Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಆನ್‌ಲೈನ್ ಫುಡ್ ಯಡವಟ್ಟು: ಕೋನ್ ಐಸ್ ಕ್ರೀಮ್‌ನಲ್ಲಿ ಮನುಷ್ಯರ ಬೆರಳು ಪತ್ತೆ.!
ನೀವು ಆನ್‌ಲೈನ್‌ನಲ್ಲಿ ಯಾವುದಾದ್ರು ಫುಡ್ ಆರ್ಡರ್ ಮಾಡಿದಾಗ ಅದರಲ್ಲಿ ವ್ಯತ್ಯಾಸ ಆಗುವುದು ತಪ್ಪಾಗುವುದು ಸಹಜ, ಕೆಲವೊಮ್ಮೆ ನೀವು ವೆಚ್ ಆರ್ಡರ್ ಮಾಡಿದರೆ ನಾನ್‌ವೆಜ್ ಬರುವುದು, ನಾನ್‌ವೆಜ್ ಮಾಡಿದಾಗ ವೆಜ್ ಡೆಲಿವರಿ ಆಗುವ ಪ್ರಸಂಗಗಳು ನಡೆಯುತ್ತಲೇ ಇರುತ್ತದೆ. ಇದರ ಜೊತೆಗೆ ಆನ್‌ಲೈನ್ ಆರ್ಡರ್ ಮಾಡಿದಾಗ ಆ ಫುಡ್‌ನಲ್ಲಿ ಹುಳುಗಳು ಪತ್ತೆಯಾಗುವ ಘಟನೆ ಸಹ ವರದಿಯಾಗುತ್ತಿದ್ದವು.
ಆದ್ರೆ ಈಗ ವರದಿಯಾಗಿರುವ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ ಏಕೆಂದರೆ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದರೆ ಅದರಲ್ಲಿ ಮನುಷ್ಯರ ಹೆಬ್ಬೆರಳು ಪತ್ತೆಯಾಗಿರುವ ಆಘತಕಾರಿ ಘಟನೆ ನಡೆದಿದೆ. ಮುಂಬೈನ ಮಲಾಡ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವ್ಯಕ್ತಿ ಆರ್ಡರ್ ಮಾಡಿದ್ದ ಐಸ್ ಕ್ರೀಮ್‌ನಲ್ಲಿ ಮನುಷ್ಯರ ಹೆಬ್ಬೆರಳು ಪತ್ತೆಯಾಗಿದೆ.

ಮಹಾರಾಷ್ಟ್ರದ ಮುಂಬೈನ ಮಲಾಡ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕೋನ್ ಐಸ್ ಕ್ರೀಂನೊಳಗೆ ಮಾನವ ಬೆರಳನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಓರ್ಲೆಮ್ ಬ್ರಾಂಡನ್ ಸೆರಾವೊ (27) ಎಂಬ ವೈದ್ಯರೊಬ್ಬರು ತಮ್ಮ ಸಹೋದರಿ ಬುಧವಾರ ಹೋಮ್ ಡೆಲಿವರಿ ಆ್ಯಪ್‌ನಿಂದ ಕೋನ್ ಐಸ್‌ಕ್ರೀಮ್ - ಯುಮ್ಮೋ ಬಟರ್‌ಸ್ಕಾಚ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಅದರಲ್ಲಿ ಬೆರಳು ಪತ್ತೆಯಾಗಿದ್ದು ಅವರು ಶಾಕ್ ಆಗಿದ್ದಾರೆ.
