರಹಾಕಿದ್ದಾರೆ.
ಈ ರೀತಿಯ ಹಲವು ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿರುವುದನ್ನು ನಾವು ಇಲ್ಲಿ ನೆನಪು ಮಾಡಿಕೊಳ್ಳಬಹುದು. ಇತ್ತೀಚಿಗೆ ಕೊಲ್ಕತ್ತಾದಲ್ಲಿ ನಡೆದಿದ್ದ ಘಟನೆ ಕೂಡ ಇದೇ ರೀತಿ ಇತ್ತು. ಅಲ್ಲಿ ಪತಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ತವರು ಮನೆಗೆ ಬಿಟ್ಟು ಬಂದು ಆಕೆ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡದ್ದ ಆದ್ರೆ ಕೋರ್ಟ್ ಆತನಿಗೆ 10000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿತ್ತು.
ಇನ್ನು ಮಹಾರಾಷ್ಟ್ರದಲ್ಲೊಬ್ಬ ತನ್ನ ಪತ್ನಿ ಒಬ್ಬಳೆ ವಾಕಿಂಗ್ ಹೋಗುತ್ತಾಳೆ ಎಂಬ ಕಾರಣ ನೀಡಿ ತಲಾಖ್ ನೀಡಿರುವ ಘಟನೆ ಕೂಡ ಇಲ್ಲಿ ನೆನೆಯಬಹುದು. ಆದ್ರೆ ತಲಾಖ್ ನೀಡುವುದು ಶೀಕ್ಷಾರ್ಹ ಅಪರಾಧವಾಗಿದ್ದು, ಈ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



Click it and Unblock the Notifications
