Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಗಣೇಶೋತ್ಸವ ಹುಟ್ಟಿದ್ದು ಹೇಗೆ? ಈ ಹಬ್ಬ ಸಾರ್ವಜನಿಕವಾಗಿ ಆಚರಿಸೋದು ಏಕೆ ಗೊತ್ತಾ?
ವಿನಾಯಕ ಚತುರ್ಥಿ ಸಮೀಪಿಸುತ್ತಿದೆ. ಗಣೇಶನ ಹಬ್ಬ ಅಂದ್ರೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸಂತೋಷದಿಂದ, ಸಡಗರದಿಂದ ಸಂಭ್ರಮಿಸುವ ಹಬ್ಬವಿದು. ಮನೆ ಮನೆಯಲ್ಲೂ ಗಣೇಶ ಹುಟ್ಟಿಕೊಳ್ಳುತ್ತಾನೆ. ಎಲ್ಲರ ಮನೆಯೂ ಪೂಜೆ, ಗಣೇಶನ ಸ್ತುತಿಯಲ್ಲಿ ಮುಳುಗಿರುತ್ತದೆ. ಇನ್ನು ಇಡೀ ಊರು ಗಣೇಶನನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡುತ್ತೆ, ಮೆರವಣಿಗೆ ನಡೆಯುತ್ತೆ.
ಭಾರತದ ಮೂಲೆ ಮೂಲೆ ಸಣ್ಣ ಸಣ್ಣ ಹಳ್ಳಿಯಲ್ಲೂ ಸಾರ್ವಜನಿಕ ಗಣೇಶೋತ್ಸವವನ್ನ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಹತ್ತು ದಿನಗಳ ಕಾಲ ಅಥವಾ ಕೆಲವು ಕಡೆ 30 ದಿನಗಳವರೆಗೆ ನಡೆಯುತ್ತದೆ. ಬಳಿಕ ಗಣೇಶ ಮೂರ್ತಿಯ ನಿಮಜ್ಜನದ ಮೂಲಕ ಕೊನೆಗೊಳ್ಳುತ್ತದೆ. ಈ ವರ್ಷ ಸೆಪ್ಟೆಂಬರ್ 7ರಂದು ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ.

ಇನ್ನು ಗಣೇಶ ಹಬ್ಬ ಏಕೆ ಆಚರಿಸಲಾಗುತ್ತದೆ ಎಂಬ ಕುರಿತಂತೆ ಹಿಂದೂ ಪುರಾಣಗಳ ಪ್ರಕಾರ ಒಂದು ಕಥೆಯೇ ಇದೆ. ಈ ಹಬ್ಬವೂ ಗಣೇಶನ ಪುನರ್‌ಜನ್ಮದ ಕುರಿತಾದ ಕತೆಯನ್ನ ಒಳಗೊಂಡಿದೆ. ಹಿಂದೂ ಪುರಾಣಗಳ ಪ್ರಕಾರ, ಶಿವನ ಪತ್ನಿಯಾದ ಪಾರ್ವತಿ ದೇವಿಯು ತನ್ನ ಸ್ನಾನಕ್ಕೆ ಬಳಸಿದ ಅರಿಶಿನದ ಹಿಟ್ಟಿನಿಂದ ಗಣೇಶನನ್ನು ಸೃಷ್ಟಿಸಿದಳಂತೆ. ಅವಳು ಈ ಆಕೃತಿಗೆ ಜೀವ ನೀಡಿದಳು. ಏಕೆಂದರೆ ಆಕೆಯನ್ನು ಕಾಯಲು ಒಬ್ಬ ನಂಬಿಕಸ್ತ ವ್ಯಕ್ತಿ ಬೇಕಾಗಿತ್ತಂತೆ. ಹೀಗಾಗಿ ಗಣೇಶನನ್ನು ಸೃಷ್ಟಿಸಿದಳು ಎಂದು ಹೇಳಲಾಗುತ್ತದೆ.
ಬಳಿಕ ತನ್ನ ಸ್ನಾನ ಗ್ರಹದ ಹೊರಗೆ ಆತನ ನಿಲ್ಲಿಸಿ ಯಾರಿಗೂ ಒಳಗೆ ಬಾರದಂತೆ ಕಾಯಲು ಹೇಳಿದಳಂತೆ. ಈ ವೇಳೆ ಶಿವ ಅಲ್ಲಿಗೆ ಬಂದಾಗ ಗಣೇಶನು ಆತನ ತಡೆದಿದ್ದನಂತೆ. ಇದರಿಂದ ಕೋಪಗೊಂಡ ಶಿವ ಗಣೇಶನ ಶಿರಚ್ಛೇದ ಮಾಡಿದನು. ಆದರೆ ಪಾರ್ವತಿ ಆತನನ್ನು ಬದುಕಿಸಬೇಕು ಎಂದು ಕೇಳಿಕೊಂಡಾಗ ಶಿವ ಪ್ರಾಣಿಯ ತಲೆ ತರಲು ಹೇಳಿದಾಗ ಅನುಯಾಯಿಗಳು ಆನೆಯ ತಲೆ ತಂದು ನೀಡಿ ಗಣೇಶನನ್ನು ಬದುಕಿಸಿದರಂತೆ ಎಂದು ಪುರಾಣದ ಕಥೆ ಹೇಳುತ್ತೆ.
ಸಾರ್ವಜನಿಕ ಗಣೇಶೋತ್ಸವ ಆರಂಭವಾಗಿದ್ದು ಹೇಗೆ?
