Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ವರ್ಷಾಂತ್ಯ ಸಂಭವಿಸಲಿರುವ ಕಂಕಣ ಸೂರ್ಯಗ್ರಹಣದ ವಿಶೇಷತೆ ಏನು?
ಇಡೀ ವಿಶ್ವವು 2019ಕ್ಕೆ ವಿದಾಯ ಹೇಳಲು ಸಿದ್ಧವಾಗಿದೆ, ಆದರೆ ವಿದಾಯ ಹೇಳುವ ಮುನ್ನ ಈ ವರ್ಷದ ಕೊನೆಯಲ್ಲಿ ಖಗೋಳದಲ್ಲಿ ನಡೆಯುವ ಮತ್ತೊಂದು ಸೌರ ವಿಸ್ಮಯಕ್ಕೆ ಸಾಕ್ಷಿಯಾಗಲಿದ್ದೇವೆ. ಕ್ರಿಸ್ಮಸ್ ಆಚರಣೆಯ ಮಾರನೇಯ ದಿನ ಅಂದರೆ ಡಿಸೆಂಬರ್ 26ರಂದು ನಡೆಯುವ ಸೂರ್ಯಗ್ರಹಣವು ಅಪರೂಪದ ಸೂರ್ಯಗ್ರಹಣವಾಗಿದ್ದು ಇದನ್ನು ಕಂಕಣ ಸೂರ್ಯಗ್ರಹಣ ಎಂದು ಕರೆಯಲಾಗುವುದು. ಇದು ಖಗೋಳ ವಿಜ್ಞಾನಿಗಳ ಹಾಗೂ ಧಾರ್ಮಿಕ ವಿಧಿ ವಿಧಾನ ಪಾಲಿಸುವವರ, ವಿಜ್ಞಾನ ಆಸಕ್ತರ ಆಸಕ್ತಿಯನ್ನು ಕೆರಳಿಸಿದೆ.

ಕಂಕಣ ಅಥವಾ ಫೈರ್ ರಿಂಗ್ ಸೂರ್ಯಗ್ರಹಣ
ಈ ಬಾರಿ ಗೋಚರಿಸಲಿರುವ ಸೂರ್ಯಗ್ರಹಣವನ್ನು ಕಂಕಣ ಅಥವಾ ಫೈರ್‌ರಿಂಗ್ ಎಂದು ಕರೆಯಲಾಗುವುದು. ಸಾಮಾನ್ಯವಾಗಿ ಸೂರ್ಯಗ್ರಹಣ 3 ವಿಧದಲ್ಲಿ ಸಂಭವಿಸುವುದು. ಸೂರ್ಯ ಪೂರ್ಣ ಮರೆಯಾದಾಗ ಅದನ್ನು ಪೂರ್ಣ ಸೂರ್ಯಗ್ರಹಣ, ಭಾಗಶಃ ಮರೆಯಾದರೆ ಪಾರ್ಶ್ವ ಸೂರ್ಯ ಗ್ರಹಣ, ಸೂರ್ಯನ ಅಂಚುಗಳು ಗೋಚರಿಸಿದರೆ ಕಂಕಣ ಸೂರ್ಯಗ್ರಹಣವೆಂದು ಕರೆಯಲಾಗುವುದು. ಸೂರ್ಯಗ್ರಹಣದ ಸಮಯದಲ್ಲಿ ಚಂದ್ರನ ಅಂಚಿನಲ್ಲಿ ಉಂಗುರ ಆಕಾರದಲ್ಲಿ ಗೋಚರಿಸಲಿದ್ದು ರಿಂಗ್‌ಫೈರ್ (ಬೆಂಕಿ ಉಂಗುರ) ಎಂದು ಕರೆಯಲಾಗುತ್ತದೆ. ಅಂದರೆ ಸೂರ್ಯನನ್ನು ಚಂದ್ರ ಮರೆ ಮಾಡಿದರೂ ಕೂಡ ಸೂರ್ಯನ ಅಂಚುಗಳು ಸುತ್ತಲೂ ಉಂಗುರಾಕಾರದಲ್ಲಿ ಗೋಚರಿಸಲಿದೆ. ಇದಕ್ಕೆ ಕಂಕಣ ಸೂರ್ಯಗ್ರಹಣ ಎಂದು ಕರೆಯಲಾಗುವುದು.

ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸಲಿದೆ
ಭಾರತದ ಕೆಲವಡೆ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ಮದುರೈ, ಕೊಯಮತ್ತೂರು, ಚೆರವತ್ತೂರು, ಕೋಯಿನಾಡ್‌ನಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರಿಸಲಿದೆ, ಬೆಂಗಳೂರಿನಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ.
ಸೌದಿ ಅರೇಬಿಯಾ, ಕತಾರ್, ಓಮನ್, ಶ್ರೀಲಂಕಾ, ಮಲೇಷಿಯಾ, ಸಿಂಗಪೂರ್ ಹೀಗೆ ವಿವಿಧ ದೇಶಗಳಲ್ಲಿಯೂ ಸುರ್ಯಗ್ರಹಣ ಗೋಚರಿಸಲಿದೆ.

ಸೂರ್ಯಗ್ರಹಣದ ಸಮಯ
ಸೂರ್ಯಗ್ರಹಣ ಬೆಳಗ್ಗೆ 8 ಗಂಟೆ 7 ನಿಮಿಷದಿಂದ ಪ್ರಾರಂಭವಾಗಿ 11 ಗಂಟೆ 8 ನಿಮಿಷಕ್ಕೆ ಮುಗಿಯುತ್ತದೆ. ಬೆಳಗ್ಗೆ 9.31ಕ್ಕೆ ಪೂರ್ಣಪ್ರಮಾಣದ ಸೂರ್ಯಗ್ರಹಣ ಕಾಣಬಹುದು. ಸೂರ್ಯಗ್ರಹಣ ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಗೋಚರಿಸಲಿದೆ. ಸುಮಾರು ಮೂರು ಗಂಟೆ ಒಂದು ನಿಮಿಷ ಸಂಭವಿಸುವ ಈ ಸೂರ್ಯಗ್ರಹಣದಲ್ಲಿ ಸೂರ್ಯನನ್ನು ಚಂದ್ರ ಶೇ. 91ರಷ್ಟು ಆವರಿಸಿಕೊಳ್ಳಲಿದ್ದಾನೆ.

172 ವರ್ಷಗಳ ನಂತರ ಯುಎಇನಲ್ಲಿ 'ಫೈರ್ ರಿಂಗ್' ಸೂರ್ಯಗ್ರಹಣ
172 ವರ್ಷಗಳ ನಂತರ ಇದೇ ಮೊದಲ ಬಾತಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಉಂಗುರಾಕಾರದಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ ಎಂದು ದುಬೈನ ಖಗೋಳ ವಿಜ್ಞಾನಿಗಳು ಹೇಳಿದ್ದಾರೆ. ಈ ರೀತಿಯ ಸೂರ್ಯಗ್ರಹಣ 1847ರಲ್ಲಿ ಸಂಭವಿಸಿತ್ತು. ಈ ಬಾರಿ ಅಬು ಧಾಬಿಯ ಕೆಲವು ಭಾಗಗಳಲ್ಲಿ ಅಷ್ಟೇ ಗೋಚರಿಸಲಿದೆ.



Click it and Unblock the Notifications
