Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
1 ರೂಪಾಯಿ ತೆರಿಗೆ ಕಟ್ಟದೆ ನಿಮ್ಮ ಅಷ್ಟೂ ಹಣ ಉಳಿಸೋದು ಹೇಗೆ.? ಈ ಟ್ರಿಕ್ಸ್ ಯಾರಿಗೆ ಗೊತ್ತು..?
ನಾವು ನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತೇವೆ, ನಾವು ಖರೀದಿಸುವ ಪ್ರತಿಯೊಂದು ವಸ್ತುಗಳ ಮೇಲೂ ತೆರಿಗೆ ಹಾಕಿರುತ್ತಾರೆ. ಇನ್ನು ವೇತನ ಪಡೆಯುವ, ಉದ್ಯಮ ನಡೆಸುವ ಮಂದಿಯನ್ನು ನೇರ ತೆರಿಗೆ ಕಟ್ಟಬೇಕಾಗುತ್ತದೆ. ಕಳೆದೆರಡು ದಿನದ ಹಿಂದೆ ಮಂಡಿಸಿರುವ ಹೊಸ ಬಜೆಟ್‌ನಲ್ಲಿ ತೆರಿಗೆ ಕುರಿತಂತೆ ಹೊಸ ನಿಯಮಗಳ ಜಾರಿ ಮಾಡಿದ್ದಾರೆ.
3 ಲಕ್ಷಕ್ಕಿಂತ ಹೆಚ್ಚಿನ ಆದಾಯ ಗಳಿಸುವ ಮಂದಿ ತೆರಿಗೆ ಪಾವತಿಸಬೇಕಿದೆ. ಇನ್ನು ಐಟಿ ಕ್ಷೇತ್ರದಲ್ಲಿ ಬಹುತೇಕರು 5 ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ವೇತನ ಪಡೆಯುತ್ತಿರುತ್ತಾರೆ. ಅವರಷ್ಟೇ ಅಲ್ಲ ಈಗ 4 ಲಕ್ಷ ವೇತನ ಪಡೆಯುವ ಮಂದಿ ಹೆಚ್ಚಿದ್ದಾರೆ. ಸದ್ಯ ಹೊಸ ತೆರಿಗೆ ನೀತಿಯಿಂದ ಅವರು ಸಹ ತೆರಿಗೆ ಪಾವತಿಸಬೇಕಿದೆ. ಅಲ್ಲದೆ ಅವರು ಪಾವತಿಸುತ್ತಿದ್ದ ತೆರಿಗೆ ಪ್ರಮಾಣ ಹೆಚ್ಚಳವಾಗಿದೆ. 3 ಲಕ್ಷದಿಂದ 7 ಲಕ್ಷ ರೂ ವರೆಗಿನ ವೇತನ ಪಡೆಯುವ ಮಂದಿ ಶೇ.5ರಷ್ಟು ತೆರಿಗೆ ಪಾವತಿ ಮಾಡಬೇಕಿದೆ.

ಆದರೆ ನೀವು ಒಂದೇ ಒಂದೂ ರೂಪಾಯಿ ತೆರಿಗೆ ಕಟ್ಟದೆಯೂ ಇರಬಹುದು. ನಿಮಗಿದು ಅಚ್ಚರಿ ಎನಿಸಬಹುದು. ತೆರಿಗೆ ಪಾವತಿ ಮಾಡದೆ ಇರಲು ಸಾಧ್ಯವೇ ಇಲ್ಲ. ಆದ್ರೆ ಕೆಲವೊಂದು ವಲಯವೂ ತೆರಿಗೆಯಿಂದ ಮುಕ್ತವಾಗಿವೆ. ಅದರಲ್ಲಿ ಕೃಷಿ ವಲಯವೂ ಒಂದು. ಕೃಷಿಕರು ತಾವು ಬೆಳೆದ ಫಸಲಿಗೆ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಅದರ ಬದಲು ಅವರು ರಸಗೊಬ್ಬರ, ಬಿತ್ತನೆ ಬೀಜ ಸೇರಿ ಉಳಿದ ವಸ್ತುಗಳಿಗೆ ತೆರಿಗೆ ಪಾವತಿ ಮಾಡುತ್ತಾರೆ, ಜೊತೆಗೆ ಸಬ್ಸಿಡಿ ಪಡೆಯುತ್ತಾರೆ.
ಆದರೆ ನಾವು ಸಂಬಳ ಪಡೆಯುವ ಮಂದಿ ಈ ತೆರಿಗೆಯಿಂದ ಪಾರಾಗುವುದು ಹೇಗೆ? ಇದಕ್ಕೂ ಒಂದು ದಾರಿಯಿದೆ ಎಂದು ಉಡುಪಿ ಮೂಲದ ಹವ್ಯಾಸಿ ಟ್ರಾವೆಲ್ ಬ್ಲಾಗರ್ ಶ್ರೀನಿಧಿ ಹಂಡಾ ಅವರು ಒಂದು ಪ್ಲಾನ್ ಹೇಳಿಕೊಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ಜೊತೆಗೆ ಹಲವರ ಗಮನ ಸೆಳೆಯುತ್ತಿದೆ.
