Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತೆಂಗಿನಕಾಯಿ ಬಳಸಿ ಭೂಮಿ ಅಡಿಯಲ್ಲಿ ನೀರು ಇದೆಯೇ ತಿಳಿಯುವುದು ಹೇಗೆ?: ವೈರಲ್ ವೀಡಿಯೋ
ಇಲ್ಲೊಬ್ಬ ವ್ಯಕ್ತಿ ತೆಂಗಿನಕಾಯಿ ಹಿಡಿದು ಅಂತರ್ಜಲವಿದೆ ಎಂದು ತಿಳಿದುಕೊಳ್ಳಬಹುದು ಎಂದು ಪ್ರಾಕ್ಟಿಕಲ್ ಆಗಿ ತಿಳಿಸಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗಿದೆ.
ನಾವು ಒಂದು ನೆಲ ಖರೀದಿಸುತ್ತೇವೆ, ಅದರಲ್ಲಿ ಬೆಳೆ ಬೆಳೆಯಬೇಕೆಂದು ನಿರ್ಧರಿಸಿ ಬಾವಿನೋ, ಬೋರ್‌ವೆಲ್ ಕೊರಿಯಲು ತೀರ್ಮಾನಿಸಿ ಬಾವಿ ತೋಡಿದರೆ ಅಥವಾ ಬೋರ್‌ವೆಲ್ ಕೊರಿದರೆ ನೀರು ಸಿಗುವುದಿಲ್ಲ, ಅಷ್ಟು ಶ್ರಮವೂ ವ್ಯರ್ಥವಾಗುತ್ತದೆ. ಆದ್ದರಿಂದ ಬಾವಿ ಅಥವಾ ಬೋರ್‌ವೆಲ್ ಕೊರಿಯುವ ಮೊದಲು ಆ ಭಾಗದಲ್ಲಿ ಅಂತರ್ಜಲವಿದೆಯೇ ಎಂದು ಪರೀಕ್ಷಿಸುವುದು ಒಳ್ಳೆಯದು.

ಅಂತರ್ಜಲವಿದೆಯೇ ಎಂದು ತಿಳಿಯಲು ವೈಜ್ಞಾನಿಕ ವಿಧಾನಗಳಿವೆ, ವೈಜ್ಞಾನಿಕ ವಿಧಾನಗಳನ್ನು ನಂಬಿ ಬಾವಿ ಅಥವಾ ಬೋರ್‌ವೆಲ್ ತೋಡಿದವರಿಗೆ ನೀರು ಸಿಗದೇ ಇರುವ ಎಷ್ಟೋ ಉದಾಹರಣೆಗಳಿವೆ. ಕೆಲವರಿಗೆ ತುಂಬಾ ಆಳವಾಗಿ ಭೂಮಿಯನ್ನು ಕೊರಿದಾಗ ಸ್ವಲ್ಪ ನೀರು ಸಿಗಬಹುದು, ಆದರೆ ಅಷ್ಟು ನೀರು ನಮ್ಮ ಅವಶ್ಯಕತೆಗೆ ಸಾಕಾಗುವುದಿಲ್ಲ. ಇನ್ನು ಕೆಲವು ಬಾವಿಗಳಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ಇರುತ್ತದೆ, ಮಳೆಗಾಲದಲ್ಲಿ ನೀರು ಸಿಗುವುದಿಲ್ಲ, ಬೇಸಿಗೆಯಲ್ಲಿ ನೀರು ಬೇಕಾಗಿರುತ್ತೆ. ಆದರೆ ಆವಾಗ ನೀರಿಲ್ಲ ಎಂದರೆ ಬಾವಿ, ಬೋರ್‌ವೆಲ್ ಇದ್ದು ಏನು ಪ್ರಯೋಜನ ಅಲ್ವಾ?
ಆದರೆ ನಮ್ಮ ಹಿರಿಯರು ಬಾವಿ ತೋಡುವಾಗ ಕೆಲವೊಂದು ವಿಧಾನ ಅನುಸರಿಸುತ್ತಿದ್ದರು. ಇದನ್ನು ಈಗಲೂ ಕೆಲವು ಅನುಸರಿಸುತ್ತಾರೆ. ಅದೇನೆಂದರೆ ತೆಂಗಿನಕಾಯಿ ಅಂಗೈಯಲ್ಲಿಟ್ಟು ಎಲ್ಲಿ ಅಂತರ್ಜಲ ಅಧಿಕವಿದೆ ಎಂದು ಮೆಲ್ಲನೆ ನಡೆಯುತ್ತಾ ಪರಿಶೀಲಿಸಲಾಗುವುದು. ಎಲ್ಲಿ ಅಂತರ್ಜಲವಿರುತ್ತದೋ ಆ ಸ್ಥಳಕ್ಕೆ ಬಂದಾಗ ತೆಂಗಿನಕಾಯಿ ಅಲುಗಾಡಲರಂಭಿಸುತ್ತದೆ ಅಲ್ಲದೆ ತೆಂಗಿನಕಾಯಿ ಜುಟ್ಟು ನೇರವಾಗಿ ನಿಲ್ಲುತ್ತದೆ, ಆ ಸ್ಥಳದಲ್ಲಿ ಭಾವಿ ತೋಡಿದರೆ ಖಂಡಿತ ನೀರು ಸಿಗುವುದು. ಈ ವೀಡಿಯೋ ನೋಡಿದವರು ಹಿಂದೆ ನಮ್ಮ ಹಿರಿಯರು ಅನುಸರಿಸುತ್ತಿದ್ದ ಕೆಲವೊಂದು ವಿಧಾನಗಳು ಬರೀ ನಂಬಿಕೆಯಲ್ಲ ಅದರಲ್ಲಿ ವೈಜ್ಞಾನಿಕ ಅಂಶವಿರುತ್ತದೆ.



Click it and Unblock the Notifications
