Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
Hosa Todaku : ಯುಗಾದಿಯ ಮಾರನೇಯ ದಿನ ಹೊಸ ತೊಡಕು ಹಬ್ಬ, ಈ ದಿನ ಮದ್ಯ, ಮಾಂಸದ್ದೇ ಕಾರುಬಾರು
ಕನ್ನಡಿಗರಿಗೆ ಹೊಸ ವರ್ಷ ಎಂದರೆ ಯುಗಾದಿಯಿಂದ ಶುರು. ಯುಗಾದಿಗೆ ಹೊಸ ಸಂವತ್ಸರ ಪ್ರಾರಂಭವಾಗುವುದು.
ಯುಗಾದಿಯನ್ನು ನಾವು ಸಡಗರ ಸಂಭ್ರಮದಿಂದ ಸ್ವಾಗತಿಸುತ್ತೇವೆ. ಬೆಳಗ್ಗೆ ಎದ್ದು ಸ್ನಾನ ಮಾಡಿ ಮನೆಯ ಮುಂದೆ ರಂಗೋಲಿ ಹಾಕಿ, ಹೊಸ ಬಟ್ಟೆ ಧರಿಸಿ ದೇವರಿಗೆ ಪೂಜೆಯನ್ನು ಮಾಡಿ ಬೇವು-ಬೆಲ್ಲ ಸವಿಯುತ್ತಾ ಈ ದಿನ ಆಚರಿಸುತ್ತೇವೆ.
ಯುಗಾದಿ ಹಬ್ಬದ ಶಾಪಿಂಗ್ ಎರಡು ಮೂರು ದಿನಗಳಿಂದಲೇ ಭರ್ಜರಿಯಾಗಿ ನಡೆಯುತ್ತಿದೆ. ಇವತ್ತು ಮಾರ್ಕೆಟ್ ಜನರಿಂದ ತುಂಬಿ ತುಳುಕುತ್ತಿರುತ್ತದೆ. ಮಾವಿನ ಎಲೆ, ಹೂಗಳನ್ನು ತಂದು ಮನೆಯ ಮುಂಭಾಗ ಅಲಂಕರಿಸಿ ಹಬ್ಬವನ್ನು ಆಚರಿಸಲಾಗುವುದು.

ಯುಗಾದಿ ಹಬ್ಬಕ್ಕೆ ಅಡುಗೆ ಅಂತ ನೋಡುವುದಾದರೆ ಬೇವು ಬೆಲ್ಲ
ಇರಲೇಬೇಕು , ಅದರ ಜೊತೆಗೆ ಯುಗಾದಿ ಪಚಡಿ ಕೂಡ ವಿಶೇಷವಾಗಿ ತಯಾರಿಸಲಾಗುವುದು. ಅಲ್ಲದೆ ಈ ದಿನ ಪಾಯಸ, ತಂಬಿಟ್ಟು ಮುಂತಾದ ವಿಶೇಷ ತಿನಿಸುಗಳನ್ನು ಮಾಡಿ ಆಚರಿಸಲಾಗುವುದು.
ಯುಗಾದಿ ದಿನ ನಾನ್‌ವೆಜ್ ಮಾಡಲ್ಲ
ಯುಗಾದಿ ಹಬ್ಬ ಸಿಹಿ ಅಡುಗೆಗಳನ್ನು ಮಾಡುತ್ತಾರೆ, ಆದರೆ ಈ ದಿನ ನಾನ್ ವೆಜ್ ಮಾಡಲ್ಲ. ಈ ದಿನ ಬೇವು ಬೆಲ್ಲ ಸವಿದು ಹಬ್ಬದ ಊಟ ಮಾಡುತ್ತಾರೆ.
ಯುಗಾದಿ ಮಾರನೇಯ ದಿನ ಹೊಸ ತೊಡಕು
ಈ ದಿನ ಮದ್ಯ-ಮಾಂಸದ್ದೇ ಕಾರುಬಾರು. ಈ ದಿನ ಮಟನ್-ಚಿಕನ್ ಅಂತ ವಿವಿಧ ಭಕ್ಷ್ಯ ತಯಾರಿಸಿ ಸವಿಯುತ್ತಾರೆ. ಈ ದಿನ ಮದ್ಯ ಮಾರಾಟ ಕೂಡ ಬಲು ಜೋರಾಗಿಯೇ ಇರುತ್ತದೆ. ಹೊಸ ವರ್ಷದಂದು ಪಾರ್ಟಿ ಮಾಡುತ್ತಾ ಸ್ವಾಗತಿಸುತ್ತೇವೆ.
ಈ ವರ್ಷ ಹೊಸ ತೊಡಕು ಯಾವಾಗ?
ಮಾರ್ಚ್ 23ಕ್ಕೆ ಹೊಸ ತೊಡಕು ಆಚರಿಸಲಾಗುವುದು.
ಹಿಂದೂ ಹೊಸ ವರ್ಷದ ಯುಗಾದಿಯಲ್ಲಿ ಆ ದಿನ ಮಾಡುವುದಿಲ್ಲ, ಅದರ ಮಾರನೇಯ ದಿನ ಹೊಸ ತೊಡಕು ಆಚರಿಸುತ್ತಾರೆ. ಈ ದಿನ ಮಾಂಸದ ಅಡುಗೆಗಳನ್ನು ಮಾಡಲಾಗುವುದು. ಮನೆಯಲ್ಲಿಯೇ ವೈನ್ ಪಾರ್ಟಿ ಕೂಡ ಇರುತ್ತದೆ, ಕೆಲವರು ಜಾಲಿಗಾಗಿ ಇಸ್ಪೀಟ್ ಕೂಡ ಆಡುತ್ತಾರೆ. ಈ ದಿನ ಜನರು ತುಂಬಾನೇ ಮೋಜು-ಮಸ್ತಿನಿಂದ ಸಮಯ ಕಳೆಯುತ್ತಾರೆ.
ಕುಡಿದು ಗಲಾಟೆ ಮಾಡುವುದು, ಹಣವಿಟ್ಟು ಇಸ್ಪೇಟ್ ಆಡುವುದು ಇಂಥವೆಲ್ಲಾ ಮಾಡದೆ ಈ ದಿನವನ್ನು ಖುಷಿ-ಖುಷಿಯಾಗಿ ಆಚರಿಸಿದರೆ ಹೊಸ ತೊಡಕು ತುಂಬಾನೇ ಮಜವಾಗಿರುತ್ತದೆ.



Click it and Unblock the Notifications

