Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಬ್ರೇಕ್‌ಫಾಸ್ಟ್‌ಗೆ ಬ್ರೆಡ್ ಆಮ್ಲೆಟ್ ಮಾಡಿ ನೋಡಿ..! ಸಿಂಪಲ್ ರೆಸಿಪಿ ಸಖತ್ ರುಚಿ..!
ದಿನಾಲು ನೀವು ಬ್ರೇಕ್‌ಫಾಸ್ಟ್‌ಗೆ ಹೊಸ ತಿಂಡಿ ಮಾಡಬೇಕು ಅಂದುಕೊಳ್ಳುತ್ತೀರಿ. ಆದ್ರೆ ಅದು ಅಸಾಧ್ಯದ ಮಾತು. ಏಕೆಂದರೆ ದಿನಾಲು ಹೊಸ ತಿಂಡಿ ಮಾಡಬೇಕು ಅಂದ್ರೆ ಸಮಯವೂ ಬೇಕು, ವಸ್ತುಗಳು ಸಹ ಬೇಕು. ಆದ್ರೆ ವಾರದಲ್ಲಿ ಅಷ್ಟು ದಿನ ಒಂದೇ ತಿಂಡಿ ಯಾರು ಸಹ ಮಾಡುವುದಿಲ್ಲ. ಎಲ್ಲ ದಿನ ಬೇರೆ ಬೇರೆ ವೆರೈಟಿ ಫುಡ್ ತಿಂಡಿಗೆ ರೆಡಿಯಾಗಿರುತ್ತೆ.
ಅದೇ ರೀತಿ ನೀವು ಬೆಳಗ್ಗೆ ತಿಂಡಿಗೆ ಸುಲಭವಾಗಿ, ವೇಗವಾಗಿ ತಿಂಡಿ ಮಾಡುವ ಹಾಗೂ ಹೊಸದಾಗಿರುವ ತಿಂಡಿಯನ್ನ ಮಾಡುವ ಆಲೋಚನೆ ಇದ್ದರೆ ನಿಮಗಾಗಿ ಇಲ್ಲಿ ಬ್ರೆಡ್ ಆಮ್ಲೆಟ್ ಇದೆ. ಹೌದು ತುಂಬಾನೆ ಸುಲಭವಾಗಿ ರುಚಿ ರುಚಿಯ ಬ್ರೇಕ್‌ಫಾಸ್ಟ್ ಮಾಡುವುದಾದ್ರ ಇದು ನಿಮ್ಮ ಮೊದಲ ಆಯ್ಲೆಯಾಗಿರಲಿ.

ಬ್ರೆಡ್ ಹಾಗೂ ಮೊಟ್ಟೆ ಒಳ್ಳೆಯ ಕಾಂಬಿನೇಷನ್. ಬ್ರೆಡ್ ಹಾಗೂ ಮೊಟ್ಟೆ ಆರೋಗ್ಯಕ್ಕೂ ತುಂಬಾನೆ ಒಳ್ಳೆಯದು. ಇದರ ರುಚಿಯಂತು ಮಕ್ಕಳ ಬಾಯಲ್ಲಿ ನೀರು ತರಿಸುತ್ತೆ. ಅಷ್ಟೇ ಅಲ್ಲ ತುಂಬಾ ಮೃದುವಾದ ಖಾದ್ಯ ಆಗಿರೋದ್ರಿಂದ ಹಿರಿಯರು ಸಹ ಆರಾಮವಾಗಿ ಸೇವಿಸಬಹುದು.
ಹಾಗಾದ್ರೆ ಈ ಬ್ರೆಡ್ ಆಮ್ಲೆಟ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕು ಎಂಬುದನ್ನು ನೋಡಿ.
