Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
15 ಸಾವಿರ ರೂಪಾಯಿಯನ್ನು ₹15 ಲಕ್ಷ ಮಾಡಿದ ಯುವಕ...! ಅದೃಷ್ಟ ಹುಡುಕಿ ಬರೋದು ಅಂದ್ರೆ ಇದೆ..!
ಕೆಲವರ ಅದೃಷ್ಟ ಯಾವಾಗ ಹೇಘೆ ಬದಲಾಗುತ್ತೆ ಅನ್ನೋದನ್ನ ಯಾರು ಸಹ ಊಹಿಸಲು ಸಾಧ್ಯವಾಗುವುದಿಲ್ಲ. ನೀವು ಕೆಲವರ ಜೀವನ ರಾತ್ರಿ ಬೆಳಗಾಗುವುದಲ್ಲಿ ಬದಲಾಗಿರೋದನ್ನು ನೀವು ಕೇಳಿರಬಹುದು. ಆದ್ರೆ ಇಲ್ಲೊಂದು ಪ್ರಕರಣದಲ್ಲೂ ಸಹ ಇದೇ ರೀತಿ ಅದೃಷ್ಟ ಖುಲಾಯಿಸಿದ ಕಥೆ ಇದೆ.
ಹೌದು ಯುವ ಸ್ಟಾರ್ಟ್ ಅಪ್ ಉದ್ಯಮಿಯೊಬ್ಬ ತನ್ನ ಬಳಿ ಇದ್ದ 15 ಸಾವಿರ ರೂಪಾಯಿಂದ 15 ಲಕ್ಷ ರೂಪಾಯಿ ದುಡಿದ ಕಥೆ ಇದು. ನೀವು VCMedia ಲ್ಯಾಬ್ಸ್ ಎಂಬ ಸ್ಟಾರ್ಟ್ ಅಪ್ ಬಗ್ಗೆ ಕೇಳಿರಬಹುದು. ಈ ಉದ್ಯಮಕ್ಕೆ ಸೇರಿಕೊಂಡವರನ ಕಥೆ ಇದು. ಹಾಗಾದ್ರೆ ಆತ 15 ಸಾವಿರವನ್ನ 15 ಲಕ್ಷ ರೂಪಾಯಿ ಆಗಿ ಬದಲಾಯಿಸಿದ್ದು ಹೇಗೆ? ಎಂಬ ಅದ್ಭುತ ಕಥೆ ಇಲ್ಲಿದೆ ನೋಡಿ.

22 ವರ್ಷದ ಈ ಸುಶ್ರುತ್ ಮಿಶ್ರಾ ಎಂಬಾತ 40 ಸಾವಿರ ಸಂಬಳದಿಂದ 15 ಲಕ್ಷ ವೇತನದ ಕಂಪನಿ ಸೇರಿಕೊಂಡ ಕಥೆಯನ್ನು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಹೇಗೆ ತನ್ನ ಮಾಜಿ ಪ್ರೇಯಸಿಯಿಂದ 15 ಸಾವಿರ ಪಡೆದು ಅದನ್ನು 15 ಲಕ್ಷ ರೂಪಾಯಿ ಆಗಿ ಬದಲಾಯಿಸಿದೆ ಎಂದು ಹೇಳಿಕೊಂಡಿದ್ದಾರೆ.
VCMedia ಸೃಷ್ಟಿಕರ್ತರಾದ ಸುಶ್ರುತ್ ಮಿಶ್ರಾ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ: "22 ನಲ್ಲಿ, ನಾನು ಬೆಂಗಳೂರಿಗೆ ಹಿಂದಿರುಗಲು ಟಿಕೆಟ್ ಕಾಯ್ದಿರಿಸಲು ತನ್ನ ಮಾಜಿ ಪ್ರೇಯಸಿಯಿಂದ 15 ಸಾವಿರ ಸಾಲ ಪಡೆದಿದ್ದೆ. ನನ್ನ ಬಳಿ ಒಂದು ಹುನ್ನಾರವಿರಲಿಲ್ಲ. ಆದರೆ ಆ ಹಂಬಲ ₹15,000 ಅನ್ನು ₹15,00,000 ಆಗಿ ಪರಿವರ್ತಿಸಿತು." ಎಂದು ಬರೆದುಕೊಂಡಿದ್ದಾರೆ.
ಹಾಗಾದ್ರೆ 15 ಸಾವಿರವನ್ನು 15 ಲಕ್ಷವಾಗಿ ಅವರು ಪರಿವರ್ತಿಸಿದ್ದು ಹೇಗೆ?
