Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಹಿಂದೂಗಳಿಗೆ ತೆಂಗಿನಕಾಯಿ ಪವಿತ್ರವಾಗಿದ್ದು ಹೇಗೆ? ಅದರ ಹಿಂದೆ ಅಚ್ಚರಿಯ ಕಥೆ!
ಹಿಂದೂ ಧರ್ಮದ ಹಲವು ಆಚರಣೆಗಳು ವೈಜ್ಞಾನಿಕ ನೆಲಗಟ್ಟುಗಳ ಮೇಲೆ ನಿಂತಿವೆ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ಹಿಂದೂ ಧರ್ಮದ ರೀತಿ ರುಜುವಾತುಗಳನ್ನು ಆಚರಿಸುವುದು ಹಲವು ಕಾರಣಗಳಿಂದ ಅತ್ಯುತ್ತಮ ಅಭ್ಯಾಸ ಎಂಬುದನ್ನು ಹಿರಿಯರಿಂದ ಹಿಡಿದು ಎಲ್ಲರು ಒಪ್ಪಿಕೊಂಡಿರುತ್ತೇವೆ. ಋಗ್ವೇದದ ಕಾಲದಿಂದ ನಡೆದು ಬಂದ ಆಚರಣೆಗಳು, ವೈದಿಕ ಕಾಲದ ಆಚರಣೆಗಳು ಸಹ ಇಂದಿಗೂ ಪ್ರಸ್ತುತ ಎನಿಸುವಷ್ಟು ವೈಜ್ಞಾನಿಕವಾಗಿವೆ.
ಇನ್ನು ಹಿಂದೂ ಪುರಾಣಗಳು, ಧರ್ಮ ಗ್ರಂಥ ಸೇರಿ ಶಾಸ್ತ್ರಗಳಲ್ಲಿ ಹೇಳಿರುವ ಹಲವು ವಿಚಾರಗಳನ್ನು ನಾವು ಇಂದಿಗೂ ಪಾಲಿಸುತ್ತಿದ್ದೇವೆ. ಅದ್ರಲ್ಲೂ ದೇವರ ವಿಚಾರದಲ್ಲಿ ನಾವು ಕಠಿಣ ನೀತಿಗಳನ್ನು ಕೂಡ ನಿಷ್ಠೆಯಿಂದ ಪಾಲಿಸುತ್ತೇವೆ. ಇಂತಹ ನೀತಿಗಳ ಸಾಲಿನಲ್ಲಿ ನಾವಿಂದು ತೆಂಗನಕಾಯಿ ಒಡೆಯುವ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ಹೌದು ನೀವು ದೇವಾಲಯಕ್ಕೆ ತೆರಳಿದಾಗ ತೆಂಗಿನಕಾಯಿ ಅರ್ಪಿಸುವುದು ನೋಡಿರಬಹುದು. ಎಲ್ಲರು ಈ ತೆಂಗಿನಕಾಯಿ ಅರ್ಪಿಸಿ ಪೂಜೆ ಸಲ್ಲಿಸಿ ಹೂವು, ಹಣ್ಣು ಪ್ರಸಾದವಾಗಿ ಪಡೆದು ಮರಳುತ್ತೇವೆ. ಹಾಗೆ ತೆಂಗಿನಕಾಯಿಗೆ ಹಿಂದೂ ಧರ್ಮದಲ್ಲಿ ಪ್ರಮುಖ ಸ್ಥಾನ ನೀಡಲಾಗುತ್ತದೆ. ಎಲ್ಲಾ ಶುಭ ಕಾರ್ಯದೊಂದಿಗೆ ತೆಂಗಿನಕಾಯಿ ಬೆಸೆದುಕೊಂಡಿದೆ. ಯಾವುದೇ ಶುಭ ಕಾರ್ಯ ಇರಲಿ ಒಂದು ತೆಂಗಿನಕಾಯಿ ಒಡದ ಬಳಿಕವೇ ಅದಕ್ಕೆ ಆರಂಭ ಸಿಗಲಿದೆ.
