Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ಭಾರತೀಯರು ಹೇಗೆ ಊಟ ಬಡಿಸುತ್ತೇವೆ? ಕುಕ್ಕರ್‌ನಲ್ಲಿ ಟೀ ವೀಡಿಯೋ ವೈರಲ್
ನಾವು ಭಾರತೀಯರು ಹೇಗೆ ಊಟ ಬಡಿಸುತ್ತೇವೆ?
ನಾವು ಭಾರತೀಯರು ಹೇಗೆ ಊಟ ಬಡಿಸುತ್ತೇವೆ ಎಂದು ಮಾಡಿರುವ ಕಾಮಿಡಿ ವೀಡಿಯೋ ತುಂಬಾನೇ ವೈರಲ್ ಆಗಿದೆ, ಅದರಲ್ಲಿ ಅವರಾಡುವ ಮಾತುಗಳು ಪ್ರತಿಯೊಬ್ಬ ಭಾರತೋಯನ ಬದುಕಿನಲ್ಲಿ ನಡೆಯುತ್ತದೆ, ಹಾಗಾಗಿ ಈ ವೀಡಿಯೋ ವೈರಲ್ ಆಗಿದೆ.

ನಾವು ಮನೆಗೆ ಬಂದಾಗ ಹೇಗೆ ಅತಿಥಿ ಸತ್ಕಾರ ಮಾಡುತ್ತೇವೆ ಎಂಬುವುದ ಕುರಿತ ವೀಡಿಯೋ ಆಗಿದೆ. ನಾವು ಮನೆಗೆ ಬಂದ ಅತಿಥಿಗಳಿಗೆ ತುಂಬಾನೇ ಆಹಾರ ಬಡಿಸುತ್ತೇವೆ, ಅವರು ಸಾಕು ಎಂದು ಎದ್ದೇಳಲು ಬಿಡುವುದಿಲ್ಲ, ಇನ್ನೊಂದು ರೊಟ್ಟಿ ತಿನ್ನಿ, ಈ ಸ್ವೀಟ್ ತಿನ್ನಿ ಎಂದು ಬಡಿಸುತ್ತೇವೆ, ಅವರನ್ನು ತಿಂದ ತಟ್ಟೆ ಎತ್ತಲು ಬಿಡುವುದಿಲ್ಲ, ಅವರು ಕೈ ತೊಳೆಯಲು ಹೋದಾಗ ನೀವು ಸರಿಯಾಗಿ ತಿನ್ನಲೇ ಇಲ್ಲ ಎಂದು ಹೇಳುತ್ತೇವೆ.. ಇದೆಲ್ಲಾ ಎಲ್ಲರ ಮನೆಯಲ್ಲಿ ಅತಿಥಿ ಬಂದಾಗ ನಡೆಯುವ ಸಂಗತಿ.
ಮನೆಗೆ ಅತಿಥಿ ಬಂದಾಗ ದಿನಾ ಮಾಡವಂತೆ ಸಾಧಾರಣ ಅಡುಗೆ ಮಾಡಲ್ಲ, ಅವರಿಗಾಗಿಯೇ ಸ್ಪೆಷಲ್ ಅಡುಗೆ ಮಾಡುತ್ತೇವೆ, ಅವರು ಹೊಟ್ಟೆ ತುಂಬಿದೆ ಎಂದರೂ ಕೇಳಲ್ಲ ಬಡಿಸುತ್ತಲೇ ಇರುತ್ತೇವೆ, ಅವರೂ ನಮ್ಮ ಪ್ರೀತಿಯ ಮಾತಿಗೆ ಕಟ್ಟುಬಿದ್ದು ತಿನ್ನುತ್ತಲೇ ಇರುತ್ತಾರೆ, ನಂತರ ಕೈ ತೊಳೆದು ಬರುವಷ್ಟರಲ್ಲಿ ಸಿಹಿ ಕೊಡುತ್ತೇವೆ, ಇದನ್ನು ಒಂದು ಕಾಮಿಡಿ ವೀಡಿಯೋ ರೀತಿ ಮಾಡಿದ್ದಾರೆ, ಈ ವೀಡಿಯೋ ಎಲ್ಲರಿಗೂ ಅನ್ವಯಿಸುವುದರಿಂದ ವೈರಲ್ ಆಗಿದೆ.