ನಿಮಗೆ ಗಣೇಶನ ಹಬ್ಬ ಆರಂಭಗೊಂಡಿದ್ದು ಹೇಗೆ ಎಂಬ ಕುರಿತು ತಿಳಿದಿರಬಹುದು. ಬಾಲಗಂಗಾಧರ ತಿಲಕ್ ಅವರು ಮೊದಲು ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಕರೆ ನೀಡಿದ್ದರು ಎಂಬುದು ನಿಮಗೆ ತಿಳಿದಿರಬಹುದು. ಆದ್ರೆ ಇದರ ಹಿಂದೆ ನಡೆದಿದ್ದ ದೊಡ್ಡ ಕಥೆಗಳು, ಪ್ರಸಂಗಗಳ ಕುರಿತು ನಿಮಗೆ ಗೊತ್ತಾ?
1893 ರ ಮೊದಲು, ಈ ಹಬ್ಬವು ಒಂದು ದಿನ ಮಾತ್ರವೇ ಆಚರಿಸಲಾಗುತ್ತಿತ್ತು. ಆದ್ರೆ ಅದನ್ನು ಮೇಲ್ಜಾತಿಯ ಮನೆಯಲ್ಲಿ ಒಂದು ದಿನದ ಹಬ್ಬವಾಗಿ ಮಾತ್ರ ಆಚರಿಸಲಾಗುತ್ತಿತ್ತು. ಆದ್ರೆ ಹಬ್ಬದ ದಿನ ಯಾರ ಮನೆಯಲ್ಲು ಪೂಜೆ ನಡೆಯುತ್ತೋ ಅವರ ಮನೆಯಲ್ಲಿ ಊಟ, ತಿಂಡಿ ನೀಡುವ ಕಾರ್ಯವಾಗುತ್ತಿತ್ತು, ಅಕ್ಕ ಪಕ್ಕದ ಮನೆಯವರ ಕರೆದು ಊಟ ನೀಡುತ್ತಿದ್ದರು.
ಈ ನಡುವೆ ಲೋಕಮಾನ್ಯ ಎಂದು ಬಿರುದು ಪಡೆದಿದ್ದ ಬಾಲಗಂಗಾಧರ ತಿಲಕ್ ಅವರು ತಮ್ಮ ಭಾಷಣಗಳು, ಪತ್ರಗಳ ಮೂಲಕ ಬ್ರಿಟಿಷರಿಗೆ ತಲೆನೋವಾಗಿದ್ದರು. ಆದ್ರೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಹುರಿದುಬ್ಬಿಸುವ ಕಾರ್ಯ ಮಾಡಬೇಕಿತ್ತು. ಒಗ್ಗಟ್ಟು ಇಲ್ಲದ ಹೋರಾಟಗಾರರ ಪಡೆಗೆ ಜೀವ ತುಂಬುವ ಕಾರ್ಯ ಮಾಡಬೇಕು ಎಂದು ಬಾಲಗಂಗಾಧರ ತಿಲಕ್ ಅವರು ಯೋಚಿಸಿದ್ದರು.
ಹೀಗಾಗಿ ಈ ಗಣೇಶೋತ್ಸವವನ್ನು ಸಾರ್ವಜನಿಕ ಹಬ್ಬವಾಗಿ ಮಾಡಬೇಕು ಎಂದುಕೊಂಡರು. 1893ರಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಗಣೇಶೋತ್ಸವ ಮಾಡುವುದಾಗಿ ಬಿತ್ತಿ ಪತ್ರಗಳ ಹಂಚಿದರು. ಇದು ಬ್ರಿಟೀಷರ ಗಮನಕ್ಕೂ ಬಂದಿತ್ತು. ಆದ್ರೆ ಗಣೇಶೋತ್ಸವ ಸ್ವಾತಂತ್ರ್ಯದ ಕಿಡಿಯಾಗಿ ಬದಲಾಗುತ್ತದೆ ಎಂಬ ಸಣ್ಣ ಅನುಮಾನವೂ ಬ್ರಿಟೀಷರಿಗೆ ಇರಲಿಲ್ಲ. ಈ ಗಣೇಶೋತ್ಸವದಲ್ಲಿ ತಿಲಕ್ ಅವರು ಮಾಡಿದ ಭಾಷಣದಿಂದ ಸ್ವಾತಂತ್ರ್ಯದ ಕಿಡಿ ಹಬ್ಬಿತ್ತು.
ಇದಿಷ್ಟೇ ಅಲ್ಲ ತಿಲಕ್ ಅವರು 1896ರಲ್ಲಿ ಶಿವಾಜಿ ಉತ್ಸವ ಸಹ ಆರಂಭಿಸಿದರು. ಈಗಲೂ ಮಹಾರಾಷ್ಟ್ರದಲ್ಲಿ ಶಿವಾಗಿ ಉತ್ಸವ ನಡೆಯುವುದನ್ನು ನಾವು ನೋಡಬಹುದು. ಈ ಎರಡು ಉತ್ಸವಗಳು ಸ್ವಾತಂತ್ರ್ಯ ಹೋರಾಟದಲ್ಲಿ ಇಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಎಂಬುದನ್ನು ಖುದ್ದು ತಿಲಕ್ ಅವರು ಸಹ ಅಂದುಕೊಂಡಿರಲಿಲ್ಲ.



Click it and Unblock the Notifications
