Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಬೆಳಗ್ಗೆ ತಿಂಡಿಗೆ ಸ್ಪೆಷಲ್ ಒಗ್ಗರಣೆ ಅನ್ನ ಮಾಡಿ..! ಎಷ್ಟೊಂದು ಸುಲಭ ಗೊತ್ತಾ?
ಬೆಳಗಿನ ತಿಂಡಿಗೆ ಯಾವ ತಿಂಡಿ ಮಾಡಬೇಕು ಎಂಬ ನಿಮ್ಮ ಪ್ರಶ್ನೆ ಗಂಟೆಗೂ ಹೆಚ್ಚು ಸಮಯವನ್ನು ವ್ಯರ್ಥ ಮಾಡುತ್ತಿದ್ದರೆ ಕೊನೆಯಲ್ಲಿ ನೀವು ಕಣ್ಣಿಗೆ ಬಿದ್ದ ವಸ್ತು ಹಾಕಿ ಏನಾದರು ಒಂದು ತಿಂಡಿ ಮಾಡುತ್ತೀರಿ. ಅದರಲ್ಲಿಯೂ ಕಡಿಮೆ ವಸ್ತುಗಳ ಬಳಸಿ, ಕಡಿಮೆ ಸಮಯದಲ್ಲಿ ಮಾಡಬಹುದಾದ ಯಾವುದಾದರು ತಿಂಡಿಯಿದ್ದರೆ ಅದನ್ನೇ ಮಾಡಲು ಮುಂದಾಗುತ್ತೀರಿ.
ಅದರಲ್ಲು ಬೆಳಗ್ಗೆ ಸುಲಭವಾಗಿ ಮಾಡುವ ತಿಂಡಿಗಳ ಸಾಲಿನಲ್ಲಿ ಚಿತ್ರಾನ್ನ ಸಹ ಒಂದು. ಚಿತ್ರಾನ್ನವನ್ನ ಸುಲಭವಾಗಿ ಮಾಡಬಹುದಾಗಿರೋದ್ರಿಂದ ಎಲ್ಲರು ಇದನ್ನೇ ಮಾಡಲು ಮುಂದಾಗುತ್ತಾರೆ. ಆದ್ರೆ ಇದಕ್ಕಿಂತ ಒಳ್ಳೆಯ ತಿಂಡಿ ಮಾಡಬೇಕಾದರೆ ಅನ್ನಕ್ಕೆ ಒಗ್ಗರಣೆ ಹಾಕಿ ಮಾಡಬಹುದಾದ ತಿಂಡಿಯನ್ನ ಒಮ್ಮೆ ನೀವು ಸಹ ಪ್ರಯತ್ನಿಸಿ.
ಹಿಂದಿನ ದಿನ ಅನ್ನ ಉಳಿದಿದ್ದರೆ ಅಥವಾ ಸುಲಭವಾಗಿ ತಿಂಡಿ ಮಾಡುವ ಉದ್ದೇಶವಿದ್ದರೆ ಒಗ್ಗರಣೆ ಅನ್ನ ಮಾಡುವುದು ತುಂಬಾನೆ ಸುಲಭ. ಅದರಲ್ಲೂ ಒಗ್ಗರಣೆಯ ಹಾಕಿದ ಅನ್ನ ಸವಿಯೋಕೆ ಚಿತ್ರಾನ್ನಕ್ಕಿಂತಲೂ ಅದ್ಭುತ ರುಚಿ ನೀಡಲಿದೆ. ಹಾಗಾದ್ರೆ ಈ ಒಗ್ಗರಣೆ ಅನ್ನ ಮಾಡುವುದು ಹೇಗೆ ನೋಡಿ.
ಒಗ್ಗರಣೆ ಅನ್ನ ಮಾಡುವುದು ಹೇಗೆ? ಒಗ್ಗರಣೆ ಅನ್ನ ಮಾಡಲು ಬೇಕಾಗುವ ಪದಾರ್ಥಗಳೇನು?, ಒಗ್ಗರಣೆ ಅನ್ನ ಮಾಡುವ ವಿಧಾನವೇನು ಎಂಬುದನ್ನು ನಾವಿಂದು ನೋಡೋಣ.