ಹಾಗೆ ತೆಂಗಿನಕಾಯಿ ಇಟ್ಟು ಪೂಜಿಸುವುದು ಸಹ ನೋಡಬಹುದು, ಕಲಷ ಪೂಜೆಯಲ್ಲಿ ತೆಂಗಿನಕಾಯಿ ಇರಲೇಬೇಕು. ಇನ್ನು ಗಣಪತಿ ಹಬ್ಬದಲ್ಲಿ ಗಣೇಶನ ಮೂರ್ತಿ ರಚಿಸಲು ತೆಂಗಿನಕಾಯಿ ಬಳಸುವುದು ನೋಡಬಹುದು. ಹಾಗೆ ದೇವಾಲಯಕ್ಕೆ ನೀಡುವ ಹಣ್ಣುಗಳು, ಹೂವುಗಳಿಗೆ ಯಾವುದೇ ರೀತಿ ಹಾನಿಯಾಗದಂತೆ ನೋಡಿಕೊಂಡು ಅದನ್ನು ಅರ್ಪಿಸಲಾಗುತ್ತದೆ. ಆದ್ರೆ ತೆಂಗಿನಕಾಯಿಯನ್ನು ಒಡೆದು ನಂತರ ದೇವರಿಗೆ ಅರ್ಪಿಸಲಾಗುತ್ತದೆ. ಇಡಿ ತೆಂಗಿನಕಾಯಿ ಒಡೆದ ಬಳಿಕ ಪ್ರಸಾದವಾಗಿ ಪೂಜ್ಯನೀಯ ಸ್ಥಾನ ಪಡೆಯುತ್ತದೆ.
ಇಂತಹ ವಿಶೇಷ ಹಾಗೂ ಆಧ್ಯಾತ್ಮಿಕ ಸ್ಥಾನ ಪಡೆದಿರುವ ತೆಂಗಿನಕಾಯಿಯನ್ನು ದೇವಾಲಯದಲ್ಲಿ ಒಡೆಯುವುದು ಏಕೆ ಎಂಬುದು ನಿಮಗೆ ಗೊತ್ತಾ? ಹೌದು ದೇವಾಲಯಕ್ಕೆ ತೆರಳುವ ಪ್ರತಿಯೊಬ್ಬರು ತೆಂಗಿನಕಾಯಿ ಪಡೆಯುತ್ತಾರೆ. ಹಾಗೆ ಮತ್ತೆ ಕೆಲವರು ತಮ್ಮ ಬೇಡಿಕೆ ಈಡೇರಿದರೆ ನೂರು ತೆಂಗಿನಕಾಯಿ 101, 202, 501, 1001 ತೆಂಗಿನಕಾಯಿ ಒಡೆಯುವ ಹರಕೆ ಕಟ್ಟಿಕೊಳ್ಳುವುದು, ತಮ್ಮ ತಲೆಯ ಮೇಲೆ ತೆಂಗಿನಕಾಯಿ ಒಡೆಯುವುದು ಸಹ ನೋಡಬಹುದು.