ಅವರ ಪ್ರಕಾರ ತೆರಿಗೆ ಉಳಿಸಲು ಮನೆಯಲ್ಲಿ ಹುಲ್ಲು ಬೆಳೆಯಬೇಕಂತೆ. ಹೌದು ಮನೆಯ ಟೆರೆಸ್ ಮೇಲೆ, ಬಾಲ್ಕನಿಯಲ್ಲಿ ಹುಲ್ಲು ಬೆಳೆದು ನಿಮ್ಮ ಕಂಪನಿಯಲ್ಲಿ ವೇತನ ಪಡೆಯದೆ ಅದೇ ಕಂಪನಿಗೆ ತಾವು ಬೆಳೆದ ಹುಲ್ಲು ಖರೀದಿಸಲು ಹೇಳಬೇಕಂತೆ. ಈ ರೀತಿ ಖರೀದಿಸಿದ ಹುಲ್ಲಿಗೆ ಅವರು ನೀಡುವ ಹಣಕ್ಕೆ ಯಾವುದೇ ತೆರಿಗೆ ಇರುವುದಿಲ್ಲ ಎಂಬುದು ಅವರ ಐಡಿಯಾ ಆಗಿದೆ.
'ನೀವು ನಿಮ್ಮ ಮನೆಯಲ್ಲಿ, ಬಾಲ್ಕನಿಯಲ್ಲಿ ಅಥವಾ ನಿಮ್ಮ ಟೆರೇಸ್‌ನಲ್ಲಿ ಮಾಡಬಹುದು. ಮತ್ತು ಇದು ತುಂಬಾ ಕಾನೂನು ಪ್ರಕ್ರಿಯೆಯಾಗಿದೆ. ನಿಮಗೆ ಯಾವುದೇ ಸಂಬಳ ಬೇಡವೆಂದು ನಿಮ್ಮ ಕಂಪನಿಯ ಹೆಚ್‌ಆರ್‌ಗೆ ತಿಳಿಸಿ. ಅವರು ನಿಮ್ಮ ನಿರ್ಧಾರದಿಂದ ಸಂತೋಷವಾಗಿರುತ್ತಾರೆ. ನಿಮ್ಮ ಕಂಪನಿಯು ನಿಮ್ಮ ಸಂಬಳದ ಪ್ರಕಾರ ನಿಮ್ಮಿಂದ ಹುಲ್ಲು ಖರೀದಿಸಬೇಕು ಎಂದು ನಿಮ್ಮ HR ಗೆ ತಿಳಿಸಿ. ನಿಮ್ಮ ಸಂಬಳ ₹ 50,000 ಆಗಿದ್ದರೆ, ಅಷ್ಟು ಪ್ರಮಾಣದ ಹುಲ್ಲು ಖರೀದಿಸಲು ಹೇಳಿ. ಇದು ಸಂಪೂರ್ಣ ಕಾನೂನು ಪ್ರಕ್ರಿಯೆಯಾಗಿದೆ. ಹೀಗೆ ಮಾಡುವುದಿರಿಂದ ನಿಮ್ಮ ಆದಾಯವು ಶೂನ್ಯವಾಗುತ್ತದೆ. ಜೊತೆಗೆ ಕೃಷಿ ವಲಯ ತೆರಿಗೆ ಮುಕ್ತವಾಗಿದೆ. ಹೀಗಾಗಿ ನಿಮ್ಮ ವೇತನಕ್ಕೆ ಯಾವುದೆ ಕತ್ತರಿ ಹಾಕದೆ ಸಂಪೂರ್ಣ ನಿಮ್ಮ ಕೈ ಸೇರಲಿದೆ ಎಂದಿದ್ದಾರೆ.
ಶ್ರೀನಿಧಿ ಹಂಡಾ ಅವರ ಈ ಸಲಹೆ ಸಿಎ ಅಖಿಲ್ ಪಚೋರಿ ಅವರ ಮನ ಗೆದ್ದಿದೆ. ಈ ಪೋಸ್ಟ್ ಹಂಚಿಕೊಂಡಿರುವ ಅವರು, ವೇತನ ಪಡೆಯುವ ಮಂದಿ ಈ ವಿಡಿಯೋ ನಿಮಗಾಗಿ ಶೇ.100ರಷ್ಟು ನಿಮ್ಮ ವೇತನ ಉಳಿಸುವುದು ಹೇಗೆ? ಎಂದು ವಿಡಿಯೋ ಹಂಚಿಕೊಂಡು ಅವರು ಬರೆದಿದ್ದಾರೆ.
ಈ ವಿಡಿಯೋ ನೋಡಿದ ಮಂದಿ ನಿಜಕ್ಕೂ ಅಚ್ಚರಿಗೆ ಒಳಗಾಗಿದ್ದಾರೆ. ಇದೊಂದು ಸುಲಭದ ಐಡಿಯಾ ಆಗಿದ್ದರೂ ಸಂಬಳ ಉಳಿಸಲೇಬೇಕು ಎಂದು ನಿರ್ಧಾರ ಮಾಡಿದ್ದವರಿಗೆ ಒಳ್ಳೆಯ ದಾರಿ. ಆದ್ರೆ ಯಾವ ಕಂಪನಿ ಇದಕ್ಕೆ ಅನುವು ಮಾಡಲಿದೆ? ಯಾವುದೇ ಕಂಪನಿ ಈ ರೀತಿಯ ಪ್ರಕ್ರಿಯೆಗೆ ಒಳಗಾಗುವುದಿಲ್ಲ ಎಂದು ಬಳಕೆದಾರರು ಹೇಳಿದ್ದಾರೆ. ಆದರೆ ಇದೊಂದು ಉತ್ತಮ ದಾರಿ ಅನ್ನುವುದು ಮಾತ್ರ ನೈಜ.



Click it and Unblock the Notifications