ಅದು ಸೆಪ್ಟೆಂಬರ್ 2022, ಸುಶ್ರತ್ ಮಿಶ್ರಾ ಎಂಬ ಉದ್ಯಮಿ ಹುಟ್ಟಿಕೊಂಡ ದಿನವಂತೆ. ಆತನ ಮಾಜಿ ಪ್ರೇಯಸಿ ಬೆಂಗಳೂರಿನಲ್ಲಿ ಡೆವಲೋಪರ್ ಈವೆಂಟ್‌ಗೆ ಆಹ್ವಾನ ನೀಡಿದ್ದರಂತೆ. ಅಲ್ಲದೆ ಸ್ಟಾರ್ಟ್ ಅಪ್ ನಿರ್ಮಾತೃಗಳ ಭೇಟಿ ಮಾಡಿಸುವುದಾಗಿ ಪ್ರಾಮಿಸ್ ಮಾಡಿದ್ದಳಂತೆ. 'ಅಲ್ಲಿ ನಾನೇನಾದ್ರು ಪಡೆದುಕೊಳ್ತೇನೆ' ಎಂಬ ವಿಶ್ವಾಸವಿತ್ತು ಎಂದು ಎಕ್ಸ್ ನಲ್ಲಿ ಮಿಶ್ರಾ ಬರೆದುಕೊಂಡಿದ್ದಾರೆ.
ಈ ವೇಳೆಗೆ ಅವರು 40 ರಿಂದ 50 ಸಾವಿರ ರೂಪಾಯಿ ತಿಂಗಳಿಗೆ ದುಡಿಯುತ್ತಿದ್ದರು. ಅಲ್ಪ ಸ್ವಲ್ಪ ಉಳಿತಾಯದ ಹಣವೂ ಅವರ ಬಳಿ ಇತ್ತು. ಆದರೆ ಬೆಂಗಳೂರಿಗೆ ವಾಪಾಸು ಹೋಗಲು ಸಹ ಅವರಬಳಿ ಹಣವಿರಲಿಲ್ಲವಂತೆ. ಕೇವಲ 3 ಸಾವಿರ ಅಷ್ಟೇ ಅವರ ಬ್ಯಾಂಕ್ ಅಕೌಂಟ್‌ನಲ್ಲಿ ಉಳಿದಿತ್ತಂತೆ, ಹೀಗಾಗಿ ಮಾಜಿ ಪ್ರೇಯಸಿ ಬಳಿ 15 ಸಾವಿರ ಸಾಲ ಪಡೆದು ಬೆಂಗಳೂರಿಗೆ ಬಂದರಂತೆ.
ಈ ಈವೆಂಟ್‌ಗೆ ಬಂದ ಮಿಶ್ರಾ, ಕಂಪನಿಯೊಂದರ ಡೆವಲಪರ್ ಮತ್ತು ಕಮ್ಯೂನಿಟಿ ಮ್ಯಾನೇಜರ್ ಪಾತ್ರಕ್ಕೆ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ ಎಂದು ತಿಳಿದುಕೊಂಡರು. ಬಳಿಕ ಈ ಅವಕಾಶ ಬಳಸಿಕೊಳ್ಳಲು ಮುಂದಾದ ಅವರು ನಿರಂತರ ಸಂದರ್ಶನದ ಮೂಲಕ ಈ ಕೆಲಸ ಗಿಟ್ಟಿಸಿದರಂತೆ. ಅವರಿಗೆ ವರ್ಷಕ್ಕೆ 15 ಲಕ್ಷ ರೂಪಾಯಿ ಪ್ಯಾಕೇಜ್ ಇರುವ ಕೆಲಸ ಇದಾಗಿತ್ತು.
ಇದೆಲ್ಲಾ ಬದಲಾಗಿದ್ದು ಕೇವಲ 15 ದಿನಗಳಲ್ಲಿ ಎಂದು ಅವರು ಬರೆದುಕೊಂಡಿದ್ದಾರೆ. ಅಂದು ಅವರು 15 ಸಾವಿರ ರೂಪಾಯಿ ಸಾಲ ಪಡೆಯದೇ ಹೋಗಿದ್ದರೆ ಇಂದು ಈ ಕಂಪನಿ ಕಟ್ಟಿ ಬೆಳೆಸಲು ಸಾಧ್ಯವಾಗುತ್ತಿರಲಿಲ್ಲವಂತೆ. ಎಲ್ಲರಿಗೂ ಈ ರೀತಿಯ ಅವಕಾಶ ಸಿಗುತ್ತದೆ ಆದರೆ ಅವರು ಈ ಅವಕಾಶ ಬಳಸಿಕೊಳ್ಳುವಲ್ಲಿ ಯಡುವುತ್ತಾರೆ ಎಂಬುದನ್ನು ಈ ಪೋಸ್ಟ್ ಮೂಲಕ ಅವರು ಹಂಚಿಕೊಂಡಿದ್ದಾರೆ.
ಜೀವನದಲ್ಲಿ ಯಾವಾಗ ಬೇಕಾದರು ಅವಕಾಶಗಳು ಹುಡುಕಿ ಬರಬಹುದು. ಈ ಅವಕಾಶ ಸಿಕ್ಕ ತಕ್ಷಣ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಅನ್ನೋದು ಹಲವರ ಅಭಪ್ರಾಯವಾಗಿದೆ. ಬೆಂಗಳೂರಿಗೆ ಬರಲು ಹಣವಿಲ್ಲದಾತ ಈಗ ತಿಂಗಳಿಗೆ 1 ಲಕ್ಷ ರೂಪಾಯಿಗೂ ಅಧಿಕ ವೇತನ ಬರುವ ಕೆಲಸ ಸಿಕ್ಕಿರುವುದು ಇದಕ್ಕೆ ಸಾಕ್ಷಿಯಾಗಿದೆ.



Click it and Unblock the Notifications