ಹಾಗಾದ್ರೆ ತೆಂಗನಕಾಯಿ ಒಡೆಯುವ ಹಿಂದಿರುವ ಸಂಪ್ರದಾಯವೇನು? ಯಾವ ಕಾರಣಕ್ಕೆ ನಾವು ದೇವಾಲಯದಲ್ಲಿ ತೆಂಗಿನಕಾಯಿ ಒಡೆಯಬೇಕು? ಈ ರೀತಿ ತೆಂಗಿನಕಾಯಿ ಒಡೆಯುವುದರಿಂದ ನಮಗೆ ಸಿಗುವ ಲಾಭವಾದರೂ ಏನು ಎಂಬೆಲ್ಲಾ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ತೆಂಗಿನಕಾಯಿ ನೈವೇದ್ಯ
ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸುವುದು ದೇವರಿಗೆ ತನ್ನನ್ನು ತಾನು ಅರ್ಪಿಸಿಕೊಳ್ಳುವ ಸಾಂಕೇತಿಕ ಕ್ರಿಯೆಯಾಗಿದೆ. ಹಬ್ಬಗಳು, ಶುಭ ಸಂದರ್ಭಗಳಲ್ಲಿ ತೆಂಗಿನಕಾಯಿ ಒಡೆಯುವುದು ಯುಗಯುಗಗಳಿಂದ ಹಿಂದೂ ಸಂಪ್ರದಾಯದ ಭಾಗವಾಗಿದೆ. ತೆಂಗಿನಕಾಯಿಯಿಂದ ಸಿಪ್ಪೆಯನ್ನು ತೆಗೆಯುವುದು ನಾವು ಬಿಟ್ಟುಬಿಡಬೇಕಾದ ಆಂತರಿಕ ಆಸೆಗಳು ಮತ್ತು ಭೌತಿಕ ಆಸೆಗಳನ್ನು ಸಂಕೇತಿಸುತ್ತದೆ. ಹಾಗೆ ತೆಂಗಿನಕಾಯಿಯನ್ನು ಒಡೆಯುವುದು ನಮ್ಮ ಅಹಂಕಾರವನ್ನು ಒಡೆದು ಹಾಕುವ ಸಂಕೇತ.
ತೆಂಗಿನಕಾಯಿ ಒಡೆದ ನಂತರ ತೆಂಗಿನ ನೀರು ಅದರಿಂದ ಹರಿಯುತ್ತದೆ. ಇದು ನಮ್ಮ ಮನಸ್ಸು ಮತ್ತು ದೇಹದಿಂದ ಹರಿಯಬೇಕಾದ ನಮ್ಮೊಳಗಿನ ಎಲ್ಲಾ ನಕಾರಾತ್ಮಕತೆಯನ್ನು ಸಂಕೇತಿಸುತ್ತದೆ. ಹಾಗೆ ಬಿಳಿಯ ಭಾಗವು ಶಾಂತಿಯನ್ನು ಉತ್ತೇಜಿಸುವ ಅಂಶವೂ ಹೌದು. ಹಾಗೆ ತೆಂಗಿನಕಾಯಿಯನ್ನು ಒಡೆಯುವುದು ನಮ್ಮನ್ನು ನಾವು ದೇವರಲ್ಲಿ ಸಮರ್ಪಿಸುವ ಅಂಶ ಎಂದು ಪರಿಗಣಿಸಲಾಗುತ್ತದೆ.
ಲಕ್ಷ್ಮಿ ದೇವಿಗೆ ಸಮಾನಾರ್ಥಕ
ತೆಂಗಿನಕಾಯಿ ಭಾರತದಲ್ಲಿ ಸಂಪತ್ತು, ಸಮೃದ್ಧಿ ಮತ್ತು ಶುಭವನ್ನು ಸಂಕೇತಿಸುತ್ತದೆ. ಅಲ್ಲದೆ ತೆಂಗಿನಕಾಯಿಯನ್ನು ಲಕ್ಷ್ಮಿ ದೇವಿಗೆ ಸಮಾನವಾಗಿ ನೋಡಲಾಗಿದೆ. ಲಕ್ಷ್ಮಿಯ ಆಶೀರ್ವಾದ ಪಡೆಯುವ ಸಲುವಾಗಿಯೂ ತೆಂಗಿನಕಾಯಿಯನ್ನು ಒಡೆಯಲಾಗುತ್ತದೆ. ಸಾಮಾನ್ಯವಾಗಿ ತೆಂಗಿನಕಾಯಿಯು ಸಂಪತ್ತು ವೃದ್ಧಿಯ ಪ್ರತೀಕ ಎಂದು ಸಹ ಕರೆಯಲಾಗಿದೆ.