ಬ್ರೆಡ್ ಆಮ್ಲೆಟ್ ಮಾಡಲು ಬೇಕಾಗುವ ಪದಾರ್ಥಗಳು
- ಮೊಟ್ಟೆ- 4
- ಬ್ರೆಡ್ - 4
- ಕರಿಮೆಣಸು ಪುಡಿ - 1/2 ಟೀಸ್ಪೂನ್
- ಕೆಂಪು ಮೆಣಸಿನ ಪುಡಿ - 1 ಟೀಸ್ಪೂನ್
- ಅರಿಶಿನ ಪುಡಿ - 1/2 ಟೀಸ್ಪೂನ್
- ಟೊಮೆಟೋ - 1
- ಈರುಳ್ಳಿ - 2
- ಹಸಿ ಮೆಣಸಿನಕಾಯಿ - 2
- ಕ್ಯಾರೆಟ್ - 2 ಟೀಸ್ಪೂನ್
- ಕ್ಯಾಪ್ಸಿಕಂ - 1/2 ಕಪ್
- ಕೊತ್ತಂಬರಿ ಸೊಪ್ಪು - 1/4 ಕಪ್
- ಅಡುಗೆ ಎಣ್ಣೆ
- ಬೆಣ್ಣೆ - 1 tbs
- ರುಚಿಗೆ ಉಪ್ಪು
ಬ್ರೆಡ್ ಆಮ್ಲೆಟ್ ಮಾಡುವುದು ಹೇಗೆ ?
ಮೊದಲು ಮೊಟ್ಟೆಯನ್ನು ಒಡೆದು ಒಂದು ಬೌಲ್‌ಗೆ ಹಾಕಿ ಸ್ವಲ್ಪ ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಿಕ್ಸ್ ಮಾಡಿದ ಬಳಿಕ ತರಕಾರಿಗಳಾದ ಟೊಮಟೋ, ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್ ಸೇರಿ ಎಲ್ಲಾ ತರಕಾರಿ ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ತರಕಾರಿ ಹಾಕಿದ ಬಳಿಕ ಅದಕ್ಕೆ ಖಾರದ ಪುಡಿ, ಅರಶಿನ ಪುಡಿ, ಕರಿಮೆಣಸಿನ ಪುಡಿ ಹಾಕಿ, ಇದಕ್ಕೆ ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಎಗ್ ಮಸಾಲೆ ಸಹ ಸ್ವಲ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಬಹುದು.
ಇದಾದ ಬಳಿಕ ದೋಸೆ ಕಾವಲಿಗೆ ಬೆಣ್ಣೆ ಹಚ್ಚಿಕೊಂಡು ಬ್ರೆಡ್ ಅನ್ನು ರೋಸ್ಟ್ ಮಾಡಿಕೊಳ್ಳಿ. ರೋಸ್ಟ್ ಮಾಡಿದ ಬಳಿಕ ಅದೇ ಕಾವಲಿಗೆ ಎಣ್ಣೆ ಹಚ್ಚಿ ಕಲಸಿಕೊಂಡಿರುವ ಮೊಟ್ಟೆಯನ್ನು ಕಾವಲಿಗೆ ಹಾಕಿಕೊಳ್ಳಿ. ಬಳಿಕ ಅದರ ಮೇಲೆ ಬ್ರೆಡ್ ಅನ್ನು ಇಟ್ಟು ಚೆನ್ನಾಗಿ ಕಾಯಿಸಿ 2 ನಿಮಿಷ ಕಾಯಿಸಿ. ಬ್ರೆಡ್ ಅನ್ನು ಮೊಟ್ಟೆಯಿಂದ ಕವರ್ ಮಡಿ. ಬಳಿಕ ಇನ್ನೊಂದು ಬದಿ ಚೆನ್ನಾಗಿ ಕಾಯಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿಯ ಬ್ರೆಡ್ ಆಮ್ಲೆಟ್ ಸವಿಯಲು ರೆಡಿಯಾಗುತ್ತದೆ. ಬೆಳಗ್ಗೆಯ ಬ್ರೇಕ್‌ಫಾಸ್ಟ್ ರೆಡಿಯಾಗಿರುತ್ತದೆ. ಇದರ ರುಚಿಗೆ ಮತ್ತೆ ಮತ್ತೆ ಸೇವಿಸಬೇಕು ಎನಿಸುತ್ತೆ. ಯಾವಾಗ ಬೇಕಾದ್ರು ಮಾಡಿ ಸವಿಯಬಹುದು. ಇದು ಬೆಳಗ್ಗೆ ಹಾಗೂ ಸಂಜೆಗೂ ಒಳ್ಳೆಯ ಖಾದ್ಯವಾಗಿದೆ.



Click it and Unblock the Notifications
