Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ರೇಷನ್ ಅಕ್ಕಿಯ ಪರ್ಫೆಕ್ಟ್ ಇಡ್ಲಿ ಇದು..! ಹತ್ತಿಗಿಂತ ಮೃದುವಾಗಿ ಮಾಡಿ..!
ಇಡ್ಲಿ ಅಂದರೆ ಬೆಳಗ್ಗೆ ತಿಂಡಿಗೆ ಎಲ್ಲರು ಇಷ್ಟಪಟ್ಟು ಸವಿಯುವ ಖಾದ್ಯ. ಕಡಿಮೆ ಎಣ್ಣೆ ಬಳಸಿ ಮಾಡುವ ಕಾರಣ ಎಲ್ಲರಿಗೂ ಇದು ಇಷ್ಟವಾಗೋದು ಪಕ್ಕ. ಹಾಗೆ ನಾವು ಇಡ್ಲಿಯನ್ನು ಹಲವು ಬಗೆಯಲ್ಲಿ ಮಾಡಿ ಸವಿದಿರುತ್ತೇವೆ. ಇನ್ನೊಂದು ಕಡೆ ಇಡ್ಲಿ ಮಾಡುವ ಬಗೆ ಕೂಡ ಹಲವು ಕಡೆ ಹಲವು ರೀತಿ ಇರುತ್ತೆ. ನಾವು ಇಡ್ಲಿಯ ಹಿಟ್ಟು ಹೇಗೆ ಮಾಡಿಕೊಳ್ಳುತ್ತೇವೆ ಅನ್ನೋದ್ರ ಮೇಲೆ ಇಡ್ಲಿಯ ಟೇಸ್ಟ್ ನಿರ್ಧಾರ ಆಗುತ್ತೆ.
ಕೆಲವರು ಸಾಫ್ಟ್ ಆಗಿರುವ, ಮಲ್ಲಿಗೆಯಂತಹ ಇಡ್ಲಿ ಮಾಡುವುದು ನೋಡಿರುತ್ತೇವೆ. ಹೋಟೆಲ್, ಕ್ಯಾಂಟಿನ್‌ಗಳಲ್ಲಿ ಬಿಳಿ ಬಿಳಿಯ ಮೃದುವಾದ ಇಡ್ಲಿಯನ್ನು ನೀಡುತ್ತಾರೆ. ಇದು ಅತ್ಯಂತ ರುಚಿಕರವಾಗಿರುತ್ತೆ. ಹಾಗಾದ್ರೆ ಅವರು ಈ ರೀತಿ ಇಡ್ಲಿ ಮಾಡೋದು ಹೇಗೆ? ಕೆಲವರು ಇದಕ್ಕೆ ಹೆಚ್ಚು ಸೋಡಾ ಪುಡಿ ಹಾಕಿ ಮಾಡುತ್ತಾರೆ ಎಂದುಕೊಳ್ಳುತ್ತಾರೆ. ಆದ್ರೆ ನಾವು ಇಡ್ಲಿ ಹಿಟ್ಟು ಮಾಡುವಾಗ ಅಳತೆ ಸರಿಯಾಗಿದ್ದರೆ ಸಾಕು ಬೊಂಬಾಟ್ ಇಡ್ಲಿ ರೆಡಿ ಮಾಡಬಹುದು.

ಇನ್ನು ರೇಷನ್ ಅಕ್ಕಿಯಿಂದ ಮಾಡುವ ಇಡ್ಲಿ ತುಂಬಾನೆ ಮೃದುವಾಗಿರುವುದು ನೋಡಬಹುದು. ಇಲ್ಲಿಯೂ ಕೂಡ ಆಳತೆಯೇ ಮುಖ್ಯವಾಗಿರುತ್ತೆ. ಹಾಗಾದ್ರೆ ಹಟ್ಟು ರೆಡಿ ಮಾಡಿಕೊಳ್ಳುವಾಗ ಯಾವ ರೀತಿ ಅಳತೆ ತೆಗೆದುಕೊಳ್ಳಬೇಕು, ರೇಷನ್ ಅಕ್ಕಿಯಲ್ಲಿ ಮೃದುವಾದ ಇಡ್ಲಿ ಮಾಡುವುದು ಹೇಗೆ? ಈ ಮೃದುವಾದ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಹಿಟ್ಟು ಮಾಡಲು ಹೇಗೆ ಅಳತೆ ತೆಗೆದುಕೊಳ್ಳಬೇಕು? ಎಷ್ಟು ಸಮಯ ಇದಕ್ಕೆ ಹಿಡಿಯಲಿದೆ ಎಂಬೆಲ್ಲಾ ಕುರಿತು ನಾವಿಂದು ತಿಳಿದುಕೊಳ್ಳೋಣ.
ರೇಷನ್ ಅಕ್ಕಿಯಿಂದ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು
- ರೇಷನ್ ಅಕ್ಕಿ - 4 ಲೋಟ
- ಉದ್ದಿನ ಬೇಳೆ- 1 ಲೋಟ
- ಅನ್ನ- 3 ಕಪ್
- ಸಕ್ಕರೆ- 1 ಸ್ಪೂನ್
- ಉಪ್ಪು
- ಎಣ್ಣೆ
ರೇಷನ್ ಅಕ್ಕಿಯಿಂದ ಇಡ್ಲಿ ಮಾಡುವುದು ಹೇಗೆ?