ತೆಂಗಿನಕಾಯಿ ಪಡೆಯುವುದು ಆರಂಭಗೊಂಡಿದ್ದು ಯಾವಾಗ?
ದೇವಾಲಯದಲ್ಲಿ ಹಾಗೆ ಶುಭ ಕಾರ್ಯಗಳಲ್ಲಿ ತೆಂಗಿನಕಾಯಿಯ ಬಳಕೆ ಮಾಡುವುದು ಸಾವಿರಾರು ವರ್ಷಗಳ ಹಿಂದೆಯೇ ಆರಂಭಗೊಂಡಿದೆ. ಅಂದಾಜಿನ ಪ್ರಕಾರ 11 ಸಾವಿರ ವರ್ಷಗಳ ಹಿಂದೆ ವೈದಿಕ ಆಚರಣೆಯಲ್ಲಿ ತೆಂಗಿನಕಾಯಿ ಅರ್ಪಿಸುವ ಆಚರಣೆ ನಡೆದಿತ್ತು ಎಂದು ಹೇಳಲಾಗಿದೆ. ಹಾಗೆ ಋಷಿ ವಿಶ್ವಾಮಿತ್ರರು ಪ್ರಾಣಿ ವಧೆಯನ್ನು ತಡೆಯುವ ಉದ್ದೇಶದಿಂದ ಪ್ರಯಾಣ ಮಾಡುವಾಗ ಅಲ್ಲಿನ ಜನರಿಗೆ ತಿಳುವಳಿಕೆ ಹೇಳಿದ್ದರು. ಈ ಸಮಯದಲ್ಲಿ ಪ್ರಾಣಿಯನ್ನು ಒಲಿ ಕೊಡುವ ಬದಲಾಗಿ ಈ ತೆಂಗಿನಕಾಯಿಯನ್ನು ಒಡೆದು ಬಲಿ ಕೊಡಿ ಎಂದರಂತೆ. ಅದರಂತೆ ಒಂದು ತೆಂಗಿನಕಾಯಿ ಒಡೆದು ಅದರಿಂದ ಬರುವ ನೀರು ರಕ್ತದಂತೆ, ಒಳಗಿನ ಪದರವು ಮಾಂಸವಿದ್ದಂತೆ ಎಂದು ಜನರಲ್ಲಿ ಪ್ರಾಣಿ ಬಲಿ ಮತ್ತು ಕ್ರೂರತ್ವ ಹೋಗಲಾಡಿಸಲು ಮುಂದಾದರಂತೆ. ಅಲ್ಲಿಂದ ಮುಂದೆ ದೇವರ ಪೂಜೆಯಲ್ಲಿ ತೆಂಗಿನಕಾಯಿ ಬಳಕೆ ಮಾಡುವುದು ಸಂಪ್ರದಾಯವಾಗಿ ಬಳಕೆಯಾಗುತ್ತಾ ಬಂದಿದೆ ಎಂದು ಸಹ ಹೇಳಲಾಗಿದೆ.
ಹಾಗೆ ಇನ್ನೊಂದು ಕಡೆ ತೆಂಗಿನಕಾಯಿಯು ಬ್ರಹ್ಮಾಂಡದ ಸೃಷ್ಟಿಯ ಸಂಕೇತ ಎಂದು ಕರೆಯಲಾಗಿದೆ. ಪ್ರಜಾಪತಿಯು ತನ್ನ ತಲೆಯನ್ನು ಬಲಿಯಾಗಿ ಅರ್ಪಿಸಿದ ಅದರಿಂದ ಹೊರಹೊಮ್ಮಿದ ಮರದಲ್ಲಿ ತೆಂಗಿನಕಾಯಿ ಬಿಡಲು ಆರಂಭಿಸಿತು ಎಂದು ಪುರಾಣ ಕಥೆ ಹೇಳುತ್ತದೆ.



Click it and Unblock the Notifications