ಈ ಮೊದಲು ಆಹಾರ ಪದಾರ್ಥಗಳಲ್ಲಿ ಸಣ್ಣ ಸಣ್ಣ ಕೀಟಗಳಾದ, ಜಿರಳೆ, ಹುಳುಗಳು ಪತ್ತೆಯಾಗಿದ್ದವು ಹೆಚ್ಚೆಂದರೆ ಹಲ್ಲಿ, ತಲೆ ಕೂದಲು, ಉಗುರು ಪತ್ತೆಯಾದ ಘಟನೆಗಳು ನಡೆದಿದ್ದವು, ಆದ್ರೆ ಈಗ ಮನುಷ್ಯರ ಹೆಬ್ಬೆರಳು ಸಹ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ವೈದ್ಯರು ಆ ಐಸ್ ಕ್ರೀಮ್ ಆರ್ಡರ್ ಮಾಡಿ ಸವಿಯಲು ಆರಂಭಿಸಿದ್ದಾರೆ. ಆದರೆ ಒಳಗೆ 2 ಸೆಂ.ಮೀಟರ್ ಉದ್ದದ ಮಾನವನ ಹೆಬ್ಬರಳು ಕಂಡು ಶಾಕ್ ಆಗಿದ್ದಾರೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಮಲಾಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಐಸ್ ಕ್ರೀಮ್ ತಯಾರಿಸಿದ ಸ್ಥಳದ ಬಗ್ಗೆಯೂ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
"ಇದು ಯಾರ ಬೆರಳು ಎಂದು ಕಂಡುಹಿಡಿಯಲು ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ. ಎಫ್ಐಆರ್ ದಾಖಲಿಸಲಾಗಿದೆ ಮತ್ತು ಬೆರಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ" ಎಂದು ಅಧಿಕಾರಿ ಹೇಳಿದ್ದಾರೆ.
ಈ ಕುರಿತು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ವೊಂದನ್ನು ಅವರು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಮಂದಿ ಅಕ್ಷರಶಃ ಶಾಕ್‌ಗೆ ಒಳಗಾಗಿದ್ದಾರೆ. ತಿನ್ನುವ ಆಹಾರದಲ್ಲಿ ಮುನುಷ್ಯರ ಬೆರಳು ಸಿಗುತ್ತಿದೆ ಅಂದರೆ ಅಲ್ಲಿ ಏನು ನಡೆದಿದೆ ಎಂಬುದನ್ನು ಅರ್ಥೈಸಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಆದ್ರೆ ಈ ರೀತಿ ಮನುಷ್ಯರ ದೇಹದ ಅಂಗ ಆಹಾರ ಪದಾರ್ಥದಲ್ಲಿ ಸಿಕ್ಕರೆ ಕೊಲೆಯಾಗಿದೆ ಅಂತಲೋ ಅಥವಾ ಇನ್ನೇನೋ ನಡೆದಿದೆ ಎಂದು ಊಹಿಸಲಾಗುತ್ತದೆ. ಆದರೆ ಅದು ಮನುಷ್ಯರ ನಿಜವಾದ ಬೆರಳು ಎಂಬುದು ತನಿಖೆ ಮೂಲಕ ತಿಳಿದುಬರಬೇಕಿದೆ. ಅದು ಯಾವುದಾದರು ಆಟಿಕೆಯ ಅಥವಾ ಗೊಂಬೆಯ ಬೆರಳು ಸಹ ಆಗಿರಬಹುದು.
ಆದ್ರೆ ಈ ಘಟನೆ ಕಂಡು ಆಹಾರ ಪ್ರಿಯರು ಮಾತ್ರ ಆಘಾತಕ್ಕೊಳಗಾಗಿರುವುದು ಸತ್ಯ. ಈ ಆನ್‌ಲೈನ್ ಫುಡ್ ಆರ್ಡರ್ ಮಾಡುವಾಗ ಗ್ರಾಹಕರ ರಿವೀವ್ ಹಾಗೂ ರೇಟಿಂಗ್ ನೋಡುವುದು ಉತ್ತಮ. ಅದರಲ್ಲೂ ಯಾವ ಹೋಟೆಲ್ ಅಂಗಡಿ ಕುರಿತು ನಿಮಗೆ ತಿಳಿದಿರುತ್ತದೆಯೋ ಅಲ್ಲಿಂದಲೇ ಆರ್ಡರ್ ಮಾಡುವುದು ಮತ್ತು ಒಳ್ಳೆಯದು. ಇಲ್ಲದಿದ್ದರೆ ಇಂತಹ ಆನ್‌ಲೈನ್‌ನಿಂದ ಫುಡ್ ಆರ್ಡರ್ ಮಾಡುವ ಅಭ್ಯಾಸ ಬಿಡುವುದು ಮತ್ತಷ್ಟು ಉತ್ತಮ. ನೀವೇ ನೇರವಾಗಿ ಹೋಗಿ ತಿಂಡಿ ಸವಿಯಬಹುದು. ಆದರೆ ಅನಿವಾರ್ಯ ಸಮಯದಲ್ಲಿ ಈ ರೀತಿ ಮಾಡಲೇಬೇಕಾಗುತ್ತದೆ.



Click it and Unblock the Notifications