ಕುಕ್ಕರ್‌ನಲ್ಲಿ ಟೀ ಮಾಡುವ ವೈರಲ್ ವೀಡಿಯೋ
ಕುಕ್ಕರ್ ಕಂಪನಿಯವರಿಗೂ ಗೊತ್ತಿರಲಿಲ್ಲ ಕುಕ್ಕರ್‌ನಿಂದ ಟೀ ಮಾಡಬಹುದು ಅಂತ, ಆದರೆ ಇಲ್ಲೊಬ್ಬರು ವ್ಯಾಪಾರಿ ತಮ್ಮ ಬುದ್ಧಿವಂತಿಕೆ ಬಳಸಿ ಕುಕ್ಕರ್ ಬಳಸಿ ಟೀ ಮಾಡುತ್ತಿದ್ದಾರೆ, ಅದಕ್ಕಾಗಿ ಕುಕ್ಕರ್‌ನ ಸ್ವಲ್ಪ ಅಲ್ಟ್ರಾರೇಷನ್ ಕೂಡ ಮಾಡಿದ್ದಾರೆ. ಇದನ್ನು ನೋಡಿ ಟೀ ಅಂಗಡಿಯವರು ಬಳಸುತ್ತಾರೆ ಎಂದು ಕುಕ್ಕರ್ ಕಂಪನಿಯವರು ಇಂಥ ಕುಕ್ಕರ್ ಮಾಡಿದರೂ ಮಾಡಬಹುದು, ಆ ರೀತಿ ಕುಕ್ಕರ್ ಮಾರ್ಪಾಡು ಮಾಡಿದ್ದಾರೆ. ಒಂದು ಸ್ಟೀಲ್ ಕಪ್‌ಗೆ ಹಸಿ ಹಾಲು, ಸಕ್ಕರೆ, ಟೀ ಪುಡಿ ಅಥವಾ ಕಾಫಿ ಪುಡಿ ಹಾಕಿ ಕುಕ್ಕರ್‌ನ ಹ್ಯಾಂಡಲ್ ತಿರುಗಿಸಿದರೆ ಹಬೆ ಬರುತ್ತದೆ, ಅದರಲ್ಲಿಯೇ ಟೀ ಅಥವಾ ಕಾಫಿ ರೆಡಿಯಾಗುತ್ತದೆ. ಇದನ್ನು ಟೇಸ್ಟ್ ಮಾಡಿದವರು ರುಚಿ ತುಂಬಾ ಟೇಸ್ಟ್ ಅನ್ನುತ್ತಿದ್ದಾರೆ..
Frustrated engineers chai point. Yep. Koramangala. @peakbengaluru pic.twitter.com/OJ80qahrKX
— gcmouli (@gcmouli) May 7, 2024
ಬೆಂಗಳೂರಿನಲ್ಲಿದೆ ಫ್ರಸ್ಟರೇಟಡ್ ಇಂಜಿನಿಯರ್ ಚಾಯ್ ಪಾಯಿಂಟ್
ಹೌದು ಈ ಟೀ ಅಂಗಡಿಯ ಹೆಸರೇ ಸ್ವಲ್ಪ ವಿಚಿತ್ರ ಆಗಿದೆ ಈ ಕಾರಣದಿಂದಲೇ ಇದು ಗಮನ ಸೆಳೆಯುತ್ತಿದೆ. ಇದು ಕೋರಮಂಗಲ ಇದೆ, ಐಟಿ ಕಂಪನಿಯಲ್ಲಿ ಕೆಲಸ ಮಾಡುವವರು ಇಲ್ಲಿ ಬಂದು ಟೀ ಕುಡಿದರೆ ರಿಲ್ಯಾಕ್ಸ್ ಆಗುತ್ತೀರಿ ಎಂದು ಈ ಬೋರ್ಡ್ ಹಾಕಿರಬಹುದು, ಎಲ್ಲವೂ ಬ್ಯುಸ್‌ನೆಸ್ ಐಡಿಯಾ ಅಲ್ವಾ? ಈ ಪೋಸ್ಟ್‌ಗೆ ಕೆಲವರು ಟೀ ಮಾಡುವವರು ಪ್ರಸ್ಟರೇಟಡ್ ಆಗಿರದಿದ್ದರೆ ಸಾಕು ಎಂದು ಕಮೆಂಟ್ ಮಾಡಿದರೆ ಇನ್ನು ಕೆಲವರು ರಾಮೇಶ್ವರಂ ಕೆಫೆಗಿಂತ ಈ ಸ್ಥಳದಲ್ಲಿ ಗ್ರಾಹಕರು ಹೆಚ್ಚಿರಬಹುದೆಂದು ಕಮೆಂಟ್ ಮಾಡಿದ್ದಾರೆ.



Click it and Unblock the Notifications