ಒಗ್ಗರಣೆ ಅನ್ನ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ
- ಕಡಲೆ ಕಾಯಿ ಬೀಜ - 2 ಸ್ಪೂನ್
- ಕಡಲೆ ಬೇಳೆ - 2 ಸ್ಪೂನ್
- ಉದ್ದಿನ ಬೇಳೆ - 2 ಸ್ಪೂನ್
- ಧನಿಯಾ ಕಾಳು - 2 ಸ್ಪೂನ್
- ಜೀರಿಗೆ
- ಕಾಳು ಮೆಣಸು
- ಒಣ ಮೆಣಸು
- ಕರಿಬೇವಿನ ಸೊಪ್ಪು
- ಉಪ್ಪು
- ಎಣ್ಣೆ
- ಸಾಸಿವೆ
- ಗೋಡಂಬಿ
ಒಗ್ಗರಣೆ ಅನ್ನ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಕಡಲೆ ಕಾಯಿ ಬೀಜ, ಕಡಲೆ ಬೇಳೆ, ಉದ್ದಿನ ಬೇಳೆ, ಧನಿಯಾ ಕಾಳು, ಜೀರಿಗೆ, ಕಾಳು ಮೆಣಸು, ಒಣ ಮೆಣಸು, ಕರಿಬೇವಿನ ಸೊಪ್ಪು ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಎಣ್ಣೆ ಹಾಕಬೇಕು. ಚೆನ್ನಾಗಿ 5 ನಿಮಿಷಗಳ ಕಾಳ ಚೆನ್ನಾಗಿ ಹುರಿದ ಬಳಿಕ ಮಸಾಲೆಯನ್ನು ತೆಗೆದು ತಣ್ಣಗಾಗಲು ಬಿಡಿ.
ನಂತರ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಿ. ರುಬ್ಬಿಕೊಳ್ಳುವಾಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ರುಬ್ಬಿಕೊಳ್ಳಿ. ಈ ಮಸಾಲೆ ನುಣ್ಣಗೆ ಇಲ್ಲವೆ ತರಿ ತರಿಯಾಗಿಯೂ ಅಲ್ಲದೆ ಮಧ್ಯಮ ಸ್ಥಿತಿಯಲ್ಲಿ ರುಬ್ಬಿಕೊಳ್ಳಿ.
ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ನಂತರ ಸಾಸಿವೆ, ಕಡಲೆ ಬೀಜ ಹಾಕಿ ಫ್ರೈ ಮಾಡಿ. ಬಳಿಕ ಇದಕ್ಕೆ ಗೋಡಂಬಿ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಮತ್ತೆ ಫ್ರೈ ಮಾಡಿ. ನಂತರ ಇದಕ್ಕೆ ಒಣ ಮೆಣಸು, ಕರಿಬೇವಿನ ಸೊಪ್ಪು ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ಇದಾದ ನಂತರ ಮೊದಲೇ ಮಾಡಿಕೊಂಡಿರುವ ಅನ್ನ ಅಥವಾ ಉಳಿದಿರುವ ಅನ್ನವನ್ನು ಇದೇ ಮಸಾಲೆಗೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಈಗ ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಿಕೊಂಡಿರುವ ಮಸಾಲೆಯನ್ನು ಸಹ ಇದಕ್ಕೆ ಹಾಕಿ ಮಿಕ್ಸ್ ಮಾಡಿ. ಇದು ನೋಡಲು ಪುಳಿಯೋಗರೆಯಂತೆ ಕಾಣಿಸಲಿದೆ.

ಎಲ್ಲಾ ಅಂಶ ಹಾಕಿದ ಬಳಿಕ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಹಚ್ಚಿರಬೇಕು ಎಂದೇನು ಇಲ್ಲ. ಎಲ್ಲಾ ಅಂಶಗಳು ಮೊದಲೇ ಬೆಂದಿರುವ ಕಾರಣ ಒಲೆ ಆಫ್ ಮಾಡಿಕೊಂಡು ಅನ್ನವನ್ನ ಚೆನ್ನಾಗಿ ಮಿಕ್ಸ್ ಮಾಡಿ. ಇದು ಪುಳಿಯೋಗರೆಯಂತೆ ಕಾಣಿಸುತ್ತದೆ. ಆದರೆ ರುಚಿಯಲ್ಲಿ ಅದನ್ನೇ ಮೀರಿಸುವುದು ಖಚಿತ.
ಇಷ್ಟಾದರೆ ನಿಮ್ಮ ಮುಂದೆ ಒಗ್ಗರಣೆ ಅನ್ನ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ. ಅದರಲ್ಲೂ ಬೆಳಗ್ಗೆ ತಿಂಡಿಗೆ ಹಾಗೂ ಮಧ್ಯಾಹ್ನ ಸ್ನ್ಯಾಕ್ಸ್‌ಗೂ ಕೂಡ ಇದನ್ನು ಬಳಸಬಹುದು. ಒಮ್ಮೆ ಮಾಡಿ ಸವಿದರೆ ಮತ್ತೆ ಮತ್ತೆ ಇದನ್ನು ಮಾಡಿ ಸವಿಯಲು ಮುಂದಾಗುತ್ತೀರಿ,



Click it and Unblock the Notifications