ಅಳತೆಯ ಲೋಟದಲ್ಲಿ 2 ಲೋಟ ಅಕ್ಕಿ ತೆಗೆದುಕೊಂಡು ಒಂದು ಪಾತ್ರೆಗೆ ಹಾಕಿಕೊಂಡು ತೋಳೆದುಕೊಂಡು ನೆನೆಸಿಡಬೇಕು. ಹಾಗೆ ಮತ್ತೊಂದು ಪಾತ್ರೆಗೆ ಉದ್ದು ಹಾಕಿ ತೊಳೆದು ನೆನೆಸಿಡಬೇಕು. ಉದ್ದಿನ ಜೊತೆಗೆ 1 ಸ್ಪೂನ್ ಮೆಂತ್ಯ ಹಾಕಿ ಚೆನ್ನಾಗಿ ತೊಳೆದು ನೆನೆಸಿಡಬೇಕು. ಸುಮಾರು 5ರಿಂದ 6 ಗಂಟೆ ನೆನೆಯಲು ಬಿಡಬೇಕು.
ಈಗ ಒಂದು ಮಿಕ್ಸಿ ಜಾರ್‌ನಲ್ಲಿ ಮೊದಲು ಉದ್ದನ್ನು ರುಬ್ಬಿಕೊಳ್ಳಬೇಕು. ಉದ್ದು ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಹಾಕದೆ ರುಬ್ಬಿದರೆ ಉತ್ತಮ ಇಲ್ಲವೆ ಸ್ಪೂನ್ ಲೆಕ್ಕದಲ್ಲಿ ನೀರು ಹಾಕಿಕೊಳ್ಳುತ್ತಾ ರುಬ್ಬಿಕೊಳ್ಳಬೇಕಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿಕೊಳ್ಳಿ. ಉದ್ದು ರುಬ್ಬಿದ ಬಳಿಕ ಅಕ್ಕಿಯನ್ನು ಕೂಡ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಇದಕ್ಕೂ ಹೆಚ್ಚಿಗೆ ನೀರು ಹಾಕಿಕೊಳ್ಳಬೇಡಿ. ಆದ್ರೆ ಈ ಅಕ್ಕಿ ತರಿ ತರಿಯಾಗಿ ರುಬ್ಬಿದ ಬಳಿಕ ನಿಮ್ಮ ಮನೆಯಲ್ಲಿ ಮಾಡಿದ ಅನ್ನವನ್ನ ಹಾಕಬೇಕು. 4 ಗ್ಲಾಸ್ ಅಕ್ಕಿ ಇದ್ದರೆ 3 ಗ್ಲಾಸ್ ಅನ್ನ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.
ಒಂದೇ ರೀತಿ ಸಾರು ಸವಿದು ಬೋರ್ ಆಗಿದ್ರೆ ಇಲ್ಲಿದೆ ಹುಳಿ ಗೊಜ್ಜು..! ಮಾಡೋದು ತುಂಬಾ ಸುಲಭ
ಎರಡೂ ಹಿಟ್ಟನ್ನು ಒಂದೇ ಪಾತ್ರೆಗೆ ಹಾಕಿಕೊಂಡು ಅರ್ಧ ಸ್ಪೂನ್ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಕೈಯಿಂದ ಚೆನ್ನಾಗಿ ಕಲಸಿಕೊಳ್ಳಬೇಕು. 3ರಿಂದ 4 ನಿಮಿಷ ಮಿಕ್ಸ್ ಮಾಡಿಕೊಳ್ಳಿ, ನಂತರ ಇದಕ್ಕೆ ಮುಚ್ಚಳ ಮುಚ್ಚಿ ಬಿಸಿಯಾದ ಜಾಗದಲ್ಲಿ ಇಡಬೇಕು. ಮಾರನೆ ದಿನ ಬೆಳಗ್ಗೆ ಮುಚ್ಚಳ ತೆಗೆದು ನೋಡಿ. ದಪ್ಪವಾಗಿದ್ದರೆ ಒಮ್ಮೆ ಚೆನ್ನಾಗಿ ಕಲಸಿಕೊಳ್ಳಿ. ನಂತರ ಇಡ್ಲಿ ಕಪ್‌ಗಳಿಗೆ ಎಣ್ಣೆ ಹಾಕಿಕೊಂಡು ಅದಕ್ಕೆ ಹಿಟ್ಟು ಹಾಕಿಕೊಂಡು ಒಲೆ ಮೇಲೆ ಬೇಯಲು ಬಿಡಬೇಕು. 15 ನಿಮಿಷದಲ್ಲಿ ಇಡ್ಲಿ ಚೆನ್ನಾಗಿ ಬೇಯುತ್ತದೆ.
ಈ ಇಡ್ಲಿ ಎಷ್ಟು ಮೃದುವಾಗಿ ಬರುತ್ತೆ ಅಂದರೆ ಹೋಟೆಲ್‌ನಲ್ಲಿ ಹತ್ತಿಯುಂತೆ ಇರುವ ಇಡ್ಲಿಯ ಹಾಗೆ ಬರುತ್ತದೆ. ನೀವು ಕೂಡ ಮನೆಯಲ್ಲಿ ಈ ರೀತಿಯ ವಿಧಾನದಲ್ಲಿ ಒಮ್ಮೆ ರೇಷನ್ ಅಕ್ಕಿ ಇಡ್ಲಿ ಮಾಡಿ ನೋಡಿ.



Click it and Unblock the Notifications