Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ಸೊಳ್ಳೆ ಬ್ಯಾಟ್‌ನಿಂದ ಬ್ರೆಡ್ ಬಿಸಿ ಮಾಡಿ..! ಈ ಮಹಿಳೆ ಐಡಿಯಾ ನೀವು ನೋಡಿ..!
ಆನ್‌ಲೈನ್‌ನಲ್ಲಿ ಜನ ಯಾವೆಲ್ಲಾ ರೀತಿ ಸುದ್ದಿಯಾಗುತ್ತಾರೆ ಅನ್ನೋದು ನಿಮಗೆ ಗೊತ್ತಿದೆ. ಅದರಲ್ಲೂ ಆಹಾರ ಪ್ರಿಯರು ಯಾವೆಲ್ಲಾ ರೀತಿಯ ಚಿತ್ರ ವಿಚಿತ್ರ ಆಹಾರ ಸೇವಿಸುತ್ತಾರೆ ಅನ್ನೋದು ನೋಡಿದ್ದೀರಿ. ಆದ್ರೆ ಇಲ್ಲೊಬ್ಬ ಮಹಿಳೆ ನೀವ್ಯಾರು ಊಹಿಸದ ರೀತಿಯಲ್ಲಿ ಆಕೆ ಬ್ರೆಡ್ ಮಾಡಿ ತಿಂದಿದ್ದಾಳೆ.
ನಾವು ಸಾಮಾನ್ಯವಾಗಿ ಬ್ರೆಡ್ ಅನ್ನು ಕಾವಲಿ ಮೇಲೆ ನಾನ್‌ಸ್ಟಿಕ್ ಮೇಲೆ ಕಾಯಿಸಿ ಟೋಸ್ಟ್ ಮಾಡಿ, ಇಲ್ಲವೆ ಸ್ಯಾಂಡ್‌ವಿಚ್ ಮಾಡಿ ಸವಿಯುತ್ತೇವೆ. ಆದ್ರೆ ಇಲ್ಲೊಬ್ಬಾಕೆ ಸೊಳ್ಳೆ ಬ್ಯಾಟ್ ಮೇಲೆ ಬ್ರೆಡ್ ಕಾಯಿಸಿ ಸವಿಯುತ್ತಿರುವುದನ್ನು ನೋಡಬಹುದು.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಸೊಳ್ಳೆ ಬ್ಯಾಟ್ ಮೇಲೆ ಬ್ರೆಡ್ ಬಿಸಿ ಮಾಡುತ್ತಿದ್ದಾಳೆ. ಸೊಳ್ಳೆಗಳ ಕಾಟ ತಡೆಯಲಾಗದೆ ಈ ಬ್ಯಾಟ್ ಮೂಲಕ ಸೊಳ್ಳೆಗಳ ಹೊಡೆದು ಸಾಯಿಸುತ್ತೇವೆ. ಆದ್ರೆ ಅದೇ ಬ್ಯಾಟ್‌ನಿಂದ ಬ್ರೆಡ್ ಮಾಡಲಾಗಿದೆ.
ಏಪ್ರಿಲ್ 28 ರಂದು, ಇನ್ಸ್‌ಸ್ಟಾಗ್ರಾಮ್ ಬಳಕೆದಾರ ಮತ್ತು ಫುಡ್ ಬ್ಲಾಗರ್ ತುಲಿಕಾ ಶ್ರೀವಾಸ್ತವ (tulika_world_official) ಅವರು ಹಂಚಿಕೊಂಡಿರುವ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುದೆ. ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಎಲೆಕ್ಟ್ರಿಕ್ ಗ್ಯಾಜೆಟ್‌ನಲ್ಲಿ ಬ್ರೆಡ್ ಟೋಸ್ಟ್ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆದರೆ ಗ್ಯಾಜೆಟ್ ಬೇರೇನು ಅಲ್ಲ ಸೊಳ್ಳೆ ಬ್ಯಾಟ್ ಆಗಿದೆ.
ವೀಡಿಯೊದಲ್ಲಿ, ತುಲಿಕಾ ಹಾಸಿಗೆಯ ಮೇಲೆ ಕುಳಿತು ಬ್ರೆಡ್ ಸ್ಲೈಸ್ ಅನ್ನು ಸೊಳ್ಳೆ ಬ್ಯಾಟ್ ಮೇಲೆ ಇಡುತ್ತಿರುವುದನ್ನು ಕಾಣಬಹುದು. ತುಲಿಕಾ ಬ್ರೆಡ್ ಅನ್ನು ಒಂದು ಕಡೆ ಬಿಸಿ ಮಾಡಿ ಬಳಿಕ ಮತ್ತೊಂದು ಕಡೆ ಬಿಸಿ ಮಾಡುತ್ತಿರುವುದನ್ನು ನಾವು ನೋಡಬಹುದು. ಈ ರೀತಿ ನಾನ್‌ಸ್ಟಿಕ್‌ನಲ್ಲಿ ಹಾಕಿ ನಾವು ಮಾಡಿದ್ದೇವೆ, ಆದ್ರೆ ಸೊಳ್ಳೆ ಬ್ಯಾಟ್‌ನಲ್ಲಿ ಬಳಸಿದ್ದನ್ನು ನಾವು ಎಂದಿಗೂ ನೋಡಿರಲಿಲ್ಲ.
ಈ ವಿಡಿಯೋ ಈವರೆಗೆ ಸುಮಾರು 1.5 ಮಿಲಿಯನ್ ವೀಕ್ಷಣೆ ಕಂಡಿದೆ. ಆದರೆ ಹಲವರು ಇದು ಆರೋಗ್ಯಕರ ಅಭ್ಯಾಸ ಅಲ್ಲ ಎಂದಿದ್ದರೆ ಮತ್ತೆ ಕೆಲವರು ಈ ಐಡಿಯಾ ಯಾರಿಗೂ ಬಂದಿರುವುದಿಲ್ಲ ನೀವೇ ಮೊದಲು ಎನ್ನುತ್ತಿದ್ದಾರೆ.
ಆದ್ರೆ ಸೊಳ್ಳೆ ಹೊಡೆಯುವ ಬ್ಯಾಟ್‌ನಲ್ಲಿ ಈ ರೀತಿ ಬ್ರೆಡ್ ಬಿಸಿ ಮಾಡಿದ್ದು ಏಕೆ..? ಬ್ರೆಡ್ ಬೇಯಿಸಲೆಂದೇ ಒಂದಿಷ್ಟು ಅಡುಗೆ ವಸ್ತುಗಳಿರುವಾಗ ಸೊಳ್ಳೆ ಹೊಡೆಯುವ ಎಲೆಕ್ಟ್ರಿಕ್ ಬ್ಯಾಟ್ ಯಾಕೆ ಬಳಸುತ್ತಾರೆ? ಆ ಬ್ಯಾಟ್‌ನಿಂದ ಸೊಳ್ಳೆಗಳ ಸಾಯಿಸಿ ಅದರಲ್ಲಿ ಬ್ರೆಡ್ ಬೇಯಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಸಹ ಮಾಡಿದ್ದಾರೆ.
'ಇಷ್ಟು ಸುಲಭವಾಗಿ ಬ್ರೆಡ್ ಟೋಸ್ಟ್ ಮಾಡುವುದು ಎಲ್ಲಿಯೂ ನೋಡಿರಲಿಲ್ಲ ಆದ್ರೆ ಈ ಬ್ರೆಡ್ ಈಗ ನಾನ್‌ವೆಜ್ ಲೀಸ್ಟ್‌ಗೆ ಸೇರಲಿದ್ಯಾ ಅಥವಾ ವೆಜ್ ಆಗಿಯೇ ಉಳಿಯಲಿದ್ಯಾ?' ಎಂದು ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. 'ಈ ರೀತಿ ಬ್ರೆಡ್ ಮಾಡಿ ಯಾರು ತಾನೆ ತಿನ್ನುತ್ತಾರೆ, 10 ನಿಮಿಷ ಅಡುಗೆ ಮನೆಯಲ್ಲಿ ಕಾಲ ಕಳೆದರೆ ರುಚಿ ರುಚಿಯ ಬ್ರೆಡ್ ಮಾಡಿಕೊಳ್ಳಬಹುದು. ಯಾರಾದರು ಹೀಗೆ ಸೊಳ್ಳೆ ಬ್ಯಾಟ್ ಬಳಸಿ ಬ್ರೆಡ್ ಮಾಡುತ್ತಾರಾ?' ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
'ಬ್ರೆಡ್ ಮಾಡಿಕೊಳ್ಳಲೆಂದೇ ಇನ್ನುಮುಂದೆ ಪ್ರತ್ಯೇಕ ಸೊಳ್ಳೆ ಬ್ಯಾಟ್ ಖರೀದಿ ಮಾಡಬೇಕಾಗುತ್ತದೆ. ಈ ಐಡಿಯಾದಿಂದ ಸೊಳ್ಳೆ ಬ್ಯಾಟ್‌ಗಳ ಮಾರಾಟ ಹೆಚ್ಚಾಗಬಹುದು' ಎಂದು ಕೆಲವರು ತಮಾಷೆಯಾಡಿದ್ದಾರೆ.



Click it and Unblock the Notifications
